ಪುಸ್ತಕ ಸಂಪದ

  • ಡಾ. ಸುರೇಶ ನೆಗಳಗುಳಿ ಅವರು ವೃತ್ತಿಯಲ್ಲಿ ವೈದ್ಯರಾದರೂ ಪ್ರವೃತ್ತಿಯಲ್ಲಿ ಓರ್ವ ಕವಿ, ಲೇಖಕರಾಗಿ ಗುರುತಿಸಿಕೊಂಡಿದ್ದಾರೆ. ನೆಗಳಗುಳಿ ಅವರ ಗಜಲ್ ಎಂದರೆ ಬಹಳಷ್ಟು ಮಂದಿಯ ಮನ ಅರಳುತ್ತದೆ. ಏಕೆಂದರೆ ಮೂಲತಃ ಉರ್ದು ಭಾಷೆಯಲ್ಲಿನ ಒಂದು ಪ್ರಕಾರವಾದ ಗಜಲ್ ಗಳನ್ನು ಯಶಸ್ವಿಯಾಗಿ ಕನ್ನಡೀಕರಣಗೊಳಿಸಿದ್ದು ಇವರ ಹೆಗ್ಗಳಿಕೆ ಎಂದರೆ ತಪ್ಪಾಗಲಾರದು. ಗಜಲ್ ನ ಮೂಲ ಆಶಯ ಮತ್ತು ನಿಯಮಾವಳಿಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಇವರು ಗಜಲ್ ರಚನೆ ಮಾಡುತ್ತಾರೆ. ಸಾಮಾಜಿಕ ಜಾಲ ತಾಣಗಳ ಬಳಗಗಳಲ್ಲಿ ಇವರು ತಮ್ಮದೇ ಆದ ಅಭಿಮಾನಿಗಳನ್ನು ಮತ್ತು ಶಿಷ್ಯರನ್ನು ಹೊಂದಿದ್ದಾರೆ. 

    ಕಲ್ಲಚ್ಚು ಪ್ರಕಾಶನದಿಂದ ಹೊರಬಂದಿರುವ ಡಾ. ಸುರೇಶ ನೆಗಳಗುಳಿ ಅವರ ‘ನೆಗಳಗುಳಿ ಗಜಲ್ಸ್...' ಎನ್ನುವ ಕೃತಿಯಲ್ಲಿ…

  • ಉದಯೋನ್ಮುಖ ಕವಿ ವಿಶ್ವನಾಥ ಅರಬಿ ಇವರು ತಮ್ಮ ನೂತನ ಕವನ ಸಂಕಲನ ‘ಒಲವ ವೃಷ್ಟಿ' ಯನ್ನು ಇತ್ತೀಚೆಗೆ ಹೊರತಂದಿದ್ದಾರೆ. ಈ ಸಂಕಲನಕ್ಕೆ ವಿಶ್ವನಾಥ ಅರಬಿ ಇವರು ಬರೆದ ಮುನ್ನುಡಿಯ ಕೆಲವು ಸಾಲುಗಳು ನಿಮ್ಮ ಓದಿಗಾಗಿ...

    “ಮತ್ತೆ ತಮ್ಮೊಂದಿಗೆ ನನ್ನ ಭಾವನೆಗಳನ್ನು ಹಂಚಿಕೊಳ್ಳಲು ಸಿದ್ಧಗೊಂಡಿರುವ ಈ ಕವನ ಸಂಕಲನವನ್ನು ಒಪ್ಪಿ, ಅಪ್ಪಿಕೊಂಡು ಓದುತ್ತಿರುವ ಕನ್ನಡ ಮನಸ್ಸುಗಳಿಗೆ ನನ್ನ ಹೃದಯಂತರಂಗದ ಅನಂತ ಕೋಟಿ ನಮನಗಳು. ತಮ್ಮೆಲ್ಲರ ಪ್ರೋತ್ಸಾಹದೊಂದಿಗೆ ಇಲ್ಲಿಯವರೆಗೆ ನನ್ನೆಲ್ಲ ಆರು ಕೃತಿಗಳು ಯಶಸ್ವಿಯಾಗಿವೆ. ಅದಕ್ಕಾಗಿ ತಮಗೆ ಎಷ್ಟು ಧನ್ಯವಾದಗಳನ್ನು ತಿಳಿಸಿದರೂ ಕಡಿಮೆಯಾಗುವುದು.

    ಪ್ರೀತಿ-ಪ್ರೇಮ ಎನ್ನುವವು ಈ ಭೂಮಿಯ ಮೇಲೆ ಬೆಲೆ…

  • ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು ಮತ್ತು ಭಾರತೀಯ ವಿದ್ಯಾಭವನ, ಮೈಸೂರು ಕೇಂದ್ರದ ಸಹಯೋಗದೊಂದಿಗೆ ಹೊರತಂದಿರುವ ಜ್ಞಾನ ಭರಿತ ಪುಸ್ತಕ ‘ಭಾಷೆ ಆಧಾರದ ಮೇಲೆ ಭಾರತದ ಛಿದ್ರತೆ -ಇನ್ನಾದರೂ ನಿಲ್ಲಬಾರದೇಕೆ?' ಈ ಪುಸ್ತಕ ಮಾಲೆಯ ಪ್ರಧಾನ ಸಂಪಾದಕರು ಡಾ. ಪ್ರಧಾನ್ ಗುರುದತ್ತ ಹಾಗೂ ಸಂಪಾದಕರು ಡಾ ಎ ವಿ ನರಸಿಂಹಮೂರ್ತಿ. ಪ್ರಧಾನ ಸಂಪಾದಕರಾದ ಪ್ರಧಾನ್ ಗುರುದತ್ತ ಇವರು ತಮ್ಮ ಬೆನ್ನುಡಿಯ ಬರಹದಲ್ಲಿ ಈ ಕೃತಿಗಳನ್ನು ಹೊರತಂದ ಆಶಯದ ಬಗ್ಗೆ ಮಾಹಿತಿ ನೀಡಿದ್ದಾರೆ. “ಭುವನ್ಸ್ ಬುಕ್ ಯೂನಿವರ್ಸಿಟಿ" ಮಾಲೆಯಲ್ಲಿ ಶ್ರೀಸಾಮಾನ್ಯರಿಗೆ ಮಾತ್ರವಲ್ಲದೆ, ಸಾಹಿತ್ಯ ಸಂಸ್ಕೃತಿ ಇತಿಹಾಸಗಳ ಬಗ್ಗೆ ಆಸಕ್ತರಾಗಿರುವ ಎಲ್ಲರಿಗೂ ಬೋಧಪ್ರದವಾಗಿರುವಂಥ ಕಿರುಹೊತ್ತಗೆಗಳನ್ನು ಹೊರತರಲಾಗಿದೆ. ಆಕಾರದಲ್ಲಿ ಕಿರಿದಾದರೂ…

  • ನಮಗೆ ಭಿನ್ನ ಲೋಕವೆಂದೇ ತೋರುವ ನಾಗಾಲ್ಯಾಂಡ್ ನ ಸನ್ನಿವೇಶಗಳು, ಸಮಸ್ಯೆಗಳನ್ನು ಹಿನ್ನೆಲೆಯಾಗಿಟ್ಟುಕೊಂಡು, ಅಲ್ಲಿನ ಸಂಸ್ಕೃತಿ, ದಿನನಿತ್ಯದ ನಡವಳಿಕೆ ಇವುಗಳನ್ನು ಬಿಂಬಸಲೆಂದೇ ತೆಮ್ಸುಲಾ ಆವೋ ಅವರು ರಚಿಸಿದ ಹಲವು ಕಥೆಗಳ ಗುಚ್ಛವಾಗಿದೆ ಈ ಕೃತಿ. ಅಲ್ಲಿಯ ಜನರ ನೋವು, ಕಷ್ಟ, ಸಂಕಟಗಳ ಚಿತ್ರಣ ನಮಗೆ ಬೇರೊಂದು ಅನುಭವವನ್ನು ಕೊಡುತ್ತದೆ. ಆ ಪ್ರದೇಶದಲ್ಲಿ ಉದ್ಯೋಗದಲ್ಲಿದ್ದ ಡಾ. ಎಚ್.ಎಸ್.ಎಂ. ಪ್ರಕಾಶ್ ಅವರು ಸ್ಥಳೀಯವಾಗಿದ್ದ ಹಾಗೂ ವಿಶಿಷ್ಟವಾಗಿದ್ದ ತಮ್ಮ ಅನುಭವಗಳ ಸಹಾಯದಿಂದ ಕನ್ನಡಕ್ಕೆ ಅನುವಾದ ಮಾಡಿದ್ದಾರೆ.

