ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಆಶಯ

ಕಣ್ಣೆತ್ತರ ಮುಗಿಲೆತ್ತರ
ಮೇಲೇರಲಿ ಕನಸು
ಅಡಿಗಡಿಗೆ ಬದುಕೆಡೆಗೆ
ಹಾಸಲಿ ಹೂಹಾಸು

ಪನ್ನೀರಿನ ಸಿಂಚನದಿ
ತೋಯಲಿ ಮನಸೆಲ್ಲಾ
ನೀನಾಡುವ ನಿನ್ನಾಟಧಿ
ಗೆಲುವೇ ನಿನಗೆಲ್ಲಾ

ಕಡಲಾಳದ ರತ್ನದಂತೆ
ನುದಿಮುತ್ತುಗಳಿರಲಿ
ಒಡಲಾಳದ ಭಾವದಂತೆ
ಮೈ ಮನಗಳಿರಲಿ

ಪ್ರೇಮದೂಟೆ ಚಿಮ್ಮಿ ಬರಲಿ
ಹೃದಯಾಂತರಾಳದಿಂದ
ಸ್ನೇಹಗಂಗೆ ಹರಿದು ಬರಲಿ
ಮನಸಿನಾಳದೊಳಗಿಂದ

ಗೆಳತಿಗೆ

ಹೊಗೇನಕಲ್, ಹೊಸೂರು ಯಾಕೆ ತಮಿೞ್ನಾಡಿನದಲ್ಲ

ಹೊಸೂರು (ಈಗ ತಮಿೞ್ನಾಡಿನಲ್ಲಿದ್ದರೂ) ಹಾಗೂ ಹೊಗೇನಕಲ್ ತಮಿೞ್ನಾಡಿಗೆ ಸೇರಲು ಸಾಧ್ಯವೇ ಇಲ್ಲ. ತಮಿೞ್, ತೆಲುಗು ಮತ್ತು ಮಲಯಾಳಂಗಳಲ್ಲಿ ಹಕಾರದಿಂದ ಪ್ರಾರಂಭವಾಗುವ ತೆನ್ನುಡಿ ಶಬ್ದಗಳಿಲ್ಲ. ಆದರೆ ಸ್ಥಿತ್ಯಂತರದಿಂದ ಕನ್ನಡದಲ್ಲಿ ವ್ಯಾಪಕವಾಗಿ ಪಕಾರ ಹಕಾರವಾಗಿದೆ. ಹಾಗಾಗಿ ಹೊಸೂರು ಶುದ್ಧ ಕನ್ನಡ ಶಬ್ದ. ತಮಿೞಿನಲ್ಲಿ ಸಕಾರವೂ ಇಲ್ಲ.

ಕೆಲಸ=ಕಳ್ಳ

ಎಸ್ ಎಸ್ ಎಲ್ ಸಿ. ಆದ್ಮೇಲ್ ಪಿಯುಸಿ
ಹಂಗಿಗ್ ದಾಟುದ್ವಿ ಎಲ್.ಓ ಸಿ.
ಮುಗ್ಸಿದ್ವೀ ಡಿಗ್ರಿ..... ಡಿಪ್ಲೋಮಾ..
ಸಿಗ್ಲಿ ಅಂತ ಯಾವ್ದಾದ್ರೂ ಕಾಮು(Hindi)

ಹಿಡಿದು ನಿಂತ್ವಿ ಅರ್ಜಿ,
ಜೊತೆಗೆ ಇನುಫ಼್ಲಿಯೆನ್ಸ್ ಮರ್ಜಿ,
ಬಾಗಿಲಲಿದ್ ಜವಾನ
ಹೇಳ್ದ.......... ? ಹಿಡ್ಕೋ ಒಸಿ ರೊಕ್ಕಾನ....

ಇಲ್ಲದ ದುಡ್ಡ ಹೆಂಗೆ,
ಹೊಂದ್ಸೊದ್ ಇದ್ದಕ್ ಇದ್ದಂಗೆ,
ಹೊಳಿತು ಐಡಿಯಾ ಒಮ್ಮೆಗೆ,

ನಗೆನಗಾರಿ ಸಂಪಾದಕೀಯ : ನಾವಿನ್ನೂ ಬದುಕಿದ್ದೇವೆ!

