ಕನ್ನಡ ಪತ್ರಿಕಾ ಲೋಕ (ಭಾಗ ೨೧೯) - ದೈವಜ್ಞ ಸೌರಭ

ಕನ್ನಡ ಪತ್ರಿಕಾ ಲೋಕ (ಭಾಗ ೨೧೯) - ದೈವಜ್ಞ ಸೌರಭ

ದೈವಜ್ಞ ಯುವಕ ಮಂಡಳಿಯ "ದೈವಜ್ಞ ಸೌರಭ"

ಮಂಗಳೂರಿನ ದೈವಜ್ಞ ಯುವಕ ಮಂಡಳಿಯು ಪ್ರಕಟಿಸುತ್ತಿರುವ ಮಾಸಪತ್ರಿಕೆಯಾಗಿದೆ "ದೈವಜ್ಞ ಸೌರಭ". ಕಳೆದ ೩೪ ವರ್ಷಗಳಿಂದ ಪ್ರಕಟವಾಗುತ್ತಿರುವ ಪತ್ರಿಕೆಯ ಸಂಪಾದಕರು, ಪ್ರಕಾಶಕರು ಇತ್ಯಾದಿ ಬದಲಾವಣೆಗೊಳ್ಳುತ್ತಾ ಬಂದಿದ್ದಾರೆ. ಪ್ರಸ್ತುತ, ಎಂ. ಅಶೋಕ್ ಶೇಟ್ ಪ್ರಕಾಶಕರು, ಎಸ್. ಪ್ರಶಾಂತ್ ಶೇಟ್ ಸಂಪಾದಕರು, ಅನಿಲ್ ಡಿ. ರಾವ್ ಮುದ್ರಕರು ಆಗಿರುತ್ತಾರೆ.

ಮಂಗಳೂರು ನಗರದ ದೇವಿ ಪ್ರಿಂಟರ್ಸ್ ನಲ್ಲಿ ಮುದ್ರಣವಾಗುತ್ತಿರುವ "ದೈವಜ್ಞ ಸೌರಭ"ದ ಕಚೇರಿಯು ರಥಬೀದಿಯ ಶ್ರೀ ಗಾಯತ್ರಿ ದೇವಿ ದೇವಸ್ಥಾನದ ಪರಿಸರದಲ್ಲಿದೆ. ೧೨ ಪುಟಗಳ ಮಾಸಪತ್ರಿಕೆಯ ಬಿಡಿ ಸಂಚಿಕೆಯ ಬೆಲೆ ಮೂರು ರೂಪಾಯಿ. ದೈವಜ್ಞ ಬ್ರಾಹ್ಮಣ ಸಮಾಜಕ್ಕೆ ಸಂಬಂಧಿಸಿದಂತೆ ವೈವಿಧ್ಯಮಯ ಲೇಖನಗಳು, ವರದಿಗಳಲ್ಲದೆ, ಸಾಹಿತ್ಯ ಸಂಸ್ಕೃತಿಗೆ ಸಂಬಂಧಪಟ್ಟ ಲೇಖನಗಳೂ ಪ್ರಕಟವಾಗುತ್ತಿವೆ.

~ ಶ್ರೀರಾಮ ದಿವಾಣ