ಲಾಲ್ ಬಾಗ್ ಫ್ಲವರ್ ಶೋ- ೨೦೧೩

ಲಾಲ್ ಬಾಗ್ ಫ್ಲವರ್ ಶೋ- ೨೦೧೩

ಚಿತ್ರ

ಹೂವೇ ಹೂವೇ..ಹೂವೇ ಹೂವೆ..ನಿನ್ನೀ ಅಂದಕೆ ..........
ಕಾಗದದ ಹೂವಿನಿಂದ ಗುಲಾಬಿಯವರೆಗೆ ಹೂವಿನ ಅಂದವೇ ಅಂದ. ಲಾಲ್ ಬಾಗ್ ಗಾಜಿನ ಮನೆ ತುಂಬಾ ರಾಶಿ ರಾಶಿ ಹೂಗಳು.
ಎಂಟ್ರಿ ಫೀ ಐವತ್ತಾದರೇನು ನೂರಾದರೇನು, ಬಿಸಿಲಾದರೇನು ಮಳೆಯಾದರೇನು..ಹೊರಟೇ ಬಿಡುವೆ.
ಆದರೆ ತಾಪತ್ರಯ-೧. ಬೆಂಗಳೂರು ಟ್ರಾಫಿಕ್. ೨. ಪಾರ್ಕಿಂಗ್ ೩. ಜನಸಂದಣಿ.
ಕಳೆದ ವರ್ಷ ಫ್ಲವರ್ ಶೋಗೆ ಸಂಜೆ ಹೋಗಿದ್ದೆ. ಅಂದಾಜು ಒಂದು ಕಿ.ಮೀ ದೂರದಲ್ಲಿ ವಾಹನ ಪಾರ್ಕ್ ಮಾಡಿ, ನಡೆಯುತ್ತಾ ಬರಬೇಕಾಯಿತು. :(  ಜನಸಂದಣಿಯದ್ದು ನನಗೆ ಚಿಂತೆ ಇಲ್ಲ. ರಶ್‌ಗೆ ಹೆದರಿ, ನನ್ನಾಕೆ ನನ್ನ ಕೈಬಿಡದೇ ಜತೆಯಲ್ಲಿ ಬರುವುದು ಆವಾಗಲೇ. :) ಈ ಸಲ ಎಷ್ಟು ಕೇಳಿದರೂ ಒಪ್ಪಲಿಲ್ಲ. "ರಶ್, ಬರುವುದಿಲ್ಲ. ಮಗಳನ್ನು ಕರಕೊಂಡು ಹೋಗಿ" ಎಂದಳು.
ರಜಾದಿನಗಳಲ್ಲಿ ಬೆಂಗಳೂರು ಏಳುವುದು ಸ್ವಲ್ಪ ಲೇಟೇ..ಅದಕ್ಕೆ ಏಳು ಗಂಟೆಗೇ ಮಗಳನ್ನು ಕರಕೊಂಡು ಹೊರಟೆನು. "ಯೆ ಖಾಲಿ ಖಾಲಿ ರಸ್ತೇ..ಉ ಊ ಉ.."ಎಂದು ಹಾಡು ಹೇಳಿಕೊಂಡು, ಮುಕ್ಕಾಲು ಗಂಟೆಯೊಳಗೇ ಲಾಲ್ ಬಾಗ್ ಬಳಿ ಇದ್ದೆ. ಗಾಜಿನ ಮನೆ ಬಳಿ ಹೋದಾಗ ಟಿಕೆಟ್ ಕೊಡಲು ಪ್ರಾರಂಭಿಸಿದ್ದರಷ್ಟೇ. ಹೂವಿನ ಜತೆ ಮಗಳದ್ದು ಫೋಟೋ ತೆಗೆದದ್ದೇ ತೆಗೆದದ್ದು.
ಮಗಳಿರುವ ಫೋಟೋ ಬಿಟ್ಟು, ಉಳಿದ ಫೋಟೋಗಳಲ್ಲಿ ೫-೬ ಫೋಟೋ ಇಲ್ಲಿ ಹಾಕುವೆ. ಈ ಫೋಟೋ ಏನೂ ಇಲ್ಲ. ಅಲ್ಲಿ ಕಣ್ಣಾರೆ ನೋಡಿ, ಆನಂದಿಸಿ.
ಲಾಲ್ ಬಾಗ್ ಮಾಡಿದ ಪುಣ್ಯಾತ್ಮರಿಗೆ, ಅಲ್ಲಿ ಫ್ಲವರ್ ಶೋ ಆರಂಭಿಸಿದವರಿಗೆ ಮನದಲ್ಲೇ ವಂದಿಸಿ ಹಿಂದೆ ಬಂದೆನು.

