ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಏಸುಕ್ರಿಸ್ತ

ಏಸುಕ್ರಿಸ್ತ

ವಿಶ್ವ ಶ್ರೇಷ್ಠ ಗಾರುಡಿಗ ಮಮತೆಯೊಡಲ ಏಸು ಅವ
ಜಗದ ಅಧಿಕ ಜನರ ಮನೆಯ ಮನದ ದೈವವಾದವ ||ಪ||

ದಯೆಯ ಪ್ರೀತಿ ಅಂತರಾಳ ಕೋಪ ತೋರದಾತನು
ಆಸೆಗೊಂಡು ಎಲ್ಲರನ್ನೂ ಸೆಳೆದುಕೊಂಬನಾತನು
ಕರುಣೆ ನೋಟ ಕಣ್ಣ ತುಂಬಿ ಕಾಣುವಾತನಾಸರೆ
ಸೂರ್ಯ ತಾನು ಬೆಳಗಿದಾಗ ಅರಳಿದಂತೆ ತಾವರೆ  ||೧||

ಜೀವಾಳ ಸಂಗಾತಿ..



ಮನಸ್ಸೆಂಬ ತೋಟದಲ್ಲಿ ಹೂ ಆಗಿ 
ಅರಳಿದೆ ನೀನು


ಮೋಡವಾದ ಪ್ರೀತಿಯನ್ನು ಕರಗಿಸಿ 
ಮಳೆ ಹನಿಯಾದೆ ನೀನು


ಎಲೆಯಾಗಿ ನಾನು ಬೆಳೆದರೆ
ಹಸಿರು ಬಣ್ಣ ನೀಡಿದೆ ನೀನು


ಹನಿಯಾಗಿರುವ ನನಗೆ 
ಮುತ್ತಾಗಿ ಬದಲಾಯಿಸಿದೆ ನೀನು


ಬಡಿಗ ಕೆತ್ತಿದ ವೀಣೆ ನಾನು 
ಇಂಪಾಗಿ ಕೇಳುವ ನಾದ ನೀನು


ಕಲ್ಲು ಮಣ್ಣಾಗಿದ್ದ ನನಗೆ 
ಶಿಲೆಯಾಗಿ ಕೆತ್ತಿದ ಶಿಲ್ಪಿ ನೀನು 


ದುಂಬಿಯಾಗಿ ನಾನು ಬಂದರೆ
ಸಿಹಿಯನ್ನು ನೀಡುವ ಹೂ ನೀನು


ದೇವರು ಸೃಷ್ಟಿಸಿದ ದೇಹ ನಾನು 
ಅದರಲ್ಲಿರುವ ಜೀವ ನೀನು  

ಪ್ರೀತಿ ತೋರಿಸಿದೆ ನೀನು

 

ಹೀಗೆ ಹೂ ಆಗಿ ಅರಳಿ ಬಂದ 

ಬೃಂದಾವನ..

ಬಣ್ಣ ಬಣ್ಣದ ಮೀನು 

ಮಿಂಚಿ ಮಿರುಗುವ ಕಣ್ಣು

ಅದರ ಜೊತೆಗಿನ ಆಟ

ನಯನಗಳ ಬಲು ಓಟ 

ಮುತ್ತು ಕೊಡಲು ಬಂದೆವು 

ಮುಟ್ಟಿ ನೋಡು ಎಂದವು 

ಪ್ರೀತಿ ಮಾಡಿದ ಹಾಗೆ

ಕಣ್ಣೋ೦ದು  ಹೊಡೆದವು 

ಬೃಂದಾವನದ ಮೀನುಗಳು ಈ ರೀತಿ ಕಂಡವು 

ಶಿವ ಶಿವ

ಶಿವ ಶಿವ

ಶಿವ ಶಿವ ಪಶ್ಚಿಮ ಘಟ್ಟದ ಚೆಲುವಿಗೆ
ಎಲ್ಲಿಹುದೋ ಇನ್ನಾಯುಷ್ಯ ?
ಕಿತ್ತು ಹರಿದು ತಿನ್ನುವ ನರಭಕ್ಷಕ
ರಾಕ್ಷಸ ಮಂದಿಯ ಅಧಿಪತ್ಯ ||

ಕಾಡಿನ ನಡು ಹೆಮ್ಮರಗಳು ಇಲ್ಲಿ
ಕೊಲೆಗಡುಕನ ಜೇಬಿನ ದುಡ್ಡು

ವಚನದಲ್ಲಿ ಆರೋಗ್ಯ - ಗಾಯನ ಮತ್ತು ವ್ಯಾಖ್ಯಾನ

ಮೊದಲ ಬಾರಿಗೆ ಒಂದು ಪ್ರಯತ್ನವನ್ನು ನಡೆಸುತ್ತಿದ್ದೇನೆ.

 

ಶಿವಶರಣರ ವಚನಗಳ ಗಾಯನ ಹಾಗೂ ವ್ಯಾಖ್ಯಾನ ಹೊಸದೇನಲ್ಲ.

ಆದರೆ ಮೊದಲ ಬಾರಿಗೆ ವಚನಗಳಲ್ಲಿ ಶಿವಶರಣರು ಹೇಳಿರುವ ಆರೋಗ್ಯದರಿವನ್ನು ಹಂಚಿಕೊಳ್ಳುವ ಬಯಕೆಯಾಗಿ, ಆ ದಿಶೆಯಲ್ಲಿ ಒಂದಷ್ಟು ವಚನಗಳನ್ನು ಸಂಗ್ರಹಿಸಿದ್ದೇನೆ. ನಾಗರಬಾವಿ ಬಸವ ಬಳಗದವರು ವೇದಿಕೆಯನ್ನು ಒದಗಿಸಿದ್ದಾರೆ.  ವಿವರಗಳು ಈ ಕೆಳಕಂಡಂತಿವೆ.

