ಫ್ಲಾಟ್ ಕೊಳ್ಳುವ ಮುನ್ನ ...

ಫ್ಲಾಟ್ ಕೊಳ್ಳುವ ಮುನ್ನ ...

ಬೆಂಗಳೂರಲ್ಲಿ ಸೈಟುಗಳ ಬೆಲೆ ಗಗನಕ್ಕೇರುತ್ತಿರುವಾಗ, ಸೈಟು ತೆಗೆದುಕೊಂಡು ಮನೆಕಟ್ಟಿಸುವುದು ಗಗನ ಕುಸುಮವೇ ಸರಿ. ಗಗನ ಚುಂಬೀ ಕಟ್ಟಡಗಳಲ್ಲಿ ಪುಟ್ಟ ೨/೩ ಬೆಡ್‌‍ರೂಮ್ ಫ್ಲಾಟನ್ನು, ಗಳಿಸಿ ಉಳಿಸಿದ ಹಣಕ್ಕೆ ಬ್ಯಾಂಕ್ ಲೋನ್ ಹಣ ಸೇರಿಸಿ, ಕೊಳ್ಳುವುದು ಮಾತ್ರ ಈ ಕಾಲದಲ್ಲಿ ಸಾಧ್ಯ.


ಕರ್ನಾಟಕದ ಜನಪ್ರಿಯ ದಿನಪತ್ರಿಕೆ ಕೆಲವೊಮ್ಮೆ ಕೆಜಿಗಟ್ಟಲೆ ಭಾರವಿರುವುದು. ಪುಟಗಳೋ..ಪುಟಗಳು! ಓದಲು ಕರ್ನಾಟಕದ ಸುದ್ದಿ ಏನೂ ಇರುವುದಿಲ್ಲ! ಇದ್ದರೂ ಹೆಚ್ಚೆಂದರೆ ಎರಡು ಮರ್ಡರ್, ಎರಡು ಆಕ್ಸಿಡೆಂಟ್ ಸುದ್ದಿ, ಒಂದೆರಡು ಮೆರವಣಿಗೆ ಚಿತ್ರ, ವೀಕೆಂಡ್ ಕ್ಷಮಿಸಿ ವೀಕ್ ಪೂರ್ತಿ ಪಾರ್ಟಿ ಚಿತ್ರ... ಕರ್ನಾಟಕದ ಈಗಿನ ಮುಖ್ಯಮಂತ್ರಿ ಯಾರು ಎಂದು ಆ ಪತ್ರಿಕೆಯವರಿಗೂ ಗೊತ್ತಿರಲಿಕ್ಕಿಲ್ಲ :) ಆದರೆ ಪ್ರತೀ ಪುಟದಲ್ಲೂ ಹೊಸಹೊಸ ಅಪಾರ್ಟ್‌‍ಮೆಂಟ್‌ಗಳ ಚಿತ್ರ.....ಸುತ್ತಮುತ್ತ ಮರಗಿಡಗಳು!....ಸ್ವಿಮಿಂಗ್ ಪೂಲ್..ಜಿಮ್... ಗಂಡ ಹೆಂಡತಿ ಮಕ್ಕಳೊಂದಿಗೆ ನಲಿಯುವ ಚಿತ್ರ...ಆಹಾ ಬಲೆಗೆ ಬಿದ್ದೇ ಬಿಡುವೆವು.


ಸ್ಥಳ ನೋಡಲು ಹೋದಿರೋ... ಬಲೆಯೊಳಗೆ ಎರಡನೇ ಸುತ್ತು ಸಿಕ್ಕಿಕೊಂಡಂತೆ! ಅವರ ನಯ(ವಂಚಕ) ಮಾತಿನಿಂದ ಬಿಡಿಸಿ ಬರಲು ಸಾಧ್ಯವೇ ಇಲ್ಲ :-


---ಮುಂದಿನ ಜುಲೈಗೆ ಎಲ್ಲಾ ರೆಡಿ. ನಿಮ್ಮ ಕೈಗೆ ಫ್ಲಾಟ್ ಕೀ!


