ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹೀಗೊಂದು ಆಲದ ಮರ ಮತ್ತು ಅದರ ’ವಿಚಾರವಾದಿ’ ಕೊಂಬೆಗಳು

ಒಂದು ದೊಡ್ಡ ಆಲದಮರ. ಲಕ್ಷಾಂತರ ವರ್ಷಗಳಿಂದ ಬೆಳೆದಂತಹ ಮರ ಸುಮಾರು ಕವಲಾಗಿ ಒಡೆದ ಮರ.ಆ ಮರ ಸುಮಾರು ವ್ಯಕ್ತಿಗಳು ತಮ್ಮ ಅನುಭವ ಮೂಸೆಯಿಂದ ವಿಚಾರಗಳನ್ನು ಆಯ್ದು ಅಳವಡಿಸಿದಂತಹ ಮರ.
ಮುಂದೇ ಕವಲಾಗಿ ಒಡೆದರೂ ಮರದ ಬೇರು ಒಂದೇ ಇತ್ತು
ಮರದ ಕೊಂಬೆಗಳೆಲ್ಲಾ ಆ ಮರದ ಬೇರನ್ನೇ ತಮ್ಮ ತಾಯಿ ಬೇರು ಎಂದು ತಿಳಿದಿದ್ದವು

ಹೊಸದಾಗಿ ನಿರ್ಮಾಣದ ಹಂತದಲ್ಲಿರುವ, 'ಫ್ಲೈ ಓವರ್ ಸೇತುವೆ', ಮುಂಬೈ ನಗರದ 'ಮಹೇಶ್ವರಿ ಉದ್ಯಾನ' ದ ಸೌಂದರ್ಯವನ್ನು ಕುಲಗೆಡಿಸುತ್ತಿದೆ !

ಮುಂಬೈ ನಗರದ ಮಹೇಶ್ವರಿ ಉದ್ಯಾನ, ಮಾಟುಂಗಾ ಪ್ರದೇಶದ ಜನರಿಗೆಲ್ಲಾ ಕಣ್ಮಣಿಯಾಗಿರುವ ಜಾಗ. ಮೊದಲು ಕಿಂಗ್ಸ್ ಸಿರ್ಕಲ್ ಉದ್ಯಾನ, ಬೃಹನ್ ಮುಂಬೈ ಮ್ಯುನಿಸಿಪಲ್ ವಶದಲ್ಲಿದ್ದು, ಬಹಳ ಅಧೋಗತಿಯಲ್ಲಿತ್ತು. ನಂತರ, ಈ ಪಾರ್ಕ್ ನ ಹೆಸರನ್ನು 'ಮಹೇಶ್ವರಿ ಉದ್ಯಾನ' ವೆಂದು ಇಡಲಾಯಿತು. ಇದರ ಮೇಲುಸ್ತವಾರಿಯನ್ನು’ ಲಾರ್ಸನ್ ಅಂಡ್ ಟೂಬ್ರೊ ಕಂಪೆನಿ,’ ಯವರು ನೋಡಿಕೊಳ್ಳುತ್ತಿರುವುದರಿಂದ ಇದರ ಸೌಂದರ್ಯ, ನೂರುಪಾಲು ಹೆಚ್ಚಿತ್ತು. ಈ ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪೆನಿ, ಅತ್ಯುತ್ತಮ ಗಿಡಗಳನ್ನು ತರಿಸಿ ಬೆಳೆಸಿದರು. ಹುಲ್ಲಿನ ಲಾನ್ ನ್ನು ಶುಚಿಗೊಳಿಸಿ, ಅದಕ್ಕೆ ಕ್ರಮವಾಗಿ ರಸಗೊಬ್ಬರದ ಅರೈಕೆ, ಮಾಡಿದರು. ಗಿಡ-ಮರಗಳಿಗೆಲ್ಲಾ, ನೀರಿನ ವ್ಯವಸ್ಥೆ, ಜನರು ಕುಳಿತುಕೊಳ್ಳಲು ಉತ್ತಮ ಕಾಂಕ್ರೀಟ್ ಛೇರ್ ಗಳ ವ್ಯವಸ್ಥೆಗಳನ್ನು, ಸುವ್ಯವಸ್ಥಿತವಾಗಿ ಮಾಡಿದರು. ನೀರಿನ ಕಾರಂಜಿ ಪ್ರತಿದಿನದ ಬೆಳಿಗ್ಯೆ, ಸಾಯಂಕಾಲವೂ ಕೆಲಸಮಾಡುತ್ತಿದೆ. ಮಕ್ಕಳಿಗೆ ಜಾರೋಬಂಡೆ, ಹತ್ತಿ ಇಳಿದು ಮಾಡುವ ಐರನ್ ಬಾರ್ ಗಳ ವ್ಯವಸ್ಥೆ, ಉಯ್ಯಾಲೆಗಳು, ಹಿರಿಯನಾಗರಿಕರಿಗೆ ಕೂಡಲು ಜಾಗದ ವ್ಯವಸ್ಥೆ, ಏಕಾಂತದಲ್ಲಿ ಕುಳಿತು ಪುಸ್ತಕ ಓದಲು, ಅಥವಾ ಧ್ಯಾನಿಸಲು ಲತಾಗೃಹ, ಇತ್ಯಾದಿಗಳನ್ನು ನೋಡಲು ಎಷ್ಟು ಮುದವಾಗುತ್ತಿತ್ತು ?

