ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕ್ಷಮಿಸು ನಾ ರಾಧೆಯಲ್ಲ - ೧

"ಪ್ರಿಯಾ ಇವತ್ತಿನಿಂದ ನಿಮ್ಮ ಡಿವಿಸನ್‌ಗೆ ಹೊಸ ಮೆಂಬರ್ . " ಶ್ರೀನಾಥ್ ಪರಿಚಯಿಸಿದಾಗ ಕಂಪ್ಯೂಟರ್ ಪರದೆಯಿಂದ ತಲೆ ಎತ್ತಿದವಳಿಗೆ ಹಸನ್ಮುಖಿಯಾದ ಆ ಯುವಕ ಕಾಣಿಸಿದ.

ಆಗುತ್ತೋ? ಆಗೊಲ್ವೋ?

ಸೋಮಾರಿ ಪುರಾಣ

ಕ್ರೀಮ್ ಬಿಸ್ಕತ್ ನಲ್ಲಿ ಕ್ರೀಮ್ ಇರುತ್ತೆ... ಆದರೆ ಬೆಣ್ಣೆ ಬಿಸ್ಕತ್ ನಲ್ಲಿ ಬೆಣ್ಣೆ ಇರುತ್ತಾ?

ನೀನ್ ಬಸ್ಸಿನಲ್ಲಿ ಹತ್ತಿದ್ರೂ... ಬಸ್ ನಿನ್ ಮೇಲೆ ಹತ್ತಿದ್ರೂ ಟಿಕೆಟ್ ತೊಗೊಳ್ಳೋನು ನೀನೇ... :)

ಟಿಕೆಟ್ ತೊಗೊಂಡು ಒಳಗೆ ಹೋಗೋದು "Cinema theatre" ಗೆ… ಒಳಗೆ ಹೋಗಿ ಟಿಕೆಟ್ ತೊಗೊಳೋದು "Operation Theatre"…

ಎನಗಿಂತ ಕಿರಿಯರಿಲ್ಲ, ಶಿವ ಭಕ್ತರಿಗಿಂತ ಹಿರಿಯರಿಲ್ಲ

ಎನಗಿಂತ ಕಿರಿಯರಿಲ್ಲ, ಶಿವ ಭಕ್ತರಿಗಿಂತ ಹಿರಿಯರಿಲ್ಲ
ನಿಮ್ಮ ಪಾದಸಾಕ್ಷಿ, ಎನ್ನ ಮನಸಾಕ್ಷಿ
ಕೂಡಲಸಂಗಮದೇವಾ ಎನಗಿದೇ ದಿಭ್ಯ.

ಆದ್ದರಿಂದ,,

ನಾನು ಶಿವಭಕ್ತರಿಗಿಂತ ಕಿರಿಯ
ನಾನು < ಶಿವಭಕ್ತ
ನಾನು != ಶಿವಭಕ್ತ

ಈ ಮೇಲಿನ ಮಾತಿನ ಅರ್ಥ ನಾನು ಶಿವಭಕ್ತ ಅಲ್ಲ ಅಂತಾನಾ? ನಾನು ಎಷ್ಟು ಓದಿದರೂ ಇದೇ ಅರ್ಥ ಕೊಡ್ತಾ ಇದೆ, ನಿಮಗೆ ಯಾವ ಅರ್ಥ ಕೊಡ್ತಾ ಇದೆ..

ಹೀಗೊಂದು ಸಾವು

೧ ಆ ವ್ಯಕ್ತಿ
ನಿನ್ನೆ ಇದ್ದ
ಬದುಕಿದ್ದ . ರಕ್ತ
ಮೈತುಂಬಾ ಹರಿಯುತ್ತಿತ್ತು
ಕೂಗಾಡುತ್ತಿದ್ದ, ಅಳುತ್ತಿದ್ದ
ನಗುತ್ತಿದ್ದ ಮತ್ತು ಕನಸು ಕಾಣುತ್ತಿದ್ದ
ಭಾವನೆಗಳ ಬಿತ್ತಿ ಬೆಳೆಯುತ್ತಿದ್ದ

೨ ಈಗ
ತಣ್ಣಗಾಗಿದ್ದಾನೆ
ಕೊರಡಿನಂತಾಗಿದ್ದಾನೆ
ಅದೇ ಮುಖ
ಕೊಂಚವೂ ಬದಲಿಲ್ಲ
ನಗುತ್ತಲೇ ಸತ್ತಿರಬೇಕು
ಇಲ್ಲ, ಸತ್ತು ನಕ್ಕಿರಬೇಕು
ಒಂದೇ ಕ್ಷಣ
ಹೃದಯ ಬಡಿತ

ಮಳೆ

ಸೂರ್ಯನನು ಮರೆ ಮಾಡುವಂತೆ ತುಂಬಿತ್ತು ಮೋಡ
ಮಳೆ ಬರುವುದೇನೋ ಎಂದೆನಿಸಿತ್ತು ನೋಡ
ಮಳೆ ಬಂದರೆ ಎನಗೆ ಬಲು ಚೆನ್ನ
ಆದರೆ ಮನೆ ತುಂಬ ಇಡಬೇಕು ಪಾತ್ರೆಗಳನ್ನ
ಪಾತ್ರೆಯಲಿ ಬಿದ್ದೇಳುವ ಶಬ್ದದ ಅಲೆಯನ್ನ ಕೇಳಿ ಬೆರಗಾದೆನು ಕೇಳು ಕೇಳಣ್ಣ
ಪೈರು ಕೇಳಿತು ನೀರನ್ನ
ಅದಕೆ ದೈವ ಕೊಟ್ಟನು ಮಳೆಯನ್ನ
ಮಳೆ ಹೆಚ್ಚಾಗಿ ಬೇಡವೆನ್ನಲು ಪೈರು
ದೇವ ಕೇಳ್ಯಾನೆ ಇ ಬೆಳೆಯ ದೂರು.

ಬೆಳ್ದಿಂಗಳ ಹುಡುಗಿ

ಮೌನ ಮಾತಿನ ನಡುವೆ
ಬೆಳ್ದಿಂಗಳ ಹುಡುಗಿ
ಅಚ್ಚರಿಯ ಕಂಗಳ ಹೊತ್ತು
ನೋಡುತ್ತಿದ್ದಾಳೆ ಈ ಹೊತ್ತು
ಬಸ್ಸಿನ ತುಂಬೆಲ್ಲ ಮಾತು
ಅಲ್ಲಲ್ಲಿ ಮೌನ
ಮಾತು ಕೇಳುತ್ತಾಳೆ
ಅವಳೇ ಮಾತಾದಾಗ
ನಗುತ್ತಾಳೆ
ಚಂದುಟಿಯ
ಸಂಜೆಗೆಂಪಿನ ಹುಡುಗಿ
ಮೆಲು ಮಾತಿನ
ಮಿಂಚು ಕಂಗಳ ಬೆಡಗಿ
ಮಿಕ್ಕಂತೆ ಮೌನ ಗೌರಿ
ಮಾನಸ ಮಂದಿರದ
ಕಾವ್ಯ ಕನ್ನಿಕೆ

ಸೀರೆಯುಟ್ಟ ನೀರೆ

ಗೆಳೆಯರೊಡನೆ ವಿಹರಿಸುತ್ತಾ ಬರುವಾಗ
ಸೀರೆಯುಟ್ಟ ನೀರೆಯರು ಎದುರಲ್ಲಿ ಬರುತಿದ್ದರೆ,
ಜೋಗ ಜಲಪಾತದ ಧಾರೆ ನೋಡಿದಷ್ಟು ಸಂತಸ
ಹೂ ತೋಟವೇ ಬೆಂಗಳೂರಿನ ಡಾಂಬರು
ರಸ್ತೆ ಮೇಲೆ ನಡೆದು ಬಂದಂತ ಅನುಭವ

ಹೂಗಳ ಲೋಕದಲ್ಲಿ ಯಾವ ಹೂ ಚಂದ
ಎಂದರೆ ಏನು ಹೇಳಲಿ, ಎಲ್ಲವು ಚಂದವೇ ಅಲ್ಲವೇ,
ಆ ಹೂಗಳ ತೋಟದಲ್ಲಿ ನನ್ನ
ಚಂದದ ಹೂ ನೋಡಿಯೇಬಿಟ್ಟೆನಲ್ಲಾ

ಅರಿವಾಗದ ನಿನ್ನ ಈ ಮೌನ....

ಮನವು ಬಾ ಎಂದು ಮಿಡಿದಿದೆ
ನಿನಗೆ ಕೇಳದೆ...........?
ಹೃದಯ ನಿನ ಹೆಸರನ್ನೇ ಉಸಿರಾಡಿದೆ
ನಿನಗರಿವಾಗದೆ.........?
ಇನ್ನೂ ಏಕೆ ಈ ಅಚಲ ಮೌನ........
ನೀನಿಲ್ಲದೇ... ನಿಶ್ಚಲವಾಗಿದೆ ನನ್ನೀ ಜೀವನ.....!

ನೀನು ಮರೆಯಾಗುವ ಭಯದಲಿ....
ಕಣ್ಣರೆರೆಪ್ಪೆಯೂ ಅಲುಗದೆ ಸ್ಥಿರವಾಗಿದೆ....
ಕ್ಷಣಮಾತ್ರಕ್ಕೂ ನಿನ್ನ ಈ ಛಾಯೆಯನ್ನು
ಕಳೆದುಕೊಳ್ಳಲಾರೆ ಎಂದು ನಯನ ಸ್ತಬ್ಧವಾಗಿದೆ........!

ಅಂತರ್ಜಾತಿ ವಿವಾಹ

ಮಾನ್ಯ ಹಿರಿಯರಾದ ಶ್ರೀಧರರವರ ಪ್ರೋತ್ಸಾಹದಿಂದ

ಗೆಳೆಯರೆ ಅಂತರ್ಜಾತಿ ವಿವಾಹಕ್ಕೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ, ಸಮಾಜದ ಸ್ವಾಸ್ಥ್ಯ ಹಾಗು ನಮ್ಮ ಆರೋಗ್ಯಕಾರಕ ವಿಚಾರಗಳಿಗೆ ವೇದಿಕೆ ಅಷ್ಟೆ, ಇದರಲ್ಲಿ ಯಾರ ಮನ ನೋಯಿಸುವ ಉದ್ದೇಶ ಇಲ್ಲ, ನಿಮ್ಮ ಅಭಿಪ್ರಾಯಕ್ಕೆ ಸದಾ ಚಿರಋಣಿ.

ಹೇಗೆ ಓದಿದರೂ ಒಂದೇ!!!

ಮೊನ್ನೆ ಭಾನುವಾರ ಸ್ನೇಹಿತನ ಮನೆಗೆ ಹೋಗಿದ್ದಾಗ ಅವರ ಮನೆಯಲ್ಲಿ ತರಿಸುವ ವಿಕ ದಿನಪತ್ರಿಕೆಯ ಸಾಪ್ತಾಹಿಕ ವಿಜಯದಲ್ಲಿ ಕಂಡು ಬಂದದ್ದು ಈ ಪದಗಳು.

ಇಂಥಾ ಪದಗಳಿಗೆ ಏನೆಂದು ಕರೆಯುವುದು?

ಇಂಥಾ ಪದಗಳನ್ನು ಹೇಗೆ ಓದಿದರೂ ಸರಿ.

ಕನಕ

ಕಿಟಕಿ

ಕಟಕ

ಕುಟುಕು

ಗುಡುಗು

ಗುನುಗು

ಚಮಚ

ಜಲಜ

ನಮನ

ನರ್ತನ