ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ವಸಂತವೆಲೇ ನೀ ಗೆಳತಿ

ವಸಂತವೆಲೇ ನೀ ಗೆಳತಿ
ನನ್ನ ಬರಡಾದ ಜೀವನಕೆ.
ಗಂಗೆಯ ಶೀತಲದ ಸುಳಿಗಾಳಿ
ನಿನ್ನ ಈ ನೆನಪಿನಹಂದರವು.
ಸಾವಿರ ನೋವುಗಳ ಬದಿಗೊತ್ತಿ
ಸುಖಿಸುವ ಒಲವ ಬಳ್ಳಿಗಳು
ನಿನ್ನ ನೆನೆಪುಗಳು.
ಸಾವಿರ ಹೂವುಗಳ ಸೌಂದರ್ಯ ಸಮವೇನೆ?
ನಿನ್ನ ಕುಡಿನೋಟದ ಮುಂದೆ.
ಹಿತವೆನಿಪ ಗಾಳಿಗೆ ಬಳ್ಳಿ ತಾ ಬಳುಕುವಂತೆ
ನಿನ್ನ ಈ ನಡೆದಾಟ.
ಹುಚ್ಚು ಹಿಡುಸುವ ಪರಿಯು
ನಿನ್ನ ಈ ಮುಗುಳ್ನಗೆಯು.

"ದೈವಮ್ ಮಾನುಷ ರೂಪೇಣಾ" ಇದು ನಿಜಾನ? ನನ್ನೊಂದು ಅನುಭವ..

ವೃತ್ತಿ ಜೀವನದ ಏರು ಮಜಲುಗಳೆಂಬ ಬಿಸಿಲ್ಗುದುರೆಯನ್ನರಸಿ ಅಲೆದಾಡುತ್ತಾ ಹೈದರಾಬಾದ್ ನಗರದವರೆಗೆ ಬಂದಿದ್ದ ದಿನಗಳವು.
ಅದೊಂದು ದಿನ ಎಂದಿನಂತೆ ಮಿಂಚಂಚೆಯ ಬಾಗಿಲನ್ನು ತೆರೆದಾಗ ಕಂಡಿದ್ದು, "ನಿಮ್ಮನ್ನು ನೇರ ಸಂದರ್ಶನಗೋಸುಗ 'ನವಿ ಮುಂಬೈನ ಖರ್ಗರ್ ನೋಡ್'ನಲ್ಲಿನ ನಮ್ಮ ಪ್ರಧಾನ ಕಚೇರಿಗೆ ಆಹ್ವಾನಿಸುತ್ತಿದ್ದೇವೆ" ಎಂಬ ಸೀಮೆನ್ಸ್ ಕಂಪನಿಯ ಮಾನವ ಸಂಪನ್ಮೂಲ ಘಟಕದ ಮುಖ್ಯಸ್ಥರ ದಪ್ಪಕ್ಷರದ ಸಾಲುಗಳು. ವಾರದ ಹಿಂದೆಯಷ್ಟೇ ದೂರವಾಣಿಯ ಮುಖಾಂತರವೇ ಕಿರು ಸಂದರ್ಶನವನ್ನ ಸಮರ್ಥವಾಗಿ ಎದುರಿಸಿದ್ದು ಪೂರಕವೆಂಬಂತೆ ಲಹರಿಯೋಪಾದಿಯಾಗಿ ನನ್ನ ಮನದಲ್ಲಿ ಹರಿದಾಡತೊಡಗಿತು.
ತತ್ ಕ್ಷಣವೇ ಮುಂಬೈನ ಸೀಮೆನ್ಸ್ ಕಚೇರಿಗೆ ಫೋನಾಯಿಸಿ ದಿನಾಂಕ, ಸಮಯ ಮತ್ತು ಸ್ಥಳದ ಬಗ್ಗೆ ಹೆಚ್ಚಿನ ವಿವರಗಳನ್ನ ಕಲೆ ಹಾಕಿದೆ. ನಿಗದಿತ ದಿನಕ್ಕೆ ಕೇವಲ ಮೂರು ದಿವಸಗಳು ಬಾಕಿಯಿದ್ದವು. ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದ ಕಂಪನಿಯ ಟ್ರಾವೆಲ್ ಡೆಸ್ಕ್ ಕಡೆಯಿಂದ ಹೈದರಾಬಾದ್-ಮುಂಬೈ-ಹೈದರಾಬಾದ್ ಟಿಕೆಟ್ಟನ್ನು ತತ್ಕಾಲ್ನಲ್ಲಿ ಹೇಗೋ ಕಾಡಿ ಬೇಡಿ ಗಿಟ್ಟಿಸಿಯಾಗಿತ್ತು. ಆದರೆ ಎರಡು ದಿವಸದ ರಜೆ ಪಡೆಯಲು ಕೊಂಚ ದೊಡ್ಡದಾದ ಸುಳ್ಳನ್ನೇ ಹೇಳಬೇಕಾಗಿ ಬಂದದ್ದಂತೂ ನಿಜ.

