ಪುಸ್ತಕ ಸಂಪದ

  • ‘ವರ್ತಮಾನ ಭಾರತ' ಎನ್ನುವ ನೂತನ ಕೃತಿಯಲ್ಲಿ ಖ್ಯಾತ ಚಿಂತಕ, ಲೇಖಕ ಪುರುಷೋತ್ತಮ ಬಿಳಿಮಲೆ ಇವರು ಪ್ರಕಟ ಮಾಡಿದ್ದಾರೆ. ಸಮಕಾಲೀನ ಘಟನೆಗಳ ಬಗ್ಗೆ ಇವರು ಬರೆದ ಪುಟ್ಟ ಪುಟ್ಟ ಬರಹಗಳೇ ಸಂಗ್ರಹಗೊಂಡು ‘ವರ್ತಮಾನ ಭಾರತ’ ಎನ್ನುವ ಕೃತಿಯಾಗಿ ಹೊರಬಂದಿದೆ. ಈ ಕೃತಿಗೆ ಬರೆದ ಲೇಖಕರ ಮಾತಿನಲ್ಲಿ ಪುರುಷೋತ್ತಮ ಬಿಳಿಮಲೆ ಅವರು ವ್ಯಕ್ತ ಪಡಿಸಿದ ಕೆಲವು ಮಾತುಗಳು ನಿಮ್ಮ ಓದಿಗಾಗಿ...

    “ಸಂಸ್ಥೆಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದುದರಿಂದ ವೈಯಕ್ತಿಕವಾಗಿ ಹೆಚ್ಚು ಬರೆಯಲಾಗಲಿಲ್ಲ. ೨೦೨೦ರಲ್ಲಿ ವೃತ್ತಿಯಿಂದ ನಿವೃತ್ತನಾದ ಮೇಲೆ ಒಂದಷ್ಟು ಸಮಯ ದೊರಕಿತು. ಅದನ್ನು ಸದುಪಯೋಗಪಡಿಸಿಕೊಂಡು 'ಕನ್ನಡ ಕಥನಗಳು' ಬರೆದೆ. ಕೊರೋನಾ ಸಮಯದಲ್ಲಿ ನನ್ನ ಆತ್ಮಕಥನ 'ಕಾಗೆ ಮುಟ್ಟಿದ ನೀರು'…

  • ನಿವೃತ್ತ ಮುಖ್ಯ ಶಿಕ್ಷಕಿ, ಕವಯತ್ರಿ ಶ್ರೀಮತಿ ರತ್ನಾ ಕೆ ಭಟ್ ತಲಂಜೇರಿ ಇವರ ನೂತನ ಕೃತಿ 'ಹನಿ ಹನಿಗಳ ನಡುವೆ' ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಕೃತಿಯ ಪ್ರಮುಖ ಅಂಶವೆಂದರೆ ಇದೊಂದು ‘ಆಲ್ ಇನ್ ಒನ್' ಎನ್ನುವಂಥ ಪುಸ್ತಕ. ಏಕೆಂದರೆ ಹನಿ ಕವನದ ಎಲ್ಲಾ ಪ್ರಕಾರಗಳು ಇದರಲ್ಲಿವೆ. ಹಾಯ್ಕು, ಟಂಕಾ, ಅಬಾಬಿ, ಚುಟುಕು, ರುಬಾಯಿ, ಶಿಶುಗೀತೆ, ಮಿನಿ ಕವನ ಎಲ್ಲಾ ಈ ಸಂಕಲನದಲ್ಲಿ ಅಡಕವಾಗಿದೆ. 

