ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ವಿದಾಯ


ಅರಿವಿಲ್ಲದೆ ಹನಿ ಜಾರುತಿಹುದು
ದನಿಯಿಲ್ಲದೆ ಮನ ಬಿಕ್ಕಳಿಸುತಲಿಹುದು
ದೂರವಾಗುವ ದಿನ ಇಂದೇ ಏಕೆ ಬಂದಿಹುದು

ಅಲೆಮಾರಿ ಜೀವನದಲಿ ಊರ ಸೆಲೆ ತಂದವರು 
ತೆಲುಗಿನ ನಡುವೆ ಮತ್ತೆ ತುಳು ಹೊತ್ತು ಬಂದವರು
ಮತ್ತೆ ಭೇಟಿ ಯಾಗುವೆ ಎನ್ನುತ್ತಾ ಮತ್ತೆ ಇಂದು ದೂರ ಸರಿಯುತಿರುವರು,

ಕಳೆದ ಒಂದು ವರುಷದ ಹಲವು ಹರುಷಕೆ ಕಾರಣರಾದವರು
ಇಂದು ಕಣ್ಣೊಳು ಕಂಬನಿ ಬಿರಿಯುತ್ತ ಹೊಸ್ತಿಲಲಿ ನಿಂತಿಹರು
ಒಳಗೆ ಮನ ಅಳುತ್ತಿದ್ದರು ಮುಗುಳ್ನಗೆ ಬೀರುತಾ ನಗುತ್ತಿರುವರು

ಎಲ್ಲೇ ಹೋದರು ಸಂತೋಷ ನಿಮ್ಮ ಪಾಲಿಗಿರಲಿ
ಪ್ರತಿ ಹೆಜ್ಜೆಗೂ ನಗೆ ಹೂವು ಅರಳುತ ಶುಭ ಕೋರಲಿ

ಆಂಗ್ ಸಾನ್ ಸೂಕಿ ಎಂಬ ಹೆಣ್ಣುಮಗಳಿಂದ ನಾವು ಕಲಿಯಬೇಕಾದದ್ದು!

ಬರ್ಮಾದ ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳ ಹೋರಾಟಗಾರ್ತಿ ಆಂಗ್ ಸಾನ್ ಸೂ ಕಿಯ ಬಗ್ಗೆ ಚಿಕ್ಕಂದಿನಿಂದಲೂ ಬೇರೆ ಬೇರೆ ಪತ್ರಿಕೆಗಳಲ್ಲಿ ಓದುತ್ತಲೇ ಇದ್ದೆ. ತನ್ನ ನಾಡಿನ ಜನರ ಸ್ವಾತಂತ್ರ್ಯಕ್ಕಾಗಿ, ಅವರ ಹಕ್ಕುಗಳಿಗಾಗಿ ಹೋರಾಡುತ್ತ ಹೆಚ್ಚು ಕಡಿಮೆ ಬದುಕಿನ ಮುಕ್ಕಾಲು ಭಾಗ ಗೃಹ ಬಂಧನದಲ್ಲೇ ಕಳೆದ ಛಲಗಾರ್ತಿ ಈಕೆ.

ಎಮ್ಮೆ ನಿನಗೆ ಸಾಟಿ ಇಲ್ಲ

ಮೊನ್ನೆ ಹೀಗೆ ಜಯನಗರದಲ್ಲಿ ರಸ್ತೆ ದಾಟೋಣವೆಂದು ಹುಶಾರಿನಿಂದ ಹೊರಟೆ ಅರ್ದ ದಾಟಿದ ಮೇಲೆ ಗಮನಿಸಿದೆ ನಾನು ಮಾಡಿದ ಯೋಚನೆಯೆ ಎದುರು ಬಾಗದಲ್ಲಿದ್ದ ಮೂರು ಎಮ್ಮೆ ಗಳಿಗೂ ಬಂತೇನೊ ಅವುಗಳು (ಹೆಸರು ತಿಳಿದಿಲ್ಲ) ಈ ಕಡೆಗೆ ಹೊರಟವು. ನಡುರಸ್ತೆಯಲ್ಲಿ ಎದುರಾದ ಎಮ್ಮೆಗಳನ್ನು ಗಮನಿಸಿ ನಾನು ಅವುಗಳ ಪಕ್ಕದಲ್ಲಿ ಬರುವಾಗ ಅನ್ನಿಸಿತು ನಾವು ಅದನ್ನು ಗಮನಿಸುತ್ತೇವೆ ಅಷ್ಟೆ , ಅದಕ್ಕಾದರೆ ನಮ್ಮನ್ನು ಗಮನಿಸುವ ಯಾವ ವ್ಯವದಾನವು ಇಲ್ಲ.

ಉಳ್ಳಾಗಡ್ಡಿ ಖರೀದಿಸುವ ಉಳ್ಳವರು ನಾವ್!

ಕಳೆದ ಶುಕ್ರವಾರ ಸಾಯಂಕಾಲ ಟೈಮ್ಸ್ ವಾರ್ತೆ ನೋಡುತ್ತಿದ್ದ ನನ್ನ ಗಂಡ ಓಡಿ ಬಂದು ಈರುಳ್ಳಿ ಅಕ್ರಮ ದಾಸ್ತಾನುಕಾ(ಕೋ)ರರ ಮೇಲೆ ದಾಳಿ ಎಂಬ ಬ್ರೇಕಿಂಗ್ ನ್ಯೂಸನ್ನು ನನ್ನೆದುರು ಬ್ರೇಕ್ ಮಾಡಿದರು.


ಛೇ, ಹಾಗಾದರೆ ಈರುಳ್ಳಿ ಬೆಲೆ ಕಮ್ಮಿ ಆಗ್ತದಾ? ಧಾವಂತ ತೋರಿದೆ. ಅವರಿಗೆ ಅಚ್ಚರಿಯೋ ಅಚ್ಚರಿ! ಈಗಿನ ಕಾಲದ ಈ ಸಾಮಾನು ರೇಟಲ್ಲಿ ನಮ್ಮಂತವರು ಬದುಕುವುದು ಹೇಗೆಂದು ದಿನನಿತ್ಯ ಗೊಣಗುತ್ತಿದ್ದ ಇವಳಗೇನಾಯ್ತು ಅಂತ ಮತ್ತೆ ಹೋಗಿ ಟಿವಿ ಮುಂದೆ ಜೋತಾಡುತ್ತಾ ನಿಂತರು.

ಭಾರತದ ಯುವಜನತೆ ಏಕೆ ಹೀಗಿದ್ದಾರೆ?

ಭಾರತದ ಯುವಜನತೆ ಏಕೆ ಹೀಗಿದ್ದಾರೆ?
ಆತ್ರಾಡಿ ಸುರೇಶ್ರವರ ’ವಿವೇಕಾನಂದರೆ ಸ್ಪೂರ್ತಿ ನೀಡಲಿ" ಬ್ಲಾಗ್ ಬರಹದ ಪ್ರತಿಕ್ರಿಯೆಗಳಲ್ಲಿ ಇಂದಿನ ಯುವಜನಾಂಗದ ಮನೋಸ್ಥಿಥಿಯನ್ನು ಕುರಿತು ಕೆಲವು ಚಿಂತನೆಗಳಿವೆ. ವಿವೇಕಾನಂದರು ಅವರಿಗೆ ಸ್ಪೂರ್ತಿಯಾಗಲಿ ಎಂದು ಹಾರೈಸಲಾಗಿದೆ. ನನ್ನ ಮನವು ಹಲವು ಬಾರಿ ಈ ದಿಕ್ಕಿನಲ್ಲಿ ಕುರಿತು ಚಿಂತನೆ ಮಾಡಿದೆ. ಆದರೆ ಇಂದಿನ ಯುವಜನತೆಯು ದಾರಿ ತಪ್ಪಿದಾರೆಯೆ ಅಥವ ತಪ್ಪುತ್ತಿದ್ದಾರೆಯೆ ಎಂದು ನಿರ್ದರಿಸುವುದು ಹೇಗೆ?.
ಒಂದು ವೇಳೆ ಅವರು ಹೋಗುತ್ತಿರುವ ದಾರಿ ಸರಿಯಲ್ಲ ಎನ್ನುವದಾದರೆ ಅದಕ್ಕೆ ಕಾರಣಾರಾರು?

ಕಪಿಲಸಿದ್ಧ "ಬೋವಿ" ಮಲ್ಲಿಕಾರ‍್ಜುನ!

ಕಪಿಲಸಿದ್ಧ “ಬೊವಿ” ಮಲ್ಲಿಕರ್ಜುನ!


ಶರಣಶ್ರೇಷ್ಠ ಸಿದ್ಧರಾಮರ ಜಯಂತಿ ಹೆರಿನಲ್ಲಿ, ಸರಕಾರ ಮೈಸೂರಿನಲ್ಲಿ “ಬೊವಿ” ಜನಾಂಗದ ಸಮ್ಮೇಳನ ನಡೆಸಹೋಗಿತ್ತಿರುವ ಬಗ್ಗೆ ವಿಜಯ ಕರ್ನಾಟಕ ದಲ್ಲಿ ಮಾಹಿತಿ ಪ್ರಕಟವಗಿದೆ.


ಕಾಯಕಯೋಗಿ ಸಿದ್ದರಾಮಗೆ ಜಾತಿ ಗೋಡೆ ಸರಿಯೇ? ಎಂದು ಚೀ. ಜ. ರಾಜೀವ ಪ್ರಶ್ನಿದ್ದಾರೆ. ಜಾತಿ ಗೋಡೆ ಸುತರಾಂ ಸರಿಯಲ್ಲ ಎನ್ನುವುದೇ ನೈಜ ಕಳಕಳಿವಂತರೆಲ್ಲರ ಉತ್ತರವಿದ್ದೀತು!

PERL ತಂತ್ರಜ್ಞಾನದ ಬಗ್ಗೆ ಮಾಹಿತಿ ಬೇಕಿದೆ.

ಗೆಳೆಯರೇ ನಿಮ್ಮಲ್ಲಿ ಯಾರಿಗಾದರೂ PERL ತಿಳಿದಿದ್ದಲ್ಲಿ ಅದರ ಬಗ್ಗೆ ಮಾಹಿತಿ ಕೊಡುತ್ತೀರಾ?
ನಾನು DataBase ಡೊಮೈನ್ ನಲ್ಲಿ ಕೆಲಸ ಮಾಡಿರುವವಳು. ಪ್ರೋಗ್ರಾಮ್ಮಿಂಗ್ ಬಗ್ಗೆ ಹೆಚ್ಚಾಗಿ ಗೊತ್ತಿಲ್ಲ.  PERL ಗೆ ಸಂಬಂಧ ಪಟ್ಟ ಪುಸ್ತಕಗಳು ಅಥವಾ ಬ್ಲಾಗ್ ಗಳು ಇದ್ದಲ್ಲಿ ದಯವಿಟ್ಟು ತಿಳಿಸಿ.
ನನಗೆ ಈ ಮಾಹಿತಿ ಆದಷ್ಟು ಬೇಗ ಬೇಕಿದೆ.

ಧನ್ಯವಾದಗಳು

ಸಂಕ್ರಾಂತಿಗೊಂದು ಮುನ್ನುಡಿ

ಮೋಡವೊಂದು ಹನಿಯಾಗಿ ಹನಿಯಿಂದ ನೀರಾಗಿ ಆ ನೀರು ಧರೆಗುರುಳಿ ಧರೆಯಿಂದ ಸಸಿಯೊಂದು ಚಿಗುರೊಡೆದು ಆ ಚಿಗುರು ತೆನೆಯಾಗಿ ತೆನೆಯೆಲ್ಲ ಅಂಗಳದಿ ಹರಡಿ ಸಂಕ್ರಾಂತಿಯ ಸಂಭ್ರಮಕೆ ಸಾಕ್ಷಿಯಾಗಲಿ ........................................... ಸರ್ವರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು