ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮನಸ್ಸಿನಲ್ಲಿರುವುದು

ಮನಸ್ಸಿನಲ್ಲಿರುವುದು
ಕನಸಿನಲ್ಲಿ ಬರುವುದು
ಕನಸಿನಲ್ಲಿ ಕಂಡದ್ದು
ನೆನೆಪಿನಲ್ಲಿ ಉಳಿಯುವುದು
ನೆನಪಿನಲ್ಲಿರುವುದು ಎಂದೂ ಮರೆಯಲಾಗದು
ಎಂದು ಮರೆಯಲಾಗದ ನಿನ್ನ ಮುಖ
ನನ್ನ ಹೃದಯದಲ್ಲಿರುವುದು
ನನ್ನ ಹೃದಯದಲ್ಲಿರುವ
ಪ್ರೀತಿ ನಿನಗಾಗಿರುವುದು

ಸತ್ತಾಗಲೂ ಲಾಭ ಲೆಕ್ಕಿಸಿದ ನಾಡಕೋಣಗಳು!

‘ಕರುಮದವತಾರಗಳು’.

ಕಳಸನಕೊಪ್ಪದ ಮಟ್ಟಿಮಾಡ ಹಳ್ಳದ ಶಾನುಭೋಗರ ಕೆರೆಯ ದಂಡೆಯ ಮೇಲೆ ೫ ದಿನಗಳ ಹಿಂದೆ ಸತ್ತು ಬಿದ್ದಿದ್ದ ಕಾಡುಕೋಣದ ವಿಷಯ ನಿಮಗೆ ತಿಳಿದಿದೆ. ಇಂದು (ಮಂಗಳವಾರ) ಕಾಡುಕೋಣದ ಶವ ಪರೀಕ್ಷೆ ನಡೆದ ರೀತಿ ನೋಡಿ ನನಗೆ ಈ ಮನುಷ್ಯರ ಬಗ್ಗೆ ಅಸಹ್ಯ ಮೂಡಿತು. ಸತ್ತಾಗಲೂ ಲಾಭಲೆಕ್ಕಿಸುವ ನಾಡಕೋಣಗಳ ಮನಸ್ಸಿನ ಪರಿ ಹೃದಯಹಿಂಡಿತು.

Microwave Oven ನಲ್ಲಿ ಅನ್ನ ಮಾಡಿದ್ದರಾ??

ಇಂದು ನಮ್ಮ ಮನೆಯಲ್ಲಿ ಅಡಿಗೆ ಮಾಡುವ ರಾಣಿಯಮ್ಮ ಪೋನ್ ಮಾಡಿ ಅಕ್ಕಿ ಮುಗಿದೋಗಿದೆ ಸಾರ್ ಏನು ಮಾಡೊದು ಸಾಂಬರ್ ಮತ್ತು ಪಲ್ಯ ಮಾಡಿದ್ದೇನೆ ಎಂದರು.

silhouette ಚಿತ್ರಗಳು

SUN SET"ಬೆಳಕನ್ನು ಗಮನಿಸು" ಇದು ಛಾಯಾಗ್ರಹಣದ ಮೊದಲ ಪಾಠ. ಬೆಳಕಿನ ಮೂಲ ಛಾಯಾಗ್ರಾಹಕನ ಹಿಂದೆ ಇರಬೇಕು, ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ಬೆಳಕಿಗೆ ಅಭಿಮುಖವಾಗಿ ಚಿತ್ರ ತೆಗೆಯುವುದು ಸಾಮನ್ಯ ಅಭ್ಯಾಸವಲ್ಲ. ಕೆಲವೊಂದು ಬಾರಿ ಸೂರ್ಯಾಸ್ಥಮಾನ, ಸೂರ್ಯೋದಯ ಮೊದಲಾದ ಹಿನ್ನೆಲೆಯನ್ನು ಬಳಸಿ, ಮುನ್ನೆಲೆಯಲ್ಲಿ ನಮ್ಮನ್ನಿರಿಸಿ ಚಿತ್ರ ತೆಗೆಯುವಾಗ ಸರಿಯಾದ ಬೆಳಕು ಬೀಳಲು ಫ್ಲಾಷ್ ಬಳಸುವುದು ಸಾಮಾನ್ಯ. ಇಲ್ಲಿ ಮುನ್ನೆಲೆಯ ವಿಷಯ ಸ್ಪಷ್ಟವಾಗಿ ಕಾಣಿಸಿ, ವರ್ಣಮಯ ಹಿನ್ನೆಲೆ ಬರೀ ಕತ್ತಲೆಯಂತೆ ಕಾಣಿಸುತ್ತದೆ. ಇಂತಹ ಸಂದರ್ಭದಲ್ಲಿ ಫ್ಲಾಷ್ ಉಪಯೋಗಿಸದೆ, ಮುನ್ನೆಲೆಯನ್ನು ಅಂಡರ್ ಎಕ್ಸ್ಪೋಸ್ ಮಾಡಿ ವರ್ಣಮಯ ಹಿನ್ನೆಲೆಯನ್ನು ಸಂಯೋಜಿಸಬಹುದು. ಪಕ್ಕದ ಚಿತ್ರದಲ್ಲಿ ಮಂಟಪದ ಆಕಾರ ಮಾತ್ರ ಗುರುತಿಸುವಂತಿದ್ದು ಅದರ ವಿವರಗಳು ಕತ್ತಲೆಯಲ್ಲಿ ಕಾಣಿಸದಂತಿದೆ ಹಾಗೂ ಹಿನ್ನೆಲೆಯಲ್ಲಿ ಸೂರ್ಯಾಸ್ಥಮಾನದ ಬಣ್ಣ ಚಿತ್ರಿತವಾಗಿದೆ. ಈ ರೀತಿಯ ಚಿತ್ರಗಳೇ silhouettes.

ಮನದಾಳದ ಮಾತು

ಒಂದರೆಗಳಿಗೆ ನಮ್ಮ ರಾಜಕಾರಣಿಗಳು ತಾವು ರಾಜಕಾರಣಿಗಳಲ್ಲಾ,ಎಂದುಭಾವಿಸಲಿ; ಸಾಹಿತಿಗಳು ತಮ್ಮ ಪೂರ್ವಾಗ್ರಹ ಮರೆತು ಚಿಂತಿಸಲಿ, ಸರ್ಕಾರಿ ನೌಕರರು/ಅಧಿಕಾರಿಗಳು ಯಾರಿಗೂ ಅಂಜದೆ ತಮ್ಮ ಆತ್ಮಸಾಕ್ಷಿಗನುಗುಣವಾಗಿ ಕರ್ತವ್ಯ ನಿರ್ವಹಿಸಲು ನಿರ್ಧರಿಸಲಿ, ನ್ಯಾಯವಾದಿಗಳು/ಪೋಲೀಸರು ತಮ್ಮ ಆತ್ಮಸಾಕ್ಷಿಯನ್ನು ನೆನಪು ಮಾಡಿಕೊಳ್ಳಲಿ..................

ಕಾಯುತಿದೆ ನನ್ನೀ ಮನಸು..



ಈ ಪುಟ್ಟ ಹೃದಯದ ಬಾಗಿಲಲಿ ಅವಳಿಗಾಗಿ
ಕಾಯುತಿದೆ ನನ್ನೀ ಮನಸು
ಅವಳಿಗಾಗಿ ಹೂವಿನ ಹಾಸಿಗೆಯನ್ನು ಹಾಸಿ ಕುಳಿತು
ಕಾಯುತಿದೆ ನನ್ನೀ ಮನಸು

ಲೇಖನಿಯ ಶಾಹಿಯು ತನ್ನಲ್ಲಿ ಮೂಡಿಸುವ ಸುಂದರ
ಶಬ್ಧಗಳನ್ನೊಳಗೊಂಡ ಕವಿತೆ ಗಾಗಿ ಹಾತೊರೆಯುತ್ತಿರುವ
ಶುಭ್ರ ಬಿಳಿಹಾಳೆಯಂತೆ ಕಾಯುತಿದೆ ನನ್ನೀ ಮನಸು

