ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಅಣು ಒಪ್ಪಂದದಿಂದ ನಮಗೇನು ಲಾಭ, ನಿಮಗೇನಾದ್ರೂ ಗೊತ್ತಿದೆಯೇ?

ಜುಲೈ 22, 2008. ಆಡಳಿತ ಪಕ್ಷ, ವಿರೋಧ ಪಕ್ಷಗಳು ಸೇರಿದಂತೆ ರಾಷ್ಟ್ರದ ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ಬಲಾಬಲ ಪ್ರದರ್ಶಿಸಲು (ತಿಳಿದುಕೊಳ್ಳಲು), ಮುಂಬರಲಿರುವ ಚುನಾವಣೆಯಲ್ಲಿ ತಮ್ಮ ಹಣೆಬರಹವನ್ನು ಪರೀಕ್ಷಿಸಿಕೊಳ್ಳಲು ಕೆಳಮನೆ ಲೋಕಸಭೆಯಲ್ಲಿ ವೇದಿಕೆ ಸಿದ್ಧವಾಗಿದೆ (ಅಲ್ಲಿಯವರೆಗೆ ಈ ಲೆಕ್ಕಾಚಾರ ತಲೆಕೆಳಗಾಗಬಹುದೇನೋ!).

ಆಳ್ ಮತ್ತು ಆೞ್

ಆಳ್ ಮತ್ತು ಆೞ್ ಈ ಎರಡೂ ಬೇಱೆ ಬೇಱೆ ಅರ್ಥಗಳಲ್ಲಿ ಬೞಸಲ್ಪಡುವ ಪದಗಳು
ಆಳ್=ನಾಮಪದವಾದಾಗ ಸೇವಕ ಆಳು. ಕ್ರಿಯಾಪದವಾದಾಗ ಅಧಿಕಾರವಹಿಸು, ರಾಜ್ಯಭಾರ ನಡೆಸು. ಅವನ ಮನೆಯಲ್ಲಿ ಮನೆಯಾಳ್ತನ ಅವನ ಹೆಂಡತಿಯದೇ ಇತ್ಯಾದಿ. ಭೂತಕಾಲದ ರೂಪ ಆಳ್ದು (ಹೞಗನ್ನಡ) ಆಳಿ=ಹೊಸಗನ್ನಡ. ಭವಿಷ್ಯದ್ರೂಪ=ಆಳ್ವ/ಆಳುವ.

ಷಾಕ್ ಕೊಡಲಿದೆಯೇ ಉಚಿತ ವಿದ್ಯುತ್?

ರಾಜ್ಯ ಸರಕಾರ ಈ ಸಾಲಿನ ಬಜೆಟ್ಟಿನಲ್ಲಿ ರೈತರಿಗೆ ಉಚಿತ ವಿದ್ಯುತ್ ಘೋಷಿಸಿದೆ. ರೈತರಿಗೆ ಇದು ಸರಕಾರದ ಬಹುದೊಡ್ಡ ಬಳುವಳಿ ಎನ್ನಲಾಗುತ್ತಿದೆ. ಎಷ್ಟು ದೂರದೃಷ್ಟಿಯುಳ್ಳ ಬಳುವಳಿ ಇದು? ನಿಜವಾಗಲೂ ಕಾಳಜಿಯ ಬಳುವಳಿಯೇ? ಎಂದು ಈ ಲೇಖನದಲ್ಲಿ ಪ್ರಶ್ನಿಸುತ್ತಾರೆ ಸುಗ್ಗಿ.

ಉಣ್ಣು, ತಿನ್ನು

ಕನ್ನಡದಲ್ಲಿ (ತೆನ್ನುಡಿಯಲ್ಲಿ) ತಿನ್ನುವ ಕ್ರಿಯೆ ಸೂಚಿಸಲು ಉಣ್ಣು ಮತ್ತು ತಿನ್ನು ಎರಡು ಪದಗಳಿವೆ. ಆದರೆ ಇಲ್ಲಿ ಅರ್ಥದಲ್ಲಿ ವ್ಯತ್ಯಾಸವಿದ್ದ ಹಾಗೆ ತೋಱುತ್ತದೆ. ತಿನ್ನು ಅಂದರೆ ಸುಮ್ಮನೆ ಬಾಯಿರುಚಿಗೋ, ಸ್ವಲ್ಪ ಸಮಯ ಹಸಿವು ತಡೆಯಲೋ ತಿನ್ನುವುದು. ಪೋಷಣೆಯ ದೃಷ್ಟಿಯಲ್ಲಿಟ್ಟುಕೊಂಡು ಆಹಾರ ಸೇವಿಸುವುದು ಮಾತ್ರ ಉಣ್ಣುವುದು. ಊಟವೂ ಪೋಷಣೆಗೋಸ್ಕರವೇ.

ನಾನು ಮತ್ತು ದುಂಬಿ

ಮನೆಯ ಮುಂದಿನ
ಮಣ್ಣಿನ ದಾರಿಯಲಿ ಹೆಜ್ಜೆ ಮೂಡಿಸಿ
ಮತ್ತೆ ಅದೇ ಹೆಜ್ಜೆಯನು
ಗುರುತಿಸುತ್ತ ಬಾಲ್ಯ ಕಳೆದಿದ್ದೆ

ಬಣ್ಣ ಬಣ್ಣದ ಪಾತರಗಿತ್ತಿ
ಕೈತೋಟದೊಳು ಹಾರುವಾಗ
ಕಣ್ಣು ನೆಟ್ಟು ಕುಳಿತ ನೆನಪುಗಳು
ಕೆಲವೊಮ್ಮೆ ದುಂಬಿಯ ಹಿಡಿದು
ಬಾಲಕ್ಕೆ ನೂಲು ಬಿಗಿದು ಹಾರಬಿಡುತ್ತಿದೆ

ಕಳೆದು ಹೋಗಿದೆ ಬಾಲ್ಯ
ತಿರುಗಿ ಬರುವುದಿಲ್ಲ
ಕಾಲ ಬದಲಾಗಿದೆ

ನನ್ನ ಮನೆ ಮುಂದಿರುವ

ಹೀಗೊ೦ದು ಸ೦ಶಯ

ಕತೆಗಳನ್ನು ಪತ್ರಿಕೆಗೆ ಬರೆದು ಕಳುಹಿಸುವಾಗ ಬಿಳಿ ಹಾಳೆಯಲ್ಲಿಯೇ ಬರೆಯಬೇಕೆ೦ಬ ನಿಯಮವೇನಾದರೂ ಇದೆಯೇ..? ಅಥವಾ ಗೆರೆಹಾಳೆಯಲ್ಲಿಯೂ ಬರೆಯಬಹುದೇ..? ನನ್ನ ಮಿತ್ರನ ಪ್ರಕಾರ ಬಿಳಿಹಾಳೆಯಲ್ಲಿಯೇ ಬರೆಯಬೇಕ೦ತೆ.ಇಲ್ಲಿ ಯಾರಾದರೂ ಪತ್ರಿಕೆಗಳಿಗೆ ಬರೆದವರಿದ್ದರೇ ತಿಳಿಸಿ.

ರಟ್ಟು

ರಟ್ಟು_೧ (ನಾಮಪದ) [ತೆಲುಗು: ರೆಟ್ಟಿ, ರೆಟ್ಟು]
೧. ಎರಡೆಳೆಗಳನ್ನು ಜೊತೆಯಾಗಿ ಹಾಕಿಕೊಂಡು ನೆಯ್ದ ದಪ್ಪಬಟ್ಟೆ; ಒರಟು ಬಟ್ಟೆ
೨. ಪುಸ್ತಕಕ್ಕೆ ಹಾಕುವ ದಪ್ಪಬಟ್ಟೆ ಅಥವಾ ದಪ್ಪಕಾಗದದ ಮೇಲುಹೊದಿಕೆ; ಬೈಂಡು
೩. ಪುಸ್ತಕವು ಕೊಳೆಯಾಗದಂತಿರಲು ಮೇಲೆ ಹಾಕುವ ಕಾಗದದ ಹೊದಿಕೆ

ರಟ್ಟು_೨ (ನಾಮಪದ) [ತೆಲುಗು: ರಟ್ಟು]

ಪೞಗು, ಪೞೆ(ಹೞೆ)

ಪೞಗು, ಪೞೆ(ಹೞೆ) ಎರಡೂ ಒಂದೇ ಬೇರಿಗೆ ಸೇರಿದ್ದು. ಅವುಗಳ ಅರ್ಥ ಹೊಸದಲ್ಲದ್ದು. ಹೞೆಯದೆಂದೇ ಅರ್ಥ. ನಾವು ಯವುದನ್ನಾದರೂ ಪೞಗಿಸಬೇಕೆಂದರೆ ಅದು ಹೊಸದಱಲ್ಲಿ ಸಾಧ್ಯವಿಲ್ಲ. ಉದಾಹರಣೆಗೆ ಆನೆಯನ್ನು ಪೞಗಿಸುವುದನ್ನೇ ತೆಗೆದುಕೊಳ್ಳಿ. ಅದಱೊಂದಿಗೆ ನಮಗೆ ಸಲಿಗೆ ಬೆಳೆದು ಅದು ನಾವು ಹೇೞಿದಂತೆ ಕೇಳಬೇಕೆಂದರೆ ನಮಗೆ ಆನೆಯ ಪರಿಚಯದ ಹೊಸತಱಲ್ಲಿ ಸಾಧ್ಯವಿಲ್ಲ.