ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಓದಿದ್ದು ಕೇಳಿದ್ದು ನೋಡಿದ್ದು-38 ಸರ್ವಜ್ಞನ ವಚನ ಮತ್ತು ಬ್ರೂನೈಯ ಸುಲ್ತಾನಗಿರಿ

 

 ಬ್ರೂನೈಯು ಭೂಲೋಕದ ಸ್ವರ್ಗವೇ?

ಮನೆ,ಮಡದಿ ಮತ್ತು ಮಕ್ಕಳು ಇವುಗಳಷ್ಟೇ ನಮ್ಮ ಜೀವನ ಎಂದು ತಿಳಿದರೆ,ಬ್ರೂನೈ ಭೂಲೋಕದ ಸ್ವರ್ಗ ಎನ್ನಬಹುದು ಎನ್ನುತ್ತಾರೆ "ಪಯಣಿಗ" ಸತ್ಯೇಶ್ ಬೆಳ್ಳೂರ್.

-------------------------------------------------------------------------

ಗುನುಗುತಿಹೆ ನಾನು ಇಂದು - ೧

ನನಗೆ ಶಾಸ್ತ್ರೀಯ ಸಂಗೀತ ಇಷ್ಟವಿದ್ದರೂ ಹಂಸಾನಂದಿಗಳ ತರಹ ಅದನ್ನು ಅರೆದು ತಿಳಿದುಕೊಂಡಿಲ್ಲ. ಜೊತೆಗೆ ಜಾಸ್ತಿ ಹೊತ್ತು ಶಾಸ್ತ್ರೀಯ ಸಂಗೀತ ಕೇಳಿಸಿಕೊಂಡರೆ ಒಂಥರ ಸಣ್ಣಗೆ ತಲೆನೋವು ಶುರುವಾಗುತ್ತೆ, ಬಹಳ ಕಷ್ಟದ ಗಣಿತ ಸಮಸ್ಯೆ ಬಿಡಿಸಿದ ಹಾಗೆ :-) ಅದೇ ಚಿತ್ರಗೀತೆ ವಿಷಯ ಬೇರೆ. ಅದು ಕೇಳಿಸಿಕೊಳ್ಳದ ದಿನವೇ ಇಲ್ಲವೆನ್ನಬಹುದು. ಯಾಕೆ ಹೀಗೇಂತ?

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಪುಸ್ತಕವೊಂದಕ್ಕೆ ಚೆಂದವಾದ ಮುಖಪುಟ ವಿನ್ಯಾಸ ನೀವೂ ಮಾಡಬಲ್ಲಿರಾ?

ನಾನು ಮಾಡುತ್ತೇನೆ, ಆದರೆ ಅದನ್ನು ನೋಡುವರಾರು ಎಂದು ಕೇಳಿದಿರೋ? ಛಂದ ಪುಸ್ತಕ ಕನ್ನಡದಲ್ಲಿ ತರುತ್ತಿರುವ ಪುಸ್ತಕಗಳು ಚೆಂದದ ಮುಖಪುಟ ವಿನ್ಯಾಸಗಳೊಂದಿಗೆ ಬರುತ್ತಿರುವುದಲ್ಲದೆ ಈಗ ಚೆಂದವಾಗಿ ವಿನ್ಯಾಸ ಮಾಡುವ ಎಲ್ಲರನ್ನೂ ಪ್ರೋತ್ಸಾಹಿಸಲು ಹೊರಟಿದೆ.

ಹೊಸಬಗೆಯ ಪುಸ್ತಕ ಮುಖಪುಟಗಳನ್ನು ಉತ್ತೇಜಿಸುವ ದೃಷ್ಟಿಯಿಂದ ಛಂದಪುಸ್ತಕವು ‘ಛಂದ ಮುಖಪುಟ ವಿನ್ಯಾಸ" ಸ್ಪರ್ಧೆ ಏರ್ಪಡಿಸಿದೆ ಎನ್ನುತ್ತಾರೆ ಛಂದ ಪುಸ್ತಕದ ಹಿಂದಿರುವ ಬರಹಗಾರ ವಸುದೇಂದ್ರ. ಛಂದ ಪುಸ್ತಕದ ಮುಖಪುಟಗಳ ವಿನ್ಯಾಸ ರೆಡಿ ಮಾಡಿದ ಪತ್ರಕರ್ತ ರಘು ಅಪಾರ ಈಗ ಕನ್ನಡದಲ್ಲಿ ಬಹಳ ಡಿಮ್ಯಾಂಡಿನಲ್ಲಿರುವ  ಡಿಸೈನರುಗಳಲ್ಲೊಬ್ಬರು ಎನ್ನುವುದು ಇತಿಹಾಸ.

ಈಗ ನಿಮಗೂ ಅವಕಾಶವುಂಟು ಎನ್ನುತ್ತಾರೆ ಅಪಾರ. 

