ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮಾನವಹಕ್ಕಿಗೆ ಹೋರಾಡುವವರನ್ನು ದೂರಬೇಡಿ

[ ಫೀಲ್ಡ್ ಮಾರ್ಷಲ್ ಜನರಲ್ ಮಾನೆಕ್ ಷಾರವರ ಪುತ್ರಿ ಮಾಜ ದಾರುವಾಲಾರವರು "ದ ಹಿಂದು" ಪತ್ರಿಕೆಯಲ್ಲಿ ಬರೆದ ಲೇಖನದ ಅನುವಾದ. ]

ಅಹ್ಮದಾಬಾದ್ ಬಾಂಬಿನ ದಾಳಿ ಮಾಡಿದವರು ದಕ್ಷಿಣದಲ್ಲಿ, ಮುಖ್ಯವಾಗಿ ಕೇರಳದಲ್ಲಿ ತರಬೇತು ಪಡೆದವರೆಂದು ಗುಜರಾತ್ ಸರ್ಕಾರ ದೂರಿತು. ಆಗ ಕೇರಳ ಸರ್ಕಾರ ಹಿಂದುಮುಂದು ನೋಡದೆ ಆತಂಕವಾದವನ್ನು ಹತ್ತಿಕ್ಕುವ ತನ್ನ ಪ್ರಯತ್ನಕ್ಕೆ ಮಾನವಹಕ್ಕು ಹೋರಾಟಗಾರರು ಹುಯಿಲಿಡುವ ಮೂಲಕ ಹೇಗೋ ತಡೆಯೊಡುತ್ತಿದ್ದಾರೆಂದು ಪ್ರತಿಕ್ರಿಯಿಸಿತು. ಸರ್ಕಾರ ಕಾನೂನನ್ನು ಎತ್ತಿಹಿಡಿದು, ಕ್ರಮಪೂರ್ವಕವಾಗಿ ಕೆಲಸಮಾಡಲಿ ಎಂದಷ್ಟೆ ಕೇಳುವ ಮಾನವಹಕ್ಕು ಗುಂಪುಗಳನ್ನು ಈ ಬಗೆಯ ಸಾರಾಸಗಟಾದ ಹೇಳಿಕೆಗಳು ಅನುಮಾನಿಸುವಂತೆ, ಅವರ ಮುಖಕ್ಕೆ ಮಸಿ ಬಳಿಯುವಂತೆ ಮಾಡುತ್ತದೆ. ಹೋರಾಟಗಾರರ ವಿರುದ್ಧದ ಇಂತಹ ಹೇಳಿಕೆಗಳು ನಮ್ಮ ದೇಶದಲ್ಲಿ ಆತಂಕವಾದ ಏಕೆ ಹುಲುಸಾಗಿದೆ ಎಂಬುದರಿಂದ ನಮ್ಮ ಗಮನವನ್ನು ಬೇರೆಡೆಗೆ ತಿರುಗಿಸುತ್ತದೆ. ಆ ಹೇಳಿಕೆಗಳ ಉದ್ದೇಶವೂ ಅದೇ ಅಗಿರುತ್ತದೆ. ಅಷ್ಟಲ್ಲದೆ, ಲಗಾಮಿಲ್ಲದ ಪ್ರಭುತ್ವವನ್ನು ಮತ್ತು ಸಾಮಾಜಿಕ ಪೂರ್ವಾಗ್ರಹದಿಂದ ನಮ್ಮನು ಕಾಪಾಡಲು ಶ್ರಮಿಸುತ್ತಿರುವ ಇವರ ಕೆಲಸಕ್ಕೆ ಇತಿಶ್ರೀ ಹಾಡಲು ಬೇಕಂತಲೇ ಸಹಾಯ ಮಾಡುತ್ತದೆ.

