ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೧೨
ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೧೧ ಲಿಂಕ್ ~ http://sampada.net/blog/%E0%B2%9C%E0%B3%80%E0%B2%9F%E0%B2%BE%E0%B2%95%E0%B3%8D-%E0%B2%97%E0%B3%86%E0%B2%B3%E0%B2%A4%E0%B2%BF-%E0%B2%AC%E0%B2%A6%E0%B3%81%E0%B2%95%E0%B2%BF-%E0%B2%AC%E0%B2%82%E0%B2%A6%E0%B2%BE%E0%B2%97-%E0%B2%AD%E0%B2%BE%E0%B2%97-%E0%B3%A7%E0%B3%A7/21-12-2012/39328
ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೧೦ ಲಿಂಕ್ ~ http://sampada.net/b...
ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೯ ಲಿಂಕ್ ~ http://sampada.net/b...
ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೮ ಲಿಂಕ್ ~ http://sampada.net/b...
ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೭ ಲಿಂಕ್ ~ http://sampada.net/b...
ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೬ ಲಿಂಕ್ ~ http://sampada.net/b...
ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೫ ಲಿಂಕ್ ~ http://sampada.net/b...
ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೪ ಲಿಂಕ್ ~ http://sampada.net/b...
ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೩ ಲಿಂಕ್ ~ http://sampada.net/b...
ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೨ ಲಿಂಕ್ ~ http://sampada.net/b...
ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೧ ಲಿಂಕ್ ~ http://sampada.net/b...
ಬೃಂದಾ ಲಂಡನ್ನಿಗೆ ಹೋಗಿ ಬಂದಳೋ ಇಲ್ಲವೋ ? ಗೊತ್ತಿಲ್ಲ...ಅವಳು ನನಗೆ ತಿರುಗಿ ಕರೆ ಮಾಡಲೇ ಇಲ್ಲ.. ಅವಳ ಐಡಿಯಾಗಳು ಫಲಿಸಲ್ಲಿಲ್ಲವೇನೋ ? ಎದುರಿಗಿದ್ದವರೇ ಏನೂ ಮಾಡಲಾಗದಿರುವಾಗ ಇನ್ನ ಇವಳು ಮೊಬೈಲ್ ಲಿ ರೆಕಾರ್ಡ್ ಆಗಿರೋ ನಿನ್ನ ಧ್ವನಿ ಮತ್ತೆ ನಿನ್ನ ಫೋಟೋ ಹಿಡಿಕೊಂಡು ನಿಂತರೆ ಪ್ರಿಯ ಎದ್ದು ಕೂರಕ್ಕೆ ನೀನೇನು ಪವಾಡ ಪುರುಷಾನ? ಕೇಳಿದವರು ನಗ್ತಾರೆ ಅಷ್ಟೇ ಅಂತ ಸಂಯುಕ್ತ ಹೇಳಿದ್ದಳು. ಸಂಯುಕ್ತ ಹೇಳಿದ್ದು ನನಗೂ ಸರಿಯೆನ್ನಿಸಿತು.
