25
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಮ್ಯಾಗಿ ಪಕೋಡ

August 29, 2005 - 10:18am
ನಿರ್ವಹಣೆ
ತಯಾರಿಸುವ ವಿಧಾನ: 

ಮ್ಯಾಗಿ ಪ್ಯಾಕಿನ ಹಿಂಬದಿಯಲ್ಲಿ ಬರೆದ ಇನ್ಸ್ಟ್ರಕ್ಶನ್ಸ್ ನೋಡಿಕೊಂಡು ಮ್ಯಾಗಿ ಮಾಡಿಟ್ಟುಕೊಳ್ಳಿ. ಅದನ್ನಾರಲು ಬಿಡಿ.

ಒಂದಷ್ಟು ಕಡಲೇಹಿಟ್ಟಿಗೆ (ಸ್ವಲ್ಪ ಮಾತ್ರ) ಹೆಚ್ಚಿದ ಈರುಳ್ಳಿ, ಮೆಣಸಿನಕಾಯಿ ಜೊತೆಗೆ ಬೆರೆಸಿಟ್ಟುಕೊಂಡು ಮೆಣಸಿನಪುಡಿ, ಕೊತ್ತಂಬರಿ ಸೇರಿಸಿ. ಈ ಮಿಶ್ರಣಕ್ಕೆ ತಣ್ಣಗಾದ ಮ್ಯಾಗಿ ಸೇರಿಸಿ ಚೆನ್ನಾಗಿ ಬೆರೆಯುವಂತೆ ಕದಡಿ.
ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಪಕೋಡದಂತೆ ಕರೆಯಿರಿ. ರೆಡೆಯಾಯ್ತು ಮ್ಯಾಗಿ ಪಕೋಡ ;)

ಯಾವುದಾದರೂ sauce ಅಥವಾ ಟೊಮಾಟೊ ಕೆಚಪ್ ಜೊತೆ ತಿನ್ನಬಹುದು.

ಹಳೆಯದೊಂದು ಮ್ಯಾಗಿ ಕ್ಲಬ್ ರೆಸಿಪಿ

೪ ಜನ

30

ಹೈಸ್ಕೂಲಿನಲ್ಲಿದ್ದಾಗ ಅಪ್ಪ ಅಮ್ಮ ವಾರಗಟ್ಟಲೆ ನಮ್ಮನ್ನು ಮನೆಯಲ್ಲಿ ಬಿಟ್ಟು ಊರಿಗೆ ಹೋದರೆಂದರೆ ದಿನ ನಿತ್ಯ ತಿಂಡಿಗೆ ಮ್ಯಾಗಿಯೇ ಗತಿ. :) ಆಗೊಮ್ಮೆ ಮ್ಯಾಗಿ ಕ್ಲಬ್ ಪುಸ್ತಕದಲ್ಲಿ ಈ ರೆಸಿಪಿ ಬಂದಿತ್ತು. ನಾನೂ, ನನ್ನ ಅಣ್ಣನೂ ಸೇರಿ ಪ್ರಯತ್ನಿಸಿ ಹಾಗೂ ಹೀಗು ರುಚಿಯಾದ ಪಕೋಡ ಮಾಡುವಲ್ಲಿ ಯಶಸ್ವಿಯಾಗಿದ್ದೆವು. ಆಗಿನಿಂದ ಇಂದಿನವರೆಗೂ ನಮ್ಮ ಮನೆಯಲ್ಲಿ ಒಮ್ಮೊಮ್ಮೆ ಇದನ್ನು ಅಮ್ಮ ಅಥವಾ ಅತ್ತಿಗೆಯವರು ಮಾಡುವುದುಂಟು... ನೀವೂ ಟ್ರೈ ಮಾಡಿ ನೋಡಿ.

ಮ್ಯಾಗಿ (Maggi 2 minute Noodles) - ೧ ಪ್ಯಾಕೆಟ್

ಕಡ್ಲೆಹಿಟ್ಟು ೨೦೦ ಗ್ರಾಮ್

ಈರುಳ್ಳಿ, ಕೊತ್ತಂಬರಿ, ಹಸಿರು ಮೆಣಸಿನಕಾಯಿ.

ಮೆಣಸಿನ ಪುಡಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.7 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by gurubaliga on
ಸಂಪದ ನಿರ್ವಹಣೆಯವರು ಅಡಿಗೆ ಮನೆ ನಿರ್ವಹನೇನೂ ಮಾಡ್ತಾರೆ ಅಂತ ಇಂದೇ ಗೊತ್ತಾಗಿದ್ದು. ಮ್ಯಾಗಿ ಪಕೋಡ ಚೆನ್ನಾಗಿದೆ. :)