ಕನ್ನಡಸಾಹಿತ್ಯ.ಕಾಂ ಅಭಿಯಾನಕ್ಕೆ ಮಹತ್ವದ ತಿರುವು - ಚಳಿಗಾಲದ ಅಧಿವೇಶನದಲ್ಲಿ ಚರ್ಚೆಗೆ ಕನ್ನಡಸಾಹಿತ್ಯ.ಕಾಂ ಮನವಿ....?

ಕನ್ನಡಸಾಹಿತ್ಯ.ಕಾಂ ಅಭಿಯಾನಕ್ಕೆ ಮಹತ್ವದ ತಿರುವು - ಚಳಿಗಾಲದ ಅಧಿವೇಶನದಲ್ಲಿ ಚರ್ಚೆಗೆ ಕನ್ನಡಸಾಹಿತ್ಯ.ಕಾಂ ಮನವಿ....?

ಬರಹ

ದೇಸಗತಿ ಭಾಷೆಗಳು, ಒಂದೇಸಮನೆ ಏರುಮುಖವಾಗಿ ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನ ಕ್ಷೇತ್ರದಲ್ಲಿ ಎದುರಿಸುತ್ತಿರುವ ಸವಾಲುಗಳ, ಸಾಮಾಜಿಕ, ಸಾಂಸ್ಕೃತಿಕ ಆಯಾಮಗಳ ಬಗೆಗೆ, ಸಾಮಾಜಿಕ ಕಳಕಳಿಯಿಂದ, ವಾಸ್ತವ ನೆಲೆಗಟ್ಟಿನಲ್ಲಿ ನಿಂತು ಯೋಚಿಸುವ, ಸಕಾರಾತ್ಮಕ, ಕ್ರಿಯಾಶೀಲ, ದೃಢ ಸಂಕಲ್ಪಶಕ್ತಿಯಿಂದ ಕೂಡಿದ ಪ್ರಯೋಗಶೀಲ ಗುಣಧರ್ಮದ, ವೈಚಾರಿಕ ಚಿಂತನೆಯ ಭಾಗವಾಗಿ ಕನ್ನಡಸಾಹಿತ್ಯ.ಕಾಂ ಹಾಗೂ ಬೆಂಬಲಿಗರ ಬಳಗದವರು ಕರ್ನಾಟಕದ ಮುಖ್ಯಮಂತ್ರಿಗಳು, ಸೇರಿದಂತೆ, ಕನ್ನಡ ಸಂಸ್ಕೃತಿ, ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಇಲಾಖೆಗಳ ಸಚಿವರುಗಳಿಗೆ ಸಲ್ಲಿಸಲು ನಿರ್ಧರಿಸಿದ ಮನವಿ ಪತ್ರ ಕ್ಕೆ, ಸಾಮಾಜಿಕ, ಸಾಂಸ್ಕೃತಿಕ, ತಾಂತ್ರಿಕ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವವರ, ಸಾರ್ವಜನಿಕರ 'ಬೆಂಬಲದಿಂದ ಕೂಡಿದ ಸಹಿ' ಸಂಗ್ರಹಣಾ ಅಭಿಯಾನಕ್ಕೆ ಒಂದು ಮಹತ್ವದ ತಿರುವು ದೊರೆತಿದೆ.

ಈ ದಿನ ಕನ್ನಡಸಾಹಿತ್ಯ.ಕಾಂ ನ ಸಂಸ್ಥಾಪಕರಾದ ಶ್ರೀಯುತ ಶೇಖರ್‍ಪೂರ್ಣರವರು ಅಭಿಯಾನಕ್ಕೆ ಬೆಂಬಲ ಕೋರಿ ಮಾಜಿ ಮಾಹಿತಿ ತಂತ್ರಜ್ಞಾನ ಸಚಿವರಾದ, ಸುಸಂಸ್ಕೃತ ರಾಜಕಾರಣಿ, ಶ್ರೀಯುತ ಬಿ ಕೆ ಚಂದ್ರಶೇಖರ್‍ ಅವರನ್ನು ಭೇಟಿಯಾಗಿ, ಕನ್ನಡಸಾಹಿತ್ಯ.ಕಾಂ ಬೆಂಬಲಿಗರ, ಅಭಿಯಾನದ ಧ್ಯೇಯೋದ್ದೇಶಗಳನ್ನು ಮನವರಿಕೆ ಮಾಡಿಕೊಡಲಾಗಿ, ಮಾನ್ಯರು, ಮನವಿ ಪತ್ರದಲ್ಲಿರುವ 'ಬೇಡಿಕೆಗಳನ್ನು' - ಶಾಸನವಾಗಿಸಲಿಕ್ಕೆ, ರಾಜ್ಯ ಶಾಸನಸಭೆಯ ಮುಂದಿನ ಅಧಿವೇಶನದಲ್ಲಿ, ಅವುಗಳನ್ನು ಚರ್ಚೆಗೆ ಮಂಡಿಸುವ ಸ್ವಯಂಪ್ರೇರಿತ ಪ್ರಸ್ತಾಪ ಹಾಗೂ ಭರವಸೆ ನೀಡಿದ್ದಾರೆ. ಅಲ್ಲದೆ, ಇದೇ ವಿಷಯವಾಗಿ, ಕನ್ನಡ ಹಾಗೂ ತಂತ್ರಜ್ಞಾನದ ಸಂದರ್ಭದಲ್ಲಿ ಅಗತ್ಯವಿರುವ ಶಾಸನದ ಕರಡೊಂದನ್ನು ಸಿದ್ಧಪಡಿಸಲು ಶ್ರೀಯುತ ಶೇಖರ್‍ಪೂರ್ಣರವರ ಹಾಗೂ ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಸಹಕಾರ ಕೋರಿದ್ದಾರೆ.

ಇದೇ ವಿಚಾರವಾಗಿ, ತಾಂತ್ರಿಕ ಸಂದರ್ಭದಲ್ಲಿ ಕಾನೂನು ಹಾಗೂ ಶಾಸನಗಳ ಬಗೆಗಿನ ಹೆಚ್ಚಿನ ಅರಿವಿರುವವರ ಅಗತ್ಯವಿದ್ದು, ಗಣಕ ತಂತ್ರಜ್ಞಾನ ಪರಿಸರದಲ್ಲಿ 'ಕನ್ನಡದ ಹಣತೆ' ಹಚ್ಚುವ ಈ ಕಾರ್ಯಕ್ಕೆ, ಸ್ವಯಂಪ್ರೇರಣೆಯ ಬೆಂಬಲವನ್ನು ಈ ಪತ್ರದ ಮೂಲಕ ವಿನಮ್ರ ಮನವಿಯನ್ನು ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗವು ಮುಂದಿಡುತ್ತಿದೆ.

 

ಆಸಕ್ತರು, ಶ್ರಿಯುತ ಶೇಖರ್‍ಪೂರ್ಣರವರನ್ನು ೦೯೩೪೧೨೩೦೦೧೫ ksctanda@gmail.com ಅಥವಾ ಖುದ್ದಾಗಿ, ನ೦. ೧೦೩, ೧ನೇ ಬ್ಲಾಕ್, ಜನಪ್ರಿಯ ಲೇಕ್ ವ್ಯೂ ಅಪಾರ್ಟಮೆಂಟ್ಸ, ಕೋಡಿಚಿಕ್ಕನಹಳ್ಳಿ, ಬೆಂಗಳೂರು-೫೬೦೦೭೬ , ವಿಳಾಸದಲ್ಲಿ ಸಂಪರ್ಕಿಸಲು ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗವು ಕೋರುತ್ತಿದೆ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet