ಇಡ್ಲಿ ಚಾಟ್
ಕತ್ತರಿಸಿದ ಇಡ್ಲಿ ತುಂಡುಗಳು - ೩ ಕಪ್, ಖಾರಾ ಸೇವ್ - ೧ ಕಪ್, ಬೂಂದಿ ಕಾಳು - ಕಾಲು ಕಪ್, ಕತ್ತರಿಸಿದ ಈರುಳ್ಳಿ - ೧, ಕತ್ತರಿಸಿದ ಹಸಿಮೆಣಸಿನ ಕಾಯಿ - ೮ ತುಂಡುಗಳು, ಕತ್ತರಿಸಿದ ಟೊಮ್ಯಾಟೋ - ೧ ಕಪ್, ಕತ್ತರಿಸಿದ ದೊಣ್ಣೆ ಮೆಣಸು (ಕ್ಯಾಪ್ಸಿಕಂ) -೧ ಕಪ್, ತೆಂಗಿನ ತುರಿ - ಅರ್ಧ ಕಪ್, ಕತ್ತರಿಸಿದ ಕೊತ್ತಂಬರಿ ಸೊಪ್ಪು - ಅರ್ಧ ಕಪ್, ಕತ್ತರಿಸಿದ ಪುದೀನಾ ಸೊಪ್ಪು ಅರ್ಧ ಕಪ್, ಶುಂಠಿ ತುರಿ ೧ ಚಮಚ, ಚಾಟ್ ಮಸಾಲೆ - ೩ ಚಮಚ, ನಿಂಬೆ ರಸ - ೧ ಚಮಚ, ಹುಣಸೆ ರಸ - ೨ ಚಮಚ, ಜೀರಿಗೆ ಹುಡಿ - ೩ ಚಮಚ, ಎಣ್ಣೆ - ಅರ್ಧ ಕಪ್, ಸಕ್ಕರೆ - ೧ ಚಮಚ, ರುಚಿಗೆ ತಕ್ಕಷ್ಟು ಉಪ್ಪು.
ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಹಸಿಮೆಣಸಿನ ಕಾಯಿ, ಈರುಳ್ಳಿ, ಟೊಮ್ಯಾಟೋ, ದೊಣ್ಣೆ ಮೆಣಸಿನಕಾಯಿಗಳನ್ನು ಹಾಕಿ ಬಾಡಿಸಿ. ಬಾಡಿಸಿದ ಮಿಶ್ರಣಕ್ಕೆ ಶುಂಠಿ ತುರಿ, ಜೀರಿಗೆ ಹುಡಿ, ಹುಣಸೆ ರಸ, ನಿಂಬೆ ರಸ, ಸಕ್ಕರೆ, ಉಪ್ಪು, ಚಾಟ್ ಮಸಾಲೆ ಹಾಕಿ ಕಲಕಿ ಒಲೆಯಿಂದ ಇಳಿಸಿರಿ. ಈ ಮಿಶ್ರಣಕ್ಕೆ ಇಡ್ಲಿ ತುಂಡುಗಳು, ಖಾರಾ ಸೇವ್, ಬೂಂದಿ ಕಾಳು, ಹಾಕಿ ಚೆನ್ನಾಗಿ ಕಲಕಿ. ತೆಂಗಿನ ತುರಿ, ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪುಗಳಿಂದ ಅಲಂಕರಿಸಿ, ರುಚಿಯಾದ ಇಡ್ಲಿ ಚಾಟ್ ತಿನ್ನಿ.