 

"ವಚನಗಳಲ್ಲಿ ಆರೋಗ್ಯ"

ದಿನಾಂಕ: ೨೬.೧೨.೨೦೧೦

ಸಮಯ: ಸಂಜೆ ೬.೦೦ ಗಂಟೆ

ಸ್ಠಳ: ಸೋಫಿಯ ಶಾಲೆ, ೧೦ ನೇ ಬ್ಲಾಕ್, ನಾಗರಬಾವಿ ೨ನೇ ಹಂತ, ಬೆಂಗಳೂರು-೫೬೦ ೦೭೨.

ಆರ್.ಎಸ್.ವಿ.ಪಿ: ೯೮೮೦೯ ೩೯೯೦೬

 

ವಚನ ಗಾಯನ: ಶ್ರೀಮತಿ ನೀಲಾಂಬಿಕೆ

ಪ್ಯಾಟೆ ಮಂದಿ ಕಾಡಿಗೆ ಬಂದ್ರು ಅನ್ನೋ ಕರ್ಮಕಾಂಡ!!

ನಮ್ಮ ಮಾಧ್ಯಮಗಳ ಬಗ್ಗೆ ಈಗಾಗಲೇ ಸಂಪದದಲ್ಲಿ ಸಾಕಷ್ಟು ಚರ್ಚೆಗಳು ನಡೆದಿವೆ,ನಡೆಯುತ್ತಿವೆ. ಆದರೂ ಮತ್ತೆ ಈ ವಿಷಯವಾಗಿ ಬರೆಯಬೇಕು  ಎನಿಸಿ ಬರೆಯುತ್ತಿದ್ದೇನೆ.
ಸುವರ್ಣ ಚಾನೆಲ್ ನಲ್ಲಿ ಪ್ರಸಾರವಗುತ್ತಿರುವ "ಪ್ಯಾಟೆ ಮಂದಿ ಕಾಡಿಗೆ ಬಂದ್ರು" ಅನ್ನೋ ಕಾರ್ಯಕ್ರಮ ಎಲ್ಲರಿಗೂ ಗೊತ್ತಿದೆ.  ಅದರ ಬಗ್ಗೆ ತಾವೆಲ್ಲರೂ ಬಹಳಷ್ಟು ಮಾತಾಡಿದ್ದಿರಿ.

ಇವತ್ತು ಬಹುಶಃ ಅದರ ಮರು ಪ್ರಸರವಿತ್ತು ಅನ್ಸುತ್ತೆ.  ನನ್ನ ತಂಗಿ ನೋಡಿದ್ದಾಳೆ.  ತುಂಬಾ ಅಸಹ್ಯವಾಗಿ ಚಿತ್ರಿಸಿದ್ದಾರೆ. ಗಂಡು ಹೆಣ್ಣು ಎಂಬ ಭೇದವಿಲ್ಲದೆ ತುಂಡು ಬಟ್ಟೆಗಳಲ್ಲಿ ಎಲ್ಲರನ್ನು ಕೂರಿಸಿ Quiz  ನಡೆಸೋದು.

ಬೀದಿಗೆ ಬಂದ ವೈಮನಸ್ಯ

ರಾಜ್ಯಪಾಲರು, ಮುಖ್ಯಮಂತ್ರಿ ನಡುವಣ ವೈಮನಸ್ಯ ಬೀದಿಗೆ ಬಂದಿದೆ. ಇದು ರಾಜ್ಯಪಾಲರ ಅಧಿಕಾರ ಚಲಾವಣೆಯ “ರೆಕಾರ್ಡ್‌” ಆಗುತ್ತದೋ, ಇಲ್ಲಾ ಮುಖ್ಯಮಂತ್ರಿಗಳ ಅಧಿಕಾರ ವ್ಯಾಖ್ಯಾನದ “ರೆಕಾರ್ಡೇ” ಆಗುತ್ತದೋ ಎಂಬುದು ಕುತೂಹಲ. ಇದು ಟಿವಿ ಸೀರಿಯಲ್ ಕುತೂಹಲದಂತಾಗದೆ, ಗಂಭೀರಸ್ಥರನ್ನು ಪ್ರಮಾಣಿಕ ಚಿಂತನೆಗೆ ಹಚ್ಚಲಿ!


          “ಎಂಥದೋ ದೇವರಿಗೆ, ಇನ್ನೆಂಥದೋ ಪೂಜಾರಿ”ಯಂತೆ! ಆ ಹೊಲಸು ಮಾತಿನ ಗಾದೆಯಂತಿದೆ, ಈ ಸನ್ನಿವೇಶ. ಆದರೆ ನಮ್ಮ ಪ್ರಜಾಸತ್ತಾ ಪ್ರಹಸನದಲ್ಲಿ, ಆ “ದೇವರು”, ದೇವರಾಗೇ ಉಳಿದಿರುವುದಿಲ್ಲ; “ಪೂಜಾರೀ” ಪೂಜಾರಿಯಾಗೇ ಇರುವುದಿಲ್ಲ. ಸ್ಥಾನ ಅದಲು-ಬದಲಾಗುವುದೂ ಉಂಟು!