ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

೨೮ ಕೋಟಿ ೬೦ ಲಕ್ಷ ದ ಪೇಂಟಿಂಗ್

ಹೌದು ಕಳೆದ ವರ್ಷ " ಓರಿಎಂಟಲ್ ಆರ್ಟ್ ಲಂಡನ್ " ನಲ್ಲಿ ೨೮ ಕೋಟಿ ೬೦ ಲಕ್ಷ ರೂಪಾಯಿ ಬೆಲೆ ಕಂಡ ಅಪರೂಪದ ಪೇಂಟಿಂಗ್ . by Gustav Bauernfeind , titled " The Gate of the Great Umayyed Mosque, Damascus. ಈ ಚಿತ್ರದ ಪ್ರಿಂಟ್ ಕಾಪಿಎನ್ನು ಗಲ್ಫ್ ನ್ಯೂಸ್ ನಿಂದ ಸ್ಕ್ಯಾನ್ ಮಾಡಿದ್ದು .

ಕೇದಗೆಯ ಕಂಪು

ದೂರದ ನೆಲೆಯಿಹ ಅಗ್ಗಳ*ಗೆ ರಾಯಸ**ಕೆಂದಿವೆ ಹಿರಿಮೆಗಳು
ಹರಡಿದ ಕಂಪಿನ ಜಾಡಿನಲೆ ಕೇದಗೆಯ ಸಂದಾವು ಜೇನ್ದುಂಬಿಗಳು

ಸಂಸ್ಕೃತ ಮೂಲ:

ಗುಣಾಃ ಕರೋತಿ ದೂತತ್ವಂ ದೂರೇsಪಿ ವಸತಾಂ ಸತಾಂ|
ಕೇತಕೀಗಂಧಮಾಘ್ರಾಯ ಸ್ವಯಮಾಯಾಂತಿ ಷಟ್ಪದಾಃ ||

*ಅಗ್ಗಳ =ಉತ್ತಮ,ಶ್ರೇಷ್ಠ
**ರಾಯಸ = ದೂತ, ಹರಿಕಾರ, ಓಲೆಕಾರ

-ಹಂಸಾನಂದಿ

ಹೃದಯದೊಂದಿಗೆ ಒಂದು ಸಲ್ಲಾಪ...

ನಾನು: ಏ ಹೃದಯಾ... ಏನು ಯೋಚನೆ ಮಾಡ್ತಾ ಇದ್ದೀಯಾ...?

ಹೃದಯ: ಹಾಗೇ ಸುಮ್ಮನೆ ಇದ್ದೇನೆ.

ನಾನು: ಇಲ್ಲಾ ಏನೋ ಯೋಚನೆ ಮಾಡುವಂತಿದೆ...ನನ್ನಲ್ಲಿ ಹೇಳಲಾರೆಯಾ?

ಹೃದಯ: ಏನಿಲ್ಲಾ ಬಿಡು...

ನಾನು: ಹೇಳೇ...

ಹೃದಯ: ಹೂಂ. ನೋಡು ಈ ಲಾಲ್್ಬಾಗ್ ಎಷ್ಟು ಸುಂದರವಾಗಿದೆಯಲ್ಲಾ..

ನಾನು: ಹೌದು

ಹೃದಯ: ಎಷ್ಟೊಂದು ಸಸ್ಯ, ಹೂಗಳು ಮತ್ತೆ..

ನಾನು: ಮತ್ತೆ (?)

ಹೃದಯ: ಪ್ರೇಮಿಗಳು!

ನಾನು: ಹೂಂ..

ಸವಾರೀನೋ ಪಯಣವೋ !

