ಕಾಮನ ಬಿಲ್ಲು

ಕಾಮನ ಬಿಲ್ಲು

ಕವನ

ಮೋಡ ಮುಸುಕಿತು ಮಳೆಯು ಬಂದಿತು

ಇಳೆಯ ತೊಳೆಯುತ ಸಾಗಿತು

ಸೂರ್ಯ ರಶ್ಮಿಯು ಹೊಳೆದು ಬಂದಿತು

ಬಾನ ಬಣ್ಣವು ಬದಲಿತು

 

ಏಳು ಬಣ್ಣದ ಕಾಯ ಕಂಡಿತು

ಸುತ್ತ ಸೊಬಗದು ಚೆಲ್ಲಿತು

ಜನರ ಗಮನವು ಅತ್ತ ಸರಿಯಲು

ಮೋಡ ಮಿನುಗುತ ಮಿಂಚಿತು

 

ಕಾಮನೊಲಿದಿಹ ಬಿಲ್ಲು ಬಾಗಿತು

ಸೃಷ್ಟಿ ಚೆಲುವದು ಹೆಚ್ಚಿತು

ಜಲದಿ ಆಡುತ ಮುಗ್ಧ ಮಗುವದು

ಮೈಯ ಮರೆಯುತ ನೋಡಿತು

 

ಬಾನಿನೊಲುಮೆಗೆ ನೆಲವು ನಾಚಲು

ಪ್ರಕೃತಿ ಸಿರಿಯನು ಹರಡಿತು

ಬಾನು ಮೋಹದಿ ಒಲವ ಬೆಳಗಲು

ಸಂಜೆ ತಂಪಲಿ ಅರಳಿತು

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್