ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಒಡೆಯರು ಯಾರಿರಬಹುದು?

ಮುಂಜಾನೆದ್ದು, ಮನೆಹೊರಗಿನ ಕಾಂಪೌಂಡ್ ಕಟ್ಟೆಯಲ್ಲಿ ಕುಳಿತು ಪೇಪರ್ ಓದುತ್ತಿದ್ದೆ. ( ಪಕ್ಕದ ಮನೆಯವರ ಪೇಪರ್ ನಮ್ಮ ಮನೆಯೊಳಗೆ ತೆಗೆದುಕೊಂಡು ಹೋಗಿ ಓದುವುದು ಸಭ್ಯರ ಲಕ್ಷಣವಲ್ಲ..ಅದಕ್ಕೆ)


ಪೇಪರ್ನಲ್ಲಿ ಪೇಟೆ ಧಾರಣೆ ನೋಡುವುದು ನನ್ನ ಈಗಿನ ಹವ್ಯಾಸ. ಯಾವ ಏರಿಯಾದ MLA ರೇಟು ಎಷ್ಟು ಏರಿತು/ಎಷ್ಟಕ್ಕೆ ಇಳಿಯಿತು... ತುಂಬಾ ಕೆಳಗೆ ಇಳಿದರೆ ಒಂದು ೩-೪ ಶೇರ್(ಕೆಲವರು ಕತ್ತೆ, ಗುಳ್ಳೆನರಿ..ಅಂತಾರೆ) ಖರೀದಿ ಮಾಡಿ ಇಟ್ಟುಕೊಳ್ಳುವುದು, ಮುಂದೆ(ಕೋರ್ಟು ಕೇಸೆಲ್ಲಾ ಮುಗಿದಾಗ) ಒಳ್ಳೆ ರೇಟು ಬಂದರೆ ಮಾರುವುದು ಅಂತ ಇದ್ದೇನೆ.


ಆಗಲೇ ಒಂದು ಕಾಗೆ ಹತ್ತಿರ ಬಂದು "ಕಾವ್ ಕಾವ್" ಎಂದಿತು. ಓಡಿಸಿದೆ.


"ಒಡೆಯರು ಕರೀತಿದ್ದಾರೆ. ಬೇಗ.." "ಹಾಳಾದವ, ನಾನು ಪೇಪರ್ ಓದಿ ಮುಗಿಸುವುದರೊಳಗೆ ಎದ್ದನಾ" ಎಂದಾಲೋಚಿಸಿ ಪೇಪರ್ ಮಡಚಿ ಪಕ್ಕದ ಮನೆಯ ಕೆಲಸದವನಿಗೆ ಕೊಡಲು ಹೊರಟರೆ....... ಅಲ್ಲಿ ಯಾರೂ ಇಲ್ಲಾ!!


ಪುನಃ - "ಒಡೆಯರು ಕರೀತಿದ್ದಾರೆ. ಬೇಗ ಬನ್ನಿ." !!

ನಮ್ಮ ಮುಖವನ್ನು ಚೇತೋಹಾರಿಯಾಗಿಸುವ ಉಪಾಯ

 

ಧಾವಂತದ ಈ ಯುಗದಲ್ಲಿ ಎಲ್ಲದರಲ್ಲೂ ಸ್ಪರ್ದೆಯೇ!

 

ಓಡುವುದರಲ್ಲಿ,  ಹಿಂದೆ ಬೀಳಿಸುವುದರಲ್ಲಿ,

 

ನನ್ನ ನೋವು ನನಗೆ...

ಮತ್ತದೇ ಕಣ್ಣಮಿ೦ಚು


ಎದುರಿಗೆ ಹಾದುಹೋಯಿತಲ್ಲೋ..


ಸುಪ್ತ ಮನಸಿನ ಗಾಜಿಗೆ


ಕಲ್ಲು ಬಡಿಯಿತಲ್ಲೋ..


ಕಳೆದ ದಿನಗಳ ಮರೆಯಲು


ಹೆಣಗಾಡುತ್ತಿದ್ದೆ ನಾನು,


ಘೋರವಾಗಿ ಕಾಡುತಿರುವ


ಮಧುರ ನೆನಪು ನೀನು.


ಮರೆತು ಬಿಡುವೆ ಒ೦ದು ದಿನ


ಎ೦ದು ಇರುತಿರಲು,

ಮಳೆಯಲ್ಲಿ ಕಣ್ಣೀರು ಕಾಣಿಸುವುದಿಲ್ಲವೆಂಬ ನಂಬಿಕೆ

ಮನದ ಮುಗಿಲಿನ ಕಾರ್ಮೋಡ ಸರಿಯಲು..


ಆಗಸದಲ್ಲಿ ಮೂಡಬೇಕು ಅವೇ ಕಾರ್ಮೋಡಗಳು... 


ನಿನ್ನ ನೋವು ಕಂಡ ಬಾನು ಕೂಡ...