ಬಗಲಲ್ಲೇ ಕೂತ ಶತ್ರು ನಮ್ಮೊಡನೆ ಹರಟೆಗೆ ಕೂತವನಂತೆ ವರ್ತಿಸುತ್ತಾ ಒಳಗೊಳಗೇ ಕತ್ತಿ ಮಸೆಯುತ್ತಾ, ತನ್ನ ಆಯುಧಗಳನ್ನು, ಮುಳ್ಳುಗಳನ್ನು ಹರಿತಗೊಳಿಸುತ್ತಾ, ಅವುಗಳನ್ನು ಪರೀಕ್ಷಿಸುವ ಮನಸ್ಸಾದಾಗ ನಮ್ಮ ಮೇಲೆ ಪ್ರಯೋಗಿಸುತ್ತಾ ಹತ್ತು ಇಪ್ಪತ್ತೋ, ನೂರೂ, ಸಾವಿರವೋ ಹೀಗೆ ಲೆಕ್ಕ ಹಿಡಿಯುವ ಪ್ರಯಾಸ ತೆಗೆದುಕೊಳ್ಳದೆ ತಿಗಣೆಗಳಂತೆ ನಮ್ಮನ್ನು ಹೊಸಕಿ ಹಾಕುತ್ತಿದ್ದಾನೆ. ಈ ಕಾರ್ಯಕ್ರಮ ತೀರಾ ಇತ್ತೀಚಿನಮುಂಬೈನ ನಡುಗಿದಲ್ಲವಾದರೂ ಮೊನ್ನೆ ಸಿ ಹಾಕಿದ ಭಯೋತ್ಪಾದಕರ ದಾಳಿ ಹಾಗೂ ಘಟಿಸಿದ ಭೀಕರ ಕಾಳಗ, ಮೃತರಾದ ದೇಶ ವಿದೇಶಗಳ ನಾಗರೀಕರು, ವೀರ ಸೇನಾನಿಗಳು, ಟಿವಿಯಲ್ಲಿ ಧ್ವನಿಯೆತ್ತದೆ ಮಾತಾಡಿ ಉಗ್ರರನ್ನು ‘ಉಗ್ರ'ವಾಗಿ ದಂಡಿಸುವ ಆಶ್ವಾಸನೆ ಕೊಟ್ಟು ಭಾಷಣ ಮುಗಿಸಿದ ಪ್ರಧಾನಿ, ಜನರನ್ನು ಸಗಟು ಓಟುಗಳಂತೆ ಬಿಟ್ಟು ಬೇರಾವ ರೀತಿಯಲ್ಲೂ ಕಾಣಲು ಅಶಕ್ತವಾಗಿರುವ ನಮ್ಮ ನೇತಾಗಳು, ಕೆಲಸಕ್ಕೆ ಬಾರದ ಒಣ ವೇದಾಂತ, ಸದಾ ಬಳಿಯಲ್ಲೇ ಇಟ್ಟುಕೊಂಡಿರುವ ‘ಸಂಯಮಿ'ಯ ವೇಷ, ಉಸಿರಾಟಕ್ಕಿಂತ ಹೆಚ್ಚು ಸಹಜವಾಗಿರುವ ಬೇಜವಾಬ್ದಾರಿಯನ್ನು ಯಥಾವತ್ತಾಗಿ ಪ್ರದರ್ಶಿಸುತ್ತಾ ಒಂದಷ್ಟು ಹೊತ್ತು ಬಾಡಿಗೆ ತಂದ ದೇಶಪ್ರೇಮ, ಕಾಳಜಿ, ಉತ್ಸಾಹಗಳನ್ನು ತೋರ್ಪಡಿಸಿ ತಮ್ಮ ಯಾವತ್ತಿನ ನಿದ್ದೆಗೆ ಜಾರಿಕೊಳ್ಳುವ ಜನ ಸಾಮಾನ್ಯರನ್ನೆಲ್ಲಾ ನೋಡಿದ ನಂತರ ಒಂದು ಘೋಷಣೆಯನ್ನು ಮಾಡಲೇ ಬೇಕಿದೆ: ನಾವಿನ್ನೂ ಬದುಕಿದ್ದೇವೆ!

