ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

'ಮೊಕ್ಷಕೆರಡಕ್ಷರ' ಯಾವುದು ಗೊತ್ತಾ ?

ಅಕ್ಷರವು ಲೇಖಕ್ಕೆ ತರ್ಕ ತಾ ವಾದಕ್ಕೆ
ಮಿಕ್ಕ ಓದುಗಳು ತಿರುಪೆಗೆ
ಮೊಕ್ಷಕೆರಡಕ್ಷರವೇ ಸಾಕು ಸರ್ವಜ್ಞ ;

ಪ್ರವಾಸಿ ಮಂದಿರದ ಗೋಡೆಯ ಮೇಲಿದ್ದ ವಚನ ಓದುತ್ತಿದ್ದೆ.

ನನಗಿಂತ ಎರಡು ವರ್ಷ ಕಿರಿಯ ಸಹೋದ್ಯೋಗಿ ಬಂದು "ಹರ್ಷಣ್ಣ 'ಮೊಕ್ಷಕೆರಡಕ್ಷರ' ಯಾವುದು ಹೇಳಿ ನೋಡೋಣ ?" ಅಂದ.

" ಇನ್ಯಾವುದು ' ಮೊ .ಕ್ಷ ' ಎರಡಕ್ಷರ ಆಯ್ತಲ್ಲಾ ?"
"ಅಲ್ಲ "

"ಯೋಗ ?"

"ಅಲ್ಲ "

" ಧ್ಯಾನ ?"

"ಅಲ್ಲ "

ಮಂಗಳೂರಿನಲ್ಲಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ

ನಾಳೆ ಮಂಗಳೂರು ವಿಶ್ವವಿದ್ಯಾನಿಲಯ ಹಳೆ ವಿದ್ಯಾರ್ಥಿ ಸಂಘ ಇವರ ವತಿಯಿಂದ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನವು ಮಂಗಳೂರಿನ ಎಸ್ ಡಿ ಎಮ್ ಲಾ ಕಾಲೇಜಿನಲ್ಲಿ ನಡೆಯಲಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇಜ ಸಾಹಿತಿ ಕುಂ.ವೀರಭದ್ರಪ್ಪನವರು ಅತಿಥಿಗಳಾಗಿ ಅಗಮಿಸಲಿದ್ದಾರೆ. ಕುಲಪತಿಗಳ ಅಧ್ಯಕ್ಷೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ನೋವಿನ ಮೌನ

ಏನು ಬರೆಯಲಿ ನಾನು
ಬಂಜೆ ಭಾವಗಳ ಹಾಡ
ನಿಂತ ನೆಲವು ಕೂಡ ಕಸದ ಹಾದಿ
ನೊಂದ ಮನಸಿನ ತುಂಬಾ ನೋವಿನ ಸರಮಾಲೆ
ಸರಸದ ಲಾಲಿತ್ಯ ಬರುವುದೆಂತು?
ನಕ್ಕ ದಿವಸದ ನೆನಪು
ಮತ್ತೆ ಹಾಡಿದ ಹಾಡು
ಎಷ್ಟೇ ಹೊಸೆತರೂ ಹೊರಗೆ ಬರುತ್ತಿಲ್ಲ.
ನಾಚಿಕೆಯ ಮಾತಲ್ಲ
ಒಲಿವಿನ ಬಲವಿಲ್ಲ
ಗರ್ಭಪಾತವೇ ಒಂದು ಉಳಿದ ಹಾದಿ
ಸಂತಸವು ಉಳಿದಿಲ್ಲ
ಹೊಗಳುವ ಮಾತಿಲ್ಲ
ಪದಗಳ ಹಾದರಕೆ ಹುಟ್ಟಿ ನಿಂತು...

ವರ್ಣ

ಬೆಳಿಗ್ಗೆಯಿಂದ ಬಿಳಿ ಬಿಳೀ ಮೂಲಂಗಿಗಳನ್ನು ಮಾರುತ್ತ ಕುಳಿತಿದ್ದ ನಾಗಪ್ಪ ಸಂಜೆ ಹೊತ್ತಿಗೆ ಸುಸ್ತಾದಂತಾದರೂ, ಕೊನೆಗುಳಿದ ನಾಲ್ಕನ್ನು ಮಾರಿಯೇ ಹೋಗುವುದೆಂದು ನಿರ್ಧರಿಸಿದ್ದ. ಜನ ತನ್ನ ಬಳಿ ಸುಳಿಯದೇ ಇರುವುದನ್ನು ಗಮನಿಸಿ ನಿರಾಶೆಯಿಂದ ಮೂಲಂಗಿಗಳನ್ನು ದಿಟ್ಟಿಸಿದ. ಸಂತೆ ಪೇಟೆಯ ಧೂಳು ಮೆತ್ತಿಕೊಂಡಂತೆ ಕಂಡಿದ್ದರಿಂದ 'ಉಫ್' ಎಂದು ಊದಿನೋಡಿದ.

ಥಾಯ್ಲೆಂಡ್: ತೆಂಗಿನಕಾಯಿ ಕೀಳುವ ಮಂಗನಿಂದ ಮಾಲೀಕನ ಕೊಲೆ

ಥಾಲ್ಲೆಂಡ್, ಮಾರ್ಚ್ 13: ಭಾರತದ ಕೇರಳದಲ್ಲಿ ಹಾಗೂ ಇನ್ನೂ ಹಲವೆಡೆ ತೆಂಗಿನಮರದಿಂದ ತೆಂಗಿನಕಾಯಿಗಳನ್ನು ಉದುರಿಸಲು ಮಂಗಗಳಿಗೆ ತರಬೇತಿ ನೀಡಲಾಗಿರುತ್ತದೆ. ಈ ಮಂಗಗಳು ಲೀಲಾಜಾಲವಾಗಿ ಮರಹತ್ತಿ ಪಕ್ವವಾದ ತೆಂಗಿನಕಾಯಿಗಳನ್ನು ಗುರುತಿಸಿ ಅವುಗಳನ್ನು ತಿರುಚಿ ಕೆಳಕ್ಕೆಸೆಯುವ ಅಧ್ಬುತ ಸಾಮರ್ಥ್ಯ ಪಡೆದಿರುತ್ತವೆ.