ಆಮೇಲೆ ನಾನು ಎಂದಿನಂತೆ ನನ್ನ ಕೆಲಸದಲ್ಲಿ ಮಗ್ನನಾಗಿಬಿಟ್ಟೆ. ಸಂಯುಕ್ತ ೮ ನೆ ಸೆಮಿಸ್ಟರ್ ಲಿ ಡಿಸ್ಟಿಂಕ್ಷನ್ ಲಿ ತೇರ್ಗಡೆಯಾಗಿ ದ್ದಳು. ೨-೩ ಕಂಪನಿಯಲ್ಲಿ ಕ್ಯಾಂಪಸ್ ಲಿ ಸೆಲೆಕ್ಟ್ ಆಗಿದ್ದ ಸಂಯುಕ್ತ ಕೆಲಸಕ್ಕೆ ಹೋಗಲು ತುದಿಗಾಲಲ್ಲಿ ನಿಂತಿದ್ದಳು. ಆದರೆ ಅವರಮ್ಮ ಅವಳಿಗೆ ಮದುವೆ ಮಾಡಲು ತವಕಿಸುತ್ತಿದ್ದರು. ನಾನು ಅಮ್ಮ ಮಗಳು ಇಬ್ಬರನ್ನು ಒಪ್ಪಿಸಿ, ಸಂಯುಕ್ತಳಿಗೆ ಪೋಸ್ಟ್ ಗ್ರಾಜುಯೇಷನ್ ಮಾಡಲು GATE ಪರೀಕ್ಷೆಗೆ ಸಿದ್ದತೆ ನಡೆಸಲು ತಿಳಿಸಿದೆ. ಅವಳ ಕೋಚಿಂಗ್ ಗೆ ಹಣ ನಾನೇ ಕಟ್ಟಿದೆ. ಜೊತೆಗೆ ಪ್ರತಿದಿನ ರಾತ್ರಿ ೯ಕ್ಕೆ ಕೋಚಿಂಗ್ ಮುಗಿದ ನಂತರ ನಾನೇ ಹೋಗಿ ಕರೆದುಕೊಂಡು ಬಂದು ಅವರ ಮನೆಗೆ ಬಿಡುತ್ತಿದ್ದೆ. ಚೆನ್ನಾಗಿ ಓದಿದ ಸಂಯುಕ್ತ IIT Kharagpur ನಲಿ ಸೀಟು ಗಿಟ್ಟಿಸಿದಳು. ಅವಳ ಅಪ್ಪ ಅಮ್ಮರಿಗೆ ಅಲ್ಲಿಗೆ ಕಳುಹಿಸಲು ಒಪ್ಪಿಸಿ ನಾನೇ ಖುದ್ದಾಗಿ ಹೋಗಿ ಫೀಸ್ ಕಟ್ಟಿ ಅವಳಿಗೆ ಅಲ್ಲಿ ಎಲ್ಲ ವ್ಯವಸ್ಥೆ ಮಾಡಿ ಬಂದೆ. ಅಮೋದಿನಿಗೆ B.Eಲಿ ಕ್ಲಾಸ್ಮೇಟ್ ಆಗಿದ್ದ ಸುದರ್ಶನ್ ಸಂಯುಕ್ತಳಿಗೆ MTech ಲಿ ಜೊತೆಯಾಗಿದ್ದರಿಂದ ಸಂಯುಕ್ತಳಿಗೆ ಕೊಂಚ ನೆಮ್ಮದಿಯಾಗಿತ್ತು. [ಈ ವಿಷಯ ನನಗೆ ಅಮೋದಿನಿ ಭೇಟಿಯಾಗುವ ಮುಂಚೆ ಗೊತ್ತೇ ಇರಲ್ಲಿಲ್ಲ.ಸಂಯುಕ್ತ ಹೇಳೇ ಇರಲ್ಲಿಲ್ಲ.]
[ಅಮೋದಿನಿಯ ಬಗ್ಗೆ ಹೆಚ್ಚು ತಿಳಿಯಲು "ಅವಳ ಕಾಲ್ ಬರುತ್ತಾ" ಕಥೆ ಇಲ್ಲಿ ಓದಿ - http://sudhieblog.blogspot.in/2012/03/blog-post.html]
ಎರಡು ವರ್ಷ ಎರಡು ದಿನದಂತೆ ಕೆಳೆದಿತ್ತು. ಈ ಅವಧಿಯಲ್ಲೇ ನನಗೆ ವಿದೇಶಕ್ಕೆ ಹಾರುವ ಅವಕಾಶ ಸಿಕ್ಕಿತ್ತು. ಅಲ್ಲೇ ಬರೆದಿದ್ದು lifeu ಇಷ್ಟೇನೆ ! ಕವನ.
[lifeu ಇಷ್ಟೇನೆ ಕವನ ಇಲ್ಲಿ ಓದಿ - http://sudhieblog.blogspot.in/2011/10/lifeu.html ]
ಪ್ರಿಯಳ ಮೇಲೆ ನನಗೆ ಯಾವ ಭಾವನೆಗಳು ಉಳಿದಿರಲ್ಲಿಲ್ಲ.. ಅವಳನ್ನು ಒಮ್ಮೆ ನೋಡುವ ಕುತೂಹಲ ಇತ್ತು ಅಷ್ಟೇ.. ಅದೂ ಕೂಡ ನಾನು ಮೋಸ ಹೋಗಿಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲು. ಆದರೆ ಮತ್ತೆ ಸುಮಾರು ೨ ವರ್ಷಗಳ ಕಾಲ ಅವಳ ಬಗ್ಗೆ ನನಗೆ ಏನು ತಿಳಿಯಲೇ ಇಲ್ಲ .. ಅಂದರೆ ಪ್ರಿಯಳ ಜೊತೆ ನಾನು ನೇರ ಮಾತಾಡಿ ಸುಮಾರು ನಾಲ್ಕು ವರ್ಷಗಳೇ ಕಳೆದುಹೋಗಿತ್ತು.
****
ಇವತ್ತು ಬೆಳಗ್ಗೆ ಬೃಂದಾ ಕರೆ ಮಾಡಿ ಹೇಳಿದ್ದಿಷ್ಟು [ಬೃಂದಾ ನನಗೆ ಕರೆ ಮಾಡಿದ್ದರ ಬಗ್ಗೆ ನೆನೆಪಿಲ್ಲದ್ದಿದ್ದರೆ ಭಾಗ ೧ ನೋಡಿ ] ಏ ಸರಿಯಾಗಿ ಎದ್ದಿದ್ಯ ತಾನೇ? ಎಚ್ಚರಿಕೆ ಇದ್ಯಾ? ನಾನ್ ಹೇಳೋದನ್ನ ಸರ್ಯಾಗಿ ಕೇಳುಸ್ಕೋ ... ನಾನು ಲಂಡನ್ನಿಗೆ ಹೋಗಿದ್ದೆ.. ನಾನು ಮಾಡಿದ ಯಾವ ಐಡಿಯಾಗಳು ಪ್ರಯೋಜನವಾಗಲ್ಲಿಲ್ಲ. ಹಾಗಾಗಿ ನಾನು ನಿನಗೆ ತಿರುಗಿ ಕರೆ ಮಾಡಿರಲ್ಲಿಲ್ಲ... ಹಾಗು ನಾನು ಅಂಕಲ್ ಮನೆಗೆ ಹೋಗುತ್ತಿದ್ದುದು ಅಷ್ತಿಕ್ಕಷ್ಟೇ... ಅವರು ನನ್ನ ಹತ್ತಿರ ಯಾವ ವಿಷಯವನ್ನು ಸರಿಯಾಗಿ ಹೇಳುತ್ತಿರಲ್ಲಿಲ್ಲ. ಈಗ ಹತ್ತು ನಿಮಿಷದ ಹಿಂದಷ್ಟೇ ಆಂಟಿ ಫೋನ್ ಮಾಡಿ ಪ್ರಿಯ ಬರುತ್ತಿದ್ದಾಳೆ ನಮ್ಮ ಜೊತೆ ಏರ್ಪೋರ್ಟ್ ಗೆ ಬರ್ತ್ಯ ಅಂತ ಕೇಳುದ್ರು? ನಾನು ಹೂ ಅಂದು ನಿನಗೂ ವಿಷಯ ತಿಳಿಸಿದ್ದಿನಿ.. ನೀನು ಬಾ.. ಈ ಕ್ಷಣಾನೆ ಹೊರಡು. ನಾನು ರಾಜಾಜಿ ನಗರದ SJR ವಿಮೆನ್'s ಕಾಲೇಜ್ ಹತ್ರ ಕಾಯ್ತಿರ್ತೀನಿ ಅಂತ ಒಂದೇ ಉಸಿರಿಗೆ ಹೇಳಿ ನನ್ನ ಉತ್ತರಕ್ಕೂ ಕಾಯದೆ ದೂರವಾಣಿ ಸಂಪರ್ಕವನ್ನು ಕಡಿದಳು.
