ಸ್ಟೇಟಸ್ ಕತೆಗಳು (ಭಾಗ ೧೩೯೮) - ಮದುವೆ ಕತೆ

ಬಂದವರು ಮಾತನಾಡಿ ಹೊರಟು ಹೋಗಿದ್ದಾರೆ. ಅಲ್ಲೋ ಇಲ್ಲೋ ಭೇಟಿಯಾದಾಗ ಮತ್ತೆ ನೆನಪಿಸಿದ್ದಾರೆ. ನಿಮ್ಮ ಮದುವೆಯ ಊಟ ಅದ್ಭುತವಾಗಿತ್ತು. ಕೇಳುವುದ್ದಕ್ಕೆ ತುಂಬಾನೆ ಖುಷಿ ಆಯಿತು. ಎಲ್ಲರೂ ಕಾರ್ಯಕ್ರಮಗಳೆಲ್ಲವನ್ನ ಮುಗಿಸಿಕೊಂಡು ಮೆಚ್ಚಿದರು. ಈಗ ವರ್ಷ ಒಂದಾಯಿತು. ಮಾತಾಡಿದವರು ಎಲ್ಲೂ ಸಿಗ್ತಾ ಇಲ್ಲ. ಬ್ಯಾಂಕ್ ಪ್ರತೀ ತಿಂಗಳು ಖುಷಲೋಪರಿ ವಿಚಾರಿಸ್ತಾ ಇದೆ. ಕನಸುಗಳು ಬದಿಗೆ ನಿಂತಿವೆ. ಸಂಬಳ ಕ್ಷಣದಲ್ಲಿ ಜಾರುತ್ತಿದೆ. ಉಳಿತಾಯದ ಡಬ್ಬಿಗಳು ಖಾಲಿಯಾಗಿ ನಿಂತಿವೆ. ಅವನ ಮನಸ್ಸಿಗೆ ಈಗ ಅರಿವಾಗುತ್ತಿದೆ. ಹೊರಗಿನ ಮಾತುಗಳಿಗೆ ಬಲಿಯಾಗಿ ಖರ್ಚು ಹೆಚ್ಚು ಮಾಡಿದರೆ ಈಗ ಕನಸುಗಳನ್ನ. ಬಲಿಕೊಡಬೇಕಾದಿತು. ಅವನಿಗೆ ಕಾಲ ಮಿಂಚಿರುವ ಕಾರಣ ಏನೂ ಮಾಡಲಾಗದೆ ಸುಮ್ಮನಾಗಿದ್ದಾನೆ. ದಾರಿಲಿ ಸಿಕ್ಕಿದವರಿಗೆ ಆತ್ಮೀಯರಿಗೆ ಬದುಕಿನ ಕತೆಯನ್ನು ಅರ್ಥೈಸುತ್ತಿದ್ದಾನೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