(ಇದೇ ದೊಡ್ಡ ಲೈ. ಡಿಸೆಂಬರ್ ಆದರೂ ರೆಡಿಯಾಗಿರುವುದಿಲ್ಲ. ಅನಿವಾರ್ಯವಾಗಿ ಅರೆಬರೆ ರೆಡಿಯಾದ ಫ್ಲಾಟ್‌ಗೆ ಗೃಹಪ್ರವೇಶ ಮಾಡಿದರೆ, ಮತ್ತೆ ಅವರು ಅತ್ಲಾಗೆ ತಲೆ ಇಡುವುದಿಲ್ಲ. ಜಗಳ ಮಾಡುವ ತಾಕತ್ತಿದ್ದರೆ ಮಾತ್ರ ೧೦ ಸಲ ಕರೆದರೆ ಒಂದು ಸಲ ಬಂದು ತೇಪೆ ಕೆಲಸ ಮಾಡಿಹೋಗುವರು.)


---ಎರಡು ಬೋರ್‌ವೆಲ್ ಇದೆ. ಸಾಕಷ್ಟು ನೀರಿದೆ. ವರ್ಷಪೂರ್ತಿ ನೀರಿನ ಪ್ರಾಬ್ಲಂ ಇಲ್ಲ!


(ಪೆಬ್ರವರಿಗೇ ನೀರಿನ ವರಿ ಶುರು. ಟ್ಯಾಂಕರ್‌‍ನಿಂದ ನೀರು ತರಿಸಿ ಹಾಕಿ ಬಿಲ್ ನಿಮ್ಮ ಕುತ್ತಿಗೆಗೆ)


----ಎಲೆಕ್ಟ್ರಿಸಿಟಿ ಬ್ಯಾಕ್ ಅಪ್!


(ಪ್ಲಾಟ್ ಪ್ರವೇಶಿಸಿದ ಮೇಲೆ ಗೊತ್ತಾಗುವುದು-ಪಿಕಿಪಿಕಿ ಮೂರು ಲೈಟಿಗೆ ಮಾತ್ರ ಬ್ಯಾಕ್ ಅಪ್:) )


---ಜಿಮ್, ಸ್ವಿಮ್ಮಿಂಗ್ ಪೂಲ್, ಪಾರ್ಟಿ ಹಾಲ್!


( ಇದಕ್ಕೆ ನನ್ನದೇ ಉದಾಹರಣೆ- ದಿನಾ ಬೆಳಗ್ಗೆ ಒಂದು ಗಂಟೆ ಸ್ವಿಮ್ಮಿಂಗ್, ಸಂಜೆ ಒಂದು ಗಂಟೆ ಜಿಮ್..ಕೊನೇ ಪಕ್ಷ ಸಲ್ಮಾನ್ ಖಾನ್‌‍ನಷ್ಟಾದರೂ ಚೆನ್ನಾಗಿ ಕಾಣಿಸಬೇಕು ಎಂದು ಕಳೆದ ವರ್ಷ ಈ ಫ್ಲಾಟ್‌ಗೆ ಬಂದೆ- ಒಂದು ವರ್ಷ ಕಳೆಯಿತು! ಜಿಮ್ ಎಲ್ಲಿದೆ ಎಂದು ಫ್ಲಾಟ್‌‍ನ ಯಾರಿಗೂ ಗೊತ್ತಿಲ್ಲ! ಸ್ವಿಮ್ಮಿಂಗ್ ಪೂಲ್ ಹೆಚ್ಚುಕಮ್ಮಿ ಹತ್ತಡಿ><ಹತ್ತಡಿ ತಳಪಳ ಇನ್ನೂ ರೆಡಿಯಾಗಿಲ್ಲ!! ಕಾರ್ ಪಾರ್ಕಿಂಗ್ ಸ್ಥಳನೇ ಸದ್ಯಕ್ಕೆ ಪಾರ್ಟಿ ಹಾಲ್!)


ಇನ್ನೂ ಒಂದು ವಿಷಯವಿದೆ. ಪಕ್ಕದಲ್ಲೇ ಎಲ್ಲಾದರೂ ಆ ಬಿಲ್ಡರ್‌ನದ್ದೇ ಇನ್ನೊಂದು ಪ್ರಾಜೆಕ್ಟ್ ನಡೆಯುತ್ತಿದ್ದರೆ--ಇಲ್ಲಿನ ಮೈಂಟೆನೆನ್ಸ್ ಖರ್ಚಲ್ಲೇ ಅಲ್ಲಿನ ಕೆಲಸಕ್ಕೆ ನೀರು, ಕೆಲಸಗಾರರು ಉಳಕೊಳ್ಳಲು, ಸ್ನಾನ ಇತ್ಯಾದಿಗೆ ನೀರು..-ಇಲ್ಲಿನ ಸೆಕ್ಯುರಿಟಿ..ಡ್ಯೂಟಿ ಅಲ್ಲಿ!


ಖಾತಾ ಟ್ರಾನ್ಸ್ಫರ್‌ಗೆಂದು ೨೫೦೦೦ ರೂ! ತೆಗೆದುಕೊಂಡು ಬಿ ಖಾತಾ( ಸಾವಿರ ರೂ ಸಹ ಆಗುವುದಿಲ್ಲ) ಕೊಟ್ಟು ಕೈ ತೊಳೆದುಕೊಳ್ಳುವರು.


--ಸ್ಯಾನಿಟರಿ ವ್ಯವಸ್ಥೆನೂ ಸರಿಯಾಗಿರುವುದಿಲ್ಲ. ಜನ ಫ್ಲಾಟ್‌ನಲ್ಲಿ ವಾಸಿಸಲು ಬಂದಮೇಲೇ ಅದು ಗೊತ್ತಾಗುವುದು.


ಹೇಳಲು ಫ್ಲಾಟಾಯಣ ಬೇಕಾದಷ್ಟಿದೆ. ಕೇಂದ್ರ ಸರಕಾರ ಈಗ ಏನೋ ಕಾನೂನು ಮಾಡಲು ಹೊರಟಿದೆ. ಬಿಲ್ಡರ್‌ಗಳಿಂದ ಇಲೆಕ್ಷನ್‌ಗೆ ಫಂಡ್ ಬಂದರೆ..... :(


ಇದನ್ನೂ ಓದಿ- http://vijaykarnataka.indiatimes.com/articleshow/17522746.cms


 http://www1.lite.epaper.timesofindia.com/mobile.aspx?article=yes&pageid=15&edlabel=TOIBG&mydateHid=25-3-2013&pubname=Times%20of%20India%20-%20Bangalore%20-%20Front%20Page&edname=&articleid=Ar01503&publabel=TOI


http://m.indianexpress.com/news/%22credai-realty-regulator-will-breed-corruption-dry-liquidity%22/1034349/

Rating
No votes yet

Comments

Submitted by sasi.hebbar Thu, 03/28/2013 - 12:03

ನೀವಂದಂತೆ, ಕರ್ನಾಟಕದ ಜನಪ್ರಿಯ ಪತ್ರಿಕೆಯ ತೂಕ ಕಂಡು ನನಗೂ ಒಮ್ಮೊಮ್ಮೆ ಅಚ್ಚರಿ ಆಗುವುದುಂಟು. ಆದರೆ, ಅದಕ್ಕೆ ಮುಖ್ಯ ಕಾರಣ ಫ್ಲಾಟ್ಗಳ ಪ್ರಚಾರ ಎಂಬ ವಾಸ್ತವ ನನ್ನ ಗಮನಕ್ಕೆ ಬಂದದ್ದು ನಿಮ್ಮ ಲೇಖನ ಓದಿದ ನಂತರವೇ!
* ನೀವಂದಂತೆ, ಫ್ಲಾಟ್ ಖರೀದಿಯ ವಿಚಾರದಲ್ಲಿ ಸಾಕಷ್ಟು ತೊಡಕುಗಳಿವೆ. ಆದರೆ, ಸಾಕಷ್ಟು ಉತ್ತಮ ಸೌಲಭ್ಯವಿರುವ ಫ್ಲಾಟನ್ನು ಕೊಳ್ಳುವುದಾದರೂ ಹೇಗೆ? ಈಗಿನ ಕಾಲದಲ್ಲಿ ಫ್ಲಾಟ್ ಇದ್ದುದರಲ್ಲಿ ಸ್ವಲ್ಪ ಮಿತವ್ಯಯಕಾರಿ ಅನಿಸುತ್ತದೆ ಅಲ್ಲವೆ?

Submitted by ಗಣೇಶ Fri, 03/29/2013 - 00:20

In reply to by sasi.hebbar

ಹೆಬ್ಬಾರರೆ, >>>..ಅದಕ್ಕೆ ಮುಖ್ಯ ಕಾರಣ ಫ್ಲಾಟ್ಗಳ ಪ್ರಚಾರ...:) -ಪತ್ರಿಕೆಯ ಪುಟಗಳು ಜಾಸ್ತಿ ಇರುವುದನ್ನು ನೋಡಿ, ಓದಲು ವಿಷಯಗಳು ತುಂಬಾ ಇದೆ ಅಂತ ಅಂದುಕೊಳ್ಳುತ್ತಿದ್ದೆವು. ಈಗ ಫ್ಲಾಟ್‌ಗಳ/ಚಿನ್ನದ ಅಂಗಡಿಗಳ/ಮಾಲ್‌ಗಳ ಜಾಹೀರಾತು ತುಂಬಿ ಪತ್ರಿಕೆ ಭಾರವಾಗುತ್ತಿದೆ.
>>>ಈಗಿನ ಕಾಲದಲ್ಲಿ ಫ್ಲಾಟ್ ಇದ್ದುದರಲ್ಲಿ ಸ್ವಲ್ಪ ಮಿತವ್ಯಯಕಾರಿ ಅನಿಸುತ್ತದೆ ಅಲ್ಲವೆ?-ನಿಜ. ಮತ್ತೆ ಸುರಕ್ಷಿತವೂ..ಹಿಂದೆಲ್ಲಾ ಊರಿಗೆ/ಟೂರಿಗೆ ಹೊಗಬೇಕಿದ್ದರೆ ವಾರದ ಮೊದಲೇ ಯೋಚಿಸಿ,ಮನೆಕಾಯಲು ಯಾರು ಎಂದೆಲ್ಲಾ ತೀರ್ಮಾನಿಸಿ, ಹೋಗಬೇಕಾಗುತ್ತಿತ್ತು. ಹೋದಲ್ಲೂ ಮನೆಯದ್ದೇ ಚಿಂತೆ. ಈಗ ಮನೆಯವರೆಲ್ಲಾ ಆರಾಮ ಹೊರಡಬಹುದು. ಯಾವುದೇ ಚಿಂತೆಯಿಲ್ಲ. ಬಾಡಿಗೆ ಮನೆಯಾಗಲೀ, ಸ್ವಂತ ಮನೆಯಾಗಲಿ ಈ ಕಾಲದಲ್ಲಿ ವಾಹನಗಳ ಪಾರ್ಕಿಂಗ್‌‍ನದ್ದೇ ದೊಡ್ಡ ಸಮಸ್ಯೆ. ಇಲ್ಲಿ ಆ ಚಿಂತೆ ಇಲ್ಲ. ಹಬ್ಬ ಹರಿದಿನಗಳಂತು (ಹಿಂದೆ ಒಮ್ಮೆ ಬರೆದಿದ್ದೆ) ಜತೆಯಲ್ಲಿ ಆಚರಿಸುವ ಮಜವೇ ಬೇರೆ. ಇಲ್ಲಿ ನಾನು ಹೇಳಲು ಹೊರಟಿದ್ದು ಬಿಲ್ಡರ್‌ಗಳು ಪಾಪದ ಗ್ರಾಹಕರನ್ನು ವಂಚಿಸುವ ಬಗ್ಗೆ. ಯಾರೂ ಲಾಭವಿಲ್ಲದೇ ಕೆಲಸ ಮಾಡುವುದಿಲ್ಲ. ಬಿಲ್ಡರ್‌ಗಳೂ ಲಾಭ ಪಡೆಯಲಿ. ಆದರೆ ಮಾಡುತ್ತೇನೆ ಎಂದದ್ದನ್ನು ಮಾಡದೇ, ವರ್ಷಗಟ್ಟಲೆ ಸತಾಯಿಸುವ, ಮೋಸಗಾರರೂ ಈ ಫೀಲ್ಡ್‌‍ನಲ್ಲಿ ಜಾಸ್ತಿ ಇದ್ದಾರೆಂದು ಓದುಗರ ಗಮನ ಸೆಳೆದದ್ದು.

Submitted by venkatb83 Fri, 03/29/2013 - 15:01

In reply to by ಗಣೇಶ

"ಈಗಿನ ಕಾಲದಲ್ಲಿ ಫ್ಲಾಟ್ ಇದ್ದುದರಲ್ಲಿ ಸ್ವಲ್ಪ ಮಿತವ್ಯಯಕಾರಿ ಅನಿಸುತ್ತದೆ ಅಲ್ಲವೆ?-ನಿಜ. ಮತ್ತೆ ಸುರಕ್ಷಿತವೂ..ಹಿಂದೆಲ್ಲಾ ಊರಿಗೆ/ಟೂರಿಗೆ ಹೊಗಬೇಕಿದ್ದರೆ ವಾರದ ಮೊದಲೇ ಯೋಚಿಸಿ,ಮನೆಕಾಯಲು ಯಾರು ಎಂದೆಲ್ಲಾ ತೀರ್ಮಾನಿಸಿ, ಹೋಗಬೇಕಾಗುತ್ತಿತ್ತು. ಹೋದಲ್ಲೂ ಮನೆಯದ್ದೇ ಚಿಂತೆ. ಈಗ ಮನೆಯವರೆಲ್ಲಾ ಆರಾಮ ಹೊರಡಬಹುದು. ಯಾವುದೇ ಚಿಂತೆಯಿಲ್ಲ. ಬಾಡಿಗೆ ಮನೆಯಾಗಲೀ, ಸ್ವಂತ ಮನೆಯಾಗಲಿ ಈ ಕಾಲದಲ್ಲಿ ವಾಹನಗಳ ಪಾರ್ಕಿಂಗ್‌‍ನದ್ದೇ ದೊಡ್ಡ ಸಮಸ್ಯೆ. ಇಲ್ಲಿ ಆ ಚಿಂತೆ ಇಲ್ಲ. ಹಬ್ಬ ಹರಿದಿನಗಳಂತು (ಹಿಂದೆ ಒಮ್ಮೆ ಬರೆದಿದ್ದೆ) ಜತೆಯಲ್ಲಿ ಆಚರಿಸುವ ಮಜವೇ ಬೇರೆ. ಇಲ್ಲಿ ನಾನು ಹೇಳಲು ಹೊರಟಿದ್ದು ಬಿಲ್ಡರ್‌ಗಳು ಪಾಪದ ಗ್ರಾಹಕರನ್ನು ವಂಚಿಸುವ ಬಗ್ಗೆ. ಯಾರೂ ಲಾಭವಿಲ್ಲದೇ ಕೆಲಸ ಮಾಡುವುದಿಲ್ಲ. ಬಿಲ್ಡರ್‌ಗಳೂ ಲಾಭ ಪಡೆಯಲಿ. ಆದರೆ ಮಾಡುತ್ತೇನೆ ಎಂದದ್ದನ್ನು ಮಾಡದೇ, ವರ್ಷಗಟ್ಟಲೆ ಸತಾಯಿಸುವ, ಮೋಸಗಾರರೂ ಈ ಫೀಲ್ಡ್‌‍ನಲ್ಲಿ ಜಾಸ್ತಿ "

ಇದು ನಿಜ‌ ಗಣೇಶ್ಹ್ ಅಣ್ನ....

ಈ ಬರಹ‌ ಫ್ಲಾಟ್ಗಳನ್ನು ಕೊಳ್ಳುವವರಿಗೆ ಉಪಯೋಗವಾಗ್ಲಿದೆ...

ಶ್ಹುಭವಾಗಲಿ..

\|

Submitted by venkatb83 Sat, 03/30/2013 - 13:52

ಇ0ದಿನ‌ ವಿಜಯ‌ ಕರ್ನಾಟಕದ‌ ಪೇಜ್ 25 ನೋಡಿ...
ಲಿ0ಕ್

http://www.vijaykarnatakaepaper.com/
http://www.vijaykarnatakaepaper.com/Details.aspx?id=4622&boxid=233341343

ಫ್ಲಾಟ್ ಕೊಳ್ಳುವ‌ ಬಗ್ಗೆ ಮಾಹಿತಿ ಇದೆ..

\|

Submitted by ಗಣೇಶ Sat, 03/30/2013 - 23:45

In reply to by venkatb83

ಫ್ಲಾಟ್ ಕೊಳ್ಳುವ ಬಗ್ಗೆ ಮಾಹಿತಿಯ ವಿಕದ ಲಿಂಕ್ ಕೊಟ್ಟುದ್ದಕ್ಕೆ ಸಪ್ತಗಿರಿವಾಸಿಗೆ ಧನ್ಯವಾದಗಳು. ಎಷ್ಟೇ ಜಾಗ್ರತೆ ವಹಿಸಿದರೂ ತೊಂದರೆಗಳು ತಪ್ಪದು. ಕೊನೆಯಲ್ಲಿ ತಿಳಿಸಿದಂತೆ ಫ್ಲಾಟ್ ಓನರ್‌ಗಳ ಅಸೋಷಿಯೇಶನ್ ಮಾಡಿದಾಗ ಹೋರಾಡಲು ಸುಲಭವಾಗುವುದು.

Submitted by kavinagaraj Wed, 04/03/2013 - 17:23

In reply to by ಗಣೇಶ

ಹಲವು ವರ್ಷಗಳ ಹಿಂದಿನ ಮಾತಿದು. ನನ್ನ ಪರಿಚಯದವರು ಖರೀದಿಸಿ ತಳಪಾಯವನ್ನೂ ಹಾಕಿಸಿದ್ದರು. ಅದರ ಮೇಲೆ ಬೇರೆ ಯಾರೋ ಕಟ್ಟಡ ಕಟ್ಟಿಕೊಂಡರು! ಇವರಿಗೆ ವಿರೋಧಿಸುವ 'ತಾಕತ್ತು' ಇರಲಿಲ್ಲ!! :(

Submitted by ಗಣೇಶ Fri, 04/05/2013 - 00:39

In reply to by kavinagaraj

ಕವಿನಾಗರಾಜರೆ, ಕಟ್ಟಡ ಕಟ್ಟಿದವನ ಪರ ಅಧಿಕಾರಿ, ರೌಡಿ, ರಾಜಕಾರಣಿ, ಪೋಲೀಸ್ ಸೇರಿದಾಗ ವಿರೋಧಿಸುವ ತಾಕತ್ತು ಇರುವುದಿಲ್ಲ.:(.
೧.ಕೋರ್ಟ್ ಸ್ಟೇ ಇದ್ದ, "ಲಾಯರ್" ಒಬ್ಬರ ಸೈಟ್‌ನ ಕಾಂಪೌಂಡನ್ನೇ ನೆಲಸಮ ಮಾಡಿದ ವಿಷ್ಯ ಇತ್ತೀಚೆಗೆ ಒಬ್ಬರು ಹೇಳಿದರು.; ೨. ಇನ್ನೊಬ್ಬರ ಜಾಗೆಯಲ್ಲಿ (ಆಗಾಗ ಹೋಗಿ ನೋಡದೇ ಇದ್ದುದರಿಂದ) ಆಗಲೇ ಬೇರೆ ಯಾರೋ ಮನೆಕಟ್ಟಿ ವಾಸಿಸುತ್ತಿದ್ದರು. ಹಣ ಕೊಟ್ಟರೆ ಬಿಡುತ್ತೇವೆ,ಇಲ್ಲದಿದ್ದರೆ ಏನು ಮಾಡುತ್ತೀರೋ ಮಾಡ್ಕೊಳ್ಳಿ ಎಂದು ಅವರಿಗೇ ಧಮಕಿ ಹಾಕಿರುವರು.

Submitted by Shreekar Fri, 04/05/2013 - 14:32

In reply to by ಗಣೇಶ

ಜಯ ಕರ್ನಾಟಕದ ಮುತ್ತಿನಂತಿರುವ ರೈಯವರು ಇಂಥಹ ಭೂಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ತಮ್ಮ ಹೊಸ ಸುಧಾರಿತ ಅವತಾರದಲ್ಲಿ "ಅರ್ಥ"ವನ್ನು ಕಂಡುಕೊಂಡಿದ್ದಾರೆ. ವಿಶೇಷವೆಂದರೆ ಕೇವಲ ಮಾತುಕತೆಯಿಂದ, ರಕ್ತಪಾತ, ಹಿಂಸೆಗಳಿಲ್ಲದೆ (ಅವರೇ ಹೇಳಿಕೊಂಡಂತೆ ! ).
ಈ ಕೊಂಡಿಯಲ್ಲಿನ ಬರಹದ ಕೊನೆಯ ಪ್ಯಾರಾ ಸ್ವಾರಸ್ಯವಾಗಿದೆ.
http://www.wired.com/techbiz/people/magazine/16-11/mf_mobgalore?currentPage=all

Submitted by ಗಣೇಶ Sun, 04/07/2013 - 00:09

In reply to by Shreekar

:) :)>>>...ಭೂಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ತಮ್ಮ ಹೊಸ ಸುಧಾರಿತ ಅವತಾರದಲ್ಲಿ "ಅರ್ಥ"ವನ್ನು ಕಂಡುಕೊಂಡಿದ್ದಾರೆ. :) ನೀವು ನೀಡಿದ ಎರಡೂ ಕೊಂಡಿಗಳನ್ನು ಸೈಟು/ ಫ್ಲಾಟು ಕೊಳ್ಳುವವರು ಗಮನಿಸುವುದು ಒಳ್ಳೆಯದು. ಪ್ರತಿಕ್ರಿಯೆ ಹಾಗೂ ಕೊಂಡಿಗಳಿಗಾಗಿ ಧನ್ಯವಾದಗಳು.