ಪುಸ್ತಕ ಸಂಪದ

  • ಒಂದೆಲೆ ಮೇಲಿನ ಕಾಡು -ಊರು ಮನೆ ಮಾತು ಎನ್ನುವ ಕೃತಿಯನ್ನು ಸ ವೆಂ ಪೂರ್ಣಿಮಾ ಅವರು ಬರೆದಿದ್ದಾರೆ. ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಸಾಹಿತಿ ಕೇಶವ ಮಳಗಿ ಇವರು. ತಮ್ಮ ಮುನ್ನುಡಿಯಲ್ಲಿ ಅವರು ವ್ಯಕ್ತ ಪಡಿಸಿದ ಅಭಿಪ್ರಾಯಗಳ ಆಯ್ದ ಸಾಲುಗಳು ನಿಮ್ಮ ಓದಿಗಾಗಿ...

    “ʻಒಂದೆಲೆ ಕಾಡಿನ ಮೇಲೆʼ ಪುಸ್ತಕ ಅಪರೂಪದ ಗುಣವಿಶೇಷಣಗಳನ್ನು ಪಡೆದ ಬರಹಗಳ ಸಂಚಯ. ನೆನಪುಗಳು ಕಿಕ್ಕಿರಿದ ಈ ಬರಹಗಳಲ್ಲಿ ಬಾಲ್ಯ, ತಾರುಣ್ಯ, ಮಧ್ಯ ವಯಸ್ಸಿನ ಮೆದು-ಮೆಲು ಮಾತು, ಅನುಭವದಿಂದ ಪಳಗಿ ಪಕ್ವವಾದ ಮೃದು-ಸಹನೀಯ ನುಡಿಗಳು ಮಡುಗಟ್ಟಿವೆ. ಈ ಕೃತಿಯಲ್ಲಿ ಆತ್ಮಚರಿತ್ರೆ, ಕಥನ, ಕಾವ್ಯ, ಮೌಖಿಕ ನುಡಿಗಾರಿಕೆ ವ್ಯಕ್ತಿಚಿತ್ರ, ಹೀಗೆ ಎಲ್ಲ ಅಂಶಗಳೂ ಗಟ್ಟಿಮೇಳದಂತೆ ಮೇಳೈಸಿ ತಮ್ಮದೇ…

  • ನವಕರ್ನಾಟಕ ಪ್ರಕಾಶನದ “ಕಿರಿಯರ ಕಥಾಮಾಲೆ”ಯಲ್ಲಿ ಪ್ರಕಟವಾಗಿರುವ ಈ ಸಂಕಲನದಲ್ಲಿ ವಿವಿಧ ಲೇಖಕರ 13 ಕತೆಗಳಿವೆ. ಪ. ರಾಮಕೃಷ್ಣ ಶಾಸ್ತ್ರಿ, ಪಳಕಳ ಸೀತಾರಾಮ ಭಟ್ಟ, ಸಂಪಟೂರು ವಿಶ್ವನಾಥ್, ದೊಡ್ಡಬಾಣಗೆರೆ ಪ್ರಕಾಶಮೂರ್ತಿ ಮತ್ತು ವಿ. ರಾಮಚಂದ್ರ ಶಾಸ್ತ್ರಿ ಬರೆದಿರುವ ಕತೆಗಳು.

    ಯಾವುದೇ ಸಮಾಜದಲ್ಲಿ ವ್ಯಕ್ತಿಗಳ ನೀತಿ-ನಡತೆಯು ಆ ಸಮಾಜದ ಸಹಜೀವನ, ಶಾಂತಿ ಹಾಗೂ ನೆಮ್ಮದಿಗೆ ಕಾರಣವಾಗುತ್ತದೆ. ಇವುಗಳನ್ನು ಬಾಲ್ಯದಲ್ಲಿಯೇ ರೂಪಿಸುವುದು ಬಹಳ ಅಗತ್ಯ ಮತ್ತು ಇದು ನಿರಂತರವಾಗಿ ನಡೆಯಬೇಕಾದ ಕಾಯಕ. 1950-60ರ ದಶಕದ ವರೆಗೆ ನಮ್ಮ ದೇಶದ ಶೇಕಡಾ 80ರಷ್ಟು ಜನರು ಗ್ರಾಮೀಣ ಪ್ರದೇಶದಲ್ಲಿದ್ದರು. ಅಲ್ಲೆಲ್ಲ ಕೂಡುಕುಟುಂಬಗಳಲ್ಲಿ ಜನರ ಬದುಕು. ಆ ಕುಟುಂಬಗಳ ಅಜ್ಜ-ಅಜ್ಜಿಯರು, ಹಿರಿಯರು ಮಕ್ಕಳಿಗೆ ದಿನದಿನವೂ ಕತೆಗಳನ್ನು ಹೇಳುತ್ತಿದ್ದರು:…

