ಆಪರೇಶನ್ ಸಿಂದೂರದ ಮೂಲಕ ಭಾರತ ತಕ್ಕ ಉತ್ತರ ನೀಡಿದೆ ಎಂದು ಪ್ರಧಾನಮಂತ್ರಿಯವರೇ ಲೋಕಸಭೆಯಲ್ಲಿ ಘೋಷಿಸಿದ್ದಾರೆ. 'ವಿರೋಧ ಪಕ್ಷಗಳಿಗೆ ಸಂವಿಧಾನದ ಮೇಲೆ ನಂಬಿಕೆ ಇರುವುದಾದರೆ ಇನ್ನಾದರೂ ಸಿಂದೂರ್ ಬಗೆಗಿನ ಅಪನಂಬಿಕೆಯನ್ನು ದೂರಮಾಡಿಕೊಳ್ಳುತ್ತಾರೆ…
ಬೇವು ಬಿತ್ತಿ ಮಾವಿನ ಫಲವನ್ನು ನಿರೀಕ್ಷಿಸಿದರೆಂತಯ್ಯ? ನಾನು ಕೆಲವರು ವಿರುದ್ಧ ದೂರು ಕೊಡಬೇಕಿದೆ. ಯಾರಿಗೆ ಕೊಡಲಿ, ಎಲ್ಲಿ ಕೊಡಲಿ, ತಿಳಿದವರು ದಯವಿಟ್ಟು ಸ್ವಲ್ಪ ಮಾಹಿತಿ ನೀಡಿ.
ಸಿನಿಮಾ, ಜಾಹೀರಾತುಗಳಲ್ಲಿ ಅಶ್ಲೀಲ ದೃಶ್ಯಗಳನ್ನು…
ಒಂದು ವಾರದಿಂದ ಸಿಂಹಕ್ಕೆ ತಲೆನೋವು ಅದು ಅಂತಿಂಥ ತಲೆನೋವಲ್ಲ. ಅಷ್ಟು ಸುಲಭದಲ್ಲಿ ಕಡಿಮೆಯಾಗುವಂತದ್ದು ಅಲ್ಲ. ಎಷ್ಟೇ ಪ್ರಯತ್ನ ಪಟ್ಟರು ಕೂಡ ತಲೆನೋವು ವಾಸಿಯಾಗುವ ಹಾಗೆ ಕಾಣುತ್ತಿಲ್ಲ. ಈ ತಲೆನೋವು ಯಾವುದೋ ರೋಗದ ಕಾರಣಕ್ಕೆ ಅಂಟಿಕೊಂಡದ್ದಲ್ಲ.…
ಬಾಲ್ಯದಲ್ಲಿ ನಮ್ಮ ಶಾಲಾ ಫೀಸು, ಹಬ್ಬಗಳಿಗಾಗಿ ಹೊಸಬಟ್ಟೆ, ಊರ ಜಾತ್ರೆಯಲ್ಲಿ ಖುಷಿ ಗಳಿಸಲು ಒಂದಿಷ್ಟು ಹಣದ ಅಗತ್ಯ ಖಂಡಿತವಾಗಿಯೂ ಇರುತ್ತದೆ. ಹಿಂದಿನ ಕಾಲದಲ್ಲಿ ತಂದೆತಾಯಿ ದುಡಿದು ಗಳಿಸಿ ಮಕ್ಕಳ ಖರ್ಚಿಗಾಗಿ ಹಣ ಕೊಡುವ ಪೋಷಕರೊಂದಡೆಯಾದರೆ…
ಮನೆಯೊಳಗಿನ ಕತ್ತಲ ಕೋಣೆಯಲ್ಲಿ ನಿನ್ನ ಕಾಲ್ಗೆಜ್ಜೆಯ ಸದ್ದು
ಧರೆಯೊಳಗಿನ ಬೆತ್ತಲ ದಾರಿಯಲ್ಲಿ ನಿನ್ನ ಕಾಲ್ಗೆಜ್ಜೆಯ ಸದ್ದು
ಉಪಯೋಗ ಇಲ್ಲದ ದೇಹದಿಂದ ಏನು ಪ್ರಯೋಜನ ಹೇಳು ಸಖಿಯೆ
ಜೀತದೊಳಗಿನ ಸುತ್ತಲ ಪಲ್ಲಕ್ಕಿಯಲ್ಲಿ ನಿನ್ನ ಕಾಲ್ಗೆಜ್ಜೆಯ…
ಭಾನು ಮಂಡಲ
ನಭೋ ಮಂಡಲದ ಮಹಾವಲಯದಲಿ
ಪ್ರಭಾ ಪುಂಜ ನೀನು ;
ಚರಾಚರಗಳಿಗೆ ಪರಾಪರಗಳಿಗೆ
ಜೀವಶಕ್ತಿ ಭಾನು !