ಸಿ. ಎಸ್. ಟಿ. ರೈಲ್ವೆ ಸ್ಟೇಶನ್ ನಿಂದ ನೇರವಾಗಿ ಥಾನವರೆಗೆ, ಡ್ರೈವ್ ಮಾಡುವ ಜನರಿಗೆ, ಇದು ಅನುಕೂಲಕರವೇನೋ ನಿಜ. ಆದರೆ, ವಿಪರೀತವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಅಲ್ಲೋ ಇಲ್ಲೋ ಇರುವ ಉದ್ಯಾನಗಳ ನಾಶವನ್ನು, ಯಾರುತಾನೇ ಸಹಿಸಿಯಾರು ?

ಬಾಯ್ಬಿಟ್ಟು ನುಡಿಯಬೇಕೇ?

ಮಿಗಗಳೂ ತಿಳಿದಾವು ಬಾಯ್ಬಿಟ್ಟು ನುಡಿವುದನು
ಆನೆ ಕುದುರೆಗಳೂ ತೋರಿದುದ ಮಾಡುವುವು!
ಜನರವರು ಪಂಡಿತರು ಹೇಳದುದ ಎಣಿಸು*ವರು
ಪರರ ಮನವರಿಯುವುದದುವೆ ಚದುರತನಕೆ ಗೆಲುವು

*ಎಣಿಸು= ಊಹೆ ಮಾಡು, ತರ್ಕಿಸು

ಸಂಸ್ಕೃತ ಮೂಲ (ಹಿತೋಪದೇಶದ ಸುಹೃದ್ಭೇದ ದಿಂದ):

ಇಂದು ಓದಿದ ವಚನ: ಘನ: ಘಟ್ಟಿವಾಳಯ್ಯ

ಭೂಮಿ ಘನವೆಂಬೆನೆ
ಪಾದಕ್ಕೊಳಗಾಯಿತ್ತು
ಗಗನ ಘನವೆಂಬೆನೆ
ಕಂಗಳಿಗೊಳಗಾಯಿತ್ತು
ಮಹವು ಘನವೆಂಬೆನೆ
ಮಾತಿಂಗೊಳಗಾಯಿತ್ತು
ಘನವೆಂಬುದಿನ್ನೆಲ್ಲಿಯದೆಲವೋ

ಓದಿದ್ದು ಕೇಳಿದ್ದು ನೋಡಿದ್ದು-111 ಇರಾಕಿನಲ್ಲಿ ಬುಶ್‌ಗೆ ಬೂಟೆಸೆತ

ಅಮೆರಿಕ ಅಧ್ಯಕ್ಷ ಬುಶ್ ಕಡೆ ಬೂಟೆಸೆದ ಟಿವಿ ಪತ್ರಕರ್ತ

Embedded video from CNN Video
------------------------------------------

41ನೇ ಶತಕ +ಭಾರತಕ್ಕೆ ಜಯ

ಕೆಂಪು, ಹಳದಿ ಕಿತ್ತಲೆ ಮಿಶ್ರವರ್ಣ, ಹಸಿರು ಬಣ್ಣಗಳು ರಸ್ತೆ ಸಂಚಾರಿ ಸೂಚಿಗೆ ಮಾತ್ರ ಸೀಮಿತವಾಗಿಲ್ಲ!

ರಸ್ತೆಯ ಸಂಚಾರಿ ಸೂಚಿಯಲ್ಲಿ ಕೆಂಪು, ಹಳದಿ ಕಿತ್ತಲೆ ಮಿಶ್ರವರ್ಣ, ಹಸಿರು ಬಣ್ಣಗಳ ಅರ್ಥವು ಯಾರಿಗೆ ಗೊತ್ತಿಲ್ಲ? ಈ ಬಣ್ಣಗಳ ಸೂಚಿತ ಅರ್ಥಗಳು ರಸ್ತೆ ಸಂಚಾರಕ್ಕೆಮಾತ್ರ ಸೀಮಿತವಾಗಿಲ್ಲ! `ಯುರೇಖ ಫೋರ್ಬ್ಸ್'ರವರು ಇದನ್ನು ತಮ್ಮ `ಆಕ್ವಾ ಗಾರ್ಡ್'ನಲ್ಲಿ ಬಳಸಿಕೊಂಡಿದ್ದಾರೆ.

ನೀನು ನನ್ನವನು...

ನನ್ನ
ಸ್ವಪ್ನಲೋಕದ ಸುಪ್ತ ಕನಸುಗಳ
ಸರಮಾಲೆ ನಿನ್ನನಾವರಿಸಿರಲು
ನಿನ್ನ
ಬೆಚ್ಚನೆಯ ನೆನಪುಗಳು
ಮತ್ತೊಮ್ಮೆ ಕೆಣಕುತಿರಲು
ಇನಿಯಾ ಇನ್ನೇಕೆ ತಡ?
ಬಂದು ಬಿಡು ಈ ಹೃದಯದಲಿ
ಪ್ರೀತಿ ಬಾಗಿಲು ಇದೋ
ನಿನಗಾಗಿ ತೆರೆದಿಡುವೆ...

ಮಂದ ಮಾರುತವೀಗ
ಪ್ರಣಯರಾಗವ ನುಡಿಸಿರಲು
ಸುಮಲತೆಯ ನಡುವೆ
ದುಂಬಿಗಳ ಚುಂಬನದಿ
ಬಿಸಿಯಪ್ಪುಗೆಯ ಸುಖ ನೀಡುವಿಯಂತೆ