  • ವೃತ್ತಿಯಲ್ಲಿ ವೈದ್ಯರಾಗಿದ್ದುಕೊಂಡು ಪ್ರವೃತ್ತಿಯಲ್ಲಿ ಸಾಹಿತಿ, ಕವಿ ಆಗಿರುವ ಡಾ. ಸುರೇಶ ನೆಗಳಗುಳಿ ಅವರು ಬರೆದ ಮುಕ್ತಕಗಳ ಸಂಕಲನ ‘ಧೀರತಮ್ಮನ ಕಬ್ಬ'. ಇದು ಮೂರನೇ ಸಂಪುಟ. ನೆಗಳಗುಳಿ ಅವರ ಈ ಕೃತಿಗೆ ಬೆನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಸಾಹಿತಿ ಅರವಿಂದ ಚೊಕ್ಕಾಡಿ. ಅದರಲ್ಲಿ “ಡಾ. ಸುರೇಶ ನೆಗಳಗುಳಿ ಅವರ ಮುಕ್ತಕಗಳು ಡಿ.ವಿ.ಜಿ.ಯವರನ್ನು ಹೋಲುವ ನೀತಿಬೋಧಕ ರಚನೆಗಳಾಗಿವೆ. ‘ಧೀರತಮ್ಮ'ನನ್ನು ಉದ್ದೇಶಿಸಿ ಹೇಳುವ ವಿನ್ಯಾಸದಲ್ಲಿ ರಚನೆಯಾಗಿರುವ ಮುಕ್ತಕಗಳಲ್ಲಿ ಬದುಕಿನ ಬಹು ಮಗ್ಗುಲಿನ ಅಪಾರ ಅನುಭವಗಳನ್ನು ಕಾಣಬಹುದು. ಗಳಿಸಿದ ಅನುಭವಗಳ ಬಗ್ಗೆ ಹೃದಯದಿಂದ ಚಿಂತಿಸಿ ಭಾವಪೋಷಕರಾಗಿ ಬರೆಯಲ್ಪಟ್ಟಿರುವ ಈ ಮುಕ್ತಕಗಳು ಅದಮ್ಯ ಜೀವನೋತ್ಸಾಹ ಮತ್ತು ಜೀವಪ್ರೀತಿಯಿಂದ ಓದುಗರನ್ನು ಸೆಳೆದು ಮುದ ನೀಡುವ ಓದಿನ…

  • ನಿವೃತ್ತ ಮುಖ್ಯ ಶಿಕ್ಷಕಿ, ಸಾಹಿತಿ ರತ್ನಾ ಕೆ ಭಟ್, ತಲಂಜೇರಿ ಇವರು ಬರೆದ ಆಧುನಿಕ ವಚನಗಳ ಸಂಗ್ರಹವು ‘ವಚನಬಿಂದು' ಎಂಬ ಹೆಸರಿನಲ್ಲಿ ಪುಸ್ತಕರೂಪದಲ್ಲಿ ಪ್ರಕಟವಾಗಿದೆ. “ರತ್ನಕ್ಕನೆಂದೇ ಜನರ ಮನಸ್ಸಿನಲ್ಲಿ ನೆಲೆ ನಿಂತವರು ಇವರು. ಇವರು ಮೂಲತಃ ಕವಿಗಳ ವಂಶದವರು. ಆದುದರಿಂದ ಹುಟ್ಟುತ್ತಲೇ ಕವಿತ್ವ ಇವರ ರಕ್ತದಲ್ಲಿ ಸಂಚರಿಸುತ್ತಲೆ ಇತ್ತು. ಅದು ಈ ಹಿರಿಯ ಪ್ರಾಯದಲ್ಲಿ ಹೊರಹೊಮ್ಮಿದೆ. ಇಂದು ನಾಡಿನಾದ್ಯಂತ ಕನ್ನಡ ನಾಡಿನ ಲೇಖಕಿಯರಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ. ಇಲ್ಲಿ ಇವರು ಬರೆದಿರುವ ಆಧುನಿಕ ವಚನ ಜನರ ಜೀವನದ ವಿವಿಧ ಸ್ತರಗಳನ್ನು ಪರಿಚಯಿಸುತ್ತದೆ. ಆ ಮೂಲಕ ತಿಳುವಳಿಕೆಯ ಪಾಠವನ್ನು ಜನರಿಗೆ ನೀಡಿದ್ದಾರೆ. ವೈವಿಧ್ಯಮಯವಾದ ಆಧುನಿಕ ವಚನ ಸಂಕಲನವನ್ನು ನಾಡಿನ ಜನ ಪಡೆದು ಓದಿ ಅದರಲ್ಲಿನ ಜ್ಞಾನವನ್ನು…