ಯಾಕೆ ಫೋನ್ ಕಟ್ ಮಾಡ್ದೆ? ಯಾಕೆ ಕಟ್ ಮಾಡ್ದೆ? ನಾನು ಕನವರಿಸುತ್ತಿದ್ದೆ. ಬೃಂದಾ ಯಾವ ಫೋನೂ? ಯಾರ್ ಕಟ್ ಮಾಡಿದ್ದು? ನಿನ್ನ ಹೆಂಡತಿ ಫೋನ್ ಮಾಡಿದ್ದಳ? ಅಂತ ಕೇಳಿದಳು. ನಾನು ಎಚ್ಚರಗೊಂಡು ಎದ್ದು ಕೂತೆ. [ನಾನು ಕಾರಿನಲ್ಲಿ ಮಲಗಿದ್ದುದು ನೆನಪಿಲ್ಲದ್ದಿದ್ದರೆ ಭಾಗ ೨ ನೋಡಿ ]. ನನಗಿನ್ನೂ ಮದುವೆಯಾಗಿಲ್ಲ ಅಂತ ಬೃಂದಾಳಿಗೆ ತಿಳಿಸಬೇಕು ಅನಿಸಲಿಲ್ಲ. ನಮ್ಮ ಕಾರು ಏರ್ಪೋರ್ಟಿನ ಪಾರ್ಕಿಂಗ್ ಕಡೆ ಪ್ರವೇಶಿಸುತ್ತಿತ್ತು. ಗಾಡಿ ಪಾರ್ಕ್ ಮಾಡಿ ಆಂಟಿ ಅಂಕಲ್ ಇದ್ದ ಕಡೆ ನಾವು ಬಂದೆವು. ಬೃಂದಾ ನನಗೆ ಅವರ ಪರಿಚಯ ಮಾಡಿಸಿದಳು. ನನ್ನ ಪರಿಚಯ ಅವರಿಗೆ ಇತ್ತಂತೆ! ನೀವು ಬಂದದ್ದು ಸಂತೋಷವಾಯಿತು ಅಂತ ಹೇಳಿ ಅಂಕಲ್ ನನ್ನನ್ನು ಅಪ್ಪಿಕೊಂಡು You are great ಇವತ್ತು ನಮ್ಮ ಪ್ರಿಯ ಬದುಕಿದ್ದಾಳೆ ಅಂದ್ರೆ ಅದು ನಿಮ್ಮಿಂದಲೇ ಅಂದರು. ಆಂಟಿ ಕೂಡ ಹೂ ಗುಡುತ್ತಿದ್ದರು. ಅಷ್ಟರಲ್ಲಿ ಲಂಡನ್ನಿಂದ Luftansa Airlines ಬಂದಿಳಿದಿತ್ತು.
ಸುಮಾರು ೩೦-೩೨ ವಯಸ್ಸಿನ ಸ್ವಲ್ಪ ನನ್ನದೇ ಹೋಲಿಕೆ ಇರುವ ಹುಡುಗ, ಕೈಯಲ್ಲಿ ಒಂದು ಮಗುವನ್ನು ಹಿಡಿದ, ಸಣ್ಣ ಜುಟ್ಟಿದ್ದ ಹುಡುಗಿ ನಮ್ಮ ಕಡೆ ಬರುತ್ತಿದ್ದುದು ಕಾಣಿಸಿತು. ಅವರು ನಮ್ಮ ಹತ್ತಿರ ಬರುತ್ತಿದ್ದಂತೆ, ಅಂಕಲ್ ನನ್ನ ಮತ್ತೆ ಬೃಂದಾ ಕಡೆ ನೋಡಿ, ಮೀಟ್ Mr.Sujay , Priya's Husband ಅಂದರು. ನಾವಿಬ್ಬರು ಹುಬ್ಬೇರಿಸಿ ನಮ್ಮ ಪರಿಚಯ ಮಾಡಿಕೊಳ್ಳಬೇಕು ಅಷ್ಟರಲ್ಲಿ ಸುಜಯ್ I Know both of you ಅಂದನು. ಆಗಲೇ ಪ್ರಿಯ Who are these Suju? ನಂಗೆ ಗೊತ್ತೇ ಇಲ್ಲ ಅಂದಳು. ಬೃಂದಾ ಪ್ರಿಯಳ ಹತ್ತಿರ ಹೋಗಿ ಏ ಪ್ರಿಯ ಏನಾಗಿದೆ ನಿನಗೆ ನಾನು ಕಣೆ ಬೃಂದಾ ಅಂದಳು. ಸುಜಯ್ ಮಧ್ಯೆ ಬಂದು, Priya you go with aunty and uncle. I will join you at home ಅಂತ ಹೇಳಿ, ಪ್ರಿಯಾಳಿಗೆ ಆಂಟಿ ಅಂಕಲ್ ಎಂದೇ ಪರಿಚಿತವಾಗಿರುವ ಅವರ ಅಪ್ಪ ಅಮ್ಮ ನ ಜೊತೆಯಲ್ಲಿ ಪ್ರಿಯಾಳನ್ನ ಫಾರ್ಚಿ ಹತ್ತಿಸಿ ತಾನು ನಾವು ಬಂದಿದ್ದ ಮ್ಯಾಟಿಲಿ ಬಂದು ಕೂತ.
ಕಾರಿನಲ್ಲಿ ಸುಜಯ್ ನಮಗೆ ಹೇಳಿದ್ದು :
ಸುಜಯ್ ಡಾ. ಶೀಲರ ಮಗ. ಮೆಡಿಕಲ್ ವಿದ್ಯಾರ್ಥಿಯಾಗಿದ್ದ ಅವನಿಗೆ ಪ್ರಿಯಳ ಕೇಸ್ ಕುತೂಹಲ ಮೂಡಿಸಿತ್ತು. ಬೃಂದಾ ಲಂಡನ್ನಿಗೆ ಹೋಗೋ ಆರು ತಿಂಗಳು ಮುಂಚಿಂದ ಅವನು ಪ್ರಿಯ ಕೇಸ್ ಸ್ಟಡಿ ಮಾಡುತ್ತಿದ್ದ. ಆದರೂ ಏನು ಪ್ರಯೋಜನವಾಗಿರಲ್ಲಿಲ್ಲ. ಅವನು ಒಂದು ವಾರದ ಮಟ್ಟಿಗೆ ರಜೆಯ ಮೇಲೆ ಹೋಗಿದ್ದಾಗ ಬೃಂದಾ ಅಲ್ಲಿ ಹೋಗಿದ್ದರಿಂದ ಅವನ ಪರಿಚಯ ಅವಳಿಗಾಗಿರಲ್ಲಿಲ್ಲ. ಬೃಂದಾ ಲಂಡನ್ನಿಗೆ ಹೋದಾಗ ಪ್ರಿಯಳ ಮೊಬೈಲ್ ಅನ್ನು ಡಾ. ಶೀಲ ಅವರಿಗೆ ಕೊಟ್ಟು ಅದರಿಂದ ಏನಾದರು ಪ್ರಯೋಜನವಾಗಬಹುದು ಅಂತ ಹೇಳಿ ಅಲ್ಲೇ ಬಿಟ್ಟು ಬಂದಿದ್ದಳು. ಆ ಮೊಬೈಲ್ ಇಟ್ಟುಕೊಂಡು ಬೃಂದಾ ಏನೋ ಸಾಹಸ ಮಾಡುತ್ತಿದ್ದಾಗ ಡಾ. ಶೀಲ ಒಮ್ಮೆ ಗಮನಿಸಿದ್ದರಂತೆ. ಹಾಗಾಗಿ ಆ ಮೊಬೈಲ್ ಅವರಿಗೆ ಸಿಕ್ಕಿದಾಗ ಅದನ್ನು ಅವರು ಸುಜಯ್ ಗೆ ನೀಡಿದ್ದರು. ಸುಜಯ್ ಆ ಮೊಬೈಲ್ ಲಿ ಸೇವ್ ಆಗಿದ್ದ ನನ್ನ ಪ್ರಿಯಳ ಪ್ರತಿಯೊಂದು ಸಂಭಾಷಣೆಯನ್ನು ಆಲಿಸಿದ್ದ. ಜೊತೆಗೆ ನಮ್ಮ ಚಾಟ್ ಹಿಸ್ಟರಿ ಓದಿದ್ದ... ಪ್ರಿಯಳನ್ನು ಸರಿ ಮಾಡಲು ಏನೇನೋ ಮಾಡಿದ್ದ ಸುಜಯ್ ಗೆ , ನನ್ನ ಅವಳ ಸಂಭಾಷಣೆಯಲ್ಲಿನ A lot can happen over a coffee ಅನ್ನೋ ವಾಕ್ಯ ನೋಡಿದ ಕೂಡಲೇ ಮಿಂಚಿನಂತೆ ಒಂದು ಐಡಿಯಾ ಸಿಕ್ಕಿತಂತೆ. ಪ್ರಿಯಳನ್ನು ಕೆಫೆ ಕಾಫಿ ಡೇ ಗೆ ಕಳುಹಿಸಲು ಆಸ್ಪತ್ರೆಯಲ್ಲಿ ಒಪ್ಪದ್ದಿದ್ದಾಗ, ಅವನು ಆಸ್ಪತ್ರೆಯ ಒಂದು ಭಾಗವನ್ನೇ ಸ್ವಲ್ಪ ದಿನದ ಮಟ್ಟಿಗೆ ಕೆಫೆ ಕಾಫಿ ಡೇ ಆಗಿ ಪರಿವರ್ತಿಸಿದ್ದನಂತೆ. ಮೊದಲೆರಡು ದಿನ ಬರಿ ಕಾಫಿ ಡೇ ಮುಂದೆ ಅವಳನ್ನು ಕರೆದುಕೊಂಡು ಹೋಗಿದ್ದಂತೆ.. ಮೂರನೇ ದಿನ ಅವಳನ್ನು ಕಾಫಿ ಡೇ ಒಳಗೆ ಕರೆದುಕೊಂಡು ಹೋಗುತ್ತಿದ್ದಂತೆ ಅವಳು A lot can happen over a coffee ಅಂದಳಂತೆ. ಅಂದಿಗೆ ಅವಳು ಯಥಾಸ್ಥಿತಿಗೆ ಮರಳಿದರೂ ಅವಳಿಗೆ ಹಳೆಯ ನೆನಪುಗಳು ಯಾವುದೂ ಇರಲಿಲ್ಲವಂತೆ.
ಅಂದಿನಿಂದ ಹೊಸ ಜೀವನ ಆರಂಭಿಸಿದ್ದ ಪ್ರಿಯ, ಯಾರನ್ನೇ ಕಂಡರೂ ಯಾವ ವಸ್ತುವನ್ನೇ ಕಂಡರೂ ಅದೇನೆಂದು ಪ್ರಶ್ನೆ ಮಾಡುತ್ತಿದ್ದಳು. ಅವಳನ್ನು ೨ ವರ್ಷದಿಂದ ಚಿಕ್ಕ ಮಗುವಿನ ಹಾಗೆ ಬೆಳೆಸಿದ್ದಾನೆ ಸುಜಯ್... ಅವನನ್ನು ಬಿಟ್ಟು ಬೇರೊಬ್ಬರ ಜೊತೆ ಮಾತಾಡಲು ಹೆದರುತ್ತಿದ್ದ ಪ್ರಿಯ ಇವತ್ತು ಒಂದು ಮಗುವಿನ ತಾಯಿಯಾಗಿ ಲೈಫ್ ಗ್ರೋ ಆಸ್ಪತ್ರೆಯಲ್ಲೇ ಸುಜಯ್ ಗೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಾಳೆ. ಸುಜಯ್ ಇನ್ನು ಏನೋ ಹೇಳುತ್ತಲೇ ಇದ್ದ... ಆದರೆ ನನಗ್ಯಾವುದೂ ಬೇಕಿರಲ್ಲಿಲ್ಲ.
ಸ್ವಲ್ಪ ಹೊತ್ತಿಗೆ ಕಾರು ನಾವು ಬೆಳಗ್ಗೆ ಬಂದಿದ್ದ ಬಂಗಲೆಯ ಮುಂದೆ ನಿಂತಿತ್ತು. ನಾವು ಬಂದ ೫-೧೦ ನಿಮಿಷಕ್ಕೆ ಫಾರ್ಚಿ ಕೂಡ ಬಂದಿತು. ನಾವು ಎಲ್ಲರೂ ಒಟ್ಟಿಗೆ ಒಳಹೋದೆವು. ನಾವು ಒಳ ಹೋಗುತ್ತಿದ್ದಂತೆ ಬೃಂದಾ ನನ್ನ ಮತ್ತೆ ಸುಜಯ್ ನ ನನಗೆ ಬೆಳಗ್ಗೆ ತೋರಿಸಿದ್ದ ಮಹಡಿಯ ಮೇಲಿನ ರೂಮಿಗೆ ಕರೆದೊಯ್ದಳು... ಏನಾಶ್ಚರ್ಯ! ಆ ರೂಮಿನ ಗೋಡೆಗಳ ತುಂಬಾ ಬರೆ ನನ್ನ ಫೋಟೋಗಳು ರಾರಾಜಿಸುತ್ತಿದೆ... ಬೃಂದಾ ಹೇಳುತ್ತಿದ್ದಳು.. ನೋಡು ಇದೇ ಕೋಣೆಯಲ್ಲಿ ಪ್ರಿಯ ಇದ್ದಿದು... ಅವಳು ನಿನ್ನನ್ನು ಎಷ್ಟು ಹಚ್ಚಿಕೊಂಡಿದ್ದಳು ಎನ್ನುವುದು ನಾನು ಹೇಳಲೇಬೇಕಿಲ್ಲ ಅಲ್ಲವಾ?? ಸುಜಯ್ ಕೂಡ ಮೂಕನಾಗಿದ್ದ..
ಆಗಲೇ ಅಮ್ಮ ನನಗೆ ಕರೆ ಮಾಡಿದ್ದರು. ವಿಮಲಳಿಗೆ [ವಿಮಲಳ ಬಗ್ಗೆ ಹೆಚ್ಚು ತಿಳಿಯಲು ಅವಳ ಕಾಲ್ ಬರುತ್ತಾ ಕಥೆ ಇಲ್ಲಿ ಓದಿ - http://sudhieblog.blogspot.in/2012/03/blog-post.html ] ಮದುವೆ ಗೊತ್ತಾಯಿತ್ತಂತೆ ಅಂತ ಅಮ್ಮ ಹೇಳುತ್ತಿದ್ದರೆ ನನಗೆ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತೆ ಆಗುತ್ತಿತ್ತು. ನಾನು ಅಮ್ಮ ಹೇಳಿದ ಮಾತಿನಿಂದ ಚೇತರಿಸಿಕೊಳ್ಳುತ್ತಿರುವಾಗಲೇ ಹತ್ತಿರ ಬಂದ ಸುಜಯ್ ನನಗೆ - I cant believe that you had impressed her this much.. you are simply great man ಎಂದು ನನ್ನನ್ನು ಅಪ್ಪಿಕೊಂಡಿದ್ದ. ಅಷ್ಟರಲ್ಲಿ Aunt said this is my room ಅನ್ನುತ್ತಾ ಅಲ್ಲಿಗೆ ಬಂದ ಪ್ರಿಯ, ಅಲ್ಲಿರುವ ಫೋಟೋಗಳನ್ನು ನೋಡಿ, ನನ್ನ ಕಡೆ ತಿರುಗಿ, I see people pasting hero heroines posters in their room.. How crazy you man? you have pasted your posters only.. but this is my room from now on... ಅನ್ನುತ್ತಾ, ಕೆಲಸದವನನ್ನು ಕರೆಯುತ್ತಾ, ಗೋಡೆಗೆ ಅಂಟಿಸಿದ್ದ ನನ್ನ ಫೋಟೋಗಳನ್ನು ಕಿತ್ತು ಹಾಕಲು ಆದೇಶಿಸಿದಳು. ಆ ಕೆಲಸದವನು ಅವತ್ತು ನೀವೇ ಹೇಳಿದರಲ್ಲಮ್ಮ ಅಂಟಿಸಲು ಇವತ್ತು ನೀವೇ ಕಿತ್ತು ಹಾಕಿ ಅಂತಿದೀರಲ್ಲ ಅನ್ನುತ್ತಿದ್ದರೆ ಪ್ರಿಯ What? What are you talking? Just tear it off ಅನ್ನುತ್ತಿದ್ದಳು. ಆ ಕೆಲಸದವನು ನನ್ನ ಚಿತ್ರಗಳನ್ನು ಕಿತ್ತು ಹಾಕಲು ಶುರು ಮಾಡಿದ್ದನು.
ಒಂದು ಹೃದಯ ಕಿತ್ತು ಬರುವಂತ ಸುದ್ದಿ. ಒಂದು ಹೃದಯ ಕಿತ್ತು ಬರುವಂತ ದೃಶ್ಯ. ಎರಡು ನಿಜಾನ?