’ನೋ ಚೇಂಜ್ ಕಥೆಗಳು’ -- ೧೯...ನಿಸ್ವಾರ್ಥ ಸೇವೆ ಅಂದರೇನ್ರಿ ?

ಯಾರು ಹಾಗೆ ಕೇಳಿದವರು ? ಹಾಂ ನೆನಪಾಯಿತು. ಬೇರೆ ಇನ್ಯಾರೂ ಅಲ್ಲ. ಅವಳು, ನಮ್ಮ ಉದ್ಗಾರಿ ನಂಬರ್ ವನ್‍ರವರ ಮೊಮ್ಮಗಳು. ಅದೇ ಹೆಲ್ಮೆಟ್ ಹಾಕಿ ಟಿ.ವಿ.ಎಸ್. ಹಾರಿಸುವ ಕಾಲೇಜ್ ಕನ್ಯೆ, ಅವಳು ತನ್ನ ಫ್ರೆಂಡ್ ಕೈಯಲ್ಲಿ ಕೇಳಿದ ಪ್ರಶ್ನೆ ಅದು.

ಜಾಗತಿಕ ಪಂಜರದೊಳಗೆ

ಆ ದಿನಗಳು , ಬಾಲ್ಯದ ಸುಂದರ ನೆನಪುಗಳು ಮನಸ್ಸಿನ ಆಕಾಶದೊಳಗೆ ಬರುವ ಪುಟ್ಟ ಪುಟ್ಟ ಮೋಡೆಗಳಂತೆ . ಜಾಗತಿಕ ಬೇಗೆಯಲ್ಲಿ ಬೆಂದ ಮನಕ್ಕೊಮ್ಮೆ ತುಂತುರು ಹನಿಯನ್ನು ಸ್ಪರ್ಶಿಸಿ ಹಾರಿ ಹೋಗುತ್ತವೆ . ನಾಲ್ಕು ಗೋಡೆಯ ಜಾಗತಿಕ ಪಂಜರದೊಳಗಿರುವ ನನಗೀಗ ಅವೆಲ್ಲ ಬಾಲ್ಯವೆಂಬ ಬೂಥಕಾಲದ ಬತ್ತಳಿಕೆಯ ಬಾಣಗಳು. ಜಾಗತಿಕ ಬೇಗೆಯಲ್ಲಿ ಬೆಂದ ಮನಸ್ಸಿಂದು ಪಂಜರದ ಗಿಳಿಯಂತಾಗಿದೆ.

ಚಾರ್ ಧಾಮ್ ಪ್ರವಾಸ

ನನ್ನ ಮುಂದಿನ ದಿನಗಳ ಯಾತ್ರೆಯ ಅನುಭವಗಳನ್ನು ಬರೆಯುವ ಮುನ್ನ, ನಾವು ತೆಗೆದ ಚಿತ್ರಗಳನ್ನು ನಿಮಗೆ ತೋರಿಸಬೇಕೆಂಬ ಆಸೆ ಹೆಚ್ಚಾಗಿದ್ದರಿಂದ, ಅದರ ಕೊಂಡಿಯನ್ನು ಮೊದಲು ಪ್ರಕಟಿಸಿ, ನಂತರ ಕಥನ ಮುಂದುವರಿಸುತ್ತೇನೆ. ಕೇದಾರನಾಥ್ ಚಿತ್ರಗಳು, ಇನ್ನೂ ಹಾಕಿಲ್ಲ. ಯಮುನೋತ್ರಿ, ಗಂಗೋತ್ರಿಯ ಕಥನದ ನಂತರ, ಕೇದಾರ ಮತ್ತು ಬದರಿ ಚಿತ್ರಗಳ ಜೊತೆ, ಕಥನವನ್ನೂ ಬರೆಯುತ್ತೇನೆ.