  • 'ಭವದ ಅಗುಳಿ’ ಸಂತೋಷ ಅಂಗಡಿ ಅವರ ಕವನ ಸಂಕಲನ. ಈ ಕೃತಿಗೆ ಎಚ್.ಎಲ್. ಪುಷ್ಪ ಅವರ ಮುನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ‘ಇಲ್ಲಿನ ಕವಿತೆಗಳಲ್ಲಿ ತಾನು ಕಂಡ, ಅರ್ಥೈಸಿಕೊಂಡ ಬದುಕನ್ನು ಹಿಡಿಯಲೆತ್ನಿಸುವ ಒಬ್ಬ ಕವಿಯಿದ್ದಾನೆ. ಇಲ್ಲ ಲೋಕ ಸಾಂಗತ್ಯದ ಜೊತೆಗೆ, ಅವನಿಗೆ ಆತ್ಮ ಸಾಂಗತ್ಯವೂ ಸಹ ಸಾಧ್ಯ. ಹೀಗಾಗಿ ಅವನು ಹೊರಗೂ, ಒಳಗೂ ಸಂವಾದಿಸಬಲ್ಲವನು. ಹೊರಗನ್ನು ಒಳಗೆ ತೆಗೆದುಕೊಳ್ಳುತ್ತಾ ತನ್ನ ಗ್ರಹಿಕೆಯ ಲೋಕಕ್ಕೆ ಪರಿಚಿತ ವಸ್ತು, ಶಬ್ದಗಳನ್ನು ಸೇರಿಸುತ್ತಾ ಓದುಗನನ್ನು ಒಳಗೊಳ್ಳುವ ಇನ್ನೊಂದು ಲೋಕವನ್ನು ಸೃಷ್ಟಿಸುತ್ತಾನೆ. ಇಲ್ಲ ಕವಿತೆಯೆಂಬುದು ಕವಿಯ ಇಹ-ಪರಗಳನ್ನು ತೆರೆದಿಡುವ ಲೋಕ. ಹೀಗಾಗಿಯೇ ಬರೆಯುವ ಸಂದರ್ಭದಲ್ಲಿ ಕವಿಗೂ, ಕವಿತೆಗೂ ಕಾಲದೇಶಗಳ ಚೌಕಟ್ಟಿರುತ್ತದೆ. ನಿಜವಾದ ಕವಿತೆ ಈ…

  • ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣವಾಗಿ ಅದರ ಉದ್ಘಾಟನೆಯ ಶುಭ ಸಂದರ್ಭದಲ್ಲಿ ಬಿಡುಗಡೆಯಾದ ಕೃತಿ ಅಯೋಧ್ಯಾ. ಇದು ರಾಮನ ಇತಿಹಾಸವಲ್ಲ ; ರಾಮಮಂದಿರದ ಇತಿಹಾಸ ಎಂದು ಈ ಕೃತಿಯ ಲೇಖಕರಾದ ಎಸ್ ಉಮೇಶ್ ಅವರು ಪುಸ್ತಕದ ಮುಖಪುಟದಲ್ಲೇ ಅಚ್ಚುಹಾಕಿಸಿದ್ದಾರೆ. ಕೆಲ ಮಂದಿರಗಳಿಗೆ ಸಹಸ್ರ ವರ್ಷಗಳ ಪೌರಾಣಿಕ ಹಿನ್ನಲೆ ಇರುತ್ತದೆ. ಇನ್ನು ಕೆಲ ಮಂದಿರಗಳಿಗೆ ಶತಶತಮಾನಗಳ ಇತಿಹಾಸವಿರುತ್ತದೆ. ಆ ಮಂದಿರದ ವೈಭವ, ಅದರ ಮೇಲೆ ಎರಗಿದ ದಾಳಿಗಳು, ಅದರ ಜೀರ್ಣೋದ್ಧಾರದ ಸಂಕಲ್ಪ, ಅದಕ್ಕಾಗಿ ನಡೆದ ಹೋರಾಟಗಳು... ಹೀಗೆ ಹಲವು ಕಥನಗಳು ಗರಿಗೆದರುತ್ತವೆ.

