ಎಲ್ಲ ಪುಟಗಳು

ಲೇಖಕರು: tvsrinivas41
ವಿಧ: Basic page
July 25, 2005
ಜೂನ್ ಮಾಹೆಯ ಎರಡನೆಯ ವಾರ ಮುಂಬಯಿಯಲ್ಲಿ ಖುಷಿ ಆಲ್ಫೊನ್ಸೋ ಮಾವು ಒಂದೆಡೆ ಸವಿಯಲು ಪರಮಾಯಿಷಿ ಇನ್ನೊಂದೆಡೆ ಧಾರಾಕಾರ ವರ್ಷಾಧಾರೆಯ ಸಂತಸ ಮತ್ತೊಂದೆಡೆ ಅಸ್ತವ್ಯಸ್ತದ ಜನಜೀವನ ನೀರಸ ಮಧ್ಯಾಹ್ನ ೧೨ಕ್ಕೂ ಕತ್ತಲೆ ತುಂಬುವ ಮಳೆಗಾಲ ತೊಗಲಿನ ಚಪ್ಪಲಿ ಬೂಟುಗಳಿಗೆ ವಿಶ್ರಾಂತಿಕಾಲ ಪ್ಲಾಸ್ಟಿಕ್ ಪಾದುಕೆ ಛತ್ರಿಗಳದೇ ಜಾಲ ಇದಿಲ್ಲದಿರುವವರಿಗೆ ಇಲ್ಲಿಲ್ಲ ಉಳಿಗಾಲ ಗಂಡು ಹೆಣ್ಣು ಭೇದವಿಲ್ಲದೆ ಏರಿಸಿಹರು ಪ್ಲಾಸ್ಟಿಕ್ಕಿನ ದಿರಿಸು ಮಳೆಯಲಿ ತೊಯ್ದು ಪರಿವೆ ಇಲ್ಲದೆ ಓಡುವುದ ನೋಡುವುದೇ ಸೊಗಸು ತಲೆಯ ಮೇಲೆ…
ಲೇಖಕರು: tvsrinivas41
ವಿಧ: Basic page
July 25, 2005
ಸಾಧಿಸಲೇನು ಇಹುದು ಇಂದು ಅಸಾಧ್ಯವಾದುದು ನಾಳೆ ಸಾಧ್ಯವು ಮರುದಿನ ಸುಲಭಸಾಧ್ಯವು ಹುಡುಕುವುದೆಲ್ಲ ಈ ಮುಂಚೆ ಇಲ್ಲಿಯೇ ಇಹುದಲ್ಲವೇ? ಹೊಸದಾವುದದು ನಾವು ಹುಡುಕುವುದು ಹುಡುಕುವವರೆಗೂ ಅದು ಹೊಸದು ಮರುಕ್ಷಣ ಅರಿಯುವೆವು ಇದು ಈ ಮುಂಚೆಯೇ ಇಲ್ಲಿ ಇತ್ತು ಅಂತ ಹಾಗಿದ್ದಲ್ಲಿ ನಾವು ಹುಡುಕುವುದು ಕತ್ತಲೆಯಲ್ಲಿ ತಡಕಾಡಿದಂತಲ್ಲವೇ? ಇದಕೆ ಬೇಕೆ ಬುದ್ಧಿವಂತಿಕೆ ಬೆಳಕು ಸಾಕಲ್ಲವೇ? ತೆರೆಯಿರಿ ನಿಮ್ಮ ಮನದ ಕಣ್ಣುಗಳನು ಎಲ್ಲ ಇಹುದು ಇಲ್ಲಿ
ಲೇಖಕರು: hpn
ವಿಧ: Basic page
July 25, 2005
"ಅಡಿಕೆಗೆ ಹೋದ ಮಾನ ಆನೆ ಕೊಟ್ಟ್ರೂ ಬರಲ್ಲ"
ಲೇಖಕರು: hpn
ವಿಧ: Basic page
July 25, 2005
ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧರಾತ್ರೀಲಿ ಕೊಡೆ ಹಿಡಿದ್ನಂತೆ!