ಮತ್ತೆ ಚಿಗುರಿದ ಮರ ಮತ್ತು ಅನಿಲ್

ಅನಿಲ್ ನಿಮ್ಮ ಚಿತ್ರಕ್ಕೊಂದು ನನ್ನ ಕಥೆ, ಬೆಳಗ್ಗೆ ಆರರ ಸಮಯ ಅನಿಲ್ ಎದ್ದು ತನ್ನ ನಿತ್ಯ ಕರ್ಮಗಳನ್ನು ಮುಗಿಸಿ ವಾಕಿಂಗ್ ಹೊರಟ, ಇನ್ನೆನು ಹೊಸಿಲು ದಾಟಬೇಕು ಮನೆಯಾಕೆ ಊರುಗೋಲು ತಂದು ಮುಂದಿಡಿದಳು ದಿನಾ ನೆನಪು ಮಾಡ್ಬೇಕೆ ಇನ್ನು ಚಿಕ್ ಹುಡುಗ್ರೆ ಮೊನ್ನೆ ಹಾಗೆ ಹೋಗಿ ಬಿದ್ದಿದ್ದು ಮರ್ತ್ ಹೋಯ್ತು ಒಳ್ಳೆ ಕಥೆ ..ಬೇಗ ಬಂದ್ಬಿಡಿ.....

ಕಲೆ ಮತ್ತು ಶ್ರೀಸಾಮಾನ್ಯ

ಗುಣಮಟ್ಟವು ಬಹು ಸಂಖ್ಯೆಗೆ ತಲೆಬಾಗದಿರುವುದೇ... ಗಂಬೀರ ಕಲೆಯ ಲಕ್ಷಣ...... ಶ್ರೀ ಸಾಮಾನ್ಯ ಇಂತಹ ಕಲೆಯಿಂದ ಸದಾ ಅಂತರವನ್ನು ಕಾಯ್ದು ಕೊಳ್ಳುತ್ತಾನೆ.... ಕಾರಣ ಈ ಗಂಬೀರ ಕಲೆಯನ್ನು ಮಾಡುವವರು ತುಂಬಾ ಬುದ್ದಿವಂತರೆಂದು...

ಸಮಯ ಎಷ್ಟು?

ಕೈಯಲ್ಲಿ ಗಡಿಯಾರ ಇಲ್ಲದ ಹುಡುಗ
"ಸಮಯ ಎಷ್ಟು?" ಎಂದು ಕೇಳಲು
ಒಬ್ಬಾಕೆ ಆತನನ್ನು ಬಾಯ್ತುಂಬಾ ಬೈದಳು
ಇನ್ನೊಬ್ಬಾಕೆ "ಯಾವ್ ಟೇಮಾದ್ರೂ ಪರವಾಗಿಲ್ಲ" ಅಂದಳು

[ತುಳುವಿನಲ್ಲಿ
ಕೈಟ್ ವಾಚ್ ದಾಂತಿ ನರಮಾಣಿ
"ಘಂಟೆ ಏತಾಂಡ್" ಅಂದ್ ಕೇಂಡ
ಒರ್ತಿ ಆಯನ್ ಬಾಯಿನಿಲಿಕೆ ನೆರಿಯಲ್
ನನೊರ್ತಿ "ಎಂಕ್ ಘಂಟೆ ಏತಾಂಡಲಾ ಆವು" ಅಂದ್ ಪಂಡಲ್]

ಸತ್ತವನು (ನಾಟಕ)

ದೃಶ್ಯ ೧

(ಹಳ್ಳಿಯೊ೦ದರಲ್ಲಿ ಪ್ರಜಾಸೇನೆ ಪಕ್ಷದ ಜನ ಜಾಗೃತಿ ಸಭೆ. ಜನ ಸೇವಕ ತರುಣ್ ಕುಮಾರ್ ಮತ್ತು ಅವರ P A ವೇದಿಕೆ ಮೇಲೆ ಬರುತ್ತಿರುತ್ತಾರೆ)

ತರುಣ್ ಕುಮಾರ್ : ಪರವಾಗಿಲ್ಲ ಕಣ್ರೀ ಜನ ಸೇರ್ಸಿದ್ದೀರಾ
P A : ಒಬ್ಬೊಬ್ಬರಿಗೆ ನೂರು ನೂರು ಕೊಟ್ಟು ಕರ್ಸಿದ್ದೀನಿ ಸಾರ್
ತರುಣ್ ಕುಮಾರ್ : ಮತ್ತೆ ಯಾರೂ ಜೈಕಾರ ಕೂಗ್ತಿಲ್ಲ