ಭೂಮಿ ಮಂಡಲಕೆ ಭಾನು ಮಂಡಲವೆ
ಅತ್ಯಮೂಲ್ಯ ಸೊತ್ತು ;
ಜೀವರಾಶಿಗಳ ಜೀವಕೋಶಗಳ
ಜೀವನಕ್ಕೆ ಪತ್ತು !
ನಿನ್ನ ಕಿರಣಗಳು ಜೀವ ಸ್ಫುರಣಗಳು
ಗುರುರಾಜ ಕೋಡ್ಕಣಿ ಬರೆದ ಈ ಹಾರರ್ ಕಥೆಗಳ ಸಂಕಲನದ ಬೆನ್ನುಡಿಯಲ್ಲಿ ಒಂದು ವಿಶೇಷ ಸೂಚನೆ ಇದೆ. “ಒಬ್ಬರೇ ಇರುವಾಗ ಓದದಿರಿ...!! ಓದಿದರೆ ನಾವು ಜವಾಬ್ದಾರರಲ್ಲ...!!” ಈ ಕೃತಿಗೆ ಬೆನ್ನುಡಿಯನ್ನು ಬರೆದಿದ್ದಾರೆ ಪ್ರಶಾಂತ್ ಭಟ್. ಇವರು ಬರೆದ…
ದೈವಜ್ಞ ಯುವಕ ಮಂಡಳಿಯ "ದೈವಜ್ಞ ಸೌರಭ"
ಮಂಗಳೂರಿನ ದೈವಜ್ಞ ಯುವಕ ಮಂಡಳಿಯು ಪ್ರಕಟಿಸುತ್ತಿರುವ ಮಾಸಪತ್ರಿಕೆಯಾಗಿದೆ "ದೈವಜ್ಞ ಸೌರಭ". ಕಳೆದ ೩೪ ವರ್ಷಗಳಿಂದ ಪ್ರಕಟವಾಗುತ್ತಿರುವ ಪತ್ರಿಕೆಯ ಸಂಪಾದಕರು, ಪ್ರಕಾಶಕರು ಇತ್ಯಾದಿ ಬದಲಾವಣೆಗೊಳ್ಳುತ್ತಾ…
ರಾಜಕೀಯ ಪಕ್ಷಗಳ ಭಿನ್ನಮತದ ಸುತ್ತ, ಅಧಿಕಾರ ಕುರ್ಚಿಯ ಹಾವು ಏಣಿ ಆಟದ ಸುತ್ತ, ಸ್ವಾಮೀಜಿಗಳ ಪೀಠದ ಸುತ್ತ, ಧರ್ಮಸ್ಥಳದ ನಿಗೂಢ ಸಾವುಗಳ ಸುತ್ತ, ಚಲನಚಿತ್ರ ನಟನೊಬ್ಬನ ಕೊಲೆಯ ಸುತ್ತ, ಆತನ ಅಭಿಮಾನಿಗಳ ಮತ್ತು ವಿರೋಧಿಗಳ ಹುಚ್ಚಾಟದ ಸುತ್ತ,…
ಬಲ್ಬೊಂದನ್ನು ಬೆಳಗಿಸುವ ಕೆಲಸವಾಗಬೇಕಾದರೆ ಅದಕ್ಕೆ ವಿದ್ಯುತ್ ಕನೆಕ್ಟ್ ಆಗಬೇಕು. ದೂರವಾಣಿಯಲ್ಲಿ ಸಂವಾದ ನಡೆಯಲು ಕರೆಯು ಕನೆಕ್ಟ್ ಆಗಬೇಕು. ಅದೇ ರೀತಿ ನಮ್ಮ ಯಾವುದೇ ಕಾರ್ಯ ಸಾಧನೆಗೆ ನಾವು ಮನಸ್ಸು ಮನಸ್ಸುಗಳೊಂದಿಗೆ ಕನೆಕ್ಟ್ ಆಗಬೇಕು.…
ಮೋಡ ಮುಸುಕಿತು ಮಳೆಯು ಬಂದಿತು
ಇಳೆಯ ತೊಳೆಯುತ ಸಾಗಿತು
ಸೂರ್ಯ ರಶ್ಮಿಯು ಹೊಳೆದು ಬಂದಿತು
ಬಾನ ಬಣ್ಣವು ಬದಲಿತು
ಏಳು ಬಣ್ಣದ ಕಾಯ ಕಂಡಿತು
ಸುತ್ತ ಸೊಬಗದು ಚೆಲ್ಲಿತು
ಜನರ ಗಮನವು ಅತ್ತ ಸರಿಯಲು
ಮೋಡ ಮಿನುಗುತ ಮಿಂಚಿತು
ಕಾಮನೊಲಿದಿಹ ಬಿಲ್ಲು…