    ‘ಹನಿ ಹನಿಗಳ ನಡುವೆ' ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಕವಿ, ಸಾಹಿತಿ, ಶಿಕ್ಷಕರಾದ ಹಾ ಮ ಸತೀಶ್. ಇವರು ರತ್ನಾ ಭಟ್ ಅವರ ಸಹೋದರನೂ ಹೌದು. ತಮ್ಮನಾದ ಸತೀಶರು ಅಕ್ಕನ ಪುಸ್ತಕದ ಬಗ್ಗೆ ಹೇಳಿರುವುದು ಹೀಗೆ - “ಕನಸುಗಳು ಹೀಗೆಯೇ ಇರುತ್ತದೆ ಎಂದು ಹೇಳಲಾಗುವುದಿಲ್ಲ. ಆದರೆ ನಮ್ಮ…

  • ಬಾಲ್ಯದಲ್ಲಿ ಅಜ್ಜ ಅಜ್ಜಿಯರಿಂದ ಜಾನಪದ ಕತೆಗಳನ್ನು ಕೇಳಿದವರಿಗೆ ಗೊತ್ತು ಅವುಗಳ ಸೊಗಡು. ಅವು ಚಿರನೂತನ ಕತೆಗಳು. ಈ ಸಂಗ್ರಹದಲ್ಲಿವೆ 42 ಜಾನಪದ ಕತೆಗಳು. “ಸುಮಾರು 70 ವರ್ಷದ ಹಿಂದೆಯೇ ಹುಬ್ಬಳ್ಳಿಯಲ್ಲಿ ಪ್ರಕಟಗೊಂಡಿದ್ದ ಜಾನಪದ ಕಥೆಗಳ ಸಂಕಲನದಲ್ಲಿವನ್ನು ಸಂಗ್ರಹಿಸಿ, ತಿದ್ದಿ, ಒಂದು ಆಕಾರವನ್ನು ಕೊಟ್ಟು, ಈ ಪುಸ್ತಕವನ್ನು ಬರೆದಿದ್ದೇನೆ” ಎಂದು “ನನ್ನುಡಿ"ಯಲ್ಲಿ ತಿಳಿಸಿದ್ದಾರೆ ಲೇಖಕಿ ಎಸ್.ಬಿ. ಸರಸ್ವತಿ.

    "ಜಿಪುಣ ಮುದುಕಿ” ಎಂಬ ಕತೆಯ ಸಾರಾಂಶ: ಒಂದೂರಿನಲ್ಲಿ ಜಿಪುಣ ಮುದುಕಿ ಮಗನೊಂದಿಗೆ ವಾಸ ಮಾಡುತ್ತಿದ್ದಳು. ಅವಳು ಕಾಸಿಗೆ ಕಾಸು ಕೂಡಿಸಿ ಸಾವಿರಾರು ರೂಪಾಯಿ ಸಂಗ್ರಹಿಸಿದ್ದಳು. ಆದರೆ ಮಗನಿಗೆ ಒಂದು ಕಾಸನ್ನೂ ಕೊಟ್ಟವಳಲ್ಲ. ಮುದುಕಿ ಹಣ ಕೂಡಿಟ್ಟಿದ್ದಾಳೆ ಎಂಬುದನ್ನು ತಿಳಿದ ಕೆಲವು ದುಷ್ಟರು ಅದನ್ನು ಲಪಟಾಯಿಸಲು…

  • ಕಳೆದ ಹಲವಾರು ವರ್ಷಗಳಿಂದ ಭಾರತೀಯ ಅಂಚೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಯಜ್ಞ ನಾರಾಯಣ ಉಳ್ಳೂರ್ ತಮ್ಮ ಬಿಡುವಿನ ವೇಳೆಯಲ್ಲಿ ಲೇಖನ, ಹಾಸ್ಯ ಲೇಖನಗಳನ್ನು ಬರೆಯುವ ಹವ್ಯಾಸ ಇರಿಸಿಕೊಂಡಿದ್ದಾರೆ. ಈಗಾಗಲೇ ಹಲವು ಹಾಸ್ಯ ಲೇಖನಗಳು ನಾಡಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರು ಬರೆದು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ೨೦ ಲೇಖನಗಳನ್ನು ಈ ಪುಟ್ಟ ಪುಸ್ತಕದಲ್ಲಿ ಸಂಗ್ರಹಿಸಲಾಗಿದೆ. 

    ಯಜ್ಞನಾರಾಯಣ ಇವರು ತಮ್ಮ ‘ಎರಡು ಮಾತು' ಹೇಳುವುದು ಹೀಗೆ -” ಇಂದಿನ ಸಮಾಜದಲ್ಲಿ ನಗುವವರ ಸಂಖ್ಯೆ ಕಡಿಮೆಯಾಗಿದೆ. ವೇಗದ ಮತ್ತು ಒತ್ತಡದ ಬದುಕಿನಲ್ಲಿ ನಗುವುದಕ್ಕೆ ಸಮಯವಾದರೂ ಎಲ್ಲಿ? ಇದು ಹಲವರ…

  • ವೃತ್ತಿಯಲ್ಲಿ ಪ್ರೌಢಶಾಲಾ ದೈಹಿಕ ಶಿಕ್ಷಕರಾಗಿದ್ದ ಇ ಸೂರ್ಯನಾರಾಯಣ ರಾವ್ ಇವರು ತಮ್ಮ ವೃತ್ತಿ ಜೀವನದ ಸಮಯದಲ್ಲೇ ಬರೆದ ಸೊಗಸಾದ ನಾಟಕ ‘ಕೋಟಿ-ಚೆನ್ನಯ'. ಸೂರ್ಯನಾರಾಯಣ ರಾವ್ ಬಗ್ಗೆ ಅವರ ಮಗ ಇ ವಿಜಯರವಿ ಬಹಳ ಸೊಗಸಾಗಿ ಒಂದು ಬೆನ್ನುಡಿ ಬರೆದಿದ್ದಾರೆ. ಅದರಲ್ಲಿ “ನನ್ನ ತಂದೆಯವರು ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಯಾವುದೇ ಅಭಿನಯ ಇರಲಿ, ಆ ಪಾತ್ರಕ್ಕೆ ಜೀವ ತುಂಬುತ್ತಿದ್ದರು. ‘ನನಗಿನ್ನು ನೆನೆಯದೆ' ಸಾಮಾಜಿಕ ನಾಟಕವೊಂದರಲ್ಲಿ ಹೆಣ್ಣು ಮಕ್ಕಳ ತಂದೆಯಾಗಿ ಅವರ ಮದುವೆಗಾಗಿ ಪಡುವ ಕಷ್ಟ ಕೊನೆಗೆ ಹುಚ್ಚುಹಿಡಿಯುವ ಸನ್ನಿವೇಶ ನೋಡಿದೆ. ನಾವೆಲ್ಲ ಜೋರಾಗಿ ಅಳುವುದಕ್ಕೇ ಆರಂಭಿಸಿದ್ದೆವು. ಅಲೆಗ್ಸಾಂಡರ್ ನಂತರ ವೀರ ಪುರುಷರ ಪಾತ್ರಕ್ಕೆ ಜೀವ ತುಂಬುತ್ತಿದ್ದರು. ಅವರು ಆಗಾಗ ನಾಟಕ, ಕತೆ, ಕವಿತೆ…