ಸುರಿಸಿತು ತನ್ನೊಡಲಿಂದ ಕಣ್ಣೀರ ಧಾರೆ ಭೋರ್ಗರೆಯುತ..


ಯುವ ಪ್ರೇಮಿಗಳಿಗೆ ನೀನಾದೆ ಪನ್ನೀರ ಸಿಂಚನ...


ಭಗ್ನ ಪ್ರೇಮಿಗೆ ಹೇಳುವೆ ನೀ ತಣ್ಣನೆ ಸಾಂತ್ವಾನ...


ನೀ ಬಂದಾಗಲೆಲ್ಲ ತನ್ನ ಪ್ರೇಮಿಯ ನೆನೆಯುವ ಪ್ರೇಮಿ


ಮಳೆಯ ನೀರ ಜೊತೆ ಕಣ್ಣೀರ ಸುರಿಸುವ...


ಏಕೆಂದರೆ ಮಳೆಯಲ್ಲಿ ಕಣ್ಣೀರು ಕಾಣಿಸುವುದಿಲ್ಲವೆಂಬ ನಂಬಿಕೆ


ತುಂತುರು ಹನಿಯಾಗಿ, ಸ್ವಾತಿ ಮುತ್ತಾಗಿ, ಕುಂಭದ್ರೋಣವಾಗಿ ಬಂದೆ ನೀನು...


ಎಲ್ಲವನ್ನು ಕೊಚ್ಚಿಕೊಂಡು ಹೋಗುವ ನೀನು...

ಉಡುಗೊರೆ

ಕಿಂಡರ್ ಗಾರ್ಡನ್ ನ ಕೊನೆಯ ದಿನದಂದು ಎಲ್ಲಾ ಪುಟಾಣಿಗಳು,ಮೇಷ್ಟ್ರಿ ಗೆ ತಮ್ಮ ತಮ್ಮ ಮಟ್ಟಿನ ಉಡುಗೊರೆಯನ್ನು ತಂದಿದ್ದರು. ಮೊದಲಿಗೆ ಹೂ ಮಾರಾಟಗಾರನ ಮಗಳು ತಂದ ಉಡುಗೊರೆಯನ್ನು ಸ್ವೀಕರಿಸುತ್ತಾ ಮೇಷ್ಟ್ರು  "ನನಗೆ ಗೊತ್ತು ನನಗಾಗಿ ನೀನು ನನ್ನ ಪ್ರೀತಿಯ ಬಣ್ಣದ ಗುಲಾಬಿ ಹೂ ಗುಚ್ಛ ತಂದಿರುವೆ "ಅದನ್ನು ಕೇಳುತ್ತ ಪುಟ್ಟಿ "ಹುಂ ಮೇಷ್ಟ್ರೇ ..."

ಮುಂದಿನ ಸರದಿ ಸಿಹಿ ತಿಂಡಿ ಮಾರಾಟಗಾರನ ಮಗನದ್ದು , ಕೈಯಲ್ಲಿದ್ದ ಪುಟ್ಟ ಪೆಟ್ಟಿಗೆ ಮೇಷ್ಟ್ರ ಕೈಗೆ ನೀಡುತ್ತ ಇರಬೇಕಾದರೆ ಮೇಷ್ಟ್ರು  "ನನಗಾಗಿ ನೀನು ನನ್ನ ಇಷ್ಟದ ಸಿಹಿ ತಿಂಡಿಯನ್ನೇ ಕಟ್ಟಿ ತಂದಿರುವೆ , ಅಲ್ಲವ ..?"ಅದಕ್ಕೆ ಪುಟ್ಟ "ಹುಂ ಮೇಷ್ಟ್ರೇ ..."

ಬದಲಾಗುತ್ತಿರುವ ಮಲೆನಾಡಿನ ಅಡಿಕೆ ಕೊಯ್ಲಿನ ಚಿತ್ರಣ

      ಮಲೆನಾಡಿನ   ಬೆಳೆಗಳಲ್ಲಿ ಅಡಿಕೆ ಪ್ರಮುಖ ಸ್ಥಾನ ಪಡೆದುಕೊಂಡಿದೆ.  ಈಗಾಗಲೇ  ಬಹುಶ:  ಮಲೆನಾಡಿನ ಅಡಿಕೆ ಬೆಳೆಗಾರರು ಅಡಿಕೆ ಕೊಯ್ಲಿನ ತಯಾರಿಯಲ್ಲಿರ ಬಹುದು ಅಥವಾ ಹೆಚ್ಚಿನವರು ಪ್ರಾರಂಭಿಸಿರಲೂ ಬಹುದು. ನವರಾತ್ರಿ ಕಳೆದು ದೀಪವಾಳಿ ಕಳೆಯುವುದರ ಒಳಗೆ ಈ ಅಡಿಕೆ ಕೊಯ್ಲಿನ ಚಟುವಟಿಕೆಗಳು ಆರಂಭಗೊಳುತ್ತದೆ.