    ಭರತ ಖಂಡದ ಸಂಸ್ಕೃತಿ, ಪರಂಪರೆ, ಆಸ್ಥೆ, ಶ್ರದ್ಧೆಗಳ ಪ್ರತೀಕವಾಗಿರುವ ಅಯೋಧ್ಯೆಯ ಶ್ರೀರಾಮ ಮಂದಿರ,…

  • ಭೂಮಿ, ಆಕಾಶ, ಸೂರ್ಯ, ಚಂದ್ರ, ಗಾಳಿ, ಬೆಳಕು, ನೀರು, ಗಿಡಮರಗಳು, ಪ್ರಾಣಿ, ಪಕ್ಷಿಗಳ ನಿಸ್ವಾರ್ಥದ ಸೇವೆಯನ್ನು ಮರೆಯುತ್ತಿದ್ದಾನೆ ಎನ್ನುತ್ತಾರೆ ಕೃತಿಯ ಪ್ರಕಾಶಕರಾದ’ ಜಿ.ಎಸ್. ಗೋನಾಳ. ಅವರು ಶಿಲ್ಪಾ ಮ್ಯಾಗೇರಿ ಅವರ ‘ಚೈತ್ರದ ಚರಮಗೀತೆ’ ಕೃತಿಗೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ...

    “ಇತ್ತೀಚೆಗೆ ಮನುಷ್ಯನು ಬಹಳಷ್ಟು ಸ್ವಾರ್ಥಿಯಾಗುತ್ತಿದ್ದಾನೆ. ಬರೀ ನಾನು, ನನ್ನಿಂದ, ನನಗಾಗಿ, ಎಂಬ ಭ್ರಮೆಯಲ್ಲಿ ತೇಲುತ್ತಿದ್ದಾನೆ. ಭೂಮಿ, ಆಕಾಶ, ಸೂರ್ಯ, ಚಂದ್ರ, ಗಾಳಿ, ಬೆಳಕು, ನೀರು, ಗಿಡಮರಗಳು, ಪ್ರಾಣಿ, ಪಕ್ಷಿಗಳ ನಿಸ್ವಾರ್ಥದ ಸೇವೆಯನ್ನು ಮರೆಯುತ್ತಿದ್ದಾನೆ. ಅಲ್ಲದೇ ಸಮೃದ್ಧಿ, ಸಾಧನೆ, ಗುರಿ, ಯಶಸ್ಸು, ನೆಮ್ಮದಿಗಳಿಂದ ಬದುಕನ್ನು ಕಟ್ಟಿಕೊಳ್ಳಲು…

  • ಪ್ರಚಲಿತ ವಿದ್ಯಮಾನಗಳ ಕುರಿತಾಗಿ ಬರೆಯುವ ಲೇಖಕ ಪರಕಾಲ ಪ್ರಭಾಕರ್ ಅವರು ಆಂಗ್ಲ ಭಾಷೆಯಲ್ಲಿ ಬರೆದ ಕೃತಿಯನ್ನು ‘ರಾಹು' ಅವರು ‘ಹೆಣವಾಗುತ್ತಿರುವ ಗಣರಾಜ್ಯ' ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ರಾಜಕೀಯ ವಿಶ್ಲೇಷಕ ಮತ್ತು ಬರಹಗಾರ ಸಂಜಯ್ ಬಾರು. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಕೆಲವೊಂದು ಅನಿಸಿಕೆಗಳ ಆಯ್ದ ಭಾಗ ಇಲ್ಲಿದೆ...

    “ಪರಕಾಲ ಪ್ರಭಾಕರ್ ಅವರು ಪುನರುಜ್ಜೀವಕ ಪುರುಷರು: ಒಬ್ಬ ವಿಖ್ಯಾತ ಅರ್ಥಶಾಸ್ತ್ರಜ್ಞರು; ಸಾರ್ವಜನಿಕ ಧೋರಣೆಯ ವೃತ್ತಿ ತಜ್ಞರು; ಕಾರ್ಪೊರೇಟ್ ಸಲಹೆಗಾರರು; ಸಾರ್ವಜನಿಕ ಅಭಿಪ್ರಾಯದ ಜನಮತ ಗಣನೆಯ ಪರಿಣಿತರು; ಕ್ರಿಯಾಶೀಲ ರಾಜಕೀಯ ಕಾರ್ಯಕರ್ತರು;…

  • ಭಾರತದ ದಟ್ಟ ಕಾಡುಗಳ ಜನರ ಮತ್ತು ನರಭಕ್ಷಕ ಪ್ರಾಣಿಗಳ ಬದುಕನ್ನು ಆಪ್ತವಾಗಿ, ಮನಸೂರೆಗೊಳ್ಳುವ ಸಾಹಿತ್ಯವಾಗಿ ದಾಖಲಿಸಿದ ಕೆನೆತ್ ಆಂಡರ್ಸನ್ ಅವರ ಅನುಭವಗಳ ಸಂಗ್ರಹ ರೂಪಾಂತರ ಇದು.