ಮೇ ೨೧. ದಿನದ ವಿಶೇಷ ಏನ್ ಗೊತ್ತಾ ? ರಾಜೀವ್ ಗಾಂಧಿ ಹತ್ಯೆ ನಡೆದಿತ್ತು ಅಂತೀರಾ ನೀವು ! ಆದ್ರೆ ನಾನ್ ಹೇಳ್ತೇನೆ ಇದೇ ತಾರೀಕಿನಂದು ನಾನು ಭೂಮಿಗೆ ಬಂದ್ ಆಕಾಶ ನೋಡಿದ್ದು ಅಂತ. ಈ ತಾರೀಕಿನ್ನು ಈ ವರ್ಷ ಅವಿಸ್ಮರಣೀಯ ಮಾಡ್ಬೇಕು ಅಂದ್ಕೊಂಡಿದ್ದೆ. ಅದಕ್ಕೆ ಕಾಲವೂ ಕೂಡಿ ಬಂದಿತ್ತು. ಎಲೆಕ್ಷನ್ ಅನ್ನೋ ಕಾರಣಕ್ಕೆ ಎರಡೂವರೆ ತಿಂಗ್ಳಿಂದ ಊರಿಗೆ ಹೋಗಿರ್‍ಲಿಲ್ಲ. ಐದ್ ದಿನ ರಜೆ ಹಾಕಿ ಎಲ್ಲಾದ್ರೂ ಹೋಗೋಣ ಅಂತಿದ್ದೆ. ಚಾನೆಲ್ ಹಿರಿಯರಿಂದ ಮೇ ೨೦ ರಂದು ಅದಕ್ಕೆ ಸಮ್ಮತಿ ಕೂಡಾ ಸಿಕ್ಕಿತು.

ಮೇ ೨೧ ೨೦೦೯

ಬೆಳಗ್ಗೆ ೬ ಗಂಟೆಗೆ ಎಚ್ಚರಾಯ್ತು. ಬೆಳಗ್ಗೆ ಬೆಳಗ್ಗೆ ಮೊಬೈಲ್‌ನಲ್ಲಿ ಎಸ್ಸೆಮ್ಮೆಸ್ ಕುಣಿದಾಡ್ತಾ ಇತ್ತು. ಏನು ಅಂತ ನೋಡಿದ್ರೆ ! ಇನ್ನಾದ್ರೂ ಹೊರಗೆ ಬಂದ್ ನೋಡು... ಸೂರ್ಯ ಆಗ್ಲೇ ಹುಟ್ಟಿದ್ದಾನೆ ಅಂತ ! ಹಾಗೆ ಎದ್ದು, ನಿತ್ಯ ಕರ್ಮ ಮುಗಿಸಿ ಹೊರಡೋಣ ಅಂತ ಯೋಚಿಸ್ತಿರೋವಾಗ ವಾರ್ತಾವಾಚಕಿಯೊಬ್ರು ಕಾಲ್ ಮಾಡಿ ಶುಭಾಶಯ ಕೋರಿದ್ರು... ಅಬ್ಬಾ ! ಇನ್ನಾದ್ರೂ ಹೊರಡೋಣ ತಮ್ಮನ್ ಜೊತೆಗೆ ಇಂದಾದ್ರೂ ನಾಸ್ಟಾ ಮಾಡೋಣ ಅಂತ ಅಂದ್ಕೋತಿದ್ದೆ. ಅವನಿಗೆ ಎಸ್‌ಎಂಎಸ್ ಕೂಡಾ ಮಾಡಿದ್ದಾಗಿತ್ತು. ಇನ್ನಿಬ್ರು ಹಿತೈಷಿಗಳೂ ಕಾಲ್ ಮಾಡಿ ವಿಷ್ ಮಾಡಿದ್ರು.ಅಷ್ಟರಲ್ಲೇ ಗೆಳೆಯ ಸುನಿಲ್ ಫೋನ್ ಮಾಡಿ ವಿಷ್ ಮಾಡಿದ. ಹಾಗೆ ಅವನನ್ನ ಮನೆಗೆ ಆಹ್ವಾನಿಸಿದೆ. ಇದೆಯಲ್ಲಾ ಪುಳಿಯೋಗರೆ ಮಿಕ್ಸ್. ಅದನ್ನ ಅನ್ನಕ್ಕೆ ಕಲಸಿ ತಿಂದು ಹೊರಡೋಣ ಅನ್ನೋವಾಗ ಗಂಟೆ ಹನ್ನೆರಡು. ಇಲ್ಲಿಂದಲೇ ಶುರು.. ಅದನ್ನ ಪಯಣ ಅಂತ ಹೇಳ್ಬೇಕೋ ಅಥವಾ ಸವಾರಿ ಅಂತಾನೋ !

