ಜೀರಿಗೆ ಗೊಜ್ಜು

ಜೀರಿಗೆ ಗೊಜ್ಜು

ಬೇಕಿರುವ ಸಾಮಗ್ರಿ

ಮಸಾಲೆ ಸಾಮಾನು: ಹುಣಸೆ ರಸ ಕಾಲು ಕಪ್, ಕೊತ್ತಂಬರಿ ಹುಡಿ - ೪ ಚಮಚ, ಬೆಲ್ಲದ ಹುಡಿ - ೪ ಚಮಚ, ಒಣಕೊಬ್ಬರಿ ತುರಿ - ಕಾಲು ಕಪ್, ಒಣ ಶುಂಠಿ ಹುಡಿ - ಕಾಲು ಚಮಚ, ಜೀರಿಗೆ - ೩ ಚಮಚ, ಕಾಳು ಮೆಣಸು - ೧ ಚಮಚ, ಎಣ್ಣೆ - ೪ ಚಮಚ, ಲವಂಗ ೫-೬, ಸಾಸಿವೆ - ೧ ಚಮಚ, ಏಲಕ್ಕಿ ಹುಡಿ - ಕಾಲು ಚಮಚ, ಇಂಗು - ಕಾಲು ಚಮಚ, ಜಾಯಿಕಾಯಿ - ಕಾಲು ಚಮಚ, ಒಣ ಮೆಣಸಿನಕಾಯಿ - ೪-೫, ಜಾಪತ್ರೆ - ೧, ರುಚಿಗೆ ತಕ್ಕಷ್ಟು ಉಪ್ಪು. ಮಸಾಲೆ ಹುಡಿ ೪ ಚಮಚ, ಚೆಕ್ಕೆ - ೧ ಇಂಚು, ಕರಿಬೇವಿನ ಎಲೆಗಳು - ೫-೬

 

ತಯಾರಿಸುವ ವಿಧಾನ

ಮಸಾಲೆ ಸಾಮಾನುಗಳನ್ನು ಹುರಿದು ಹುಡಿ ಮಾಡಿ, ಬಾಣಲೆಯಲ್ಲಿ, ಎಣ್ಣೆ ಕಾಯಲು ಇರಿಸಿ, ಸಾಸಿವೆ, ಇಂಗು, ಒಣ ಮೆಣಸಿನಕಾಯಿಗಳನ್ನು ಹಾಕಿ ಒಗ್ಗರಣೆ ಮಾಡಿ. ಒಗ್ಗರಣೆಗೆ ಹುಣಸೆ ರಸ, ಬೆಲ್ಲದ ಹುಡಿ, ಮಸಾಲೆಹುಡಿ, ಒಣಶುಂಠಿ ಹುಡಿ, ಉಪ್ಪು ಹಾಕಿ ಕುದಿಸಿದರೆ ರುಚಿಯಾದ ಜೀರಿಗೆ ಗೊಜ್ಜು ತಯಾರು.