Rating
No votes yet

Comments

Submitted by nageshamysore Thu, 08/15/2013 - 19:55

ಗಣೇಶ್ ಜಿ, ಹೂವೆ ಚಿತ್ತಾರವಾಗಿದೆಯೊ, ಚಿತ್ತಾರ ವಿನ್ಯಾಸವೆ ಹೂವಾಗಿದೆಯೊ - ಅಂತೂ ಜನರಿಂದ ಗಿಜಿಗುಟ್ಟುವ ಮೊದಲೆ ಸೊಗಸಾದ ಪೋಟೊ ತೆಗೆದುಬಿಟ್ಟಿದ್ದೀರಾ. ನೀವು ತಡ ಮಾಡಿ ಹೋಗಿದ್ದರೆ ಬರಿ ಜನರ ತಲೆಯೆ ಕಾಣುತ್ತಿತ್ತೊ ಏನೊ? ಬೋಟ್ ಹೌಸ್ ಹೈಲೈಟು - (ಅದರ  ಹುವ್ವೂ ಕಾಗದದ್ದೊ , ನಿಜವಾದದ್ದೊ ಚಿತ್ರದಲ್ಲಿ ನಿಕರವಾಗಿ ಗೊತ್ತಾಗಲಿಲ್ಲ.) 
 
ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು
 

Submitted by ಗಣೇಶ Thu, 08/15/2013 - 23:17

In reply to by nageshamysore

ನಿಜ ನಾಗೇಶರೆ, ಬೋಟ್ ಹೌಸೇ ಹೈಲೈಟು. ೫-೬ ಫೋಟೋ ಹಾಕಿದರಾಯಿತು ಅಂತ ಇದ್ದವನು, "ಪುಷ್ಪಯಾನ"ದ್ದೇ ೫-೬ ಫೋಟೋ ಹಾಕಿದೆ. ಚಿತ್ರ ಚಿಕ್ಕ ಸೈಜಾಗುವಾಗ ಕತ್ತಲೆ ಜಾಸ್ತಿಯಾಯ್ತು. ೭೫೦೦೦ ಗುಲಾಬಿ ಹೂಗಳಿಂದ ಬೋಟ್ ಹೌಸ್ ಮಾಡಲಾಗಿದೆ! ಅದರ ವಿವರ ಈ ಕೊಂಡಿಯಲ್ಲಿದೆ- http://www.deccanher... (ಕೊಂಡಿ ಸರಿ ಬರದಿದ್ದರೆ DH Video: Lalbagh flower show ಎಂದು ಗೂಗ್‌ಲ್ ಸರ್ಚ್ ಕೊಟ್ಟು ನೋಡಿ)

Submitted by makara Thu, 08/15/2013 - 22:35

ಗಣೇಶ್‌ಜಿ,
ನಿಮ್ಮ ದಯೆಯಿಂದ ಹೈದರಾಬಾದಿನಿಂದಲೇ ಲಾಲ್ ಬಾಗ್‌ನ ಸುಂದರ ಪುಷ್ಪ ಪ್ರದರ್ಶನದ ದರ್ಶನ ಭಾಗ್ಯ ಒದಗಿಸಿದಿರಿ :) ಉತ್ತಮ ಫೋಟೋಗಳಿಗಾಗಿ ಅಭಿನಂದನೆಗಳು.
ಕೊನೆ ಹನಿ - ನಿಮ್ಮ ಮಗಳು ಇರುವ ಫೋಟೋಗಳನ್ನು ಯಾಕೆ ಹಾಕಲಿಲ್ಲ ಅಂತಾ ಗೊತ್ತಾಯಿತು ಬಿಡಿ. ಆ ಫೋಟೋದ ಮೂಲಕ ಸಪ್ತಗಿರಿಯವರು ನಿಮ್ಮನ್ನು ಪತ್ತೆ ಮಾಡಿ ನನ್ನ ಮುಂದೆ ಹಾಜರಪಡಿಸಿಯಾರೆಂಬ ಭಯದಿಂದ :))
ಶುಭರಾತ್ರಿ, ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by ಗಣೇಶ Thu, 08/15/2013 - 23:31

In reply to by makara

ಶ್ರೀಧರ್‌ಜಿ, ಸಪ್ತಗಿರಿಗೆ ನೀವು ಕ್ಲೂ ಕೊಡುತ್ತೀರಿ ಅಂತ ಯೋಚಿಸಿದ್ದೆ. (ಲಾಲ್ ಬಾಗ್‌ನಿಂದ ಉತ್ತರಕ್ಕೆ ಮುಕ್ಕಾಲು ಗಂಟೆಯಲ್ಲಿ ತಲುಪಬಹುದಾದ ಸ್ಥಳ ...) ನೀವು ಕೊಟ್ಟಿಲ್ಲ. ನಾನು ಬಚಾವು:)

