ನಿಷ್ಪಾಪಿ ಸಸ್ಯಗಳು (ಭಾಗ ೪೯) - ಜತ್ರೋಪಾ ಸಸ್ಯ
23 hours 21 minutes ago - ಬರಹಗಾರರ ಬಳಗನಾವು ಸಣ್ಣವರಿದ್ದಾಗ ಮಣ್ಣಿನ ಅಗರಿ(ಳಿ) ನ ಮೇಲೆ, ಗದ್ದೆ ತೋಟದ ಬೇಲಿಯಲ್ಲಿ ಇದ್ದ ಬೇಲಿಯಲುಂಬುಡು ಎಂಬ ಗಿಡದ ಎಲೆ ಮುರಿದು ಕೇಪಳ ಅಥವಾ ಕಿಸ್ಕಾರ ಎಂಬ ಹೂವಿನ ಮದ್ಯೆ ಹಚ್ಚಿ ಬಾಯಲ್ಲಿಟ್ಟು ಊದುತ್ತಿದ್ದೆವು. ಉರುಟುರುಟಾದ ಗಾಳಿಗುಳ್ಳೆಗಳು ಒಂದೊಂದಾಗಿ ಹಾರಿ ಒಡೆಯುವುದನ್ನು ನೋಡುವುದೇ ಹಬ್ಬವಾಗಿತ್ತು. ಅದರ ಗಾಢ ಹಸುರಾದ ಎಲೆಗಳು ಆಕರ್ಷಕವಾಗಿದ್ದವು. ಗೊಂಚಲು ಗೊಂಚಲಾಗಿರುತ್ತಿದ್ದ ಕಾಯಿಗಳನ್ನು ತಿನ್ನದಂತೆ ಮನೆಯಲ್ಲಿ ಎಚ್ಚರಿಸುತ್ತಿದ್ದರು. ಬೇಲಿ ಅಲುಂಬುಡು ಎಂಬುವುದು ತುಳು ಭಾಷೆಯ ಹೆಸರು. ಇದು ಕೆಲವು ವರ್ಷಗಳ ಹಿಂದೆ ವಿಶ್ವದ ಗಮನ ಸೆಳೆದ ಅಪರೂಪದ ಸಸ್ಯವಾಗಿದೆ. ಈ ಸಸ್ಯವೇ ಜತ್ರೋಪಾ. ಜತ್ರೋಪಾ ಕರ್ಕಾಸ್ (Jatropha curcas) ಎಂಬ ವೈಜ್ಞಾನಿಕ ಹೆಸರುಳ್ಳ ಈ ಗಿಡ ಯುಪೋರ್ಬಿಯೇಸಿ (Euphorbiaceae) ಎಂಬ ಕುಟುಂಬಕ್ಕೆ ಸೇರಿದೆ.
ಬೀಜಗಳ ಮೂಲಕ ಹಾಗೂ ಗೆಲ್ಲುಗಳನ್ನು ನೆಡುವ ಮೂಲಕ ವಂಶಾಭಿವೃದ್ಧಿ ನಡೆಸುವ ಜತ್ರೋಪಾ ನೈಸರ್ಗಿಕವಾಗಿ ಎಲ್ಲೆಡೆ ಕಾಣಸಿಗುವ ಗಿಡವಾದರೂ ಅಮೇರಿಕಾದ ಉಷ್ಣವಲಯಕ್ಕಿದು ಸ್ಥಳೀಯವಾಗಿದೆ. ಆಫ್ರಿಕಾ ಮತ್ತು ಏಷ್ಯಾದಲ್ಲಿ ಕ್ಯಾಸ್ಟರ್ ಆಯಿಲ್ ಪ್ಲಾಂಟ್ ಎಂದು ಅನ್ವರ್ಥವಾಗಿಯೇ ಕರೆಯುತ್ತಾರೆ. ನಿತ್ಯಹರಿದ್ವರ್ಣ ಪೊದೆ ಸಸ್ಯವಾದ ಜತ್ರೋಪಾ 6 ಮೀಟರಿಗೂ ಹೆಚ್ಚು ಎತ್ತರ ಬೆಳೆದು ಸಣ್ಣ ಮರದಂತೆಯೂ ಕಾಣಬಲ್ಲದು. ಎಲೆಗಳು ಗಾಢ ಹಾಗೂ ತಿಳಿ ಹಸಿರಿನಲ್ಲಿದ್ದು ಸ್ವಲ್ಪ ದಪ್ಪಗಿರುತ್ತವೆ. ಅಕ್ಷಾ ಕಂಕುಳಲ್ಲೆ ಹೂಗೊಂಚಲಿದ್ದು ಒಂದೇ ಹೂಗೊಂಚಲಲ್ಲಿ ಗಂಡು ಹೆಣ್ಣು ಹೂಗಳಿರುತ್ತವೆ. ಹೂಗಳಲ್ಲಿ ಜೇನಿರುತ್ತದೆ. ತೇವ ಭೂಮಿಗೂ ಶುಷ್ಕ ಭೂಮಿಗೂ ಸೈ ಎನುವ ಈ ಸಸ್ಯ ವಿಷಕಾರಿ ಎಂದು ಪರಿಗಣಿಸುವ ಪೋರ್ಬೋಲ್ ಎಸ್ಟರ್ ಅಂಶ ಹೊಂದಿದೆ. ಆದರೆ ಮೆಕ್ಸಿಕೋ ದಲ್ಲಿ ವಿಷರಹಿತವಾದ ಜತ್ರೋಪಾ ಕೂಡ ಇದೆ. ಇದಲ… ಮುಂದೆ ಓದಿ...