ಚುಟುಕುಗಳು

ಚುಟುಕುಗಳು

ರಾಜಕೀಯ

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಇಂದು ಜಗದೀಶ ಶೆಟ್ಟರ

ಮಂತ್ರಿ ಪದವಿಗಾಗಿ ಶಾಸಕರು ಜಗ್ಗಿ ಮತ್ತು ಯಡ್ಡೀಗೆ ಹಚ್ಚುತ್ತಿದ್ದಾರೆ ಬಟ್ಟರ

ಸದಾನಂದಗೌಡರನ್ನು ಕೆಳಗಿಳಿಸಿ ಬಿ.ಜೆ.ಪಿ ಹೈ ಕಮ್ಯಾಂಡ್ ಕೆಟ್ಟರಾ?
ರಾಜ್ಯ ರಾಜಕೀಯ ಕಾಳಗದಲ್ಲಿ ಯಡಿಯೂರಪ್ಪನೇ ಗೆದ್ದು ಬಿಟ್ಟರಾ?
ಜಾತಿ ರಾಜಕೀಯಕ್ಕೆ ಜನ ಮುಂದಿನ ಚುನಾವಣೆಲಿ ವೋಟು ಕೊಟ್ಟರಾ?

ಹಾಲಾಡಿ

ಶಾಸಕರ ಭವನದಲ್ಲಿ ಎಷ್ಟು ಅತ್ತು ಕರೆದು ಪ್ರಯೋಜನವಾಗಲ್ಲಿಲ್ಲ ಗೋಳಾಡಿ
ಸಮಾಧಾನಪಡಿಸಲು ಬಂದರು ಯಡ್ಡಿ ಏನೋ ಮಾತಾಡಿ
ಬೆಂಬಲಿಗರು ಯಡ್ಡಿಗೆ ಘೇರಾವ್ ಹಾಕಿ ಉಗಿದರು ಜನ್ಮ ಜಾಲಾಡಿ
ಜೊತೆಗೆ ಇದ್ದು ಸಚಿವನಾಗುವ ಗುಟ್ಟು ಬಿಟ್ಟುಕೊಡದ ಗೆಳೆಯ ಕಿಲಾಡಿ
ಕೊನೆಗೂ ಸಚಿವನಾಗಲ್ಲಿಲ್ಲ ಕುಂದಾಪುರದ ಹಾಲಾಡಿ
 

2G Scam

2008ಲಿ ಹಾಕಿದ್ದರು 2G ತರಂಗಾಂತರದ ಹರಾಜಾ
ಆ ಕಾಲಕ್ಕಿದ್ದ ಟೆಲಿಕಾಮ್ ಮಿನಿಸ್ಟ್ರೇ ಎ.ರಾಜಾ
ಲೈಸೆನ್ಸ್ ಹಂಚಿಕೆಯಲಿ ಕನಿಮೊಳಿ ಜೊತೆ ಸೇರಿ ಮಾಡಿದ ಭಾರಿ ಮಜಾ
ಇವರ ವಿರುದ್ದ ದೂರಿದ ಸ್ವಾಮಿ ಗುಡುಗಿದ ಇದಲ್ಲ ಸಾಜ
ವಿಚಾರಣೆ ನಡೆಸಿದ ನ್ಯಾಯಾಲಯ ನೀಡಿತ್ತು ಇಬ್ಬರಿಗೂ ಸಜಾ
ಕೇಸು ಸುಪ್ರೀಮ್ ಮೆಟ್ಟಿಲೇರಿ ಕೊನೆಗೂ ಕೋರ್ಟ್ ಮಾಡಿತು ಎಲ್ಲ ಲೈಸೆನ್ಸ್ ವಜಾ
ನನ್ನದೇನೂ ಪಾತ್ರ ಇಲ್ಲ ಅನ್ನುತ್ತಿರುವ ಚಿದಂಬರಂ ದೊಡ್ಡ ಖೋಜಾ
ಬಾಯಿಗ್ ಬಂದಹಾಗೆ ಮಾತಾಡ್ತಿರೋ ಕಪಿಲ್ನ ಸೇರಿಸಬೇಕು ಗ್ಯಾರೇಜಾ
ಇಷ್ಟಾದರೂ ಬಾಯಿ ಮುಚ್ಕೋಂಡಿರೊ ಸಿಂಗ್‌ಗೆ ಹೇಳಿ ನೀ ಆರಾಮಗಿ ಸೋಜಾ
+++++++++++++++++++++++++++++++++++++++++++++++++
ಸಾಜ: ಸಹಜವಾದುದು, ಸ್ವಾಭಾವಿಕವಾದುದು,ಸರಳವಾದುದು, ನಿರಾಡಂಬರವಾದುದು,ನಿಜ, ದಿಟ,ಸತ್ಯವಂತ, ಪ್ರಾಮಾಣಿಕ
 