ನಮ್ಮದು ಅತ್ಯಂತ ಶ್ರೇಷ್ಠವಾದ ನಾಡು. ದೇವರು ಭೂಮಿಯೆಂಬ ಗೋಲದ ಮೇಲೆ ನಮ್ಮನ್ನು ಸೃಷ್ಟಿಸಿ ಉಳಿದವರಿಗೆ ಆದರ್ಶವಾಗಿ ಎಂದು ಹರಸಿ ಕಳುಹಿಸಿದ. ನಾವು ದೇವರಿಗೆ ಅತ್ಯಂತ ಪ್ರೀತಿ ಪಾತ್ರರಾದ ಜನರು.
ಇಲ್ಲವಾದರೆ ಜಗತ್ತಿಗೆ ಬಟ್ಟೆ ತೊಡುವ ಸಂಸ್ಕಾರ ತಿಳಿಯದಿದ್ದ ಕಾಲದಲ್ಲಿ ನಾವು ಭೂಮಿಯ
ಮೇಲಿನ ಸಮಸ್ತ ಜ್ಞಾನವನ್ನು ಬಾಚಿ ಹೊಟ್ಟೆ ತುಂಬಿಸಿಕೊಂಡು ಆಕಾಶಕ್ಕೂ ಹಾರಲು
ಸಾಧ್ಯವಾಗುತ್ತಿತ್ತೇ? ಖಂಡಿತಾ ಇಲ್ಲ. ಬಡತನ, ನಿರಕ್ಷರತೆ, ನಿರುದ್ಯೋಗ, ಅನಾರೋಗ್ಯ, ಅವ್ಯವಸ್ಥೆ, ಭ್ರಷ್ಠಾಚಾರ ಭಯೋತ್ಪಾದನೆ,
ಮೂಲಭೂತವಾದಗಳನ್ನು ಹೇಗೆ ಎದುರಿಸಿ ಜಯಿಸಬೇಕು ಎಂಬುದಕ್ಕೆ ಜಗತ್ತಿನ ಎಲ್ಲಾ ದೇಶಗಳು
ಆದರ್ಶವಾಗಿ ಕಾಣಬಹುದಾದ ರಾಷ್ಟ್ರವೊಂದು ಭೂಮಿಯ ಮೇಲಿದೆಯೆಂದರೆ ಅದು ನಮ್ಮ ಹೆಮ್ಮೆಯ
ಭಾರತ ಮಾತ್ರ. ನಾವು ಆ ದೇವನ ಪರಿಪೂರ್ಣ ಸೃಷ್ಠಿ. ನಾವು ಇತರರಿಂದ ಕಲಿಯುವುದು ಏನೂ ಇಲ್ಲ. ನಾವು ಜಗತ್ತಿಗೆ ಕಲಿಸಬೇಕಾದ್ದು ಬಹಳ ಇದೆ. ನಮಗೆ ಅವರ ನೀತಿಗಳು, ಅವರ ಕಾರ್ಯ ವಿಧಾನಗಳು ಮಾದರಿಯಾಗಬೇಕಿಲ್ಲ. ನಮಗೆ ಬೇಕಾದ ಮೊಬೈಲ್ ಫೋನು, ಕಾರು, ಟಿವಿ, ಕಂಪ್ಯೂಟರುಗಳನ್ನು ಅವರು ತಯಾರು ಮಾಡಿಕೊಡುತ್ತಾರೆ. ಹೊಸ ಹೊಸ ಸಂಶೋಧನೆಗಳನ್ನು ಅವರು ಮಾಡುತ್ತಾರೆ, ಹೊಸ ಜ್ಞಾನ ಸೃಷ್ಟಿ ಅವರಲ್ಲಿ ಆಗುತ್ತದೆ. ಭದ್ರತೆಗೆ ಹೊಸ ಕ್ರಮಗಳ ಬಗ್ಗೆ ಅವರು ಹಗಲು ರಾತ್ರಿ ಶ್ರಮಿಸಿ ಕಷ್ಟ ಪಡುತ್ತಾರೆ. ತಮ್ಮ ಮೇಲೆ ಆಕ್ರಮಣ ಮಾಡಿದವರನ್ನು ಅಟ್ಟಾಡಿಸಿ ಹೊಡೆಯುವ ನಿರ್ಧಾರ ಮಾಡಿ ವಿನಾಕಾರಣ ಯುದ್ಧಗಳಿಗೆ ಕಾರಣರಾಗುತ್ತಾರೆ, ಶತ್ರುಗಳನ್ನು ಸೃಷ್ಟಿಸಿಕೊಳ್ಳುತ್ತಾರೆ!

