ಓ ಗೆಳೆಯ ಮರೆಯಾಯಿತಲ್ಲ ಗೆಳೆತನ
ಓ ಗೆಳೆಯ ಮರೆಯಾಯಿತಲ್ಲ ಗೆಳೆತನ
ಓ ಗೆಳೆಯ ಮರೆಯಾಯಿತಲ್ಲ ಒಳ್ಳೆತನ
ಸೂರ್ಯನುದಯಿಸುವ ಮೊದಲೆ ಕೊಗಿದೆನಲ್ಲ ನಿನ್ನ ಹೆಸರ
ಚಂದ್ರನುದಯಿಸುವ ಮೊದಲೆ ಮರೆಯಾದೆಯಲ್ಲ
ಓ ಗೆಳೆಯ ಮರೆಯಾಯಿತಲ್ಲ ಗೆಳೆತನ...
ನಿನ್ನ ಬಳಪ ನನ್ನ ಅಕ್ಷರ ಎಂದು ಹೇಳಿದ್ದೆಯಲ್ಲ ಗೆಳೆಯ
ಸಾಫ್ಟವೇರ್ ಕೆಲಸ ಸಿಕ್ಕಮೇಲೆ ಮರೆಯಾದೆಯಲ್ಲ
ಓ ಗೆಳೆಯ ಮರೆಯಾಯಿತಲ್ಲ ಗೆಳೆತನ...
ನಾವು ಸುತ್ತಲಾರದ ಓಣಿ ಕೆರಿಗಳುಂಟೆ ಗೆಳೆಯ
ಗೆಳತಿ ಬಂದಕ್ಷಣ ಮರೆಯಾದೆಯಲ್ಲ
ಓ ಗೆಳೆಯ ಮರೆಯಾಯಿತಲ್ಲ ಗೆಳೆತನ...
ನಾವು ಹತ್ತಲಾರದ ಹುಣಸೆ ಮಾವುಗಳುಂಟೆ ಗೆಳೆಯ
ಲಿಫ್ಟ್ ಹತ್ತಿದ ಮೇಲೆ ಮರೆಯಾದೆಯಲ್ಲ
ಓ ಗೆಳೆಯ ಮರೆಯಾಯಿತಲ್ಲ ಗೆಳೆತನ...
ಅಮ್ಮನ ಕೈತುತ್ತು ತಿನ್ನುತಿದ್ದ ದಿನಗಳ ಸವಿನೆನಪಿದೆಯ ಗೆಳೆಯ
ಅಡಿಗಾಸ್ ರುಚಿ ನೋಡಿದ ಮೇಲೆ ಮರೆಯಾದೆಯಲ್ಲ
ಓ ಗೆಳೆಯ ಮರೆಯಾಯಿತಲ್ಲ ಗೆಳೆತನ...
ಐದು ಪೈಸೆಯೆ ನಿಂಬೆಹುಳಿಯ ರುಚಿ ಬಾಯಲ್ಲಿದೆಯ ಗೆಳೆಯ
Munch ತಿಂದು punch ಕೊಟ್ಟು ಮರೆಯಾದೆಯಲ್ಲ
ಓ ಗೆಳೆಯ ಮರೆಯಾಯಿತಲ್ಲ ಗೆಳೆತನ...
ಚಂಡಿಗೆಂದು ಐದು ರೂಪಾಯಿ ಕದ್ದದ್ದು ನೆನಪಿದೆಯ ಗೆಳೆಯ
ಈಗ ಸಾವಿರದ ಸರದಾರನಾಗಿ ಮರೆಯಾದೆಯಲ್ಲ
ಓ ಗೆಳೆಯ ಮರೆಯಾಯಿತಲ್ಲ ಗೆಳೆತನ...
ನೂರು ಅಡಿಯ ಬಾವಿಗೆ ಮೂರು ಅಡಿ ಮೇಲಿಂದ ನೆಗೆದಿದ್ದು ನೆನಪಿದೆಯ ಗೆಳೆಯ
wonderfull ಎಂದು wonderlaw ಸುತ್ತಿ ಮರೆಯಾದೆಯಲ್ಲ
ಓ ಗೆಳೆಯ ಮರೆಯಾಯಿತಲ್ಲ ಗೆಳೆತನ...
ವೀರರಾಗಿ ಟೀಕೆಟ್ ಇಲ್ಲದೆ ರಣಧೀರ ಸಿನೆಮಾ ನೋಡಿರಲಿಲ್ಲವೆ ಗೆಳೆಯ
INOXನಲ್ಲಿ popcorn ತಿನ್ನುತ ಮರೆಯಾದೆಯಲ್ಲ
ಓ ಗೆಳೆಯ ಮರೆಯಾಯಿತಲ್ಲ ಗೆಳೆತನ...
ಒಂದೇ ಸೈಕಲ್ಲಿನ ಎರಡು ಗಾಲಿಗಳಾಗಿ ಸುತ್ತಿರಲ್ಲಿಲ್ಲವೆ ಗೆಳೆಯ
FORD ಜೊತೆ ROAD ಗಿಳಿದು ಮರೆಯಾದೆಯಲ್ಲ
ಓ ಗೆಳೆಯ ಮರೆಯಾಯಿತಲ್ಲ ಗೆಳೆತನ...
ವರ್ಷೆಯ ಋತುವಿನಲ್ಲಿ ನೆನೆಯಲಾರದ ದಿನಗಳಿದ್ದವೆ ಗೆಳೆಯ
ಮಳೆನಿಂತ ಮೇಲೆ ಮಳೆಯಲ್ಲೇ ಮರೆಯಾದೆಯಲ್ಲ
ಓ ಗೆಳೆಯ ಮರೆಯಾಯಿತಲ್ಲ ಗೆಳೆತನ
ಓ ಗೆಳೆಯ ಮರೆಯಾಯಿತಲ್ಲ ಒಳ್ಳೆತನ