ವಾಹನ ದಟ್ಟಣೆ

ಬೆಂಗಳೂರಲ್ಲಿ ಸಿಕ್ಕಾಪಟ್ಟೆ ವಾಹನ ದಟ್ಟಣೆ
ಕಾರಣ? ಕೇಳಿದರೆ ಯಾರು ಬೇಕಾದರೂ ಹೇಳುತ್ತಾರೆ ತಟ್ಟನೆ
ಒಂದು) ಪ್ರಗತಿಯೇ ಕಾಣದೆ ನೆನೆಗುದಿಗೆ ಬಿದ್ದಿರುವ ರಸ್ತೆ ಕಾಮಗಾರಿಗಳು
ಎರಡು) ನಾಕೆಂಟು ಮಂದಿ ಕೂರುವ ಕಾರಲ್ಲಿ ಹೋಗುತಾರೆ ಒಬ್ಬಿಬ್ಬರು
ಇದಕ್ಕೆಲ್ಲ ಪರಿಹಾರ ???? ಇದೆ.
ಕೆಲಸ ಬೇಗ ಪೂರೈಸಲು ಗುತ್ತಿಗೆದಾರರಿಗೆ ಸರಕಾರ ಹೊರಡಿಸಬೇಕು ಕಟ್ಟಪ್ಪಣೆ
ಕಾರ್ ಪೂಲಿಂಗ್ ನಂತಹ ಯೋಜನೆಗಳಿಗೆ ಸರಕಾರ ಹಾಕಬೇಕು ಮಣೆ
ಆಗ ನಾವು ಬೇಗ ಸೇರಬಹುದು ನಮ್ಮ ಕೋಣೆ
 

ಅಂತೆ ಕಂತೆ

ನಿಡುಮಾಮಿಡಿಗೆ ಮಡೆ ಮಡೆ ಸ್ನಾನದ ಚಿಂತೆ
ಎನ್. ಟಿ. ಪಿ. ಪಿ ಸಲುವಾಗಿ ಪೇಜಾವರರ ನಿರಶನವಂತೆ
ಬಿ.ಎಸ್. ವೈ ಗೆ ಮುಖ್ಯ ಮಂತ್ರಿ ಸ್ಥಾನ ಬೇಕಂತೆ
ಲೋಕಾಯುಕ್ತರಿಗೆ ಸಿಕ್ಕಿ ಬೀಳುತ್ತಿದೆ ನೋಟಿನ ಕಂತೆ ಕಂತೆ
ಉತ್ತರ ಕರ್ನಾಟಕದ ಪ್ರವಾಹ ಪೀಡಿತರಿಗೆ ಇನ್ನೂ ಮನೆ ಸಿಕ್ಕಿಲ್ಲವಂತೆ
ರೈತ ಸಂಘ ಒಳ ಜಗಳದಿಂದ ಇಬ್ಬಾಗವಾಗುವುದಂತೆ
ಸುದ್ದಿವಾಹಿನಿಗಳಲ್ಲಿ ಇಂತದ್ದೇ ಸುದ್ದಿ, ಬರೆ ಅಂತೆ ಕಂತೆ
ದಿನಪತ್ರಿಕೆಗಳೂ ಇಂತದ್ದೇ ಸುದ್ದಿ ಹೊತ್ತುತಂತೆ?
Rating
No votes yet

Comments

Submitted by kavinagaraj Tue, 05/21/2013 - 19:45

:))