Submitted by venkatb83 Fri, 08/16/2013 - 12:08

ಗಣೇಶ್ ಅಣ್ಣ - ನಾನು ಆ ಕಡೆ ಅಚಾನಕ್ಕಾಗಿ ಹೋದೆ...!! ೧೪ರ ರಾತ್ರಿ ವಿಪರೀತ ಮಳೆ ಮತ್ತು ಟ್ರಾಫಿಕ್ ಜಾಮ್ ಹಾಗೂ ಬೀ ಎಂ ಟಿ ಸಿ ಬಸ್ಸುಗಳು ಕಡಿಮೆ ಇದ್ದ ಕಾರಣ ಮಡಿವಾಳ ಚೆಕ್ಪೋಸ್ಟ್ ಇಂದ ನಮ್ ಸ್ನೇಹಿತನ ರೂಮ್ಗೆ ಹೋಗಿ ಮಲಗಿ ಬೆಳಗ್ಗೆ (೧೫ನೆ ತಾರೀಖು ) ಎದ್ದು ಬಸ್ಸು ಹಿಡಿಯಲು ಬರುವಾಗ ನೋಡಿದರೆ ಅಲ್ಲೇ ಲಾಲ್ಬಾಗು ... ಹಿಂದಿನ ಗೇಟು , ಬೆಳಗ್ಗೆಯೇ ಸಾಲು ಸಾಲು ಜನ - ವಾಕಿಂಗ್ಗೆ ..!! ಆದರೆ ನಾನು ಮನೆಗೆ ಹೋಗುವ ಅವಸರದಲ್ಲಿ ಲಾಲ್ಬಾಗ್ ಒಳ ಹೋಗದೆ ಹಾಗೆಯೇ ನೋಡಿ ಮನೆಗೆ ಹೋದೆ..!! ಆದರೆ ನೀವು ಅಲ್ಲಿಯ ಎಲ್ಲ ಚಿತ್ರಗಳನ್ನು ಹಾಕಿ ಮನ ತಣಿಸಿದಿರಿ ..!!
ನಾವು ಮುಂದಿನ ಜನವರಿ ಫ್ಲವರ್ ಷೋ ಗೆ ಹೊಗುವೆವು..!!!

>>>ನವಿಲಿನ ಹೂ ರಚನೆ ಮತ್ತು ದೋಣಿ ಸೂಪರ್ ...!!
>>>>ಗಣೇಶ್ ಅಣ್ಣ ನೀವ್ ಹೇಳಿದ ಆ ಸ್ಥಳ ... ...... ದೇ ಅಲ್ಲವೇ?

ಸಚಿತ್ರ ಬರಹಕ್ಕೆ ನನ್ನಿ

ಶುಭವಾಗಲಿ
\।

Submitted by ಗಣೇಶ Sun, 08/25/2013 - 23:40

In reply to by venkatb83

ಬೆಳಗ್ಗೆಯೇ ಸಾಲು ಸಾಲು ಜನ - ವಾಕಿಂಗ್ಗೆ ..!! ಸಪ್ತಗಿರಿವಾಸಿ, ೧೫ ನೇ ಆಗಸ್ಟ್ ವಾಕಿಂಗ್‌ನವರು ಅತ್ತ ಸುಳಿಯುವುದೇ ಇಲ್ಲ. :) ಮಾರನೇ ದಿನದ ವಾಕಿಂಗ್ ಅನುಭವ ಬರೆಯಬೇಕು ಅಂತ ಇದ್ದೇನೆ. ಸಮಯ ಸಿಕ್ಕರೆ ಈ ವಾರ ಬರೆಯುವೆ. ಲಾಲ್ ಬಾಗ್ ಸರಣಿ ಲೇಖನದ (ಮ್ಯಾಂಗೋ ಮೇಳ, ಕಾಲಾ ಸರೋವರ್, ಫ್ಲವರ್ ಶೋ) ಕೊನೆಯ ಕಂತು.
"ನಾವು ಮುಂದಿನ ಜನವರಿ ಫ್ಲವರ್ ಷೋ ಗೆ ಹೊಗುವೆವು..!!!" ನಾವು ಅಂದರೆ...?

Submitted by venkatb83 Mon, 08/26/2013 - 16:05

ನಾವೆನ್ದರೆ ನಾವೇ...!!

ಸರಣೀ ಬರಹ‌ ಓಕೆ.. ಆದರೆ ಕಾಲ‌ ಕ್ರಮೇಣ‌ ಸಂಪದ‌ ಬದಲಾದ‌ ಹಾಗೆ ಅಲ್ಲಿ ಸೇರಿಸಿದ‌ ಕೆಲ‌ ಚ್ಹಿತ್ರಗಳು ಮಾಯ‌ ಆಗುವುವು...!

>>>ಸಂಪದದಲ್ಲಿ ಈಗ‌ ಹುಡುಕು ಎಂಬ‌ ಹೊಸ‌ ಆಯ್ಕೆ ಬಂದಿದೆ ‍ ಒಳ್ಳೇದು.. ಅಲ್ಲಿ ಹೆಸರು ಹಾಕಿ ಹುಡುಕಿದರೆ ಬರಹಗಳೂ ಮತ್ತು ಲೇಖಕರು ಸಿಗುವರು..

ಶ್ಹುಭವಾಗಲಿ

\|