ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸರ್ಕಾರದಿಂದಲೇ ಟ್ಯಾಂಕ‌ರ್ ನೀರು ಪೂರೈಕೆ ಸ್ವಾಗತಾರ್ಹ

ಈ ವರ್ಷದ ಬೇಸಿಗೆ ದಿನಗಳು ಆರಂಭವಾಗುತ್ತಲೇ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಬೆಂಗಳೂರಿನ ಜನತೆಯ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಇದುವರೆಗೆ ಅಗತ್ಯ ಕುಡಿಯುವ ನೀರಿನ ಸೌಲಭ್ಯ ವಂಚಿತರು, ಖಾಸಗಿ ಟ್ಯಾಂಕರ್‌ಗಳಿಗೆ ಮೊರೆ ಹೋಗುವುದು ಅನಿವಾರ್ಯವಾಗಿತ್ತು.

Image

ಸ್ಟೇಟಸ್ ಕತೆಗಳು (ಭಾಗ ೧೩೧೭) - ಬಾಳ ಸಂಗಾತಿ

ರಾಮಯ್ಯ ಮಗಳ‌ ಬಳಿ ಮತ್ತೆ ಮತ್ತೆ ಕೇಳಿದ್ದ ನಿನ್ನ ಬಾಳ ಸಂಗಾತಿ ಆಯ್ಕೆ ಸರಿಯಾಗಿದೆ ತಾನೆ. ಅಪ್ಪ ಒತ್ತಿ‌ ಕೇಳಿದಾಗಲೂ ಮಗಳ ಉತ್ತರ ಹಾ ಎನ್ನುವುದಾಗಿತ್ತು. ಯಾಕೆಂದರೆ‌ ಪ್ರೀತಿಸಿದ್ದಳು. ಮದುವೆಯೂ ಆಗಿತ್ತು. ಕೆಲವು ದಿನ ವಾರ ತಿಂಗಳು ಸ್ವರ್ಗವೇ ಜೊತೆಯಾಗಿತ್ತು. ಆಮೇಲೆ ಬದುಕಿನ‌ ಹೊಸ ದಾರಿ‌ ಅರ್ಥವಾಗತೊಡಗಿತು. ಹೊಸ ಮುಖಗಳು ಪರಿಚಯವಾದವು.

Image

ಬದುಕೆಂಬ ಗ್ರಂಥ

ನಾವು ಬದುಕನ್ನು ಒಂದು ದೊಡ್ಡ ಗ್ರಂಥಕ್ಕೆ ಹೋಲಿಸಬಹುದು. ಗ್ರಂಥ ಹೇಗಿರಬೇಕೆಂದು ನಮಗೆಲ್ಲ ತಿಳಿದ ವಿಷಯವೇ ಆಗಿದೆ. ಜಳ್ಳು ಪೊಳ್ಳುಗಳಿಗೆ ಗ್ರಂಥದಲ್ಲಿ ಆಸ್ಪದವಿಲ್ಲ.

Image

ದಕ್ಷಿಣದ ಗಾಣಗಾಪುರ - ಶ್ರೀಕ್ಷೇತ್ರ ಒಡಿಯೂರು

ದಕ್ಷಿಣ ಕನ್ನಡ ಜಿಲ್ಲೆಯ ಕರೋಪಾಡಿ ಗ್ರಾಮದ ಗ್ರಾಮೀಣ ಪ್ರದೇಶವೇ ಒಡಿಯೂರು. ಕರ್ನಾಟಕದ ದಕ್ಷಿಣ ಭಾಗದ ಕೊನೆಯಲ್ಲಿದ್ದು ಸಮೀಪದಲ್ಲೇ ಕೇರಳ ಗಡಿ ಭಾಗವಿದೆ. ಒಡಿಯೂರು 1986ರಿಂದ ಧಾರ್ಮಿಕ ಕ್ಷೇತ್ರವಾಗಿ ಪರಿವರ್ತನೆಗೊಂಡಿದ್ದು, ದತ್ತಾಂಜನೇಯ ದೇವರನ್ನು ಇಲ್ಲಿ ಸ್ಥಾಪಿಸಲ್ಪಟ್ಟು ಆರಾಧಿಸತೊಡಗಿದರು.

Image

ಆಕಾಶ ಇಷ್ಟೇ ಯಾಕಿದೆಯೋ

ಪುಸ್ತಕದ ಲೇಖಕ/ಕವಿಯ ಹೆಸರು
ಪೂರ್ಣಿಮಾ ಮಾಳಗಿಮನಿ
ಪ್ರಕಾಶಕರು
ಸಾವಣ್ಣ ಪ್ರಕಾಶನ, ಜಯನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ. ೨೨೫.೦೦, ಮುದ್ರಣ: ೨೦೨೫

ತಮ್ಮ ವಾಯು ಸೇನೆಯಲ್ಲಿನ ಸೇವೆಯ ದಿನಗಳನ್ನು ಪೂರ್ಣಿಮಾ ಮಾಳಗಿಮನಿಯವರು ‘ಆಕಾಶ ಇಷ್ಟೇ ಯಾಕಿದೆಯೋ’ ಎನ್ನುವ ಆತ್ಮ ಕಥೆಯಲ್ಲಿ ನೆನಪಿಸಿಕೊಂಡಿದ್ದಾರೆ. ಈ ಕೃತಿಗೆ ಹೆಸರಾಂತ ಅಂಕಣಕಾರ, ಲೇಖಕ ‘ಜೋಗಿ’ ಇವರು ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ. ಜೋಗಿಯವರು ಬರೆದ ಮುನ್ನುಡಿಯ ಆಯ್ದ ಭಾಗಗಳು ನಿಮ್ಮ ಓದಿಗಾಗಿ…

ಭಾರತೀಯರಾದ ನಾವು...

ಯಾರಿಗೆ ಇಷ್ಟ ಇದೆಯೋ ಇಲ್ಲವೋ, ಒಪ್ಪಿಗೆ ಇದೆಯೋ ಇಲ್ಲವೋ, ಸಂತೋಷವೋ ಬೇಸರವೋ ಒಟ್ಟಿನಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಬಹುತೇಕ ಯುದ್ಧ ಪ್ರಾರಂಭವಾಗಿದೆ, ಇಡೀ ರಾತ್ರಿ ಬಾಂಬು, ಮೀಸೈಲುಗಳ ದಾಳಿ ನಡೆಯುತ್ತಿದೆ. ಇದು ಮುಂದಿನ ದಿನಗಳಲ್ಲಿ ಯಾವ ಪರಿಣಾಮ ಬೀರುತ್ತದೆ ಏನೋ ಊಹಿಸುವುದು ಕಷ್ಟ. ನಮ್ಮ  ಕಾಲಘಟ್ಟದಲ್ಲಿ ಯುದ್ಧ ತಡೆಯಲು ನಮ್ಮಂತ ಸಾಮಾನ್ಯರಿಗೆ  ಸಾಧ್ಯವಾಗಲಿಲ್ಲ.

Image