ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪ್ರೀತಿಯ ಗಾಳದಲಿ....

ಪ್ರೀತಿಯ ಗಾಳದಲಿ ಸಿಲುಕಿದೆ ಮನ
ನವಿರು ನವಿರಾದ, ಕಂಪ ಸೂಸುವ
ಪ್ರೀತಿ ಅಮಲಿನಲಿ ತೇಲಿದೆ ಜೀವನ..

ಸೆರೆ ಸಿಕ್ಕ ಹಕ್ಕಿಯ ರೀತಿ
ಪ್ರೀತಿಯ ಮೃದು ಭಾವಗಳಲಿ ನಲುಗಿ
ನಗುತಾ, ಅಳುತಾ ಸಾಗಿದೆ ಈ ಯಾನ...

ಎಷ್ಟೇ ತಡೆದರೂ, ಮರೆತರೂ
ಬಿಡಲೊಲ್ಲೆ ಎಂದಿದೆ ಪ್ರೀತಿಯ ಬಾಹು ಬಂಧನ..
ನಿಲುಕದ ಕನಸಿನ ತರಂಗಗಳನು ತಡೆಯದಾಗಿದೆ
ತಳಮಳಿಸುವ ಈ ಹೃದಯ ನಂದನ.....

ಪುರಂದರ ದಾಸರ ಸಾಹಿತ್ಯದಲ್ಲಿ ನೃತ್ಯ

ದಾಸಸಾಹಿತ್ಯ ನಡುಗನ್ನಡ ಕಾಲದಲ್ಲಿ ಆರಂಭವಾಗಿ ಸುಮಾರು ಇಪ್ಪತ್ತನೇ ಶತಮಾನದವರೆಗೂ ಬೆಳೆದು ಬಂದ ಕನ್ನಡ ಸಾಹಿತ್ಯ ಪ್ರಕಾರ. ದಾಸಸಾಹಿತ್ಯದ ಮುಖ್ಯ ಉದ್ದೇಶ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಧರ್ಮ ಪ್ರಚಾರ ಮತ್ತು ಸಮಾಜ ಸುಧಾರಣೆ. ಈ ಕಾರ್ಯಕ್ಕೆ ಹರಿದಾಸರು ಉಪಯೋಗಿಸಿದ  ಮಾಧ್ಯಮ ಸಂಗೀತ ಮತ್ತೆ ನೃತ್ಯದ್ದಾಗಿತ್ತು. ಗೆಜ್ಜೆ ಕಟ್ಟಿ ಕುಣಿಯುತ್ತ, ಹಾಡುತ್ತ ಬೀದಿಬೀದಿಯಲ್ಲಿ ತಿರುಗಿದ ಹರಿದಾಸರ ಬರವಣಿಗೆ ಅಂದಿನ ಸಮಾಜದ ಜನಜೀವನಕ್ಕೊಂದು ಕನ್ನಡಿ. ಆಗಿನ ಕಾಲದ ಎಷ್ಟೋ ಚಾರಿತ್ರಿಕ ಅಂಶಗಳನ್ನು ನಾವು ದಾಸರ ರಚನೆಗಳಿಂದ ಹೆಕ್ಕಿ ತೆಗೆಯಬಹುದಾಗಿದೆ.

ಹರಿದಾಸರಲ್ಲೆಲ್ಲ ಹೆಚ್ಚಿನ ಹೆಸರು ಗಳಿಸಿದವರು ಪುರಂದರದಾಸರೇ. 'ದಾಸರೆಂದರೆ ಪುರಂದರದಾಸರಯ್ಯ' ಎಂದು ತಮ್ಮ ಗುರುಗಳಿಂದಲೇ ಹೊಗಳಿಸಿಕೊಂಡ ಮಹಾನುಭಾವರು ಇವರು. ಇವರ ನಂತರ ಬಂದ ದಾಸರೆಲ್ಲ ಪುರಂದರದಾಸರನ್ನೇ ಗುರುವನ್ನಾಗಿ ಭಾವಿಸಿ 'ಪುರಂದರ ಗುರುಂ ವಂದೇ ದಾಸಶ್ರೇಷ್ಠಂ ದಯಾನಿಧಿಂ', 'ಗುರು ಪುರಂದರ ದಾಸರೆ ನಿಮ್ಮ ಚರಣಕಮಲವ ನಂಬಿದೆ" ಎಂದು ಹಾಡಿದ್ದಾರೆ. ಪುರಂದರ ದಾಸರ ಸಾಹಿತ್ಯದ ಹರಹು ಬಹಳ ವಿಸ್ತಾರವಾದದ್ದು. ಆಗಿನ ಕಾಲದ ಜನಜೀವನದ ಹೊಳಹುಗಳನ್ನು ಇವರ ರಚನೆಗಳನ್ನು ನಾವು ಕಾಣಬಹುದು. ಇವರ ಹಾಡುಗಳಲ್ಲಿ ಬರುವ ನಾಟ್ಯ-ನೃತ್ಯದ ಬಗ್ಗೆಯ ಕೆಲವು ಅಂಶಗಳನ್ನು ಈ ಬರಹದಲ್ಲಿ ಗಮನಿಸೋಣ.

ಪುರಂದರ ದಾಸರು ಹೆಚ್ಚಿನ ರಚನೆಗಳು ಸಹಜವಾಗೇ ಕೃಷ್ಣನ ಪರವಾಗಿರುವುದು ಈ ನಿಟ್ಟಿನಲ್ಲಿ ಅನುಕೂಲವೇ ಆಗಿದೆ. ಏಕೆಂದರೆ ಕೃಷ್ಣನು ತಾನೇ ಕಾಳಿಂಗನರ್ತನ ಮಾಡಿದ್ದು? 'ಆಡಿದನೋ ರಂಗ' ಎಂಬ ರಚನೆಯಲ್ಲಿ ಅವರು ಹೀಗೆ ಹಾಡುತ್ತಾರೆ:

ಬೆಂಗಳೂರಿನ, ಡಾ. ಶ್ರೀನಾಥ್ ಮತ್ತು ಉಮಾಶ್ರೀನಾಥ್ ರವರ ಆತಿಥ್ಯ !

ಡಾ. ಚಂದ್ರಾರವರ ಪರಿವಾರದ ಗೆಳೆಯ, ಶ್ರಿನಾಥ್ ಮತ್ತು ಹಾಗೂ ಅವರ ಪತ್ನಿ, ಉಮಾಶ್ರೀನಾಥ್ ರವರು, ನಮ್ಮನ್ನು ’ಡಿನ್ನರ್,’ ಗೆ ಆಹ್ವಾನಿಸಿದ್ದರು. ಈ ಕನ್ನಡದ ದಂಪತಿಗಳಿಗೆ, ಆದಿತ್ಯ, ಮತ್ತು ಮೇಘ್ನಾ, ಎಂಬ ಇಬ್ಬರು ಮಕ್ಕಳು. ಚಿಕಾಗೋನಗರದ ಸುಪ್ರಸಿದ್ಧ ಕಾಲೇಜೊಂದರಲ್ಲಿ ವ್ಯಾಸಂಗಮಾಡುತ್ತಿದ್ದಾರೆ.

'W' ನ ಇತಿಹಾಸ

ಮೊದಲು ಅಂದರೆ ಸುಮಾರು ೯ನೇ ಶತಮಾನ(ಕ್ರಿ.ಶ. ೯೦೦)ದವರೆಗೆ ಇಂಗ್ಲಿಷಿನ ’W' ಅಕ್ಷರವನ್ನು ಸೂಚಿಸಲು ಸಂಕೇತವೇ ಇರಲಿಲ್ಲ. ಅದನ್ನು ಎರಡು 'U' (’UU') ಗಳಿಂದ ಸೂಚಿಸುತ್ತಿದ್ದರು. ಹಾಗಾಗಿ ಅದನ್ನು ’double u' ಎಂದೇ ಸೂಚಿಸುತ್ತಾರೆ. ಇದಱ ಉಚ್ಚಾರ ’v' ನಂತೆ ದಂತೋಷ್ಠ (ಹಲ್ಲು ಮತ್ತು ತುಟಿ)ವಾಗಿರದೆ ಹಲ್ಲನ್ನು ತುಟಿಗೆ ತಾಗಿಸದೆ ಉಚ್ಚರಿಸುವ ವ್ಯಂಜನವಾಗಿದೆ.

ಭೈರಪ್ಪನವರ "ಸಂಶೋಧನೆ"

ಶ್ರೀಯವರು “ಭೈರಪ್ಪನ್ನ ನಂಬ್ಕೊಂಡರೆ ಪರೀಕ್ಷೆ ಫೇಲ್!” ಅನ್ನೋ ಬರಹಕ್ಕೆ ಸಂಪದದಲ್ಲಿ
ಪ್ರತಿಕ್ರಿಯೆ ಕೊಡುತ್ತಾ, ಭೈರಪ್ಪನವರ ಅಂಕಿ-ಅಂಶದ ಮೂಲ ಇದು ಎಂದು
http://www.christianaggression.org/features_statistics.php ಕೊಟ್ಟರು. ಆ
ಬರಹ ಬರೆಯುವಾಗ ಭೈರಪ್ಪನವರ ಅಂಕಿ-ಅಂಶದ ಮೂಲ ನನಗೆ ಗೊತ್ತಿರಲಿಲ್ಲ. ಗೊತ್ತಾದ ಮೇಲೆ ಆ

ಇಂಗ್ಲೀಷನಲ್ಲಿರುವ ನನ್ನ ಹೆಸರನ್ನು ಕನ್ನಡದಲ್ಲಿ ಬದಲಾಯಿಸುವುದು.

ಪ್ರಿಯರೇ,

ಸಂಪದದ ಖಾತೆಯಲ್ಲಿ ನನ್ನ ಹೆಸರು ನಾನು ಇಂಗ್ಲೀಷ್ ನಲ್ಲಿ ಸೇರಿಸಿದ್ದೆ. ಆದರೆ ನನಗೆ ಅದನ್ನು ಈಗ ಕನ್ನಡದಲ್ಲಿ ಬದಲಾಯಿಸಬೇಕಾಗಿದೆ. ಹೇಗೆಂದು ಯಾರಾದರೂ ತಿಳಿಸುವಿರಾ? ನಿಮಗೆ ಗೊತ್ತಿದ್ದು ನನಗೆ ತಿಳಿಸದಿದ್ದರೆ ಬೇತಾಳ ತ್ರಿವಿಕ್ರಮ ರಾಜನಿಗೆ ಕೊಟ್ಟ ಶಾಪವನ್ನು ಕೊಡಬೇಕಾಗುವುದು.

ಇಂಗ್ಲೀಷ್ ಇದ್ದದ್ದನ್ನು ಕನ್ನಡದಲ್ಲಿ ಬದಲಾಯಿಸುವುದು

ನನ್ನ ಸಂಪದದ ಖಾತೆಯಲ್ಲಿ ನನ್ನ ಹೆಸರು ಇಂಗ್ಲೀಷ್ ನಲ್ಲಿ ಬರುತ್ತದೆ. ಅದನ್ನು ಕನ್ನಡದಲ್ಲಿ ತರ್ಜುಮೆ (ಬದಲಾಯಿಸಲು)ಮಾಡಲು ನಾನು ಏನು ಮಾಡಬೇಕೆಂದು ಯಾರಾದರೂ ತಿಳಿಸುವಿರಾ?

ಬಿ.ವೆಂಕಟ್ರಾಯ
ಪ್ರೀತಿಯಿರಲಿ

ಮೆಚ್ಚಿನ ಪುಸ್ತಕಗಳು...

ನಾನು ಓದಿರುವ ಹಲವು ಪುಸ್ತಕಗಳಲ್ಲಿ ಈ ಕೆಲವು ಪುಸ್ತಕಗಳು ನನಗೆ ಇಷ್ಟವಾದವು...

ನನಗಿಷ್ಟವಾದ ಪುಸ್ತಕಗಳು:

* ಅಣ್ಣನ ನೆನಪು

* ಆವರಣ

* ಕರ್ವಾಲೋ

* ಕಿರಿಗೂರಿನ ಗಯ್ಯಾಳಿಗಳು

* ಗಾಳಿಮಾತು

* ಗೃಹಭಂಗ

* ಚಂದವಳ್ಳಿಯ ತೋಟ

* ಚಿದಂಬರ ರಹಸ್ಯ

* ಜುಗಾರಿ ಕ್ರಾಸ್

* ದುರ್ಗಾಸ್ತಮಾನ

* ನಾಗರಹಾವು

* ಪಾಕ ಕ್ರಾಂತಿ ಮತ್ತು ಇತರ ಕತೆಗಳು

* ಮಸಣದ ಹೂವು