ಚಡಪಡಿಕೆ

ಚಡಪಡಿಕೆ

ಕವನ

ಹಿಡಿಸಿದ ನಗೆಯೊಂದು 
ಎಳೆಮಗುವಾಗಿ
ಮನದಲ್ಲಿ ಮನೆ ಮಾಡಿ 
ಮೂರ್ತಿಯಾಗಿಬಿಟ್ಟಿದೆ;
ನೆನಪೇ ಪೂಜೆಯಾಗಿ,
ಕವಿತೆ ಹಣತೆಗಳ ಬೆಳಗಿ 
ಆರಾಧಿಸುತ್ತಿದ್ದೇನೆ
ದಿನಂಪ್ರತಿ;

ದೀರ್ಘ ಮೌನಗಳ
ಸುಳಿವಿನಲ್ಲಿ
ಒಮ್ಮೊಮ್ಮೆ ಸಿಲುಕಿ, 
ಚಡಪಡಿಸಿದ್ದೇನೆ 
ಮಾತ ಹೊಳೆ ಹರಿಸಲು;

ಮಾತಿಗೆ ಬರಗಾಲ ಬಡಿದು
ಕ್ಲಿಕ್ಕಿಸಿಕೊಂಡ
ಫೋಟೋಗಳ ಜಡಿ ಮಳೆ 
ಆಗಾಗ
ಹಣಿಯುತ್ತದೆ;
ಮತ್ತೆ
ಗರಿಗೆದರುತ್ತದೆ ಮನಸ್ಸು
ನೋಡುವ ತವಕದಲ್ಲಿ 
ಮಾತಾಗುವ ಹಂಬಲದಲಿ 
ಹಿಡಿಸಿದಾ ನಗುವ 
ಮುಡಿಯುವುದಕ್ಕಾಗಿ, 
ಜೊತೆಗೂಡಿ ನಡೆಯುವುದಕ್ಕಾಗಿ. 

-ಶಿವರಾಜ ಕಾಂಬಳೆ, ಮೂಡಲಗಿ