ಬೆಳಕಿನ ಕತ್ತಲು

ಬೆಳಕಿನ ಕತ್ತಲು

ಎದೆಗೂಡಿಗೆ ಬೆಂಕಿ ಬಿದ್ದು 
ಹೊಗೆ ಬಂದು, 
ಉಳಿದ ಕರಕಲು ಮಸಿಯಲ್ಲಿ
ಹಲ್ಲುಜ್ಜಿ 
ಹೊಸಬದುಕು ಪ್ರಾರಂಭ.

ಹೊಸ ಮನೆಯ 
ಬೆಳಕಿನ ಖರ್ಚಿಗಿಂತ
ಹಳೆ ಮನೆಯ
ಕತ್ತಲ ಕೋಣೆಯ 
ನೆನಪೆಷ್ಟು ,,,, ಮಧುರ !!

ಭಾವಗಳನು ಮಾರಿದರೆ
ಅಪ್ಪುಗೆಯಲಿ,
ಕೊಂಡುಕೊಳ್ಳುವ 
ಗಂಡಂದಿರ ಹೆಂಡತಿಯರೂ,,,
ಹೆಂಡತಿಯ ಗಂಡಂದಿರೂ 
ಇರುವವರೇ ಇನ್ನೂ ಜಗದೊಳಗೆ?

ದಾರಿಬದಿಯಲ್ಲಿ 
ಮಾರುವ ಮನುಷ್ಯತ್ವದ 
ತುಂಡಿಗೆ
ಸತ್ತ ಕೋಳಿಯ 
ಕಾಲಿನಷ್ಟಾದರೂ
ಬೆಲೆ ಇದೆಯೇ ?

ಮೈಗೊಂದಿಷ್ಟು ಸುಣ್ಣ,,
ತಲೆಗೊಂದಿಷ್ಟು ಬಣ್ಣ,,
ಸಾಕಿಲ್ಲಿ !!!!
ಸಾಯುವ ಜೀವಕ್ಕೆ 
ಸಾಂತ್ವನ ಹೇಳಲು,,,

ಸೌಂದರ್ಯದ ಗುಟ್ಟು,,,,
ಬೇರಿನಿಲ್ಲ,,,
ಬೆವರಿಳಿಸದೆ ದುಡಿದ ಹಣ,,,
ಮತ್ತದರ ಬಣ್ಣ.

ಕೂಡಿ ಕಳೆದರೂ,
ಕಳೆದು ಕೂಡಿದರೂ,,,
ಇರುವುದೊಂದೆ ಬದುಕು,,,
ಜೀವಿಸಲು,,,,
ಇದಕ್ಕಿಂತ ದೊಡ್ದ ತತ್ವ ಬೇಕೆ ?

- ಜೀ ಕೇ ನ