    ಇದರಲ್ಲಿವೆ ನಾಲ್ಕು ಕಥನಗಳು. “ದಿಗುವಮೆಟ್ಟದ ಕೊಲೆಗಡುಕ” ಮೊದಲನೆಯ ಕಥನ. ಆಂಧ್ರಪ್ರದೇಶದ ಗುಂತಕಲ್ ರೈಲ್ವೆ ಜಂಕ್ಷನಿನಿಂದ ಪೂರ್ವಕ್ಕೆ ರೈಲಿನಲ್ಲಿ ಸಾಗಿದರೆ ಸಿಗುವ ಪಟ್ಟಣ ನಂದ್ಯಾಲ್. ಮುಂದುವರಿದರೆ, ಬಸವಪುರ ಸ್ಟೇಷನಿನ ನಂತರ ಒಂದು ಚಿಕ್ಕ ಮತ್ತೊಂದು ಬಹಳ ಉದ್ದದ ಸುರಂಗಗಳು ಸಿಗುತ್ತವೆ. ತದನಂತರ ಸಿಗುವ ಸ್ಟೇಷನ್ ದಿಗುವಮೆಟ್ಟ. ಅದೊಮ್ಮೆ ಆಂಡರ್ಸನ್ ಅಲ್ಲಿಗೆ ಹೋಗಿ, ರೈಲ್ವೆ ಸ್ಟೇಷನಿನಿಂದ ಒಂದು ಮೈಲು ದೂರದ ಅರಣ್ಯ ಇಲಾಖೆಯ ಟಿಬಿಯಲ್ಲಿ ಉಳಿಯುತ್ತಾರೆ. ಅಲ್ಲಿನ ಟಿಬಿ ಮೇಟಿ ಅಲೀಂ ಖಾನ್. ಅವನಿಗೆ ಇಬ್ಬರು ಹೆಂಡತಿಯರು. ಈಗ ಅವನ ವಿಧವೆ ತಂಗಿಯೂ…

  • ಉಡುಪಿ ಜಿಲ್ಲೆಯ ಸಾಮಾಜಿಕ ಕಾರ್ಯಕರ್ತರು ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತರೂ ಆಗಿರುವ ಪತ್ರಕರ್ತ ಅಶ್ವಿನ್ ಲಾರೆನ್ಸ್ ಇವರು ಬರೆದ ಪುಟ್ಟ, ಆದರೆ ಅಪರೂಪದ ಅದ್ಭುತ ವ್ಯಕ್ತಿಯ ಚಿತ್ರಣವನ್ನು ಕಟ್ಟಿಕೊಡುವ ಪುಸ್ತಕ ‘ಜಾತಿವ್ಯಾಧಿ ಚಿಕಿತ್ಸಕ ಡಾ. ಪದ್ಮನಾಭನ್ ಪಲ್ಪು’. ಈ ಕೃತಿಗೆ ಮಾಹಿತಿಪೂರ್ಣವಾದ ಮುನ್ನುಡಿಯನ್ನು ಬರೆದಿದ್ದಾರೆ ಪತ್ರಕರ್ತರಾದ ಶ್ರೀರಾಮ ದಿವಾಣರು. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಕೆಲವು ಅಭಿಪ್ರಾಯಗಳ ಕೆಲವು ಸಾಲುಗಳು ನಿಮ್ಮ ಓದಿಗಾಗಿ…

    “ಕ್ರಾಂತಿ ಎಂದರೆ ಹಿಂಸೆ, ಹಿಂಸಾತ್ಮಕ ಹೋರಾಟ ಎಂಬ ಅಭಿಪ್ರಾಯ ಹಲವರಲ್ಲಿದೆ. ಈ ಅಭಿಪ್ರಾಯ ಪೂರ್ಣ ಸರಿಯಲ್ಲ. ಯಥಾಸ್ಥಿತಿವಾದದ ವಿರುದ್ಧ ಕೇವಲ ಸುಧಾರಣೆಗಳ ಬದಲು, ಜಾರಿಯಲ್ಲಿರುವ ವ್ಯವಸ್ಥೆಯ…