ಮೂಗು ಚುಚ್ಚಿಸಿಕೊಳ್ಳುವುದು ಹಳೆಯ ಸಂಪ್ರದಾಯ ಎಂದು ಭಾವಿಸುವ ಇಂದಿನ ಜನಾಂಗದ ಹೆಣ್ಣು ಮಕ್ಕಳಿಗೆ ತಿಳಿದಿಲ್ಲ, ನಮ್ಮ ಹಿರಿಯರು ಅನುಸರಿಸಿಕೊಂಡು ಬಂದಂತಹ ಅನೇಕ ಸಂಪ್ರದಾಯಗಳ ಹಿಂದೆ ವಿವಿಧ ಕಾರಣಗಳಿರುತ್ತವೆ. ಅದರಲ್ಲಿಯೂ ನಮ್ಮವರು…
ರಾಜ್ಯದ ಸಾಂಸ್ಕೃತಿಕ ರಾಜಧಾನಿ ಎಂದು ಕರೆಯಲ್ಪಡುವ ಮೈಸೂರಿನಲ್ಲಿ ಮಾದಕ ವಸ್ತು ಉತ್ಪಾದನೆಯ ಜಾಲ ಪತ್ತೆಯಾಗಿರುವುದು ಕಳವಳಕಾರಿ ಮತ್ತು ಆತಂಕದ ವಿಷಯ. ಇದುವರೆಗೆ ರಾಜ್ಯದಲ್ಲಿ ಮಾದಕ ವಸ್ತು ವಿತರಣೆ ಅಂದರೆ ಡ್ರಗ್ಸ್ ಪೆಡ್ಡಿಂಗ್ ಜಾಲ…
ಭಾರತೀಯ ಸಮಾಜ ಎಂಬುದು ಮಧ್ಯಮ ವರ್ಗದ ಸಂತೆ ಇದ್ದಂತೆ. ಇಲ್ಲಿ ಬಹುತೇಕ ಮಧ್ಯಮ ವರ್ಗದವರೇ ಅತಿ ಹೆಚ್ಚು ಮಧ್ಯಮ ಮಾರ್ಗದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಆರ್ಥಿಕವಾಗಿ ಒಂದಷ್ಟು ಸಣ್ಣಪುಟ್ಟ ವ್ಯತ್ಯಾಸಗಳಿರಬಹುದು. ಕೆಲವೊಮ್ಮೆ ಶ್ರೀಮಂತಿಕೆ…
ಅಪ್ಪ ನೇರವಾಗಿ ಕೈ ಹಿಡಿದುಕೊಂಡು ಊರಿನ ದೇವಸ್ಥಾನದ ರಥದ ಬಳಿ ಕರೆದುಕೊಂಡು ಬಂದಿದ್ದರು. ಹಾಗೆ ಬರುವುದಕ್ಕೆ ಕಾರಣವೂ ಇತ್ತು. ಒಂದಿಷ್ಟು ದಿನಗಳಿಂದ ಅಪ್ಪ ಹೇಳಿದ ಕೆಲಸವನ್ನ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಕ್ಕೆ ನಾನು ತಯಾರಿರ್ಲಿಲ್ಲ.…
ಹೀಗಿರಲು ಒಂದು ದಿನ ನನ್ನ ಗಣಿತದ ತರಗತಿಯ ಕೊನೆಯ ಐದು ನಿಮಿಷಗಳು ಮಕ್ಕಳಿಗೆ ಹೋಂ ವರ್ಕ್ ನೀಡುತ್ತಾ ಇದ್ದೆ, ಅವಾಗಲೇ ಹೇಳಿದೆ 'ಮಕ್ಕಳೇ ಇವತ್ತಿಂದ ಒಂದು ಬದಲಾವಣೆ ಮಾಡಿಕೊಳ್ಳುವ. ಸಾಮಾನ್ಯವಾಗಿ ಮರುದಿನ ಯಾರು ಹೋಂವರ್ಕ್ ಮಾಡ್ಲಿಲ್ಲ ಎಂದು…
ಹೂ ತೋಟದಲ್ಲಿ ವೈವಿಧ್ಯಮಯ ಪುಷ್ಪ ಗಿಡಗಳ ಸಾಲಿನಲ್ಲಿ ಕೆಲವು ಪರಿಮಳದ ಹೂ ಗಿಡಗಳಿದ್ದರೆ ಅದರ ಶೋಭೆಯೇ ಬೇರೆ. ಪರಿಮಳದ ಹೂ ಬಿಡುವ ಪುಷ್ಪಗಳಲ್ಲಿ ಮಲ್ಲಿಗೆ, ಜಾಜೀ ಮಲ್ಲಿಗೆ, ಸೇವಂತಿಗೆ, ಸಂಪಿಗೆ ಹೂವುಗಳ ಜೊತೆಗೆ ರಾತ್ರೆ ಹೊತ್ತು ಹೂ ಬಿಟ್ಟು…