ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹೆಸರಲ್ಲೇ ಎಲ್ಲಾ ಇದೆ!

ರೂಪಮಂಜುನಾಥ್ ಇವತ್ತು ಸಂಪದದಲ್ಲಿ ಒಂದು ಲೇಖನ ಬರೆದಿದ್ದಾರೆ." ನಿಮ್ಮ ಹೆಸರೇನು? " ಲೇಖನ ಓದಿದಾಗ ನಮ್ಮೂರಲ್ಲಿ ಈಗಲೂ ಚಾಲ್ತಿಯಲ್ಲಿರುವ  ವಿಚಿತ್ರವಾದ ಹೆಸರುಗಳು ನೆನಪಿಗೆ ಬಂತು .ಅಷ್ಟನ್ನೂ ಪ್ರತಿಕ್ರಿಯೆಯಲ್ಲಿ ಬರೆಯುವ ಬದಲು ಪ್ರತ್ಯೇಕ ಬರಹ ಮಾಡಿರುವೆ.

ಗೂಗಲ್ ಇಲ್ಲದ ಸಮಯ

ಗೂಗಲ್ ಒಮ್ಮೆ ಒಂದು ವೆಬ್ಸೈಟಿನಲ್ಲಿ ಕಾಣುವ text box ಅಷ್ಟೇ ಆಗಿತ್ತು ನಮಗೆ. ಅದರಲ್ಲಿ ಟೈಪಿಸಿ ಕ್ಲಿಕ್ ಮಾಡಿದರೆ ಒಂದಷ್ಟು ಮಾಹಿತಿ ಹುಡುಕಿಕೊಡುತ್ತದೆ ಎಂಬುದು ಮನಸ್ಸಿನಲ್ಲಿರುತ್ತಿತ್ತು. ಆದರೆ ದಿನಕಳೆದಂತೆ ಗೂಗಲ್ ನಮ್ಮೆಲ್ಲರ ನಿತ್ಯ ಕಂಪ್ಯೂಟರ್ ಜೀವನದ ಅವಿಭಾಜ್ಯ ಅಂಗವಾಗಿ ಹೋಗಿದೆ. ಗೂಗಲ್ ಇಲ್ಲದೆ ಅಂತರ್ಜಾಲದ ಸ್ಥಿತಿ ಊಹಿಸಲೂ ಸಾಧ್ಯವಿರಲಾರದು.

ಬಿಟ್ಟೆನೆಂದರೆ ಬಿಡದೀ ಫೋಟೊ!

ಪ್ರಿಯ ಓದುಗ ಮಿತ್ರರೇ,

ನಿನ್ನೆ ತಾನೇ ಈ ಜಾಲತಾಣದ ನನ್ನ ಲೇಖನಕೃಷಿಗೆ ನಮಸ್ಕಾರ ಹೇಳಿ ಹೋಗಿದ್ದೆ. ಇಂದು ಮತ್ತೆ ವಕ್ರಿಸಿದ್ದೇನೆ! ಈ ಕೆಳಗಿನ ಛಾಯಾಚಿತ್ರ ಮತ್ತೆ ನನ್ನನ್ನು ಇಲ್ಲಿಗೆ ಎಳೆತಂದಿದೆ.

’ಬಿಟ್ಟೆನೆಂದರೆ ಬಿಡದೀ ಮಾಯೆ!’ ಎಂಬ ನಾಣ್ಣುಡಿಯಂತೆ,
ಬಿಟ್ಟೆನೆಂದರೆ ಎನ್ನನು ಬಿಡದೀ ಫೋಟೊ!

ಪ್ರೀತಿಯ ನೆನದು

ಕಳೆದು ಹೋದ ಪ್ರೀತಿಯ ನೆನದು ಮನ ಕೊರಗುತಿದೆ.
ಬಾವನೆಯ ಕೊಂಡಿ ಕಳೆದು ಹೋದ ಮೇಲೆ,
ಮನಸ್ಸು ಹಳೆಯ ನೆನಪಿನ ಸುತ್ತಾ ಸುಳಿಯುತಿದೆ.
ಜಗ ಜೀವನ ಹೊಸತಿನಲ್ಲಿದ್ದರೆ,
ಹೃದಯ ಹಳೆಯ ನೆನಪಿನ ಕೊಂಪೆಯಲ್ಲಿ ಕಳೆದು ಹೋಗಿದೆ.
ಜೀವನಕ್ಕೆ ನವ ಉಲ್ಲಾಸ ಬೇಕಿದೆ, ಅದುವೇ ಸಂತೋಷದ ಗಮ್ಯದಲಿ.

ಯಾವುದು ಮುಖ್ಯ ಮನುಷ್ಯನಿಗೆ?