  • ಧ್ಯಾನಕ್ಕೆ ಕೂತ ನದಿ’ ಕೃತಿಯು ‘ಈ ಹೊತ್ತಿಗೆ’ ಕಥಾ ಪ್ರಶಸ್ತಿ ವಿಜೇತ ಕೃತಿಯಾಗಿದೆ. ಒಟ್ಟಾಗಿ ೧೦ ಕತೆಗಳನ್ನು ಒಳಗೊಂಡ ಈ ಕೃತಿಯು ಕತೆಗಳ ಮೂಲಕ ಹಲವಾರು ವಿಚಾರಗಳು ಪ್ರಸ್ತುತಪಡಿಸುತ್ತದೆ. ಇಲ್ಲಿನ ‘ಧ್ಯಾನಕ್ಕೆ ಕೂತ ನದಿ’ ಶೀರ್ಷಿಕೆಯ ಕತೆಯು ಭಿನ್ನವಾಗಿದ್ದು, ವಸ್ತು ವೈವಿಧ್ಯ, ಜಾಳಾಗದೇ ಇರುವ ನಿರೂಪಣೆ, ಭಾಷೆಯ ಬಳಕೆಯಲ್ಲಿ ತೋರಿದ ಕಾಳಜಿ, ಹೇಳಲು ಬಯಸಿದ ತಂತ್ರಗಳ ಜೊತೆಗೆ ಪ್ರಜ್ಞಾಪೂರ್ವಕವಾಗಿ ಸೇರಿಸಿರದ ಹಾಗೆ ಕಾಣುವ ರೂಪಕಗಳ ಸೃಷ್ಟಿ ವಿಶೇಷ ಗಮನ ಸೆಳೆಯುತ್ತದೆ. ಮನರಂಜನೆಯ ಜೊತೆಗೆ ಬುದ್ದಿಗೂ ಕೆಲಸ ಕೊಟ್ಟು, ಭಾವನಾತ್ಮಕ ಹಾಗೂ ಕಲಾತ್ಮಕ ಅಂಶಗಳ ಮೂಲಕ ಗಮನ ಸೆಳೆದು ಉಳಿದೆಲ್ಲ ಕತೆಗಳಿಂತ ಭಿನ್ನವಾಗಿ ನಿಲುತ್ತದೆ. ಸದಾಶಿವ್ ಸೊರಟೂರು ಅವರು ಬರೆದ ಇಲ್ಲಿನ ಕತೆಗಳು ಹೀಗಿವೆ - ಹರಿದ ಕುಪ್ಪಸದ ಬೆಳಕು,…

  • ಖ್ಯಾತ ಪತ್ರಕರ್ತ, ಲೇಖಕ ದಿ. ರವಿ ಬೆಳಗೆರೆ ಅವರ ನೂರನೇ ಪುಸ್ತಕದ ರೂಪದಲ್ಲಿ ‘ರಜನೀಶನ ಹುಡುಗಿಯರು' ಹೊರಬಂದಿದೆ. ಆಚಾರ್ಯ ರಜನೀಶ್ ಅಥವಾ ಭಗವಾನ್ ರಜನೀಶ್ ಅಥವಾ ಓಶೋ ರಜನೀಶ್ ಎಂಬ ವ್ಯಕ್ತಿ ೮೦-೯೦ ರ ದಶಕದಲ್ಲಿ ವಿಶ್ವದಾದ್ಯಂತ ಮಾಡಿದ ಮೋಡಿಗೆ ಸಾಟಿ ಇಲ್ಲ. ರಜನೀಶ್ ಆಶ್ರಮದಲ್ಲಿ ಯಾವುದಕ್ಕೂ ನಿರ್ಭಂಧವಿರಲಿಲ್ಲ. ಹುಡುಗಿಯರು, ಸ್ವಚ್ಛಂದ ಕಾಮ, ಡ್ರಗ್ಸ್, ಹಾಡು, ಸಂಗೀತ, ನೃತ್ಯ ಯಾವುದಕ್ಕೂ ನಿಷೇಧವಿರಲಿಲ್ಲ. ಈ ಕಾರಣದಿಂದ ಬಹುತೇಕ ವಿದೇಶೀಯರೇ ಈ ಆಶ್ರಮದ ವಾಸಿಗಳಾಗಿದ್ದರು. ಎಲ್ಲಾ ವಿದೇಶೀಯರಿಗೆ ಅದರಲ್ಲೂ ಮಹಿಳೆಯರಿಗೆ ಭಾರತೀಯ ಹೆಸರುಗಳನ್ನು ನೀಡಿ ಅವರನ್ನು ತನ್ನ ಅಂತರಂಗದ ಶಿಷ್ಯರನ್ನಾಗಿಸಿಕೊಂಡಿದ್ದರು ರಜನೀಶ್. 

