|| ವಂದೆ ಮಾತರಂ || - ಭಾಗ ೧

|| ವಂದೆ ಮಾತರಂ || - ಭಾಗ ೧

ಬರಹ

ಅಂದು ಸ್ವಾತಂತ್ಯ್ರದ ಮಂತ್ರಘೋಶ ಮಾಡಿ ಬ್ರಿಟೀಷ ಶಾಸನವನ್ನು ರೊಚ್ಚಿಗೆಬ್ಬಿಸಿದ ರಣ ಮಂತ್ರ ವಂದೆ ಮಾತರಂ. ಅದೊಂದು ದಿವ್ಯ ಆವಿಶ್ಕಾರ ಭಾರತದ ಅಂತ:ಕರಣವನ್ನು ಸ್ಪಂದನಗೊಳಿಸುತ್ತಿದ್ದ ತರಂಗ ರಂಗ ಅದು.ಹತಾಶ ಹೃದಯದಿಂದ ನೆಲಕಚ್ಚಿ ಮಲಗಿದ್ದ ದೇಶವನ್ನು ಮತ್ತೊಮ್ಮೆ ಸ್ವಾಭಿಮಾನದಿಂದ ಸಿಂಹಗರ್ಜನೆ ಮಾಡುತ್ತಾ ಮೆಲೆದ್ದು ನಿಲ್ಲುವಂತೆ ಮಾಡಿದ ರಣಮಂತ್ರ ಅದು.ಸಾಮಾಜಿಕ,ಆರ್ಥಿಕ,ರಾಜಕೀಯ ರಂಗದಲ್ಲಿ ಪ್ರಚಂಡ ಪರಿವರರ್ತನೆ ಪ್ರಚೋದಿಸಿ ಅದು ಭಾರತವನ್ನು ಪುನ: ಆತ್ಮಪ್ರಕಟನೆಗೆ ಸಿದ್ದಪಡಿಸಿತ್ತು.ನೂರಾರು ಆವೇಶ ಪೂರ್ಣ ದೇಶ ಭಕ್ತಿಯ ಪ್ರವಚನಗಳಿಗಿಂತಲು ಹೆಚ್ಚಾಗಿ ಮಾತ್ರುಭೂಮಿಯ ಭಕ್ತಿ ಭಾವವನ್ನು ಹೃದಯಗಳಲ್ಲಿ ನೆಲೆಗೊಳಿಸುವ ಕಾರ್ಯ್ಯವನ್ನು ಈ ಒಂದು ಗೀತೆ ಮಾಡಿತು.

ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ವಂದೆ ಮಾತರಂ ಅದ್ಭುತ ಸಾಹಸಗಳಿಗೆ ಸಹಸ್ತ್ರೊತ್ತರ ತ್ಯಾಗಬಲಿದಾನಗಳಿಗೆ ಪ್ರೇರಣೆ ನಿಡಿತು ಮುಂದೆ ಸಹಾ ನೀಡಬಲ್ಲದು.ಬರಿ ದಾಸ್ಯ ಸಂಘರ್ಶಗಳ ಸಮಯದಲ್ಲಿ ಮಾತ್ರವಲ್ಲ , ಶಾಂತಿ ಸ್ವಾತಂತ್ರ್ಯ ಸಮಯದಲ್ಲೂ ಅದರ ಪಾತ್ರ ಮಹತ್ತರ ಈ ನೆಲದ ಸಂತಾನಗಳನ್ನಾ ವಿದ್ಯಾ-ಬುದ್ದಿಯ ಸಂಪತ್ತು,ಸಂಮೃದ್ಧಿಗಳ ಸಾಧನೆ ಸಿದ್ಧಿಗಳಿಗೆ ಆವಾಹನ ನೀಡುವ ಚಿರಂತನ ಸ್ಪೂರ್ತಿ ಮಂತ್ರ ಅದು.ಸ್ವಾತಂತ್ರ್ಯ ಪೂರ್ವದಲ್ಲಿ ಪ್ರತೀಯೊಂದು ಸ್ಥಳದಲ್ಲಿ ಸಾರ್ವಜನೀಕ ಸಭೆ,ಸಮಾರಂಭಗಳಲ್ಲಿ ವಂದೆ ಮಾತರಂ ಗೀತೆ ಸ್ಮರಣೆ,ಘೋಷಣೆ ಇಲ್ಲದ ನಿದರ್ಶನಗಳಿಲ್ಲ.ಎಲ್ಲಡೆ ಅದರ ಉಲ್ಲೆಖ ಬಂದೆ ಬರುತ್ತಿತ್ತು ಆದರೆ ಇಂದು ಸ್ವಾತಂತ್ರ್ಯ ಭಾರತದಲ್ಲಿ ರಾಷ್ಟ್ರಗೀತೆಗಳ ನಿರ್ವಿವಾದದ ಸ್ಥಾನವನ್ನು ಹೊಂದಲೆಬೇಕಾದ ವಂದೆ ಮಾತರಂ ಅದರಿಂದ ವಂಚಿತ ವಾಗಿದೆ,ವಿಭಜಿತವಾಗಿದೆ.ವಂರೆ ಮಾತರಂ ನ ರೋಮಾಂಚಕ ಹೃದಯ ಸ್ಪರ್ಶಿ ಕಥೆ ಮತ್ತದರ ವ್ಯಥೆಯ ಸಮಗ್ರ ಇತಿಹಾಸ ಈ ಉಪನ್ಯಾಸಸಲ್ಲಿದೆ.ಉಪನ್ಯಾಸಕರು ಶ್ರಿಯುತ ಸು.ರಾಮಣ್ಣನವರು. ತಮ್ಮ ಇಂಜಿನಿಯರಿಂಗ ಪದವಿ ಪದೆದ ನಂತರ ತಮ್ಮ ಈಡಿ ಜೀವನವನ್ನು ದೇಶಕಾರ್ಯಕ್ಕಾಗಿಯೆ ಸಮರ್ಪಿಸಿದವರು.ಹೆಸರಾಂತ ಸಾಮಾಜಿಕ ಕಾರ್ಯಕರ್ತರು, ರಾಷ್ಟ್ರಿಯ ಸ್ವಯಂ ಸೇವಕ ಸಂಘದ ಕರ್ನಾಟಕ ಪ್ರಾಂತ ಪ್ರಚಾರಕರು . . . ಬನ್ನಿ ವಂದೆ ಮಾತರಂ ನ ರುಚಿ ಸವಿಯೊಣ . . . .

ಮುಂದುವರೆಯುವುದು . . .