ನೆಲದೊಳಗಿನ ಮಾತು ( ಕವನ )

ಭಯ, ಧು:ಖ,ದುಗುಡ,ದುಮ್ಮಾನಗಳಿಂದೊಮ್ಮೆ
ನೀ ಕಟ್ಟಿಕೊಟ್ಟ ನೆನಪಿನ ಗಂಟಿನೆದೆಬಗೆದು
ಮೆಲ್ಲನ್ನೊಮ್ಮೆ ಇಣುಕಿದಾಗ ಕುಣಿಯುತ್ತೇನೆ.
ಮತ್ತದೆ ಖುಷಿಯಿಂದ ಅನಾಧ ಸ್ವರ್ಗದಲ್ಲಿ ತೇಲುತ್ತೇನೆ
ವಾಸ್ತವದ ನೆನಪಾದಾಗ ಬೆಚ್ಚಿ ಬೀಳುತ್ತೇನೆ.

ಬೆತ್ತಲಾದ ಎದೆಯಮೇಲೆ ಅತ್ತಿತ್ತ ಓಲಾಡಿ
ಕಚಗುಳಿಯಿಟ್ಟ ಚಿನ್ನದಳೆಯ ಆ ಬೆರಳುಗಳು
ಮುಖದ ಮೇಲೆ ತಿವಿದು,ತಿದ್ದಿ,ತೀಡಿದ್ದು

ದೊಡ್ಡವರ ಸಣ್ಣತನ

ಮೊನ್ನೆ ಇಲ್ಲಿ ಒಂದು ಉತ್ಸವ ನಡೀತು.  ಇಲ್ಲಿಯ ಕನ್ನಡಕೂಟ ಪ್ರತೀ ವರ್ಷ ಸೆಪ್ಟೆಂಬರ್ ನಲ್ಲಿ ಒಂದು ಮೆಗಾ-ಕಾರ್ಯಕ್ರಮ ಇಟ್ಕೊಳತ್ತೆ. ಬೇರೆ ಸಮಯದಲ್ಲಾಗೋ ಕಾರ್ಯಕ್ರಮ ಸಾಧಾರಣ ಸಂಜೆ ೪ ರಿಂದ ರಾತ್ರಿ ಹತ್ತರ ತನಕ ಆದ್ರೆ, ಈ ಕಾರ್ಯಕ್ರಮ ಬೆಳಗ್ಗೆ ೧೧ರಿಂದ ರಾತ್ರಿ ಹತ್ತರ ತನಕ.

ಜ್ಞಾನ ಆ "ಯೋಗ" ರಾಜ್ಯಕ್ಕೂ ಬಂತಾ ...!

ಶಿಕ್ಷಣ ಕ್ಷೇತ್ರದ ಸಮಸ್ಯೆಗಳು ಇಂದು ನಿನ್ನೆಯದಲ್ಲ. ರಾಜ್ಯದಲ್ಲಂತೂ ಶೈಕ್ಷಣಿಕ ವಲಯದ ಸಮಸ್ಯೆಗಳನ್ನು ಹೇಳೋದೆ ಕಷ್ಟ. ಶಾಲಾ ಸಮಯ ಬದಲಾವಣೆಯಿಂದ ಹಿಡಿದು ಸಿಇಟಿ ಪರೀಕ್ಷೆ ಏನು ಸ್ನಾತಕೋತ್ತರ ಪದವಿ ತನಕವೂ ಒಂದಿಲ್ಲೊಂದು ಸಮಸ್ಯೆಗಳು...!

ಕಾಯುವ ಕಾಯಕ

ಆಶೀರ್ವಾದಂ ಎನ್ನುವವರು ತಮಿಳಿನಲ್ಲಿ ಹಲವಾರು ವರ್ಷಗಳ ಕೆಳಗೆ (1974-75ರ ನಡುವಿನ ಸಮಯ ಇರಬಹುದು) ಬರೆದ ಒಂದು ಕವನ ಈಗ ನನಗೆ ಸಿಕ್ಕಿತು. ಓದಿದಾಗ ನನಗೆ ಚೆನ್ನಾಗಿದೆ ಎನ್ನಿಸಿತು. ಅದರ ಭಾವಾನುವಾದವನ್ನು ಇಲ್ಲಿ ಕಳಿಸಿದ್ದೇನೆ. ತಮಗೆಲ್ಲಾ ಏನನ್ನಿಸುವುದೋ ತಿಳಿಸಿ.
ಕಾಯುವ ಕಾಯಕ
ಹಲವಾರು ಹಲವಾರು ಹಲವಾರು
ಹಲಕೋಟಿ ವರುಷಗಳು
ಕಾದಾಗ ಕಡಲಡಿಯ ಕಲ್ಲು ತೇದು

ಪ್ರಳಯ (ಭೂ) ವರಾಹ ಸ್ವಾಮಿ ( ಕಲ್ಲ ಹಳ್ಳಿ)ಯ ಬಗ್ಗೆ ಗೊತ್ತಿದೆಯಾ?