ಲೇಖಕರು: hpn
ವಿಧ: Basic page
July 25, 2005
"ಹೊತ್ತಿಗಿಲ್ಲದ ಗಾದೆ, ಊಟಕ್ಕಿಲ್ಲದ ಉಪ್ಪಿನಕಾಯಿಯಂತೆ."
ಲೇಖಕರು: hpn
ವಿಧ: Basic page
July 25, 2005
"ಆಕಳು ದಾನಕ್ಕೆ ಕೊಟ್ರೆ, ಹಲ್ಲು ಹಿಡಿದು ನೊಡಿದ್ರಂತೆ"
ಲೇಖಕರು: modmani
ವಿಧ: Basic page
July 24, 2005
ಮಂಜುನಾಥ್ ವಿ modmani @ gmail.com ೨೦೦೨ ಆದೇಶ ಸಂಖ್ಯೆ ಕ.ಭಾ.ಕೈ.ಬಿ.ಕಾ.೧ 'ಋ" ಅಕ್ಷರವು ಬಳಕೆಯಲ್ಲಿಲ್ಲದ ಕಾರಣ ಹಾಗೂ ಭಾಷೆಯನ್ನು ಸರಳಗೊಳಿಸುವ ಅಂಗವಾಗಿ "ಋ" ಅಕ್ಷರವನ್ನು ಕೈಬಿಡಲಾಗಿದೆ. ಮತ್ತು "ಋ" ಅಕ್ಷರದ ಬದಲಾಗಿ "ರು" ಅಕ್ಷರವನ್ನು ಬಳಸಬಹುದೆಂದು ಈ ಮೂಲಕ ಸರ್ಕಾರವು ಆದೇಶ ಹೊರಡಿಸಿದೆ. ಉದಾಹರಣೆ : ಋಷಿ - ರುಷಿ ಕೃಷ್ಣ - ಕ್ರಿಷ್ಣ ಋತು - ರುತು ಋಜುತ್ವ - ರುಜುತ್ವ ೨೦೦೭ ಆದೇಶ ಸಂಖ್ಯೆ ಕ.ಭಾ.ಕೈ.ಬಿ.ಕಾ. ೨ "ಋ" ಅಕ್ಷರವನ್ನು ಕನ್ನದ ಭಾಷೆಯಿಂದ ಕೈಬಿಡುವುದಕ್ಕೆ ಸಿಕ್ಕ…
ಲೇಖಕರು: tvsrinivas41
ವಿಧ: Basic page
July 24, 2005
(ಇದು ನಾನು ದಿನವೂ ಬೆಳಗ್ಗೆ ಹಿಡಿಯುವ ೭.೨೨ರ ಚರ್ಚ್ ಗೇಟ್ ಗೆ ಹೋಗುವ ಲೋಕಲ್ ಟ್ರೈನ್ - ನನ್ನ ಅನುಭವ) ನೋಡಿರಣ್ಣ ಇದು ನನ್ನ ಲೋಕಲ್ ನ ಪ್ರಯಾಣ ಮುಗಿದ ಕೂಡಲೇ ಎಲ್ಲರೂ ನಿಟ್ಟುಸಿರು ಬಿಡೋಣ ಒಂದು ಸಾವಿರ ಮಂದಿಯ ಹೊತ್ತೊಯ್ಯುವ ಗಾಡಿ ಮೂವತ್ತು ಸಾವಿರ ಮಂದೆಗಳ ತುಂಬಿರುವ ಗಾಡಿ ಒಂದಿಂಚೂ ಜಾಗವಿಲ್ಲದ ತುಂಬಿದ ಗಾಡಿ ಅದರ ಅನುಭವ ನಿಮಗೇನು ಗೊತ್ತು ಬಿಡಿ ಕಾಲು ನವೆಯಾದಾಗ ಕೆರೆಯುವವರು ಇನ್ಯಾರದೋ ಕಾಲು 'ಆದ್ರೂ ಹೇಳುವರು ಯಾಕೋ ನವೆ ಹೋಗ್ತಾನೇ ಇಲ್ಲ' ಮುಂಜಾವಿನ ಆ ಸಮಯದಲ್ಲೂ ಹರಿವುದು ಬೆವರು…