ಪ್ರೀತಿಯಲ್ಲವೇ

ನಿನ್ನ ಪ್ರೆಮದಾಳ ಕಣ್ತುದಿಯಲಿ
ಕಾಣಲು ನನ್ನ ಕಲ್ಲೆದೆಯೂ
ಹಾಡಾಯ್ತು, ಕವನವಾಯ್ತು
ಗೆಳತಿ ನೀ ಪ್ರೀತಿಯಲ್ಲವೇ

ಪ್ರೇಮದಾಳಕೆ ಇಳಿದು ಬಂದೆ
ನಿನ್ನ ನಗು, ಅಳು, ಹುಸಿಗೋಪ
ಎಲ್ಲವೂ ನನಗಿಷ್ಟವೇ
ಒಮ್ಮೊಮ್ಮೆ ನಿನ್ನ ಮಾತಿನೇಟಿಗೆ
ಬೇಸರಿಸಿದರೂ ಮರೆತು
ನಿನ್ನಲ್ಲಿಗೆ ಬಂದು, ಕಡೆಗೆ
ನಾನೇ ಕ್ಷಮೆ ಕೇಳುವುದು
ಪ್ರೀತಿಯದೊಂದು ಮುಖವಲ್ಲವೆ
ಗೆಳತಿ ನೀ ಪ್ರೀತಿಯಲ್ಲವೇ

ಧಾರವಾಡ ಸಹವಾಸ ಬೇಡವೇ ಬೇಡ

ನಾನು ಮೊನ್ನೆ ಅಂದರೆ 2 ನೇ ತಾರೀಕಿನಂದು ಕೆಲಸದ ನಿಮಿತ್ತ ಧಾರವಾಡಗೆ ಹೋಗಲು ತಯಾರಾದೆ. ಅದಕ್ಕೂ ಮುಂಚೆ  ಧಾರವಾಡದ ಬಗ್ಗೆ ಸಂಪದ ಬಳಗದವರಿಂದ ಸ್ವಲ್ಪ ಮಾಹಿತಿ ಪಡೆಯಬೇಕೆಂದುಕೊಂಡೆ ಆದರೆ, ಸಮಯ ಅಭಾವದ ಕಾರಣ ಹಾಗೆ ಹೊರಟೆ. ಧಾರವಾಡಕ್ಕೆ ಇದು ನನ್ನ ಮೊದಲನೆಯ  ಬೇಟಿ. ಅಂತು ನಾನು ಐರಾವತ ಏರಿ ಧಾರವಾಡ ಕಡೆ ಹೊರಟೆ.

ಇಂದು ಎನಗೆ ಗೋವಿಂದ

ಮಾಹಿತಿ: ಶ್ರೀ ರಾಘವೇಂದ್ರ ತೀರ್ಥರ ಕೃತಿಯ ಪೂರ್ಣ ಸಾಹಿತ್ಯವನ್ನು ಇಲ್ಲಿ ಕೊಡಲಾಗಿದೆ. ಇದರ ಎರಡು ಚರಣಗಳನ್ನು ಮಂತ್ರಾಲಯ ಮಹಾತ್ಮೆ ಮತ್ತು
ಎರಡು ಕನಸು ಚಿತ್ರಗಳಲ್ಲಿ ಅಳವಡಿಸಿಕೊಳ್ಳಲಾಗಿದೆ - ಸಂ