ಭಾರತ ಇಂಗ್ಲೆಂಡ್ ಪಂದ್ಯ ಈಡನ್ ಗಾರ್ಡನ್ನಿಂದ ಸ್ಥಳಾಂತರ.
ಈಡನ್ ಗಾರ್ಡನ್ ICC ಕ್ರಿಕೆಟ್ ವರ್ಲ್ಡ್ ಕಪ್ ಗೆ ಇನ್ನೂ ಸಜ್ಜಾಗಿಲ್ಲದ ಕಾರಣ ಭಾರತ ಆಂಗ್ಲರ ನಡುವಣ ಪಂದ್ಯ ನಿಗದಿ ಪಡಿಸಿದ ಸ್ಥಳದಿಂದ ವರ್ಗಾಯಿಸಲಾಗಿದೆ.ಈ ಸಲುವಾಗಿ ಸ್ಟುವರ್ಟ್ ಬ್ರಾಡ್ ,ಕ್ಹ್ರಿಸ್ ಟ್ರೆಮ್ಲೆಟ್ ತಮ್ಮ ಅಭಿಪ್ರಾಯಗಳನ್ನು ಹೊರಚೆಲ್ಲಿದ್ದಾರಂತೆ.೧,೦೦,೦೦೦ ಜನ ಕುಳಿತು ನೋಡಬಹುದಾದ ಆ ಪಿಚ್ಹ್ ನಲ್ಲಿ ಆಡಲು ಬಹು ನೀರಿಕ್ಷೆ ಇಂದ ಇದ್ದರಂತೆ.ಆ ಪಿಚ್ ಸ್ಥಳಾಂತರಿಸಿರುವ ಸಲುವಾಗಿ ಅವರು ವಾಗ್ಧಾಳಿ ನಡೆಸಿದ್ದಾರೆ.ಇದೊಂದು "shame" ಎಂದು.
ಹಾಸ್ಯ ರೂಪ ದಲ್ಲಿ ನೋಡಿದರೆ ,ಅವರು ಯಾವ ನಿರೀಕ್ಷೆ ಇಂದ ಹೇಳಿದ್ದಾರೂ ಗೊತ್ತಿಲ್ಲ.ಇನ್ನೊಮ್ಮೆ ೬ ಸಿಕ್ಸರ್ಸ್ ಒಂದೇ ಓವರ್ ನಲ್ಲಿ ದಾಂಡಿಗರಿಗೆ ಒಪ್ಪಿಸಲು ಅನುವಾಗಿದ್ದರೋ ಗೊತ್ತಿಲ್ಲ.ಇನ್ನೊಮ್ಮೆ ಪಂದ್ಯದಲ್ಲಿ ಆ ಸನ್ನಿವೇಶ ನೋಡಲು ಅವಕಾಶ ಸಿಗಲಿ ಎಂದು ಹಾರೈಸುತ್ತ.
ಅದೇನೆ ಇರಲಿ ಸ್ವಲ್ಪ ನಾಚಿಕೆಗೇಡಿನ ವಿಚಾರವಂತೂ ಹೌದು.ಎಲ್ಲ ಕ್ರಿಕೆಟ್ ನ ದಿಗ್ಗಜರು ಆಡಲು ಬರೋದೆ ದೇಶಕ್ಕೆ ಒಂದು ಹೆಮ್ಮೆ.ಅದರಲ್ಲಿ ವರ್ಲ್ಡ್ ಕಪ್ ನಲ್ಲಿ ನಮ್ಮ ದೇಶದ ಪ್ರತಿಷ್ಟಿತ ಕ್ರೀಡಾಂಗಣದಲ್ಲಿ ಇದೊಂದು ಕೂಡ.ಇದು ಎಲ್ಲದರಕ್ಕಿಂತ ಮೊದಲು ಸಿಂಗರಿಸಿಕೊಳ್ಳಬೇಕಿತ್ತೆಂಬ ಅಭಿಪ್ರಾಯ ನನ್ನದು.ನೀವೇನಂತೀರಿ?