    ಈ ಕೃತಿಯಲ್ಲಿ ರಜನೀಶರ ಸಾಮೀಪ್ಯವನ್ನು…

  • ‘ಜರ್ನಿ ಆಫ್ ಜ್ಯೋತಿ’ ಜ್ಯೋತಿ ಎಸ್ ಅವರ ಅಂಕಣ ಬರಹಗಳ ಸಂಕಲನವಾಗಿದೆ. ಈ ಕೃತಿಯ ಕುರಿತು ಎಚ್.ಎಸ್. ಸತ್ಯನಾರಾಯಣ ಅವರು ಹೀಗೆ ಹೇಳಿದ್ದಾರೆ; ಇಲ್ಲಿ ಬಣ್ಣಬಣ್ಣದ ಚಿತ್ರಗಳನ್ನು ರಚಿಸಿಯೂ ಬದುಕಿನ ಬಣ್ಣ ಕಳೆದುಕೊಂಡು ಹೆಣಗಾಡುತ್ತಿರುವ, ಆದರೆ ಜೀವನೋತ್ಸಾಹವನ್ನು ಕುಂದಿಸಿಕೊಳ್ಳದ ಚಿತ್ರ ಕಲಾವಿದರಿದ್ದಾರೆ, ಛಾಯಾಗ್ರಾಹಕರಿದ್ದಾರೆ, ಬೀದಿ ಬದಿಯ ವ್ಯಾಪಾರಿಗಳಿದ್ದಾರೆ, ರಂಗಭೂಮಿ-ತೊಗಲುಬೊಂಬೆಯಾಟದ ಕಲಾವಿದರಿದ್ದಾರೆ, ಸಮಾಜಸೇವೆಯಲ್ಲಿ ಬದುಕಿನ ಸಾರ್ಥಕತೆಯನ್ನು ಅನುಭವಿಸುತ್ತಿರುವ ಹೆಣ್ಣುಮಕ್ಕಳಿದ್ದಾರೆ, ಅನಾಥ ಹೆಣಗಳನ್ನು ಹುಡುಕಿತಂದು ಅವಕ್ಕೆ ಗೌರವದಿಂದ ಶವಸಂಸ್ಕಾರ ಮಾಡುವವರಿದ್ದಾರೆ, ಸಾಹಸಿ ಕೃಷಿಕರಿದ್ದಾರೆ, ಮಣ್ಣಿನ ಆಭರಣಗಳನ್ನು ತಯಾರಿಸುವವರಿದ್ದಾರೆ, ಭಿಕ್ಷೆಬೇಡುವ ಸಮುದಾಯದವರಿದ್ದಾರೆ, ತೃತೀಯ…

  • “ವೃತ್ತಿಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕ, ಪ್ರವೃತ್ತಿಯಲ್ಲಿ ಕವಿ, ಸಾಹಿತಿ, ನಾಟಕಕಾರ, ಹಾಡುಗಾರ ಶ್ರೀ ಹಾ ಮ ಸತೀಶರ ಗಝಲ್ ಸಂಕಲನ ‘ಪ್ರಕೃತಿ' ಪ್ರೀತಿ ಬದುಕು ಸಂಕಲನಕ್ಕೆ ನನ್ನ ಅನುಭವದ ಒಂದೆರಡು ಸಾಲುಗಳನ್ನು ಬರೆಯಲು ಸಂತಸಪಡುತ್ತೇನೆ. ನಾನು ಕಂಡ ಹಾಗೆ ಸತೀಶರು ಸಾಹಿತ್ಯ ಪ್ರಪಂಚದ ದೈತ್ಯ ಪ್ರತಿಭೆ, ಎಲೆಯ ಮರೆಯ ಕಾಯಿ ಎನ್ನಬಹುದು. ‘ಆಡು ಮುಟ್ಟದ ಸೊಪ್ಪಿಲ್ಲ’ ಎನ್ನುವ ಮಾತಿನಂತೆ ಸಾಹಿತ್ಯದಲ್ಲಿ ಕೈಯಾಡಿಸದ ಕ್ಷೇತ್ರವಿಲ್ಲ. ಯಾವುದೇ ಕನ್ನಡ ಪಂಡಿತರಿಗೆ ಕಡಿಮೆಯಿಲ್ಲದ ಸಾಹಿತ್ಯ ಜ್ಞಾನ ಹೊಂದಿದ ಅಜ್ಞಾತ ಕವಿ. ‘ಕೇಳಿ ಪಡೆಯುವ ಮನೋಭಾವ ಒಲ್ಲದ ಹೃದಯ' ಮಾತು ನೇರ ಇರಬಹುದು. ಇರತಕ್ಕದ್ದು ಸಹ. ಅಗತ್ಯವಿರುವಲ್ಲಿ ನ್ಯಾಯವಿರುವಲ್ಲಿ ಬಾಗುವೆ ಎನ್ನುವ ಕವಿ.

    ‘ಗಝಲ್' ಒಂದು…

  • ನರಭಕ್ಷಕ ಹುಲಿಗಳ ಬೇಟೆಯ ಮೈನವಿರೇಳಿಸುವ ಇನ್ನೊಂದು ಕಥನ ಇದು. ಇಂಗ್ಲಿಷಿನಲ್ಲಿ ಕೆನೆತ್ ಆಂಡರ್ಸನ್ ಬರೆದಿರುವ ಈ ಅನುಭವಗಳನ್ನು ಅನುವಾದಿಸಿ, ಸಂಗ್ರಹ ರೂಪಾಂತರವಾಗಿ ನೀಡಿದ್ದಾರೆ ಪೂರ್ಣಚಂದ್ರ ತೇಜಸ್ವಿ.

    ಲೇಖಕರ ಮಾತಿನಲ್ಲಿ ತೇಜಸ್ವಿಯವರು ಬರೆದಿರುವ ಈ ಮಾತುಗಳು ಗಮನಾರ್ಹ: "ಇಬ್ಬರು ಕಿರಿಯ ಮಿತ್ರರು “ಕಾಡಿನ ಕಥೆಗಳು” ಪುಸ್ತಕದ ಬಗ್ಗೆ ಪ್ರಸ್ತಾಪಿಸಿ, ಆಂಡರ್ಸನ್ ಮತ್ತು ಜಿಮ್ ಕಾರ್ಬೆಟ್ ಭಾರತದ ಕಾಡುಗಳ ಬಗ್ಗೆ ಹೇಳಿರುವುದೆಲ್ಲ ಸುಳ್ಳೆಂದೂ, ಅವು ಕೇವಲ ಪಾಶ್ಚಿಮಾತ್ಯ ಓದುಗರ ಮನರಂಜಿಸಲು ಬರೆದ ಕಟ್ಟುಕಥೆಗಳೆಂದೂ ಹೇಳಿದರು. … ಕೇವಲ ಐವತ್ತು ವರ್ಷಗಳಲ್ಲಿ ಕಾಡುಗಳೂ, ಕಾಡು ಪ್ರಾಣಿಗಳ ಪರಿಸ್ಥಿತಿಯೂ ಎಷ್ಟೊಂದು ಬದಲಾಗಿದೆಯೆಂದರೆ ಈ ಯುವಮಿತ್ರರಿಗೆ ಈ ಇಬ್ಬರು ಮಹಾನ್ ಬೇಟೆಗಾರರ ಅನುಭವಗಳು ಸತ್ಯಸ್ಯ ಸತ್ಯ ಎಂದು ನನಗೆ…