ಲೇಖನಗಳಿಗೆ ಆಹ್ವಾನ
ಡಾ.ಸಿ.ಆರ್.ಚಂದ್ರಶೇಖರ್ ಅವರು ನಾಡಿನ ಖ್ಯಾತ ಮನೋವೈದ್ಯರು. ನಿಂಹಾನ್ಸ್ ನಲ್ಲಿ ಕೆಲಸ ಮಾಡುತ್ತಿರುವರು. ಕನ್ನಡದಲ್ಲಿ ೧೩೦ ಕ್ಕೂ ಹೆಚ್ಚು ವೈದ್ಯಕೀಯ ಪುಸ್ತಕಗಳನ್ನು ಬರೆದವರು. ಅವರಿಗೆ ಈ ಡಿಸೆಂಬರ್ ತಿಂಗಳಿನಲ್ಲಿ ೬೦ ವರ್ಷಗಳಾಗಲಿವೆ. ಈ ಸಂದರ್ಭದಲ್ಲಿ ಒಂದು ಗ್ರಂಥವನ್ನು ಸಮರ್ಪಿಸುತ್ತಿದ್ದೇವೆ. ಈ ಗ್ರಂಥಕ್ಕೆ ನಿಮ್ಮಿಂದ ಲೇಖನಗಳನ್ನು ಆಹ್ವಾನಿಸುತ್ತಿದ್ದೇವೆ. ವಿವರಗಳು ಇಂತಿವೆ.
೧. ಸಾರ್ವಜನಿಕರಿಗಾಗಿ:
-ಡಾ.ಸಿ.ಆರ್.ಸಿ ಅವರು ಬರೆದಿರುವ ಯಾವುದಾದರು ಒಂದು ಪುಸ್ತಕವನ್ನು ಕುರಿತು ೫೦೦ ಶಬ್ಧ ಮಿತಿಯಲ್ಲಿ ಲೇಖನ
-ಆಯ್ಕೆಯಾಧ ೫೦ ಲೇಖನಗಳನ್ನು ಪ್ರಕಟಿಸಲಾಗುವುದು ಹಾಗೂ ಅವರನ್ನು ವೇದಿಕೆಯ ಮೇಲೆ ಕರೆಸಿ ಬಹುಮಾನವನ್ನು ನೀಡಲಾಗುವುದು.
೨. ವೈದ್ಯ ಲೇಖಕರಿಗಾಗಿ:
-ವೈದ್ಯ ಲೇಖಕರು ತಾವು ಬರೆದಿರುವ/ಪ್ರಕಟವಾಗಿರುವ ೨ ಪುಟ ಮಿತಿಯ ಒಂದು ಉತ್ತಮ ಲೇಖನವನ್ನು ಕಳುಹಿಸಬೇಕು.
-ಜೊತೆಗೆ, ಒಂದುಪುಟ ಮಿತಿಯ ‘ವೈದ್ಯ ಸಾಹಿತಿಯಾಗಿ ನನ್ನ ಅನುಭವ‘ ಎಂಬ ವಿಷಯಧ ಬಗ್ಗೆ ಬರೆದು ಕಳುಹಿಸಬೇಕು.
-ನಿಮ್ಮ ಪೂರ್ಣ ಹೆಸರು, ಹುಟ್ಟಿದ ದಿನಾಂಕ, ಹುಟ್ಟಿದ ಊರು, ಬರೆದ ಪುಸ್ತಕಗಳ ಸಂಖ್ಯೆ ಹಾಗೂ ಇತ್ತೀಚಿನ ಭಾವಚಿತ್ರವನ್ನು ಕಳುಹಿಸಿ ಕೊಡಬೇಕು.
ನಿಮ್ಮ ಬರಹಗಳನ್ನು ನನಗೆ ೨೫.೦೯.೦೮ರೊಳಗೆ ಕಳುಹಿಸಿಕೊಡಿ.
ಕಾರ್ಯಕ್ರಮ ವಿವರ:
ದಿನಾಂಕ: ೧೪.೧೨.೦೮
ಸ್ಠಳ: ಆರ್.ವಿ.ದಂತ ಮಹಾವಿದ್ಯಾಲಯ ಸಭಾಂಗಣಾ
ಸಮಯ: ಬೆಳಿಗ್ಗೆ ೯.೦೦ ಗಂಟೆಯಿಂದ ಸಂಜೆಯವರಿಗೆ
ಪರಿಣತರಿಂದ ಉಪನ್ಯಾಸಗಳಿರುತ್ತವೆ.
ಹೆಚ್ಚಿನ ವಿವರಗಳಿಗೆ ನನಗೆ ಮೇಲ್ ಮಾಡಿ ಇಲ್ಲವೇ ದೂರವಾಣಿಸಿ.
೯೮೮೦೪ ೬೫೬೬೧
ನಿಮ್ಮವ
ನಾಸೋ