ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕನ್ನಡಕ್ಕಾಗಿ

ನನ್ನ ಉಸಿರಿರುವರೆಗೂ ಕನ್ನಡಕ್ಕಾಗಿ ಹೋರಾಟ
ಹಾರಿಸುವೆನು ಎಲ್ಲೆಲ್ಲು ಕನ್ನಡದ ಬಾವುಟ
ಮನೆ ಮನೆಯಲ್ಲಿ ರಾರಾಜಿಸಲಿ ಕನ್ನಡಾಂಬೆಯ ಚಿತ್ರಪಟ
ಕನ್ನಡವನ್ನು ಉಳಿಸಿ ಬೆಳೆಸುವುದೇ ನನ್ನ ಹಠ.

-Vರ ( Venkatesha ರಂಗಯ್ಯ )

ಧಾರವಾಡದಲ್ಲಿ ಹುಟ್ಟಿ ಬಾಲ್ಟಿಮೋರ್‌ನಲ್ಲಿ ಹರಿದ ನಮ್ಮೆಲ್ಲರ ಶಾಲ್ಮಲಾ!

("ಅಕ್ಕ 2006" ರ ಸಮಯದಲ್ಲಿ ಬರೆದದ್ದು. "ವಿಕ್ರಾಂತ ಕರ್ನಾಟಕ" ವಾರಪತ್ರಿಕೆಯ ಸೆಪ್ಟೆಂಬರ್ 22, 2006ರ ಸಂಚಿಕೆಯಲ್ಲಿ ಪ್ರಕಟವಾಗಿರುವ ಈ ಲೇಖನವನ್ನು "ಅಕ್ಕ-2008" ರ ಸಮಯದಲ್ಲಿ ಇಲ್ಲಿ.)

ಅದು 1994. ಧಾರವಾಡ ವಿಶ್ವವಿದ್ಯಾನಿಲಯದ ಹಾಸ್ಟೆಲ್‌ನಲ್ಲಿ ಸ್ನೇಹಿತರೊಬ್ಬರ ರೂಮಿನಲ್ಲಿ ಒಂದು ರಾತ್ರಿ ತಂಗಿದ್ದೆ. ಅಂದು ಅವರು ಕ್ಯಾಂಪಸ್‌ನ ಬಗ್ಗೆ ಮಾತನಾಡುತ್ತ ಅಲ್ಲಿ ಹರಿಯುವ ಶಾಲ್ಮಲ ನದಿಯ ಬಗ್ಗೆ ಹೇಳಿದ್ದರು. ಅದೇ ಮೊದಲ ಸಲ ಆ ಮುದ್ದಾದ ಹೆಸರನ್ನು ಕೇಳಿದ್ದು. ಇಲ್ಲಿಯವರೆಗೂ ನೋಡಿಲ್ಲದ ಆ ಗುಪ್ತಗಾಮಿನಿ ನನಗೆ ಅಂದೇ ಆಪ್ತವಾಗಿಬಿಟ್ಟಿತು.

ನಾಲ್ಕೈದು ವರ್ಷಗಳ ಹಿಂದೆ ಹೀಗೆ ಅಂತರ್ಜಾಲದಲ್ಲಿ ಕನ್ನಡ ಭಾವಗೀತೆಗಳನ್ನು ಕೇಳುತ್ತಿದ್ದಾಗ ಅಚಾನಕ್ಕಾಗಿ ಶಾಲ್ಮಲಾ ಎಂಬ ಪದ ಸಿ.ಅಶ್ವಥ್‌ರ ಕಂಚಿನ ಕಂಠದಿಂದ ಹೊಮ್ಮಿ ನನ್ನ ಕಿವಿ ಮುಟ್ಟಿತು.

ಅಕ್ಕ ಸಮ್ಮೇಳನದಲ್ಲಿ ಏನಾಗಬೇಕು ?

ಸ್ನೇಹಿತರೆ,
ಇದೇ ತಿಂಗಳ ಕೊನೆಲಿ ಚಿಕ್ಯಾಗೊ ನಗರದಲ್ಲಿ ೫ನೇ ’ಅಕ್ಕ" ಸಮ್ಮೇಳನ ನಡೆಯೋದಿದೆ. ಜಗತ್ತಿನ ಮೂಲೆ ಮೂಲೆಯಲ್ಲಿರೋ ಪ್ರತಿಭಾವಂತ ಕನ್ನಡಿಗರೆಲ್ಲ ಒಂದೆಡೆ ಸೇರೊ ಅಪರೂಪದ ಕ್ಷಣ ಅನ್ನಬಹುದು. ಕರ್ನಾಟಕದ ಭವ್ಯ ಇತಿಹಾಸ, ಪರಂಪರೆ, ಸಾಹಿತ್ಯ, ಸಂಗೀತ,, ಹೀಗೆ ಪ್ರತಿಯೊಂದರ ಪ್ರದರ್ಶನಕ್ಕೂ ಅಲ್ಲಿ ಅವಕಾಶವಿರುತ್ತಂತೆ. ತುಂಬಾ ಸಂತೋಷದ ವಿಷಯವೇ.

ಬಂಗಾರದ ಬೆಳಕಿಗೆ...

ಬಂಗಾರದ ಬೆಳಕಿಗೆ ಮಿಂಚಿತ್ತು ನಿನ್ನ ಬಣ್ಣ
ಮಳೆ ಹನಿಗಳ ಸದ್ದಿನಲ್ಲಿ ಮುಳುಗಿದ್ದವು ನಿನ್ನ ಕಣ್ಣ
ಬಂಗಾರದ ಬೆಳಕಿಗೆ....ಮಿಂಚಿತ್ತು ನಿನ್ನ ಬಣ್ಣ...

ಕಣ್ಣೋಟದಲ್ಲಿ ಅದೇನೋ ಆಸೆ...
ಮನದಲ್ಲಿ ಅದೇನೋ ಸೆಳೆತ...
ಬಂಗಾರದ ಬೆಳಕಿಗೆ ಮಿಂಚಿತ್ತು ನಿನ್ನ ಬಣ್ಣ...

ಮಳೆ ಹನಿಯಲ್ಲಿ ಕಳೆದು ಹೋದ ನೀನು...
ಆಗ ಮರೆತಿದ್ದೆ ನಿನ್ನನ್ನೆ ನೀನು...

ಮರಗಳೇಕೆ ಹಣ್ಣನೀಯುವುವು?

ಮನೆ-ಕೈತೋಟಕ್ಕೂ ಒಂದು ದಿನಾಚರಣೆ ಇದೆ ಎಂದು ನನಗೆ ಇವತ್ತು  ಹರ್ಷವರ್ಧನರ ಬರಹ ಓದುವವರೆಗೆ ತಿಳಿದಿರಲಿಲ್ಲ. ಅವರು ಉದ್ಧರಿಸಿರುವ ಚೀನೀ ಹೇಳಿಕೆಯ ಜೊತೆಯಲ್ಲೇ ಒಂದೆರಡು ಸುಭಾಷಿತಗಳು ನೆನಪಾದವು. ಅದನ್ನೇ ಇಲ್ಲಿ ಕನ್ನಡಿಸಿ ಬರೆದಿರುವೆ: