ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಗೂಗಲ್ ಸರ್ಚ್: ನಿರ್ಧಿಷ್ಟ ತಾಣಕ್ಕೆ ಸೀಮಿತಗೊಳಿಸುವ ವಿಧಾನ

ನೀವು ಯಾವುದೇ ಒಂದು ನಿರ್ಧಿಷ್ಟ ತಾಣದಲ್ಲಿ ವಿಷಯಗಳನ್ನು ಹುಡುಕಬೇಕಾಗಿರುತ್ತದೆ, ಆದರೆ ಆ ತಾಣದಲ್ಲಿ ಹುಡುಕುವುದಕ್ಕೆ ಯಾವುದೇ ಸೌಲಭ್ಯ ಇರುವುದಿಲ್ಲ. ಆಗ ನೀವು ಯಾವುದೇ ಸರ್ಚ್ ಎಂಜಿನ್‌‌ನಲ್ಲಿ ಆ ವಿಷಯವನ್ನು ಹುಡುಕಲು ಕೊಟ್ಟರೆ ಅದು, ಆ ವಿಷಯವಿರುವ ಎಲ್ಲಾ ತಾಣಗಳನ್ನೂ ತೋರಿಸುತ್ತದೆ. ಅಂತಹ ಸಂದರ್ಭದಲ್ಲಿ ನಿರ್ಧಿಷ್ಟ ತಾಣದಲ್ಲಿ ವಿಷಯಗಳನ್ನು ಹುಡುಕಲು ಗೂಗಲ್‌ನಲ್ಲಿ ಸಾಧ್ಯವಾಗುತ್ತದೆ. ಅದಕ್ಕಾಗಿ ಮೊದಲು ಗೂಗಲ್ ತಾಣಕ್ಕೆ ಹೋಗಬೇಕು. ನಂತರ ಸರ್ಚ್‌ಬಾಕ್ಸ್‌ನಲ್ಲಿ ಮೊದಲು "site:ವೆಬ್‌ಸೈಟ್ ವಿಳಾಸ {ಸ್ಪೇಸ್} ವಿಷಯ" ಈ ರೀತಿ ಕೊಟ್ಟು ನಂತರ ಸರ್ಚ್ ಕೊಡಬೇಕು. ಆಗ ನೀವು ಸೂಚಿಸಿದ ನಿರ್ಧಿಷ್ಟ ತಾಣದಿಂದ ಮಾತ್ರ ಫಲಿತಾಂಶಗಳನ್ನು ಗೂಗಲ್ ತೋರಿಸುತ್ತದೆ.

ಏಕೆ ಹೀಗೇಕೆ..

ಈ ಪ್ರಶ್ನೆ ಅನೇಕರಿಗೆ ಮೂಡಿದೆ..ಸುಮಾರು ಮೂರುವರುಷದ ಹಿಂದೆ ಅನುಕಂಪ ಆಧಾರಿತ ಮತಗಳ ಅಲೆಯಲಿ
ತೇಲಿ ದಡ ಸೇರಿ ಹಾಗೂ ಹೀಗೂ ಮಾಡಿ(ಇತಿಹಾಸ ಮರುಕಳಿಸುತ್ತಲೇ ಇದೆ..) ಅಧಿಕಾರದ ಗದ್ದುಗೆ ಏರಿದಾಗ ಜನ
ಆಸೆಯಿಂದ ಕಾದಿದ್ರು.ಉದ್ಧಾರ ಕುರ್ಚಿ ಏರಿದವರೇನೋ ಆದ್ರು ಆದ್ರೆ ಕುರ್ಚಿ ಮೇಲೆ ಕೂರಿಸಿದವರು ಕಂಗಾಲಾಗಿದ್ದಾರೆ.
ಇಲ್ಲಿ ಆಕ್ರೋಶವಿದೆ..ಹಾಗೆಯೇ ಆ ಅನುಕಂಪದ ಅಲೆ ನಿಧಾನವಾಗಿ ಕರಗುತ್ತಿದೆ. ನೆವಗಳು ಬೇಕಾದಷ್ಟಿರಬಹುದು...
೬೦ ವರ್ಷ ಆಳಿದ ಕಾಂಗ್ರೆಸ್ಸು, ಅದರ ರೀತಿ ನೀತಿಗಳು..ಮೊದಲಬಾರಿ ಅಧಿಕಾರ ದಕ್ಕಿದ್ದು ಅನುಭವ ಇಲ್ಲ ಇತ್ಯಾದಿ.
ಒಂದರೆಗಳಿಗೆ ಮನ್ನಿಸುವ. ಆದರೆ ಈ ಮೂರುವರ್ಷದಲ್ಲಿ ಬಿಜೆಪಿ ಮಾಡಿದ್ದೇನು..ಒಂದಾದರೂ ಸಾಧನೆಯನ್ನು ಹೆಮ್ಮೆಯಿಂದ ಬೊಟ್ಟು ಮಾಡಿ ತೋರುವಂತಿಲ್ಲ. ಮೂರು ವರ್ಷ ಸಾಕಾಗಿಲ್ಲವೇ ..ಅನ್ನ ಆಗಿದ್ದು ಒಂದಗಳು ಹಿಚುಕಿದರೆ
ಗೊತ್ತಾಗುತ್ತದೆ. ಈಗಾಗಲೇ ಅದೇನು ಬೇಯುತ್ತಿದೆ ಎಂದು ಎಲ್ಲ ತಿಳಿದಾಗಿದೆ. ಏನೂ ಇಲ್ಲದ ಶೂನ್ಯ ಒಂದೇ ಈ
ಮೂರುವರ್ಷದ ಸಾಧನೆ.

ಯಾಕೆ ಹೀಗೆ ಈ ಪ್ರಶ್ನೆಗೆ ಉತ್ತರ ಕೊಡುವನಾಯಕರಿಲ್ಲ. ಮುಖ್ಯ ಅಂದರೆ ತನಗೆ ದಕ್ಕಿದ ಅವಕಾಶ ಲಾಭ್ದಾಯಕ

ದೇವರು ನಮ್ಮನ್ನು ಕಾಪಾಡುತ್ತಾನೆಯಾ?

ಪ್ರಶ್ನೆ: ದೇವರು ನಮ್ಮನ್ನು ಕಾಪಾಡುತ್ತಾನೆ ಎ೦ದು ಗೊತ್ತಿದ್ದರೂ ನಮಗೆ ಭಯವಾಗುವುದೇಕೆ?
ಜೆ.ಕೃಷ್ಣಮೂರ್ತಿಯವರ ಉತ್ತರ:
ದೇವರು ಕಾಪಾಡುತ್ತಾನೆ ಎ೦ದು ನಿಮಗೆ ಹೇಳಿದ್ದನ್ನು ಕೇಳಿದ್ದೀರಿ ಅಷ್ಟೆ. ನಿಮ್ಮ ಅಪ್ಪ, ಅಮ್ಮ, ಅಣ್ಣ ಎಲ್ಲರೂ 'ದೇವರು ಕಾಪಾಡುತ್ತಾನೆ' ಎ೦ದು ಹೇಳಿದ್ದಾರೆ. ಅದೊ೦ದು ಐಡಿಯಾ, ಅದನ್ನು ನೀವು ಗಟ್ಟಿಯಾಗಿ ಹಿಡಿದಿದ್ದೀರಿ. ಆದರೂ ನಿಮ್ಮಲ್ಲಿ ಭಯವಿದೆ. ದೇವರು ಕಾಪಾಡುತ್ತಾನೆ ಎ೦ಬ ಐಡಿಯಾ, ಆಲೋಚನೆ, ಭಾವನೆ ಇದ್ದರೂ ಭಯ ಇದೆಯಲ್ಲ ಅದು ವಾಸ್ತವ. ನಿಮ್ಮ ಭಯವಿದೆಯಲ್ಲ, ಅದು ವಾಸ್ತವ. ದೇವರು ಕಾಪಾಡುತ್ತಾನೆ ಎ೦ಬುದು ಐಡಿಯಾ.

ಮತ್ತೆ ಕಲ್ಲಾದಳು ಅಹಲ್ಯೆ!

ಇದು ಯಾವ ರಾಮಾಯಣದಲ್ಲೂ ಇಲ್ಲ. ಪರಿಚಯಸ್ಥರು ತಮಿಳಿನ ಪುಸ್ತಕವೊಂದರಲಿ ಓದಿದ್ದನ್ನು ಹೇಳಿದರು ‘ಮೀಡುಂ ಕಲ್ಲಾನಾಳ್ (ಮತ್ತೊಮ್ಮೆ ಕಲ್ಲಾದಳು ಅಹಲ್ಯೆ) ಅದರ ಕನ್ನಡಾನುವಾದ ಮಾತ್ರ.

 

ಗಂಗೆಯ ತಟದಲ್ಲಿ

ಪಾಪ ತೊಳೆವ ಗಂಗೆಯ ತಟದಲ್ಲಿ

ಪುಣ್ಯವ ಹುಡುಕುತ್ತಾ ಹೊರಟ ಯಾತ್ರಿಕನಿಗೆ 

ಇದುವರೆಗೆ ಕಂಡಿದ್ದು- ಕಾಣದ್ದು, ಕಾಣಬಹುದಾದದ್ದು

ಏನಿರಬಹುದು ಎಂಬ ಕುತೂಹಲ. 

ಗಂಗೆ ಎಲ್ಲರ ಪಾಪ ತೊಳೆಯುವುದೇ ಆದಲ್ಲಿ

ಕಾಶಿಯಲ್ಲಿ ಪಾಪಿಗಳೇ ಇಲ್ಲವೇ?

ನನ್ನ ಸಹಜ ವಿಕ್ಷಿಪ್ತ ಪ್ರಶ್ನೆ.

ಅತ್ತೆಯನ್ನು ತೊರೆದು ಓಡಿಹೋದ ಮಾವ

ಭಿಕ್ಷುಕನಾಗಿಯೋ ಸಂತನಾಗಿಯೋ ದೊರೆಯಬಹುದೆಂಬ

ಭಾವುಕ/ ಭ್ರಾಮಕ ಕವಿ ಮನಸು.

ಸೈಕಲ್ಲು ರಿಕ್ಷಾ ತುಳಿಯುವ  ಭೈಯ್ಯಾಗಳು

ಅದು ಹೇಗೆ ಸಂತಸದಿಂದ ಇದ್ದಾರೆಂಬ ಆಶ್ಚರ್ಯ.

ಬದುಕಿನ ಇಳಿಗಾಲದಲ್ಲಿ ಕಾಶೀಯಾತ್ರೆಗೆ ಬಂದ

ಹಣ್ಣು ಹಣ್ಣು ಮುದುಕಿಯಲ್ಲಿ

ಸಾವಿಗಾಗಿ ಕಾಯ್ದಿರುವ ಶಬರಿಯ ಕಾಣುವ ಹಂಬಲ.


ಪಾಪ ಪುಣ್ಯಗಳ ಕೊಡಗಳನ್ನು ಸದಾ


ತುಂಬಿಸುತ್ತಲೇ ಇರುವ ನಾನು.

ನನ್ನ ರುಕ್ಮಿಣಿ( ರೊಕ್ಕಾ + Money), ಮತ್ತು ಸತ್ಯ ಭಾಮೆ ....

ಸದಾ ಟ್ರ್ಯಾಫಿಕ್ ಫುಲ್ಲ್ ಇರೋ ನನ್ನ ಬಾಯಿಗೆ ರೆಡ್ ಸಿಗ್ನಲ್ ಹಾಕಿದ್ದಳು ನನ್ನ ಹೆಂಡತಿ. ಸಿಗ್ನಲ್ ಇಲ್ಲದೇ ಸರಾಸ್‌ಗಾಟವಾಗಿ ತಿಂಡಿ-ತಿನಿಸುಗಳು ಹೋಗುವ ನನ್ನ ಬಾಯಿಗೆ ಬೀಗ ಬಿದ್ದಿತ್ತು. ಏನೇ? ಇವತ್ತು ಉಪವಾಸ ಎಂದೆ. ದೇವರಿಗೆ ಪೂಜೆ ಆದ ಮೇಲೆನೇ ತಿಂಡಿ , ಊಟ ಎಲ್ಲಾ ಎಂದಳು. ಐದು ವರ್ಷದಲ್ಲಿ ಇರಲಾರದ ನೀತಿ ನಿಯಮ ಏನೇ ಇದು ಕರ್ಮ ಎಂದೆ. ನೀವು ಈ ನೀತಿ ನಿಯಮ ಮಾಡಲಾರದಕ್ಕೆ ನಿಮಗೆ ಹೀಗೆ ಆರೋಗ್ಯ ಸರಿ ಇರುವದಿಲ್ಲ ಎಂದಳು. ನಾನು ಏನು ತಿನ್ನದೇ ಇದ್ದರೆ ಆರೋಗ್ಯದ ಗತಿ ಏನು ಎಂದೆ. ಎಲ್ಲಾ ನಿಮ್ಮ ಆರೋಗ್ಯದ ದೃಷ್ಟಿಯಿಂದನೆ ಮಾಡುತ್ತಾ ಇರುವದು ಎಂದು ದಬಾಯಿಸಿದಳು. ಇವತ್ತು ಬೇರೆ ಶನಿವಾರ ಹೇಗಾದರೂ ಮಾಡಿ ಆಫೀಸ್ ಗೆ ಹೋಗಿಬಿಟ್ಟರೆ ಸಾಕು ತಾನೇ ಎಲ್ಲ ಸಿಗುತ್ತೆ ಎಂದು ಯೋಚಿಸಿ, ಇವತ್ತು ಸ್ವಲ್ಪ ಕೆಲಸ ಇದೆ ಆಫೀಸ್ ಹೋಗಬೇಕು ಎಂದೆ. ಸುಮ್ಮನೇ ರೈಲು ಬಿಡಬೇಡಿ ಎಂದಳು. ಹಳೆಯ ಒಂದು ಮಿಂಚಂಚೆ ತಾರೀಖು ಬದಲಿಸಿ ಅವಳಿಗೆ ತೋರಿಸಿದೆ. ಆಯಿತು ಹೋಗಿ ಬನ್ನಿ, ಆದರೆ ಆಫೀಸ್ ನಲ್ಲಿ ಏನು ತಿನ್ನ ಬೇಡಿ ಎಂದಳು. ಆಯಿತು ಎಂದು ಖುಶಿಯಿಂದ ನನ್ನ ಗಾಡಿ ಸ್ಟಾರ್ಟ್ ಮಾಡಿ ಆಫೀಸ್ ಹೋದೆ.

ಬಿನ್ ಲಾಡೆನ್ ವಿಶೇಷ ಸಂದರ್ಸನ

ನೋಡ್ರೀ ಕೋಮಲ್, ನಮ್ಮ ಸಿದ್ದೇಸ ಟಿವಿ ದಿನದಿಂದ ದಿನಕ್ಕೆ ಜನಪ್ರಿಯತೆ ಪಡೆಯುತ್ತಿದೆ. ಟಿಆರ್್ಪಿ ಸಾನೇ ಜಾಸ್ತಿ ಆಗೈತೆ. ಅದಕ್ಕೆ ಈ ಸಾರಿ ಲಾಡೆನ್ ಇಂಟರ್ ವ್ಯೂ ಮಾಡಬೇಕ್ರಿ ಅಂದ್ರು ನಮ್ಮ ಮಾನೇಜರ್. ಯಾರು ಸಾ ಮಂಡಕ್ಕಿ ಮಾರ್ತಾನಲ್ಲಾ ಅವನ್ನಾ ಅಂದೆ. ಅವನು ರಹಮತಿ ಕಣ್ರೀ,  ಮತ್ತೆ ಹಳೇ ಪೇಪರ್, ಖಾಲಿ ಬಾಟ್ಲಿ, ಸೀಸ ಮಾರ್ತಾನಾ ಅವನಾ, ಅವನು ಜನ್ನತಿ ಕಣ್ರಿ, ಸರ್ ಇವರ ಹೆಸರುಗಳು ನಿಮಗೆ ಹೆಂಗೆ ಗೊತ್ತು. ನನ್ನ ಮೊದಲು ಮತ್ತು ಎರಡನೇ ಹೆಂಡರನ್ನ ಹೊಡಕೊಂಡು ಹೋಗಿದ್ದು ಇವರೇ ಕಣ್ರೀ ಕೋಮಲ್. ಅವನಲ್ರಿ, ಭಯೋತ್ಪಾದಕ ಬಿನ್ ಲಾಡೆನ್ ಕಣ್ರಿ. ಯಾವಾಗ ಬತ್ತಾನೆ ಸರ್. ಅವನು ಹೋದ ತಿಂಗಳೇ ಆಫ್ಘಾನಿಸ್ತಾನ್ ಇಂದ ಒಂಟೇ ಮೇಲೆ ಹೊಂಟವ್ನಂತೆ. ಒಂಟೆಗೆ ಫುಡ್ ಸಿಕ್ಕಿಲ್ಲ ಅಂತಾ ಲೇಟ್ ಆಗೈತೆ.

ಸೂಪರ್ ಫಾಸ್ಟ್ ಮಕ್ಕಳು

ಈಗಿನ ಕಾಲದ ಮಕ್ಕಳು ಸೂಪರ್ ಫಾಸ್ಟ್ ಯಾವಾಗಲು. ಅವರ ವಯಸ್ಸಿನಲ್ಲಿ ನಾವು ಹೇಗಿದ್ದೆವು? ಇವರು ಈಗ ಹೇಗೆ ಬೆಳಿತಿದ್ದಾರೆ ಅಂತ ಕೆಲವೊಮ್ಮೆ ಅನಿಸೋದು ಉಂಟು. ಹಾಗೆ ಹೆದರಿಕೆ ಆಗೋದು ಉಂಟು. ಅದಕ್ಕೆ ಕಾರಣ ನನ್ನ ಅಕ್ಕನ ಮಕ್ಕಳು. ಮೊನ್ನೆ ನನ್ನ ಅಕ್ಕನ ಮಗ (೫ ವರ್ಷ) ನನ್ನ ತಂಗಿ ಸಂಜೆ ಮನೆ ಬಾಗಿಲು ಗುಡಿಸುತ್ತಿದ್ದಾಗ ಓಡಿ ಬಂದು ಕೇಳಿದನಂತೆ ಏನು ಕೇಳಿದ ಗೊತ್ತೇ? ಅವನು ನಮನ್ನು ಅಕ್ಕ ಅಂತಲೇ ಕರೆಯೋದು. ಹೌದು ಅಕ್ಕ ನಂಗೆ ಒಂದು ಡೌಟ್ ಹನಿಮೂನ್ಗೆ ಸ್ಪೆಲಿಂಗ್ ಏನಕ್ಕ ನನ್ನ ಫ್ರೆಂಡ್ಸ್ ಕೇಳಿದ್ರು ಅಂತ ಕೇಳಿದನಂತೆ. ಅದನ್ನು ಕೇಳಿದ ನನ್ನ ತಂಗಿ ಸುಸ್ತು.