    ಈ ಕೃತಿಯಲ್ಲಿ ನಾಗಾಲ್ಯಾಂಡಿನ ವಿಶಿಷ್ಟ ಸನ್ನಿವೇಶ ಮತ್ತು ಸಮಸ್ಯೆಗಳ ಹಿನ್ನಲೆಯಲ್ಲಿ ರಚಿತವಾಗಿರುವ ಇಲ್ಲಿನ ಕಥೆಗಳು ನಮಗೆ ವಿಶಿಷ್ಟ ಅನುಭವವನ್ನು…

  • ಲೇಖಕ ಕಗ್ಗೆರೆ ಪ್ರಕಾಶ್ ಅವರು ತಮ್ಮ ೨೫ನೇ ಕೃತಿ ‘ಬೆವರ ಹನಿಯ ಜೀವ' ಹೊರತಂದಿದ್ದಾರೆ. ಈ ೧೨೮ ಪುಟಗಳ ಕಿರು ಪುಸ್ತಕದಲ್ಲಿ ೫೦ ಕವಿತೆಗಳನ್ನು ಪ್ರಕಟ ಮಾಡಿದ್ದಾರೆ. ಪುಸ್ತಕದ ಲೇಖಕರ ಮಾತಿನಲ್ಲಿ ಕಗ್ಗೆರೆ ಪ್ರಕಾಶ್ ಅವರು ಬರೆದ ಮಾಹಿತಿಗಳ ಆಯ್ದ ಸಾಲುಗಳು ಇಲ್ಲಿವೆ…

    “ಕನ್ನಡಮ್ಮನಿಗೆ ಕಿರು ಕಾಣಿಕೆ, ಹೊನಲು, ಭುವಿಬಾಲೆ, ಭೂರಮೆ ವಿಲಾಸ ಬಳಿಕ ‘ಬೆವರ ಹನಿಯ ಜೀವ’ ನನ್ನ ೫ನೇ ಕವನ ಸಂಕಲನ. ಇದು ನನ್ನ ೨೫ನೇ ಪುಸ್ತಕ ಕೂಡ. ೨೦೨೧ ರಲ್ಲಿ ‘ಭೂರಮೆ ವಿಲಾಸ’ ಪ್ರಕಟವಾದ ನಂತರದಲ್ಲಿ ಬರೆದ ಐವತ್ತು ಪದ್ಯಗಳು ಇಲ್ಲಿವೆ.

    ಇಲ್ಲಿ ಕಾವ್ಯದ ವಸ್ತಗಳು ನನ್ನೊಳಗೆ ಬೇರುಬಿಟ್ಟು ಅನುಭವಕ್ಕೆ ದಕ್ಕಿ ಕಾಡುತ್ತಾ ಹೋದಂತೆ ಬರೆದು ನಾನು ಆ ಗುಂಗಿನಿಂದ…

  • ಓದಲು ಸೊಗಸಾಗಿರುವ ಬಹಳ ಚಂದನೆಯ ಪುಸ್ತಕಗಳನ್ನು ಹೊರತರುವ ‘ಛಂದ ಪುಸ್ತಕ'ವು ಈ ಬಾರಿ ಬರಹಗಾರ ಕರ್ಕಿ ಕೃಷ್ಣಮೂರ್ತಿ ಅವರ ‘ಇಮೋಜಿ ಭಾಷೆ' ಎಂಬ ಪ್ರಬಂಧಗಳ ಸಂಕಲನವನ್ನು ಪ್ರಕಟಿಸಿದೆ. ಕಳೆದ ಕೆಲವು ವರ್ಷಗಳಿಂದ ‘ಮಯೂರ' ಮಾಸ ಪತ್ರಿಕೆಗೆ ಬರೆದ ಅಂಕಣ ಬರಹಗಳು ಮತ್ತು ಬೇರೆ ಬೇರೆ ಸಂದರ್ಭಗಳಲ್ಲಿ ಬರೆದ ಇತರೆ ಲೇಖನಗಳನ್ನು ಒಟ್ಟು ಸೇರಿಸಿಕೊಂಡು ಸೊಗಸಾದ ಪ್ರಬಂಧ ಸಂಕಲನವನ್ನು ಹೊರ ತಂದಿದ್ದಾರೆ. 

    ಈ ಕೃತಿಯ ಬಗ್ಗೆ ಸಾಹಿತಿ ಕೆ ವಿ ಅಕ್ಷರ ಅವರು ಸೊಗಸಾದ ಬೆನ್ನುಡಿಯ ಮೂಲಕ ಕರ್ಕಿಯವರನ್ನು ಹುರಿದುಂಬಿಸುವ ಕೆಲಸ ಮಾಡಿದ್ದಾರೆ. ಅವರು “ದೃಕ್-ದೃಶ್ಯ-ವಿವೇಕ ಎಂಬ ಸುಪ್ರಸಿದ್ಧ ಪಠ್ಯವು ಹೇಳುವ ಪ್ರಕಾರ, ನಾವೆಲ್ಲ…

  • ಉತ್ತರ ಕನ್ನಡದ ಪರಿಸರ ಲೇಖಕ ಶಿವಾನಂದ ಕಳವೆಯವರು 1994ರಿಂದೀಚೆಗೆ ಒಂದು ದಶಕದ ಅವಧಿಯಲ್ಲಿ ರಾಜ್ಯದ ವಿವಿಧ ಭಾಗದಲ್ಲಿ ಅಲೆದಾಡಿದಾಗಿನ ಅನುಭವವನ್ನು ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಇಲ್ಲಿನ 31 ಬರಹಗಳು “ವಿಜಯ ಕರ್ನಾಟಕ” ದಿನಪತ್ರಿಕೆಯಲ್ಲಿ ಅಂಕಣ ಬರಹಗಳಾಗಿ ಪ್ರಕಟವಾಗಿದ್ದವು.

    ಶಿವಾನಂದ ಕಳವೆ ಪುಸ್ತಕದ “ಮೊದಲ ಮಾತಿ”ನಲ್ಲಿ “ಚಿಟ್ಟೆ ಹಾರಾಡಿದ್ದರ” ಹಿನ್ನೆಲೆಯನ್ನು ಹೇಳುತ್ತಾರೆ: “ಮರದ ಉಂಗುರ ವಿಶ್ಲೇಷಣೆಯಲ್ಲಿ ನೆಲದ ಪರಿಸರ ಚರಿತ್ರೆ ಸಾಧ್ಯ. ಡೆಂಡ್ರಾಕ್ರೊನಾಲಜಿ ತಜ್ನರ ವರದಿಗಳು ಮರಗಳ ಜೊತೆ ಮಾತಾಡಲು ಹೇಳಿದವು. ಪಾತರಗಿತ್ತಿಯೆಂಬ ಮಕರಂದ ಮೋಹಿನಿ ಸೆರಗಲ್ಲಿ ಮಾಹಿತಿ ಕಣಜವೇ ಇದೆಯೆಂದು ತಿಳಿದಾಗ ಒಡನಾಡಿದ ಅರಣ್ಯ ಮುಖ ಅಪರಿಚಿತ. ಈ ವರೆಗಿನ ಅರಿವು ಕುಬ್ಜ. ವಾರ್ಷಿಕ 4,000 ಮಿಲಿ ಮೀಟರ್ ಅಬ್ಬರದ ಮಳೆಯಲ್ಲಿ ತೋಯ್ದ…

  • ಖ್ಯಾತ ಆಂಗ್ಲ ಬರಹಗಾರರಾದ ಚಾರ್ಲ್ಸ್ ಲುಡ್ಟಿಜ್ ಡಾಜ್ ಸನ್ (Charles Lutwidge Dodgson) ಲೂಯಿ ಕರೋಲ್ ಎಂಬ ಗುಪ್ತನಾಮದಲ್ಲಿ ಬರೆದ ಆಲೀಸ್ ಇನ್ ವಂಡರ್ ಲ್ಯಾಂಡ್ (Alice in Wonderland) ಎಂಬ ಮಕ್ಕಳ ಕಥಾ ಸಂಕಲನವನ್ನು ಹೊರತಂದಿದ್ದರು. ಕನ್ನಡದ ಖ್ಯಾತ ಸಾಹಿತಿ ನಾ ಕಸ್ತೂರಿ ಇವರು ಈ ಕಥಾ ಸಂಕಲನವನ್ನು ಬಹಳ ಸೊಗಸಾಗಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಇಂಗ್ಲಿಷ್ ನ ಆಲೀಸ್ ಕನ್ನಡಕ್ಕೆ ಬರುವಾಗ ಪಾಪಚ್ಚಿ ಆಗಿದ್ದಾಳೆ. 

    ಕನ್ನಡ ಪುಸ್ತಕ ಪ್ರಾಧಿಕಾರವು ೧೯೩೫, ೧೯೭೩, ೧೯೯೮ ವರ್ಷಗಳಲ್ಲಿ ಈ ಕೃತಿಯನ್ನು ಮರು ಮುದ್ರಣ ಮಾಡಿತ್ತು. ಈಗ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ ಅವರು ಮುದ್ರಿಸಿದ್ದಾರೆ. ಲೂಯಿ ಕರೋಲ್ ಎಂಬ ಗುಪ್ತನಾಮದಿಂದ ಈ ಕಥೆಗಳನ್ನು ಬರೆದ ಚಾರ್ಲ್ಸ್…

  • ವೃತ್ತಿಯಲ್ಲಿ ಶಿಕ್ಷಕಿಯಾಗಿ, ಮುಖ್ಯೋಪಾಧ್ಯಾಯಿನಿಯಾಗಿ ಈಗ ನಿವೃತ್ತಿ ಜೀವನವನ್ನು ಅನುಭವಿಸುತ್ತಿರುವ ರತ್ನಾ ಕೆ ಭಟ್ ತಲಂಜೇರಿ (ರತ್ನಕ್ಕ) ಇವರು ಬರೆದ ಗಝಲ್ ಗಳ ಸಂಕಲನ ಇತ್ತೀಚೆಗೆ ಬಿಡುಗಡೆಯಾಗಿದೆ. “ಗಝಲ್ ಬರವಣಿಗೆಯಲ್ಲಿ ನುರಿತವಳು ನಾನಲ್ಲ" ಎಂದು ಪ್ರಾಮಾಣಿಕವಾಗಿಯೇ ಹೇಳುವ ರತ್ನಕ್ಕ ಇದುವರೆಗೆ ಬರೆದ ಗಝಲ್ ಗಳನ್ನೆಲ್ಲಾ ಸೇರಿಸಿ ಸಂಕಲನದ ರೂಪದಲ್ಲಿ ಹೊರತಂದಿದ್ದಾರೆ. ಇವರ ಈ ಸಾಧನೆಗೆ ಬೆನ್ನೆಲುಬಾಗಿ ನಿಂತವರು ಇವರ ಸಹೋದರ ಹಾಗೂ ಸಾಹಿತಿ ಹಾ ಮ ಸತೀಶ ಮತ್ತು ಕಥಾಬಿಂದು ಪ್ರಕಾಶನದ ಪ್ರದೀಪ್ ಕುಮಾರ್ ಇವರು. ರತ್ನಕ್ಕನವರ ಯಾವುದೇ ಕಾರ್ಯಕ್ಕೆ ಬೆನ್ನೆಲುಬಾಗಿ ನಿಂತಿರುವ ಅವರ ಪತಿ ತಲಂಜೇರಿ ಕೃಷ್ಣ ಭಟ್ ಅವರನ್ನು ಹಾಗೂ ವಾಟ್ಸಾಪ್ ಬಳಗ ‘ಗಝಲ್ ವಾಹಿನಿ' ಇದರ ಸದಸ್ಯೆಯಾಗಿದ್ದು ತಾವು ಬರೆದ ಗಝಲ್ ಗಳ…

  • ಜೂಲ್ಸ್ ವೆರ್ನ್, ಫ್ರೆಂಚ್ ಭಾಷೆಯಲ್ಲಿ ವೈಜ್ಞಾನಿಕ ಲೇಖನಗಳನ್ನು ಬರೆಯುವವರಲ್ಲಿ ಪ್ರಮುಖರು. ಇವರ ’ಎ ಜರ್ನಿ ಟು ದ ಸೆಂಟರ್ ಆಫ್ ದ ಅರ್ತ್’ ಎಂಬ ರೋಚಕವಾದ ಕೃತಿಯ ಸಂಗ್ರಹಾನುವಾಗಿದೆ ಈ ಕೃತಿ. ಇದನ್ನು ಎಂ. ಗೋಪಾಲಕೃಷ್ಣ ಅಡಿಗರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ಕೃತಿ ಮೊದಲು ಪ್ರಕಟವಾದದ್ದು ೧೯೭೯ರಲ್ಲಿ. ಆಗ ಅದನ್ನು ಪ್ರಕಾಶಿಸಿದ್ದು ಬೆಂಗಳೂರಿನ ಜಗತ್ ಸಾಹಿತ್ಯ ಮಾಲೆ ಇವರು. ಈಗ ಕನ್ನಡ ಅನುವಾದ ಸಾಹಿತ್ಯ ಅಕಾಡೆಮಿಯವರು ಮರು ಮುದ್ರಣ ಮಾಡಿದ್ದಾರೆ.

    ಈ ಬಗ್ಗೆ ಈ ಮಾಲಿಕೆಯ ಪ್ರಧಾನ ಸಂಪಾದಕರಾದ ಪ್ರಧಾನ್ ಗುರುದತ್ತ ಇವರು ಈ ಕೃತಿಯ ಬಗ್ಗೆ ತಮ್ಮ ಮುನ್ನುಡಿಯಲ್ಲಿ ಬರೆಯುತ್ತಾ “ ವೈಜ್ಞಾನಿಕ ಕಥೆ ಕಾದಂಬರಿಗಳನ್ನು ಬರೆದವರಲ್ಲಿ ಮುಖ್ಯರೆಂದು ಪರಿಗಣಿತರಾಗಿರುವ…