ಇತ್ತೀಚಿಗೆ ನಮಗೆ ತಿಳಿದ ಜ್ಯೋತಿಷಿಗಳೊಬ್ಬರ ಸಲಹೆಯಂತೆ ಬೂಕನ ಕೆರೆಯ ಸಮೀಪ ಇರುವ ಪ್ರಳಯ (ಭೂ) ವರಾಹ ಸ್ವಾಮಿ ದೇವಸ್ಥಾನಕ್ಕೆ ಹೋಗಿದ್ದೆವು .
೨೦ ಅಡಿ ಉದ್ದದ ಏಕ ಶಿಲಾ ವಿಗ್ರಹ ಅದು ಗೌತಮರಿಂದ ಪ್ರತಿಷ್ಟಾಪಿಸಿದ್ದು ಎಂದು ತಿಳಿದು ಬಂತು
ಪುಟ್ಟ ದೇವಸ್ಥಾನ ಅದು ಹೇಮಾವತಿ ನದಿಯ ದಂಡೆಯ ಮೇಲೆ ಇದೆ
ಅದರ ಬಗ್ಗೆ ಇನ್ನಷ್ಟು ಮಾಹಿತಿ ಬೇಕಿತ್ತು

ಸ್ನೇಹ

ಸ್ನೇಹದ ಅರ್ಥವೇ ತಿಳಿಯದ ಏಷ್ಟೋ ಮಂದಿ ತಮ್ಮ ಸ್ವಾರ್ಥಕೊಸ್ಕರ ಸ್ನೇಹದ ನಾಟಕವಾಡುತ್ತಾರೆ. ಇಂತವರಿಂದ ಸ್ನೇಹ ಪದದ ಅರ್ಥವೇ ಬದಲಾಗುತ್ತಿದೆ. ಸ್ನೇಹವೆಂದರೆ ನಿಸ್ವಾರ್ಥದಿಂದ ಕೂಡಿದ್ದು. ತಮ್ಮ ನಡೆಯಂತೆ ಪರರು ನಡೆಯಬೇಕೆಂಬುದು ಇವರ ಆಸೆ. ಮತ್ತೊಂಬರಿಂದ ಸಹಾಯ, ಅವಶ್ಯಕತೆ ಇದ್ದಾಗ ಸ್ನೇಹ ಇಲ್ಲವಾದರೆ ಅವರಿಂದ ದೂರವಾಗುವುದು.

ಭಾವನೆಯೆ ಲೋಕ

ಅಂದು ಕಂಡ ನೆನಪಿನಂಗಳದ ಪ್ರತಿಕ್ರಿಯೆಗೆ
ಎಲ್ಲವೂ ಸ್ತಬ್ಧವಾಯಿತು,
ಹಗಲಿನ ಸೂರ್ಯ ರಾತ್ರಿ ಚಂದಿರನ ತಂಪಿನಂತಾದ
ಸಾಗರವು ಅಲೆಗಳಿಲ್ಲದೆ ಶಾಂತವಾಯಿತು,
ಬೀಸಿದ ಬಿರುಗಾಳಿಯು ಹೆದರಿ ಓಡಿದಂತಾಯಿತು
ಮರೆತೆನೆಂದರು ನೆನಪು ಹುಡುಕಿ ಕರೆಯಿತು,
ಕತ್ತಲೆಯನು ಕರೆಯುವ ಬೆಳಕಿನಹಾಗೆ
ಚಲನೆಯನು ಮರೆತ ಗಾಳಿಯ ಹಾಗೆ,
ಭಾವನೆಯ ನದಿಯಲಿ ವಿಹರಿಸಲು,
ಮನಸೊಂದಿದ್ದರೆ ಸಾಕು.