ಇಂತ ಒಂದು ದಿನ ನನ್ನ ಜೀವನದಲ್ಲಿ ಮತ್ತೆ ಬಾರದಿರಲಿ.

ನಾನು ಮತ್ತು ನನ್ನ ತಾಯಿ ಇಬ್ಬರು ಅಂಗಡಿಗೆ ಹೋಗಬೇಕು ಎಂದು ನಾನು ನನ್ನ ಪಾಸ್ ನ ಬ್ಯಾಗ್ ಇಂದ ತೆಗೆದು ಕೊಂಡು ಅಂಗಡಿಗೆ ಹೋಗಿ ಬಂದ್ವಿ . ಮಾರನೇ ದಿನ ಕಾಲೇಜ್ ಗೆ ಹೋಗೋ ಗಡಿ ಬಿಡಿ ಯಲ್ಲಿ ಪಾಸ್ ನ ಬ್ಯಾಗ್ ಗೆ ಹಾಕಿ ಕೊಳ್ಳುವುದನ್ನ ಮರೆತು ಬಿಟ್ಟೆ . ಹಾಗೆಯೇ ಬಸ್ ಹತ್ತಿಬಿಟ್ಟೆ . ನನ್ನ ದುರದೃಷ್ಟಕ್ಕೆ ಚೆಕ್ಕಿಂಗ್ ನವರು ಬಂದಿಬಿಟ್ಟರು .

ಗುಬ್ಬಿಗಳ ಸಂರಕ್ಷಣೆ ಹೇಗೆ?

ಹೆಚ್ಚು ಕಡಿಮೆ ಬೆಂಗಳೂರಿನ ಎಲ್ಲ ಭಾಗಗಳಲ್ಲೂ ಗುಬ್ಬಿಗಳು ಕಾಣೆಯಾದರೂ,
ನಮ್ಮ ಮನೆಯ ಬಳಿ ಇನ್ನೂ ಗುಬ್ಬಿಗಳ ಚಿಂವ್-ಚಿಂವ್ ನಿಂತಿಲ್ಲ...
ಇವನ್ನು ಉಳಿಸಿ-ಬೆಳಸುವುದು ಹೇಗೆ?

--ಶ್ರೀ

ಒಂದು ಬುಧವಾರ.

’ಎ ವೆಡ್ನೆಸ್ಡೇ’ - ಒಂದು ಪರ್ಫೆಕ್ಟ್ ಥ್ರಿಲ್ಲರ್. ಕೇವಲ ಒಂದೂವರೆ ಘಂಟೆಯಲ್ಲಿ ಮುಗಿದು ಹೋಗುವ ಸಿನಿಮಾ. ಯಾವುದೇ ಅನಗತ್ಯ ಹಾಡು, ಕುಣಿತ, ಮಸಾಲೆಗಳಿಲ್ಲದೆ ಪ್ರಸ್ತುತ ವಿದ್ಯಮಾನಕ್ಕೆ ತಕ್ಕಂತೆ ಒಂದು ಕಥೆಯನ್ನು ಹೆಣೆಯಲಾಗಿದೆ. ಹಿನ್ನೆಲೆಯ ಸೌಂಡ್ ಎಫೆಕ್ಟ್ಸ್ ಬಹಳ ಚೆನ್ನಾಗಿದೆ. ಮುಂಬೈನಲ್ಲಿ ನಡೆದ ರೈಲು ಸ್ಪೋಟದ ಸುತ್ತ ಹೆಣೆದಿರುವ ಕಥೆ ಇದು.

ತೆಂಗಿನ ಮರ ಮತ್ತು ನೀರಿನ ಸಂಪು ಎರಡೂ ಕಾಪಾಡೋದು ಹೇಗೆ?

ನಮ್ಮ ಬಂಧುಗಳಿಬ್ಬರ ಮನೆಯಲ್ಲಿ ಇದೇ ತಾಪತ್ರಯ ಆಗಿದೆ...

ತೆಂಗಿನ ಮರದ ಹತ್ತಿರದಲ್ಲೇ ನೀರಿನ ಸಂಪು ಇದೆ...
ತೆಂಗಿನ ಮರ ಸೊಂಪಾಗಿ ಬೆಳೆದು ಇದರ ಬೇರು ಸಂಪು ಹಾಳು ಮಾಡತ್ತೆ ಎಂದು ಒಲ್ಲದ ಮನದಲ್ಲಿ ತೆಂಗಿನ ಮರಕ್ಕೆ ಕೊಡಲಿ ಹಾಕಲಿದ್ದಾರೆ...
ಎರಡನ್ನೂ ಉಳಿಸೋದಿಕ್ಕೆ ಉಪಾಯಗಳೇನು?

--ಶ್ರೀ