ಸ್ಟೇಟಸ್ ಕತೆಗಳು (ಭಾಗ ೧೦೬೪)- ನನ್ನವಳು
ನನ್ನರಸಿ, ಮನೆಯರಸಿ ಬಂದ ಮನದರಸಿ... ನನ್ನವಳು, ಮೌನದ ಒಳಗಿನ ಮಾತನ್ನಾಲಿಸುವವಳು, ಎದೆಯೊಳಗಿನ ಕದವ ಬಡಿದು ಪ್ರೀತಿ ಚಿಗುರಿಸಿ ಸಾಧನೆಗೆ ಮುನ್ನುಡಿ ಕೊಟ್ವವಳು. ಜೊತೆಗೆ ಕುಳಿತು ಕಂಡ ಕನಸುಗಳೆನ್ನವನ್ನ ನನಸಿನ ಹಾದಿಗೆ ಸಾಗಿಸುವ ಪಣ ತೊಟ್ಟವಳು. ನೋವುಂಡು ನಕ್ಕವಳು, ನಗುವ ಹಂಚಿದಳು, ಶಿಸ್ತಿನ ಒಲವವಳು, ನನ್ನ ಸಹಿಸಿದವಳು, ಮುಂದಿನ ಎಲ್ಲ ಹೆಜ್ಜೆಗಳಲ್ಲಿ ನನ್ನವಳಾಗಿರುವ ನನ್ನರಸಿ, ಮನದರಸಿ...ಒಲವಿನ ಚೆನ್ನರಸಿ ಬದುಕಿನ ಗಮ್ಯದೆಡೆಗೆ ಜೊತೆಗೆ ಸಾಗುವ ಸ್ವಪ್ನ ಮಯೂರಿ ಇವಳಿಂದ ಬದುಕು ಹೊಸ ದಿಶೆಯ ಕಡೆಗೆ ಸಾಗಲಿದೆ ಎನ್ನುವ ನಂಬುಗೆಯ ಹುಡುಗನವನು. ಭರವಸೆಯ ನಂಬುಗೆಯಲ್ಲಿ ನೂತನ ಜೋಡಿಗಳು ಬದುಕಿನ ಹೊಸಿಲನ್ನು ಬಲಗಾಲಿಟ್ಟು ದಾಟಿದ್ದಾರೆ. ಕಾಲ ನಿರ್ಣಯಕ್ಕೆ ತಲೆಬಾಗಿ ಹೊಸ ಅವಕಾಶಕ್ಕೆ ಕಾಯುತ್ತಿದ್ದಾರೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