ಮುಚ್ಚಿಟ್ಟ ಸತ್ಯ
ಕನಕನತ್ತಲೇ ತಿರುಗಿ ನಿಂತ ಕೃಷ್ಣ
ಶಬರಿಯತ್ತ ನಡೆಯುತ್ತಲೇ ಬಂದ ರಾಮ
ಅಂತ್ಯಜನ ಜೊತೆಗೆ ಇರಬಯಸುವ ಮೋಹ;
ಕತೆ ಕೇಳುತ್ತ ದುಃಖ ಉಮ್ಮಳಿಸಿ
ಪರಮಾತ್ಮನ ಸಮಾನತೆಗೆ ಕೈ ಮುಗಿಯುವವರಿಗೆ
ಒಳಗೇ ಮುಚ್ಚಿಟ್ಟ ಸತ್ಯ ಅರ್ಥವಾಗುವುದಿಲ್ಲ:
ಇದೆಲ್ಲ ಈ ವ್ಯವಸ್ಥೆಯ ಮತ್ತೊಂದು ಮುಖ-
- Read more about ಮುಚ್ಚಿಟ್ಟ ಸತ್ಯ
- Log in or register to post comments