ಬೃಂದಾಳಿಗೆ ಪ್ರಿಯ ಅವಳನ್ನು ನೆನಪಿಟ್ಟುಕೊಳ್ಳದಿರುವುದು ಬಹಳ ಬೇಸರ ತರಿಸಿತ್ತು...ಹಾಗಾಗಿ ಆಂಟಿ ಕಾಫಿ ತರುವ ಮೊದಲೇ ಅವಳು ಪ್ರಿಯ ಸುಜಯ್ ಗೆ ಬಾಯ್ ಟೇಕ್ ಕೇರ್ ಅನ್ನುತ್ತಾ ನನ್ನ ಕಡೆ ತಿರುಗಿ, ನಿನ್ನ ಹೆಂಡತಿಯನ್ನು ಕರ್ಕೊಂಡು ಬಾರೋ ಮತ್ತೊಮ್ಮೆ ಸಿಗೋಣ ಸೀ ಯು ಅಂತ ಕೈ ಬೀಸುತ್ತಾ ಹೊರಟೇ ಹೋದಳು. ಐದು ನಿಮಿಷದಲ್ಲಿ ಆಂಟಿ ಬಿಸಿ ಬಿಸಿ ಕಾಫಿ ತಂದಿದ್ದರು. ರಾತ್ರಿ ಎಬ್ಬಿಸಿ ಕಾಫಿ ಕೊಟ್ಟರೂ ಕುಡಿಯುವ ನಾನು, ೩-೪ ನಿಮಿಷ ಎಲ್ಲವನ್ನು ಮರೆತು ಘಮ ಘಮ ಪರಿಮಳಯುಕ್ತವಾದ ಫಿಲ್ಟರ್ ಕಾಫಿಯನ್ನು ಆಸ್ವಾದಿಸಿದೆ. ನಂತರ ಆಂಟಿ ಅಂಕಲ್ ಗೆ ಹೊರಡುತ್ತೇನೆ ಎಂದು ತಿಳಿಸಿ ಪ್ರಿಯ ಸುಜಯ್ ಗೆ ಟಾಟಾ ಹೇಳಿ ಮಗುವಿಗೊಂದು ಹಣೆಯ ಮೇಲೆ ಮುತ್ತು ಕೊಟ್ಟು ಅಲ್ಲಿಂದ ಜಾಗ ಖಾಲಿ ಮಾಡಿದೆ.
ಮಾರ್ಗಮಧ್ಯದಲ್ಲಿ ಗೃತ್ಸಮದನನ್ನು ಎಚ್ಚರಿಸಿ FM ಆನ್ ಮಾಡಿದಾಗ ನಗುವ ಹೂವು ಚಿತ್ರದ
ಇರಬೇಕು ಇರಬೇಕು ಅರಿಯದ ಕಂದನ ತರಹ
ನಗಬೇಕು ಅಳಬೇಕು ಇರುವಂತೆ ಹಣೆಬರಹ
ಇರಬೇಕು ಇರಬೇಕು ತಾವರೆ ಎಲೆಯ ತರಹ
ಕಣ್ಣೀರೋ ಪನ್ನೀರೋ ಯಾರಲಿ ಮಾಡಲಿ ಕಲಹ
ಯಾರಲಿ ಮಾಡಲಿ ಕಲಹ
ಇರಬೇಕು ಇರಬೇಕು ಬಾಳಲಿ ಭರವಸೆ ಮುಂದೆ
ನೋವಿರಲಿ ನಲಿವಿರಲಿ ನೋಡಲೆಬಾರದು ಹಿಂದೆ
ನೋಡಲೆ ಬಾರದು ಹಿಂದೆ
ಇರಬೇಕು ಇರಬೇಕು ಅರಿಯದ ಕಂದನ ತರಹ
ನಗಬೇಕು ಅಳಬೇಕು ಇರುವಂತೆ ಹಣೆಬರಹ
ಹಾಡು ಬರುತ್ತಿದ್ದದ್ದನ್ನು ಕೇಳಿ, ಈ ಹಾಡನ್ನು ನನಗಾಗಿಯೇ ಹಾಕಿದ್ದರೆನೋ ಅನಿಸಿ ಗಾಡಿಯನ್ನು ಮನೆ ಕಡೆ ತಿರುಗಿಸಿದೆ.