ರಶೀಧರ 'ಬ್ಲಾಗಂಬರಿ'
ಮೈಸೂರು ಆಕಾಶವಾಣಿಯ [:http://sampada.net/user/rasheed|ರಶೀಧರ] ಪರಿಚಯ ನಿಮಗೆ [:http://mysorepost.wordpress.com|ಮೈಸೂರು ಪೋಸ್ಟಿನಿಂದ], ಹಾಗೂ [:http://sampada.net/article/3215|ಸಂಪದದಲ್ಲಿ ಅವರು ಬರೆದ] [:http://sampada.net/article/3154|ಕೆಲವು ಕವನಗಳಿಂದ] ಆಗಿರಬಹುದು. ಈಗವರು ಹೊಸತೊಂದು ಪ್ರಯೋಗಕ್ಕೆ 'ಕೈ' ಹಾಕಿದ್ದಾರೆ. [:http://blogambari.sampada.net|ಅದುವೇ 'ಬ್ಲಾಗಂಬರಿ']. ಅವರೇ ಹೇಳುವಂತೆ:
`ಬ್ಲಾಗಂಬರಿ 'ಎಂಬುದು ಕಾದಂಬರಿ ಮತ್ತು ಬ್ಲಾಗ್ ಎಂಬ ಎರಡು ನಾಮ ಪದಗಳ ವರ್ಣಸಂಕರದಿಂದ ಉಂಟಾದ ಕನ್ನಡ ಸಾಹಿತ್ಯದ ಒಂದು ವಿನೂತನ ತಳಿ.ಕನ್ನಡ ಸಾಹಿತ್ಯದ ಹೊಸ ಹೇಸರಗತ್ತೆ!
ಈ ಹೇಸರಗತ್ತೆಯ ಹುಟ್ಟುವಿಕೆಯ ಜೆನೆಟಿಕ್ ಇಂಜಿನೀಯರಿಂಗಿಗೆ ಬೇಕಾದ ತಂತ್ರಜ್ಞಾನದ ಜೋಡಿಕೆ ಸಂಪದದಲ್ಲೇ ನಡೆದಿದ್ದು. ನಿರ್ವಹಣೆಯ ಭಾರ [:http://ismail.sampada.net|ಇಸ್ಮಾಯಿಲರದ್ದು]. ರಶೀಧರ ಬರಹ ಅದರ ಆತ್ಮ.
[:http://blogambari.sampada.net/|ನೋಡಿ, ಕಾಮೆಂಟು ಮೂಲಕ ಪ್ರೋತ್ಸಾಹಿಸಿ] - ಹೇಗನ್ನಿಸಿತೆಂದು ಇಲ್ಲೂ ಬರೆದು ತಿಳಿಸಿ.