ಒಂದು ಗಝಲ್

ಒಂದು ಗಝಲ್

ಕವನ

ನೋವು ತುಂಬಿದ ಬದುಕಿಂದು ಕನಸುಗಳ ಕಟ್ಟುವುದೇ  ಗೆಳೆಯಾ

ಸಾವುಗಳೆ ಕಂಡಿರುವ ಬಾಳಿನಲ್ಲಿ ನನಸುಗಳು ಹುಟ್ಟುವುದೇ ಗೆಳೆಯಾ

 

ಉಪ್ಪರಿಗೆ ಸಹವಾಸ ಸಾಕಾಯ್ತೊ  ಕಾರಣವು ಸರಿಯಿರದೊ ಏನೊ

ತನುವೊಳಗೆ ಶೀಲವೇ ಕೈಜಾರುತ ಬಾಳನ್ನು ಮೆಟ್ಟುವುದೇ ಗೆಳೆಯಾ

 

ಮಾತುಗಳು ಇಲ್ಲದೆ ಮೌನದಲಿ ದೂರದಲ್ಲೇ ನಡೆದವನು ಸಖನೇನು

ಊಟಕ್ಕೆ ಇಲ್ಲದಿರುವ ಹಣ್ಣುಗಳು ದೇಹವನ್ನು ಮುಟ್ಟುವುದೇ ಗೆಳೆಯಾ 

 

ಬೆಸೆದಿಹ ಬಾಹುಗಳಲ್ಲಿಯ ಶಕ್ತಿ ಉಡುಗಿರುವ ಉಡದಂತೆ ಕಾಣುತ್ತಿದೆ

ಕೊರಳನ್ನು ತಬ್ಬುವ ಬಿಸಿಯುಸಿರು ಮತ್ತೊಮ್ಮೆ ತಟ್ಟುವುದೇ ಗೆಳೆಯಾ 

 

ಮುಂಜಾನೆಯ ಸೂರ್ಯನವ ತಂಪನ್ನು ಜೀವನದಿಗೆ ಉಣಿಸಿಲ್ಲ ಈಶಾ 

ಚಿತ್ತಾರ ಹೊತ್ತಿರದ ಮನವಿಂದು ಮಗದೊಮ್ಮೆ ನಟ್ಟುವುದೇ ಗೆಳೆಯಾ 

ವಿ.ಸೂ: ನಟ್ಟುವುದೇ -- ಬೇಡುವುದೇ

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್