ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

"ಕಿರುಬ"ನ ಕಿತಾಪತಿ

ಈಶ್ವರಪ್ಪನವರಿಗೆ ಖಂಡಿತಾ ಬುದ್ದಿ ಭ್ರಮಣೆಯಾಗಿದೆ. ಇತ್ತೀಚೆಗೆ ಉಡುಪಿಯಲ್ಲಿ ನೀಡಿರುವ ಹೇಳಿಕೆ ಕುರುಬ ಜನಾಂಗದವರನ್ನು ತಲೆತಗ್ಗಿಸುವಂತಾಗಿದೆ. ಕುರುಬ ಜಾತಿಯನ್ನು ಇವರನ್ನೇನು ಗುತ್ತಿಗೆ ಪಡೆದಿರುವರೇನೋ ಎಂಬ ಶಂಕೆ ಹಲವರಲ್ಲಿ ವ್ಯಕ್ತವಾಗಿದೆ.

ಹರಿ ಸ್ಮರಣೆ ