ಬ್ರಹ್ಮಾಂಡರೊಂದಿಗೆ ಬೇಟಿ - ಕಿಸ್ ಆಫ್ ಲವ್ ಪ್ರಕರಣ

ಬ್ರಹ್ಮಾಂಡರೊಂದಿಗೆ ಬೇಟಿ - ಕಿಸ್ ಆಫ್ ಲವ್ ಪ್ರಕರಣ

ಚಿತ್ರ

ಬ್ರಹ್ಮಾಂಡರ ಬೇಟಿ - ಕಿಸ್ ಆಫ್ ಲವ್ ಪ್ರಕರಣ

ಶ್ರೀನಾಥ ಅಪರೂಪಕ್ಕೆ ಭಾರತಕ್ಕೆ ಬಂದಿದ್ದರು. ಗೆಳೆಯರನ್ನೆಲ್ಲ ಬೇಟಿ ಮಾಡಬೇಕೆಂಬ ಅವರ ಆಸೆ ನೆರವೇರಲಿಲ್ಲ ಕಾರಣ ಸ್ವಂತ ಕೆಲಸಗಳು. ಎಂತಹುದೇ ಕೆಲಸವಿದ್ದಾಗಲು ಅಪರೂಪದ ಗೆಳೆಯ ಅನ್ನೋ ಬ್ರಹ್ಮಾಂಡರನ್ನು  ನೋಡದೆ ಪುನಃ ವಾಪಸ್ಸು ಹೋಗುವುದು ಅಸಾದ್ಯ, ಪದೆ ಪದೆ ಗುರು ಬ್ರಹ್ಮಾಂಡರು ಮೊಬೈಲ್ ಕಾಲ್ ಮಾಡಿ ತಮ್ಮನ್ನು ಬೇಟಿ ಮಾಡಿಹೋಗುವಂತೆ ಶ್ರೀನಾಥರಿಗೆ ತಿಳಿಸಿದ್ದರು.

ಶ್ರೀನಾಥ ಹಾಗು ಬ್ರಹ್ಮಾಂಡರು ಹೈಸ್ಕೂಲಿನಲ್ಲಿ ಒಟ್ಟಿಗೆ ಓದಿದವರು. ಇನ್ನೊಂದು ಗುಟ್ಟು ಅಂದರೆ ಬ್ರಹ್ಮಾಂಡರ ನಿಜ ನಾಮದೇಯ ಗಣೇಶ ಎಂದು ಬಹಳ ಜನರಿಗೆ ತಿಳಿಯದು. ಶ್ರೀನಾಥ ಮೊದಲು ಬೆಳಗಿನ ಸಮಯದಲ್ಲಿ ಹೋಗಿ ಗಣೇಶನನ್ನು ಬೇಟಿ ಆಗುವುದು ಎಂದು ಚಿಂತಿಸಿದರು ಆದರೆ ನಂತರ ಅನ್ನಿಸಿತು ಅದು ಸಾದ್ಯವಿಲ್ಲ. ಬೆಳಗಿನ ಸಮಯ ಕರ್ನಾಟಕದ ಜ್ಯೋತಿಷಿಗಳಿಗೆ ಬಿಡುವಿರದಷ್ಟು ಕೆಲಸ, ಯಾವುದಾದರು ಒಂದು ಚಾನಲ್ ನಲ್ಲಿ ಅವರ ಕಾರ್ಯಕ್ರಮವಿರುತ್ತಿತ್ತು. ಹಾಗೆ ಬ್ರಹ್ಮಾಂಡರದು ಒಂದು ಪ್ರಖ್ಯಾತ ಕನ್ನಡ ಟೀವಿ TV-90 ನಲ್ಲಿ ಬೆಳಗಿನ ಭವಿಷ್ಯ ಕಾರ್ಯಕ್ರಮ ನಡೆಸಿಕೊಡಬೇಕಿತ್ತು.  .

 

ಸಂಜೆ ಮೈಸೂರು ರಸ್ತೆಯ ಹೊರವಲಯದಲ್ಲಿದ್ದ ಆಶ್ರಮಕ್ಕೆ ಹೋದ ಶ್ರೀನಾಥ ದಂಗಾಗಿ ನಿಂತಿದ್ದರು, ವಿಶಾಲ ಆವರಣದಲ್ಲಿ ಒಂಬತ್ತು ಅಡಿ ಎತ್ತರದ ಗೋಡೆಯ ಪ್ರದೇಶ. ಗೇಟಿನಲ್ಲಿ ಸನ್ನದ ಸ್ಥಿಥಿಯಲ್ಲಿ ನಿಂತಿದ್ದ ಸೆಕ್ಯೂರಿಟಿ ಇವೆಲ್ಲ ಕಂಡು ಇದೇನು ಆಶ್ರಮವೋ ಯಾವುದಾದರು ಮಿಲಿಟರಿ ಕ್ಯಾಂಪೋ ಎನ್ನುವ ಗಾಭರಿ ಶ್ರಿನಾಥರನ್ನು ಕಾಡಿತ್ತು.

ಒಳಗೆ ಹೋಗುವುದು ಒಂದು ಸಮಸ್ಯೆ . 

ಆದರೆ ಗಣೇಶರು ಮೊದಲೇ ಶ್ರೀನಾಥರಿಗೆ ಮೈಲ್ ನಲ್ಲಿ ಒಂದು ಸಿಕ್ರಿಟ್ ಪಾಸ್ ವರ್ಡ್ ಕೊಟ್ಟು ,  ಅದನ್ನು ಗೇಟಿನಲ್ಲಿ ಇರುವ ಮುಖ್ಯ ಸೆಕ್ಯೂಟರಿ ಹತ್ರ ಮಾತ್ರ ಹೇಳಬೇಕೆಂದು, ಮತ್ತೊಂದು ಮೊಬೈಲ್ ನಂಬರ್ ಕೊಟ್ಟು ಸೆಕ್ಯೂರಿಟಿಯಿಂದ ಆ ಮೊಬೈಲ್ ಗೆ  ಕಾಲ್ ಮಾಡುವಂತೆ ತಿಳಿಸಿದರು,  ಸೆಕ್ಯೂರಿಟಿ  ಶ್ರೀನಾಥರನ್ನು ಅನುಮಾನದಿಂದ ನೋಡಿ,

’ಸಾರ್ ಪಾಸ್ ವರ್ಡ್ ಕೊಡಿ’ ಕೊಟ್ಟರೆ ಮಾತ್ರ ಕಾಲ್ ಮಾಡುವೆ ಎಂದ.

 

ಶ್ರೀನಾಥ ಸಣ್ಣಗಿನ ದ್ವನಿಯಲ್ಲಿ

’ಏಳರ ಶನಿ .... ಏಳರ ಶನಿ....ಏಳರ ಶನಿ’ ಎಂದು ಮೂರು ಸಾರಿ ಹೇಳಿದರು.

ತಕ್ಷಣ ಅಲರ್ಟ್ ಆದ ಸೆಕ್ಯೂರಿಟಿ

’ಥ್ಯಾಂಕ್ಯು ಸಾರ್ ಒಂದು ನಿಮಿಶ ದಯಮಾಡಿ ಕುಳಿತುಕೊಳ್ಳಿ’

ಪಾಸ್ ವರ್ಡ್ ಕೊಟ್ಟ ತಕ್ಷಣ ತನಗೆ ಸಿಕ್ಕ ಗೌರವಕ್ಕೆ ಶ್ರೀನಾಥ ಬೆರಗಾಗಿದ್ದರು.

ಎರಡೇ ನಿಮಿಷ

’ಸಾರ್ ತಾವು ಒಳಗೆ ಹೋಗಬಹುದು, ನಿಮ್ಮನ್ನು ಇವನು ಕರೆದೊಯ್ಯುತ್ತಾನೆ ’ ಎನ್ನುತ್ತ ಮತ್ತೊಬ್ಬ ಮರಿ ಸೆಕ್ಯೂರಿಟಿಯನ್ನು ತೋರಿಸಿ, ಅವನಿಗೆ

’ಜಸ್ವಂತ್ ಇವರನ್ನು ಭ್ರಹ್ಮಾಂಡ ಸ್ವಾಮೀಜಿಯವರ ರಹಸ್ಯ ಬೇಟಿ ಸ್ಥಳ, r-12 ಕರೆದುಕೊಂಡು ಹೋಗಿ ಬಿಟ್ಟು ಬಾ ’

 

ಎಲಾ ಇವನ, ಇದೇನು ಸ್ವಾಮೀಜಿ ಆಶ್ರಮ ಎಂದರೆ ಚೀನದ ಮಿಲಿಟರಿ ಕ್ಯಾಂಪ್ ತರ ಇದೆ ಅನ್ನಿಸಿ, ಚಿಕ್ಕ ವಯಸಿನಲ್ಲಿ ಓದಿದ ಜಿಂದೆ ನಂಜುಂಡಸ್ವಾಮಿಯವರ ಪತ್ತೆದಾರಿ ಕತೆ ನೆನಪಿಗೆ ಬಂದಿತು. ಜಸ್ವಂತ್  ಶ್ರೀನಾಥನನ್ನು ಒಂದು ಕಟ್ಟದದ ಮುಂದೆ ಬಿಟ್ಟು ಅಲ್ಲಿದ್ದ ಸೆಕ್ಯೂರಿಟಿಗೆ ವಿಷಯ ತಿಳಿಸಿಹೋದ. ಅಲ್ಲಿದವನು ಶ್ರೀನಾಥನನ್ನು  ವಿಶಾಲವಾದ ಸೋಫದಲ್ಲಿ ನಲ್ಲಿ  ಕೂಡಿಸಿ ಸ್ವಾಮಿ ಬರುವವರೆಗೂ ಕಾಯಲು ತಿಳಿಸಿದ.  ಸಣಕಲರಾದ ಶ್ರೀನಾಥ ಆ ಸೋಫ ಮೇಲೆ ಇದ್ದಿದ್ದು ಹೊರಗಿನಿಂದ ಬಂದವರಿಗೆ ತಕ್ಷಣಕ್ಕೆ ಕಾಣುವುದೇ ಅನುಮಾನವಿತ್ತು , ಅಂತಹ ವಿಶಾಲ ದೇಹ ಶ್ರೀನಾಥರದು . ಕಾಲೇಜಿನಲ್ಲಿ ಶ್ರೀನಾಥ ಹಾಗು ಗಣೇಶ  ಅಂದರೆ ಈಗಿನ ಭ್ರಹ್ಮಾಂಡಸ್ವಾಮಿ ಜೊತೆಯಲ್ಲಿ ಹೊರಟರೆ ಎಲ್ಲರೂ ಲಾರಲ್ ಅಂಡ್ ಹಾರ್ಡಿ ಎಂದು ತಮಾಷಿ ಮಾಡುತ್ತಿದ್ದರು.

ಇದೊಳ್ಳೆ ಗ್ರಹಚಾರವಾಯಿತೇ ಅನ್ನಿಸಿತು ಶ್ರೀನಾಥನರಿಗೆ,

ಸಮಯ ಕಳೆಯಬೇಕಲ್ಲ ಹಾಗೆ

’ಏನಪ್ಪ ಇನ್ನು ಎಷ್ಟು ಹೊತ್ತಾಗಬಹುದು ಗಣೇಶ ಬರಲು ’ ಎಂದು ಪ್ರಶ್ನಿಸಿದರು, ಸೆಕ್ಯೂರಿಟಿ  ಶ್ರೀನಾಥರನ್ನು ಕುತೂಹಲದಿಂದ ನೋಡಿದ,  

’ಗಣೇಶನೆ, ಇನ್ನೇನು ಬರ್ತಾನೆ ಸಾರ್, ಬೆಳಗಿನಿಂದ ಮೇಯಲು ಹೋಗಿರ್ತಾನೆ, ಹೊಟ್ಟೆ ತುಂಬಿದ ನಂತರ ಇಲ್ಲಿ ಆಶ್ರಮದಲ್ಲಿರೋ ಕೆರೆಯಲ್ಲಿ  ಈಜಾಡಿ, ಸಂಜೆ ಹೊತ್ತಿಗೆ ಜನ ಸೇರೊ ಸಮಯಕ್ಕೆ ಬಂದುಬಿಡ್ತಾನೆ. ಇನ್ನೇನೊ ಬರೋ ಹೊತ್ತು’  ಅಂದ

ಈಗ ಗಾಭರಿ ಆಗುವ ಸರದಿ ಶ್ರೀನಾಥನರದು

ಇದೇನು ಸ್ವಾಮೀಜಿಯನ್ನು ಇವನು ಏಕವಚನದಲ್ಲಿ ಮಾತನಾಡಿಸುತ್ತಾನೆ, ಅಲ್ಲದೆ ಮೇಯುವುದು, ಸ್ನಾನ ಅಂತೆಲ್ಲ ಹೇಳ್ತಾ ಇದ್ದಾನಲ್ಲ ಅನ್ನಿಸಿತು. ನನಗಂತು ಅವನು ಕ್ಲಾಸ್ ಮೇಟ್ ಏಕವಚನದಲ್ಲಿ ಕರೆಯುವ ಅಭ್ಯಾಸ, ಇವನಿಗೇನು ಬಂತು ಸೆಕ್ಯೂರಿಟಿಗೆ . ಗಣೇಶ ಬಂದ ನಂತರ ಹೇಳಬೇಕು ಅಂದುಕೊಂಡ,

 

’ಸರಿ ಬಿಡಿ, ಅದೇನು ಮೊನ್ನೆ ಗಣೇಶ ,  ಹೊರಗೆ ನಡೆಯುತ್ತ ಇದ್ದ ಕಿಸ್ ಆಫ್ ಲವ್ ದಿನಕ್ಕೆ ಪ್ರತಿಭಟಿಸಲು ಹೋಗಿದ್ದನಂತೆ’ ಅಂದ

 

ಸೆಕ್ಯೂರಿಟಿ ನಗಲು ಪ್ರಾರಂಭಿಸಿದ.

’ಅಯ್ಯೋ ಅದನ್ನೇನು ಕೇಳ್ತೀರಿ ಸಾರ್,  ಅಲ್ಲಿ ಎಷ್ಟೋಂದು ಜನ ಸೇರಿದ್ದರು ಅಂತೀರಿ, ಕಿಸ್ ಆಫ್ ಲವ್ ಅಂತ, ಗಣೇಶ ಸೀದಾ ಹೋಗುತ್ತಿದವನು ಒಂದು ಹುಡುಗಿಯ ಪಕ್ಕ ನಿಂತ ನೋಡಿ, ಆಕೆಯ ಮುಖವನ್ನು ಅಮುಕಿಕೊಂಡ, ಕಿಸ್ ಕೊಡಲು,  ಆಕೆ ಹೆದರಿಕೆಯಿಂದ ಕಿರುಚಲು ಪ್ರಾರಂಭಿಸಿದಳು, ಸುತ್ತಲ ಜನರೆಲ್ಲ ನಕ್ಕಿದೆ ನಕ್ಕಿದ್ದು’

ಶ್ರೀನಾಥನಿಗೆ ಈಗ ಕಸಿವಿಸಿ ಆಯಿತು, ಇದೇನು ಇವನು ಏನು ಹೇಳ್ತಾ ಇದ್ದಾರೆ ಎಂದು

’ಅಲ್ಲರೀ ನಾನೇನೊ ಕೇಳಿದರೆ ನೀವೇನೊ ಹೇಳ್ತೀರಲ್ಲ, ನಿಮ್ಮ ಸ್ವಾಮಿಯ ಬಗ್ಗೆ ನೀವೆ ಹೀಗೆ ಮಾತಾನೋಡೋದು ಸರಿಯ ?, ಅವರ ಮರ್ಯಾದೆ ಗತಿ ಏನು ’

ಸೆಕ್ಯೂರಿಟಿ

’ಸ್ವಾಮಿಜೀ ಬಗ್ಗೇನ, ನಾನೇನು ಮಾತಾಡಿದೆ, ಅಷ್ಟಕ್ಕೂ ನೀವು ಕೇಳ್ತಾ ಇರೋದು ಗಣೇಶನ ಬಗ್ಗೆ ಅಲ್ವ?" ಎಂದ  ಗೊಂದಲದಿಂದ

 

’ಹೌದು, ಗಣೇಶನ ಬಗ್ಗೆಯೆ, ನೀವು ಗಣೇಶ ಅಂದರೆ ಯಾರು ಅಂದ್ಕೊಂಡಿದ್ದಿರೀ , ನಿಮ್ಮ ಸ್ವಾಮಿಜೀ ಅಲ್ವ?"

’ಸ್ವಾಮಿಜೀನ, ಅಯ್ಯೋ ನೀವೇನು ಕೇಳ್ತಾ ಇದ್ದೀರಿ, ನಾನು ಮಾತಾಡ್ತ ಇರೋದು, ಆಶ್ರಮದ ಆನೆ ಗಣೇಶನ ಬಗ್ಗೆ , ಸ್ವಾಮೀಜಿಯವರ ಹೆಸರು ಭ್ರಹ್ಮಾಂಡಸ್ವಾಮೀಜಿ ಎಂದು, ನೀವು ಅದೇಕೆ ಗಣೇಶ ಎಂದು ಕೇಳಿದಿರಿ’ ಎಂದ

 

ಶ್ರೀನಾಥನಿಗೆ ತಾನು ಮಾಡಿದ ತಪ್ಪು ಅರಿವಾಯಿತು. ಮೌನವಾದ.

 

ಅಷ್ಟರಲ್ಲಿ ಎಂತದೋ ಕಂಪನ, ಶ್ರೀನಾಥ ಗಮನಿಸಿದ,

 

ಎದುರಿಗಿದ್ದ ಟೀಪಾಯಿ ಮೇಲಿದ್ದ ಗಾಜಿನ  ಫ್ಲವರ್ ವಾಜಿನೊಳಗಿದ್ದ ನೀರು ಅಲುಗಾಡುತ್ತಿತ್ತು.

 

ಮತ್ತೆ ಅದೇ ಅನುಭವ ನೆಲ ಅದುರುತ್ತಿದೆ, ಓ ಖಂಡೀತ ಇದು ನೆಲಕಂಪಿಸುವ ಅನುಭವ !!
ಸಣ್ಣಗೆ ಭೂಕಂಪ ಆಗುತ್ತಿದೆ ಅನ್ನಿಸುತೆ!!

 

ಗಾಭರಿಯಿಂದ ಎದ್ದು ನಿಂತು ಸೆಕ್ಯೂರಿಟಿಯನ್ನು ಕೇಳಿದ

’ನಿಮಗೆ ಗೊತ್ತಾಯ್ತ, ನೆಲ ಅದುರುತ್ತಿದೆ, ನೋಡಿ ಫ್ಲವರ್ ವಾಜ್ ಸಹ ಅದರೊಳಗಿನ ನೀರು ಅಲ್ಲಾಡುತ್ತಿದೆ, ಭೂಕಂಪ ಅನ್ನಿಸುತ್ತೆ, ತಕ್ಷಣ ಎಲ್ಲರಿಗೂ ಹೊರಗೆ ಓಡುವಂತೆ ತಿಳಿಸಿ’

 

ಸೆಕ್ಯೂರಿಟಿ ಜೋರಾಗಿ ನಕ್ಕು, ತಕ್ಷಣ ಅಲರ್ಟ್ ಆಗಿ ಎದ್ದುನಿಂತ

’ಸಾರ್ , ಅದು ಭೂಕಂಪವಲ್ಲ, ಸ್ವಾಮೀಜಿಗಳು ದಯಮಾಡಿಸುತ್ತಿದ್ದಾರೆ, ನೀವು ಕೈಮುಗಿದು ಎದ್ದುನಿಲ್ಲಿ’ ಎಂದ .

ಶ್ರೀನಾಥನಿಗೆ ತಾನು ಟೀವಿಯಲ್ಲಿ ನೋಡಿದ ’ಜೂರಾಸಿಕ್ ಪಾರ್ಕ್ ಸಿನಿಮಾ ನೆನಪಾಯಿತು, ಅದರಲ್ಲೂ ಸಹ ದೊಡ್ಡ ಡೈನಾಸರಸ್ ಬರುವ ಮೊದಲು ನೆಲ ಹೀಗೆ ಅದುರಿ, ನಿಂತಿದ್ದ ನೀರಿನ ಕಂಪನ ಕಾಣಿಸುತ್ತಿತ್ತು

 

ಮುಂದುವರೆಯುವುದು ….

ಚಿತ್ರದ ಮೂಲ : http://www.funnfun.in/tag/indian-elephant/

 

Rating
No votes yet

Comments

:) ನೈಂಟಿ ಹಾಕಿ ನೋಡಿದರೂ ಬ್ರಹ್ಮಾಂಡ ದರ್ಶನವಾಗುವುದು ಅಂತಾರೆ ಅನುಭವಿಗಳು.

Submitted by ಗಣೇಶ Sun, 12/14/2014 - 20:33

:)))))) ಗಣೇಶ(!)ನ ಕಿಸ್ ಪ್ರಕರಣ ಸೂಪರ್ :)))
ಬ್ರಹ್ಮಾಂಡರ ಮುಂದೆ ಡೈನಾಸರಸ್ ನಡಿಗೆ ( https://www.youtube.com/watch?v=PsGjh6ul7mE ) ಏನೂ ಇಲ್ಲ.
ಶ್ರೀನಾಥರ ಹಾಸ್ಯ ಓದದೇ ಬಹಳ ದಿನಗಳಾಯಿತು ಅಂತ ಯೋಚಿಸುತ್ತಿದ್ದೆ.
ಪಾರ್ಥರ ನಿರೂಪಣೆ ಸೊಗಸಾಗಿದೆ.
-ಬ್ರಹ್ಮಾಂಡ ಗುರೂಜಿಯ ಮಾಜಿ ಶಿಷ್ಯ
ಗಣೇಶ.

ಬ್ರಹ್ಮಾಂಡರೇ ನೀವು ಎಂದು ಎಲ್ಲ‌ ಭಾವಿಸುತ್ತಿದ್ದಾರೆ , ನೀವು ಸಿಸ್ಯ‌ ಎಂದರೆ ಹೇಗೆ ?
ಲಿಂಕ್ ಚೆನ್ನಾಗಿದೆ ಸಿನಿಮಾದ‌ ತುಣುಕು
ಗಣೇಶರಿಗೆ ವಂದನೆಗಳು

ಬ್ರಹ್ಮಾಂಡರೇ ನೀವು ಎಂದು ಎಲ್ಲ‌ ಭಾವಿಸುತ್ತಿದ್ದಾರೆ , ನೀವು ಸಿಸ್ಯ‌ ಎಂದರೆ ಹೇಗೆ ?
ಲಿಂಕ್ ಚೆನ್ನಾಗಿದೆ ಸಿನಿಮಾದ‌ ತುಣುಕು
ಗಣೇಶರಿಗೆ ವಂದನೆಗಳು

ಬ್ರಹ್ಮಾಂಡರೇ ನೀವು ಎಂದು ಎಲ್ಲ‌ ಭಾವಿಸುತ್ತಿದ್ದಾರೆ , ನೀವು ಸಿಸ್ಯ‌ ಎಂದರೆ ಹೇಗೆ ?
ಲಿಂಕ್ ಚೆನ್ನಾಗಿದೆ ಸಿನಿಮಾದ‌ ತುಣುಕು
ಗಣೇಶರಿಗೆ ವಂದನೆಗಳು

ಪಾರ್ಥರೆ, ನೀವು ೩ ಸಲ ಒತ್ತಿ ಒತ್ತಿ ಹೇಳಿದ್ದರಿಂದ ಇರಬಹುದೋ ಏನೋ ಅನಿಸುತ್ತಿದೆ :)