ನನ್ನ ಚಿಕ್ಕಮ್ಮ ನ ಮಗ ನನಗಿಂತ ಒಂದು ವರ್ಷಕ್ಕೆ ಕಿರಿಯವ. ಅವನು ಇಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ಸೇರಿದ. ನಾನು ಇನ್ನು ನನ್ನ ವಿದ್ಯಾಭ್ಯಾಸ ಮುಗಿಸಿರಲಿಲ್ಲ. ಆಗ ನಮ್ಮ ಸಂಬಂಧಿಗಳು ನಮ್ಮನ್ನು ನೋಡುವ ರೀತಿಯೇ ಬದಲಾಯ್ತು. ಅವನಿಗೆ ಎಲ್ಲ ಕಡೆ ಅಗ್ರ ತಾಂಬೂಲ. ನಾನು ಮಾಸ್ಟರ್ ಡಿಗ್ರಿ ಮುಗಿಸಿದ ನಂತರವೂ ಇದು ಬದಲಾಗಲಿಲ್ಲ.

ದ್ವೀಪದೆಡೆಗೆ’

ಜೀವನದ ನೌಕೆಯದು ಸಾಗುತಿದೆ ಸಾಗರದಿ
ಬೀಳುತೇಳುತ ಬರುವ ಅಲೆಗೆ ಎದುರಾಗಿ
ಅಲೆಯ ಗಾತ್ರಕೆ ತಕ್ಕ ಏರಿಳಿತವನು ಕಂಡು
ಸಾಗುತಿದೆ ಕಾಣದಾ ದ್ವೀಪದೆಡೆಗೆ

ಆಕಾಶವನೆ ನಂಬಿ ಸಾಗಿಹುದು ಈ ಯಾನ
ದಾರಿ ತೋರುತಲಿಹರು ಧ್ರುವ ಸೂರ್ಯಚಂದ್ರ
ಎತ್ತ ನೋಡಿದರತ್ತ ನೀರು ನೀರೇ ಎಲ್ಲ
ಕಾಣಿಸದು ಭರವಸೆಯ ದ್ವೀಪದಾ ಬೆಳಕು

ಎನಿತು ಕಂಬನಿ ಬೆವರು ಬೆರೆತಿಹುದು ಸಾಗರದಿ

ನಾನೀಗ ಏಕಾಂಗಿ!!!

ಹಲವು ತಿಂಗಳುಗಳ
ನಂತರ ನಾನಾಗಿದ್ದೇನೆ
ಮತ್ತೀಗ ಏಕಾಂಗಿ

ಏಕೆಂದರೆ ಮನೆಯಲ್ಲಿಲ್ಲ
ಈಗ ನನ್ನ ಮಗಳು
ಮತ್ತೆನ್ನ ಅರ್ಧಾಂಗಿ

ವರುಷವಾಗಿತ್ತು ನಮ್ಮ
ಮಗಳು ಊರತ್ತ
ಹೋಗದೇ

ತಪಸ್ಸಿಗೆ ಕೂತಂತಿತ್ತು
ಆಕೆ ತನ್ನ ಓದಿನಿಂದ
ಕಿಂಚಿತ್ತೂ ಬಿಡುವಿಲ್ಲದೇ

ಆಕೆಯಿಂದಾಗಿ ಆಕೆಯ
ತಾಯಿಗೂ ಹೋಗಲು
ಆಗಿರಲಿಲ್ಲ ಊರತ್ತ

ಏನೇ ಅವಶ್ಯಕತೆ
ಇದ್ದರೂ ನಾನೇ
ಓಡಬೇಕಿತ್ತು ಅತ್ತ

ಸವಾರಿ

ನನ್ನ ಸ್ನೇಹಿತ ರಮೇಶ್ ಆಫೀಸ್ಗೆ ಬೆಳಿಗ್ಗೆ ರೆಡಿ ಆಗಿ ಇನ್ನೇನು ಬೈಕ್ ಹಾತ್ತಬೇಕು ಅನ್ನುವಸ್ಟರಲ್ಲಿ ಅವನ ಸ್ನೇಹಿತ ಉಲ್ಲಾಸ್ ಅವನನ್ನು ಕೇಳಿದ.
"ಯಾವ ಕಡೆಯಿಂದ ಹೋಗ್ತಾ ಇದಿಯಾ ಮಗ ? "
ರಮೇಶ್: "ಶಿವಾಜಿನಗರ್ ಕಡೆಯಿಂದ ಹೋಗ್ತಾ ಇದೀನಿ.. "
ಉಲ್ಲಾಸ್: "ನಾನು ನಿನ್ ಜೊತೆ ಬರ್ತೀನಿ. ಶಿವಾಜಿನಗರ್'ಗೆ ಹೋಗ್ಬೇಕು."
ರಮೇಶ್: "ಸರಿ, ಹೋಗೋಣ ಬಾ.."

ಬದಲಾದ ನಿರ್ಧಾರ

ನಿನ್ನೆ ಮೊದಲ ಸಲ ನನಗೆ ಸಂಪದದಲ್ಲಿ ಬೇಜಾರಾಯಿತು,

ಮೊದಲು "ಅನಂದರಾಮನ್ ಸತ್ತ ಸುದ್ದಿ" ಓದಿ ಛೇ ಅನ್ಸಿ ಮುಂದ್ಹೊದಾಗ,ಅರವಿಂದ್ ಅವರು ವಿರಹ ಕವನ ಬರೆದು ನಾನು ಪ್ರತಿದಿನ ಮರೆಯಬೇಕು ಅನ್ನೋ ವಿಷಯವನ್ನೇ ನೆನಪು ಮಾಡಿಕೊಟ್ರು.