ಒಂದು ಗಝಲ್
ಕವನ
ತಟ್ಟಿ ಹಾಕದಿರುವೆ ಗವಿಯ ಒಳಗೆ ಯಾರಿರುವರೋ ತಿಳಿಯೆ
ಮೆಟ್ಟಿ ಬಿಸುಡದಿರುವೆ ನೀರನೆಲ್ಲ ತುಂಬಿರುವರೋ ತಿಳಿಯೆ
ಹೊಟ್ಟೆ ಹಸಿವು ತಾಳದೆಯೇ ಕನಸ ಹೆಣೆಯ ಹೊರಟೆಯೇನು
ಚಟ್ಟ ಕಟ್ಟಲೆನ್ನ ಹೀಗೆ ಗೋರಿಯೆಡೆಗೆ ಸಾಗಿರುವರೋ ತಿಳಿಯೆ
ಕುಟ್ಟಿ ಹಾಕದಿರೈಯೆನ್ನ ಮುಕುತಿಯೆಡೆಗೆ ಹಾಗೆಯೇ ಬಿಡಿರೊ
ಬಟ್ಟ ತುಂಬಿಸಲು ಮನುಜರು ಲೋಕ ಕಂಡಿರುವರೋ ತಿಳಿಯೆ
ಮುಟ್ಟ ಬಂದರಿಂದು ಕೇಡಿರುವುದ ಕಾಣಬಹುದೇನೊ ನೋಡು
ತೊಟ್ಟು ಕಳಚಿ ಉದುರಿ ಹೋಗೆ ದೂರ ಹೋಗಿರುವರೋ ತಿಳಿಯೆ
ಮೆಟ್ಟಲೇರಿ ಬಂದವರ ಜೊತೆ ಸೇರಿ ಹೋದನೋ ನಮ್ಮ ಈಶ
ಕಟ್ಟೆಯೊಡೆದ ದು:ಖವ ಹೊಸಕಿ ಅಳಿಸಿ ಹಾಕಿರುವರೋ ತಿಳಿಯೆ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