ಚಿಕ್ಕ ಪ್ರಪ೦ಚ-ಒ೦ದು ರಸಕ್ಷಣ

ಒಮ್ಮೆ ಸ್ಪೇನ್ ದೇಶದ ವಿಶ್ವವಿಖ್ಯಾತ ಚಿತ್ರಕಲಾವಿದ, ಶಿಲ್ಪಿ ಪ್ಯಾಬ್ಲೋ ಪಿಕಾಸೋ ಒಬ್ಬ ಅಮೇರಿಕನ್ ಪ್ರತಿಷ್ಠಿತನೊ೦ದಿಗೆ ಕಲೆಯ ಬಗ್ಗೆ ಚರ್ಚೆ ಮಾಡುತ್ತಿದ್ದ. ಆ ಅಮೇರಿಕನ್ನನು ತಾನು ಅಮೂರ್ತವಾಗಿರುವ ಪೇ೦ಟಿ೦ಗ್ಸ್ ನ್ನು ಅವು ಅವಾಸ್ತವವಾಗಿರುವುದರಿ೦ದ ಅವುಗಳನ್ನು ಮೆಚ್ಚುವುದಿಲ್ಲ ಎ೦ದು ಕೊಚ್ಚಿಕೊ೦ಡ.
ಪ್ಯಾಬ್ಲೋ ಏನನ್ನೂ ಹೇಳಲಿಲ್ಲ.

ಬಿಟ್ಟೆನೆಂದರೂ ಬಿಡುವುದಿಲ್ಲ

ಬಿಟ್ಟೆನೆಂದರೂ ಬಿಡುವುದಿಲ್ಲ ಈ ಸಂಪದ ಯಾರಾದರೂ ಕುಹಕವಾಡಿ ಕಾಮೆಂಟಿಸಿದರೆ ಬಿಟ್ಟು ಬಿಡೋಣವೆಂದು ಕೋಪ ಬರುತ್ತದೆ ಎರಡು ಮೂರು ದಿನದಲ್ಲಿ ಮತ್ತೆ ಸಂಪದ ತನ್ನತ್ತಲೇ ಎಳೆಯುತ್ತದೆ. ನಿಮಗೇನನ್ನಿಸುತ್ತದೆ

ಸೀತ ಆರ್. ಮೊರಬ್

ಚಿಕ್ಕ ಪ್ರಪ೦ಚ-ಒ೦ದು ರಸಕ್ಷಣ

ಒಮ್ಮೆ ಸ್ಪೇನ್ ದೇಶದ ವಿಶ್ವವಿಖ್ಯಾತ ಚಿತ್ರಕಲಾವಿದ, ಶಿಲ್ಪಿ ಪ್ಯಾಬ್ಲೋ ಪಿಕಾಸೋ ಒಬ್ಬ ಅಮೇರಿಕನ್ ಪ್ರತಿಷ್ಠಿತನೊ೦ದಿಗೆ ಕಲೆಯ ಬಗ್ಗೆ ಚರ್ಚೆ ಮಾಡುತ್ತಿದ್ದ. ಆ ಅಮೇರಿಕನ್ನನು ತಾನು ಅಮೂರ್ತವಾಗಿರುವ ಪೇ೦ಟಿ೦ಗ್ಸ್ ನ್ನು ಅವು ಅವಾಸ್ತವವಾಗಿರುವುದರಿ೦ದ ಅವುಗಳನ್ನು ಮೆಚ್ಚುವುದಿಲ್ಲ ಎ೦ದು ಕೊಚ್ಚಿಕೊ೦ಡ. ಪ್ಯಾಬ್ಲೋ ಏನನ್ನೂ ಹೇಳಲಿಲ್ಲ.

ನೀವೆಲ್ಲಾ ಹರಸುವಿರಲ್ಲ?

ಮಗಳು ಸ್ಮಿತಾಳಿಗೆ
ಇಂದಿನಿಂದ ಶುರು ಆಗಿದೆ
ಪದವಿ ಪೂರ್ವ ಪರೀಕ್ಷೆ

ನಮಗಾದರೋ
ಅವಳ ಸುಂದರ ಭವ್ಯ
ಭವಿಷತ್ತಿನ ನಿರೀಕ್ಷೆ

ಹನ್ನೆರಡು ವರುಷ
ಕೇಳಿದ್ದು ಸಣ್ಣ ಸಣ್ಣ
ಕದನಗಳ ಶಬ್ದ

ಶುರು ಆಗಿದೆ ನೋಡಿ
ಇಂದು ಆಕೆಯ ಪಾಲಿಗೆ
ಈ ಮಹಾಯುದ್ಧ

ಮಗಳು ಗೆದ್ದು ವಿಜಯ
ಪತಾಕೆ ಹಾರಿಸುವಳೆಂಬ
ಭರವಸೆ ನಮ್ಮ ಮನದಲ್ಲಿ

ಹಿಂದೆ ಗಳಿಸಿದುದಕ್ಕಿಂತ
ಕಡಿಮೆ ಗಳಿಸದಿರಲಿ