ಸಚಿತ್ರ ಚೈತ್ರ!.....
ಬರಹ
ಯಾವ ಮೋಡಿಕಾರ ಬಂದ ಯಾವ ಕುಂಚವನ್ನು ತಂದ
ಬೋಳು ಬೋಳು ಮರ ಬರೀ ಅಸ್ಥಿಪಂಜರ|
ಬಣ್ಣ ಬಳಿದು ಜೀವ ತುಂಬಿ ಎಲ್ಲಿ ನೋಡೆ ಅಲ್ಲಿ ಹಸಿರು
ನಲಿದು ತೊಟ್ಟು ಬಣ್ಣ ಬಣ್ಣದ ಪೀತಾಂಬರ||
ಬೇಂದ್ರೆ ಅಜ್ಜ ನುಡಿದ ಮಾತು ಎಷ್ಟು ದಿಟ
ಹೂತ ಹುಣಸಿ ಒಂದು ಸಾಲದೆ ನಿನ್ನ ಭಾವ ಜಲ ಉಕ್ಕಲು|
ಅರಳ ಹೊರಟ ಮೊಲ್ಲೆ ಗಮಲು ಸಾಲದೆ
ಜಡವ ಕಳೆದು ಜೀವ ಸೆಲೆಯು ಒಡೆದು ಚೈತ್ಯ ತುಂಬಲು||
ಆಟ ಊಟ ಬೇಟ ಕೂಟ ಮಾಟ ಮಾಡಿದೆ
ಮಣ್ಣ ಕಣದಿ ರಕ್ತ ಚಿಮ್ಮಿ ಮುಗುಳು ಅರಳಿದೆ|
ಏನು ಲೀಲೆ ಏನು ಜಾಲ ಏನನರಿಯೆ ನಾನು
ಕೈಯ ಹಿಡಿದು ನನ್ನ ನಡೆಸು ಬೇಡಿಕೊಳುವೆನು||
-ನಾಸೋ