ಅಮ್ಮ
ಕರುಳ ಕೂಗು ಅರ್ಥವಾಗದ ಬುದ್ಧಿವಂತನು ನೀನು,
ಕಣ್ಣ ಭಾಷೆಯ ಅರ್ಥವಾಗದ ಮಹಾಜ್ನಾನಿಯು ನೀನು !!
ನಿನ್ನ ಭವಿಷ್ಯದ ಮೊದಲ ಧೀರೆಯು ಅವಳು,
ನಿನ್ನ ಕನಸಿನ ಮೊದಲ ಧಾತೆಯು ಅವಳು,
ಕರುಳ ಕೂಗು ಅರ್ಥವಾಗದ ಬುದ್ಧಿವಂತನು ನೀನು !
ಬೆಂದಿದ್ದಳು,ದಣಿದಿದ್ದಳು ನಿನ್ನ ನಾಳೆಗಾಗಿ,
ಕ್ಷಣ ಕ್ಷಣದ ಪ್ರತಿ ನೋವ ಮರೆತಿದ್ದಳು ಅವಳು,
ಕರುಳ ಕೂಗು ಅರ್ಥವಾಗದ ಮಹಜ್ನಾನಿಯು ನೀನು !
ಸುಡುಬಿಸಿಲ ಧಗೆಯ ಮರೆತು ದಣಿದಿದ್ದಳು ಅವಳು,
ಪ್ರತಿ ಜನರ ವ್ಯಂಗ್ಯವ ಮರೆತು ಬದುಕಿದ್ದಳು ಅವಳು
ಕರುಳ ಕೂಗು ಅರ್ಥವಾಗದ ಬುದ್ಧಿವಂತನು ನೀನು !
ನಿನ್ನ ಬಾಳ ಸಂಗಾತಿಯ ಸೌಖ್ಯವ ಬಯಸೊ ಮನಸಿನವಳು,
ನಿನ್ನ ಪ್ರತಿ ಹೆಜ್ಜೆಯ ಯಶ ಬಯಸೊ ಹೃದಯದವಳು,
ಬಾಳ ಸಂಗಾತಿಯ ಸೋಜಿಗೆ,ಅವಳ ಮರೆತ ಮಹಾಜ್ನಾನಿಯು ನೀನು !
ಅವಳ ಕಣ್ಣ ಭಾಷೆಯ ಮರೆತ ಸುಕುಮಾರನು ನೀನು,
ಅವಳ ಹೃದಯದ ವೇದನೆಯ ಅರಿಯದ ಮನಸು ನಿನದು,
ನಿನ್ನ ಜೀವನದ ಹೊಸ ಭಾಷ್ಯವ ಬರೆದ ಮಹಾಮಾತೆಯು ಅವಳು !
ಕರುಳ ಕೂಗು ಅರ್ಥವಾಗದ ಬುದ್ಧಿವಂತನು ನೀನು,
ಕಣ್ಣ ಭಾಷೆಯ ಅರ್ಥವಾಗದ ಮಹಾಜ್ನಾನಿಯು ನೀನು...!!
***ಶಶಿಗುರು