ಲೇಖಕರು: tvsrinivas41
ವಿಧ: Basic page
July 24, 2005
ತೃಣಮಾತ್ರನ ಕನಸು ಎಲ್ಲ ಕರೆವರೆನ್ನ ತೃಣಮಾತ್ರ ನೋಡುತಿಹೆನು ಯಾವಾಗಲೂ ಕನಸು ಮಾತ್ರ ಕಂಡೆ ಕನಸಲಿ ಎಂಥ ದಿವ್ಯ ದರ್ಶನ ಎಂದೂ ಮಂಕಾಗಿರದ ಕನ್ನಡ ಮಾತೆಯನ್ನ ವಿಶ್ವದೆಲ್ಲೆಡೆ ಕನ್ನಡವೇ ಮನೆ ಮಾತು ಜಾತಿ ಧರ್ಮ ಕುಲವೆಲ್ಲವೂ ಕನ್ನಡಮಯವಾಗಿತ್ತು ಚಿನ್ನ ಬೆಳ್ಳಿ ವಜ್ರ ವೈಢೂರ್ಯಗಳ ಬೀದಿ ವ್ಯಾಪಾರ ಎಂದೆಂದೂ ಎಲ್ಲೆಡೆ ಹಬ್ಬದ ಸಡಗರ ನಿಸರ್ಗದತ್ತ ಸೌಂದರ್ಯ ನೋಡಿದೆಡೆಯೆಲ್ಲಾ ಹಸಿವು ನೀರಡಿಕೆಗಳ ಸುಳಿವೇ ಇಲ್ಲ ಇಲ್ಲೆಲ್ಲೂ ಬಡವ ಬಲ್ಲಿದ ಭೇದವೇ ತಿಳಿಯದ ಕಾಲ ಆಡಳಿತಗಾರರ ಅವಶ್ಯಕತೆಯೇ ಬೇಕಿಲ್ಲ ಎಲ್ಲ…
ಲೇಖಕರು: tvsrinivas41
ವಿಧ: ಬ್ಲಾಗ್ ಬರಹ
July 24, 2005
ಎನ್ ಬಾಲಸುಬ್ರಹ್ಮಣ್ಯ ಅವರು ಬರೆದಿರೋ 'ವೇದಾಂತ ಸಾರಗಳು' ಎನ್ನುವ ಪುಸ್ತಕದಿಂದ ಆಯ್ದ ಭಾಗಗಳನ್ನು ನಿಮ್ಮ ಮುಂದೆ ಇರಿಸುತ್ತಿದ್ದೇನೆ ೧೬ನೇ ಶತಮಾನದ ಸದಾನಂದರು ವೇದಂತದ ಸಾರಗಳ ಬಗ್ಗೆ ಬರೆಯುತ್ತಾ ಮಾನವನು ಮಾಡಬೇಕಾದ ಕರ್ಮಗಳ ಬಗ್ಗೆ ಹೀಗೆ ತಿಳಿಸಿದ್ದಾರೆ. ಮಾನವರು ಮಾಡಬೇಕಾದ ಕರ್ಮಗಳನ್ನು ವಿಹಿತ (ಮಾಡಬೇಕಾದದ್ದು) ಮತ್ತು ನಿಷಿದ್ಧ (ಮಾಡಬಾರದ್ದು) ಎಂದು ವಿಭಾಗಿಸಬಹುದು. ವಿಹಿತ ಕರ್ಮವನ್ನು ಆಚರಿಸುವುದರ ಫಲ ಪುಣ್ಯ. ನಿಷಿದ್ಧ ಕರ್ಮದ ಫಲ ಪಾಪ. ವಿಹಿತ ಕರ್ಮಗನ್ನು ನಿತ್ಯ, ನೈಮಿತ್ತಿಕ,…