ಮನದ ಸೋಲು

ಹಿಮಾಲಯದಿ ಹಬ್ಬಿರುವ
ಪರ್ವತ ಶ್ರೇಣಿಗೂ,
ನಾ ಮನಸೋಲಲಿಲ್ಲ

ಬಾನಲ್ಲಿ ಮೂಡಿದ
ಆ ಕಾಮನಬಿಲ್ಲಿಗೂ,
ನಾ ಮನಸೋಲಲಿಲ್ಲ

ಕಡಲ ತೀರಕೂ ಹಬ್ಬಿರುವ
ಆ ಸಹ್ಯಾದ್ರಿಗೂ,
ನಾ ಮನಸೋಲಲಿಲ್ಲ

ನಿನ್ನ ಸೊಂದರ್ಯಕ್ಕೆ
ನಾ ಎಂದೆಂದು, ಮನಸೋಲಲಿಲ್ಲ

ಗೆಳತಿ,

ನಿನ್ನ ಮಾತಿನ ಶೈಲಿಗೆ
ನಾ ಮೆಚ್ಚಿಕೊಂಡೆ

ನಿನ್ನ ನಯ ವಿನಯದಿ
ನನ್ನ ನಾ ಕಳಕೊಂಡೆ

ನಿನ್ನೀ ವಿಶಾಲ ಹೃದಯದಿ

ಪಟ್ಟಣದ ಕೃತಕ ಜೀವನ

ವಿಜ್ಣಾನ ,ತಂತ್ರಜ್ಣಾನದ ಬೆಳವಣಿಗೆಯ ಭರಾಟೆಯಲ್ಲಿ ಆಧುನಿಕ ಜಗತ್ತಿನ ಅದರಲ್ಲೂ ಪಟ್ಟಣದ ಜನ ಜೀವನ ಎಷ್ಟೊಂದು ಕೃತಕವಾಗಿದೆಯೆಂದರೆ ಕುಡಿಯುವ ನೀರು,ತಿನ್ನುವ ಆಹಾರ,ಸೇವಿಸುವ ಗಾಳಿ,ಜೀವನ ವಿಧಾನ ಎಲ್ಲದರಲ್ಲೂ ಕೃತಕತೆ ಕಾಣಬಹುದು.ನಮ್ಮ ಹಳ್ಳಿಯ ಹಾಗೆ ಹುಣ್ಣಿಮೆಯ ಚಂದಿರನ ಆಹ್ಲಾದಕರ ಬೆಳದಿಂಗಳು,ಅಮವಾಸ್ಯೆಯ ರಾತ್ರಿಯ ಕತ್ತಲಲ್ಲಿ ಬಾನಲ್ಲಿ ಹೊಳೆಯುವ ನಕ್ಷತ್ರಗಳನ

ತೊಟ್ಟು ಕಿತ್ತ ಹೂವು

ಎಂತ ಚಂದದ ಹೂವು
ಹೀಗಿದೇತಕೆ ಬಿತ್ತು
ಮನದಲ್ಲಿ ವ್ಯಥೆಯ ಹೊತ್ತು|
ಯಾವ ಬೆರಳಿದು ಕ್ರೂರ
ಕೊಟ್ಟಿದೇತಕೆ ನೋವ
ಉಗುರಲೀ ತೊಟ್ಟ ಕಿತ್ತು||
ನಗು ನಗುತಲಿದೆ ಇನ್ನೂ
ಮುಚ್ಚಲಿಲ್ಲವೋ ಕಣ್ಣು
ಪಾಪ, ಅದಕೇನು ಗೊತ್ತು:
ತಾನೀಗ ಕಾಲರಾಯನ ತುತ್ತು||
ಮೆಲ್ಲ ಮೆಲ್ಲನೆ ಮಾಸಿ
ಬಾಡುತಲಿದೆ ನೋಡು
ಕರಗುತಿದೆ ಕೊನೆಯ ಕಂತು|
ತನ್ನ ತಾನೇ ಮರೆತು
ಕೊಡುತಲಿದೆ ನೋಡು

ಬೆಂಗಳೂರು ಅನ್ನುವ ಮಾಯಾನಗರಿ...................................

ಇವತ್ತು ನಾನು ಕಂಪನಿಗೆ ಬರಲಿಕ್ಕೆ ನಮ್ಮ ಸ್ಟಾಪ್ ಹತ್ತಿರ ಕಂಪನಿ ಗಾಡಿಗಾಗಿ ಕಾಯುತ್ತಾ ಇದ್ದೆ. ಆಗ ನಮ್ಮ ಪಕ್ಕದಲ್ಲೆ ಒಂದು ಹೆಂಗಸು ಅವಳ ಮಗುವಿನ ಶಾಲೆಯ ಗಾಡಿಗಾಗಿ ಕಾದು ಆ ಗಾಡಿ ಬಂದ ಮೇಲೆ ಮಗೂನ ಒಳಗೆ ಕೂರಿಸಿ ಆ ಗಾಡಿ ಕಣ್ಮರೆಯಾಗುವ ವರೆಗೆ ಆ ಮಗುವಿಗೆ ಟಾಟ ಮಾಡುತ್ತಾ ಇದ್ದಳು ಮತ್ತೆ ಆ ಮಗೂನೂ ಕೂಡ ತನ್ನ ತಾಯಿಗೆ ಟಾಟ ಮಾಡುತ್ತಾ ಇತ್ತು.