ದಿನಕ್ಕೊಂದು ಮಾಹಿತಿ (ವಿಶ್ವದ ಅತ್ಯಂತ ದೊಡ್ಡ ಬರ್ಗರ್)

ಸುನಿಲ್ ಅಣ್ಣ ತಿನ್ನೋಕೆ ಎನ್ನಾದ್ರು ಕೊಡಿ , ಕೊಡಿ ಅಂತಿದ್ರು .ಅದಕ್ಕೆ ಇದನ್ನ ತಯಾರಿಸಿದ್ದೇನೆ .ಸಂಪದಿಗರೆಲ್ಲರು ಕೂತು ತಿನ್ನಿ ಓಕೆ . :D :D

 

ನಾನಿನ್ನೆಂದೂ ಕವಿತೆಗಳ ಬರೆಯುವುದಿಲ್ಲ!!!

ಸಖೀ,

ಕೊನೆಯ ಬಾರಿಗೆ ನೀನು ಬಾ ಒಮ್ಮೆ ಇಲ್ಲಿ
ನಾ ಹೇಳುವುದನೆಲ್ಲಾ ಕಿವಿಗೊಟ್ಟು ಕೇಳಿಲ್ಲಿ

ನಾನಿನ್ನೆಂದೂ ಕವಿತೆಗಳ ಬರೆಯುವುದಿಲ್ಲ
ನಿನ್ನನೆಂದೂ ಬಾಯ್ಬಿಟ್ಟು ಕರೆಯುವುದಿಲ್ಲ

ನನಗೆ ಸಂತಸವಾದರೆ ನನಗೆ ನಾನೇ ನಗುತ್ತೇನೆ
ಅಳಬೇಕೆಂದಾಗ ಮನಸಾರೆ ಅತ್ತುಬಿಡುತ್ತೇನೆ

ದುಗುಡ ದುಮ್ಮಾನಗಳನ್ನೆಲ್ಲಾ ಬಚ್ಚಿಟ್ಟುಕೊಳ್ಳುತ್ತೇನೆ

ಕನಸು - ನನಸು

ಕನಸಿನಲಿ ಬಂದವಳೇ
ಕಂಗೆಡಿಸಿ ಹೋದವಳೇ
ಕಾಣದೆ ಹೀಗೇಕೆ
ಕೊಲ್ಲುತಿರುವೆ

ಕನಸಿನಲಿ ಬಂದವಳು
ನನಸಿನಲಿ ಬರಬಹುದೆಂದು
ಕನಸು ಕಾಣುತ
ನಾನು ಕಾಯುತಿರುವೆ

ನಿನ್ನ ಕಣ್ಣಿನ ಕುಡಿನೋಟ
ಕೊಲ್ಲುತಿತಿದೆ ನನ್ನನು
ಬಂದೂ ಬಾರದೆ
ನೀ ಹೋದೆ ಏಕೆ ?
ನಿನ್ನ ಕಣ್ಣಿನ ಮಿಂಚು
ಮಿನುಗುತಿದೆ ಅನವರತ
ನನ್ನ ಕನ್ನಂಚಿನೆದುರಲ್ಲೇ
ಕಾಯುತಿರುವೆ ನಾ
ಅದರ ಬೆಳಕಲ್ಲೇ .
*********************

ಈಗ ...........

ಬೆಳದಿಂಗಳ ಬೆಳಕಿತ್ತ
ಚಂದಿರನ ಹೊಳಪಿತ್ತ
ಸಂಪಿಗೆ ಹೂವಿನ ಹೊಸತನ
ನಿನ್ನ ನಗುವಿನಲಿತ್ತ .

ಕೋಗಿಲೆಯ ದನಿಯಂಗ
ಕಂಠ ಸಿರಿ ನಿನ್ನೂಳಿತ್ತ
ನವಿಲ ನಡುಗೆಯಿತ್ತ
ಸವಿಜೇನ ಮೆಲುವಂತ
ಮುತ್ತಿನ ಮೊಡಿಯಿತ್ತ.
ಈಗ ...........
*********************
ಎಮ್.ಡಿ.ಎನ್.ಪ್ರಭಾಕರ್
******************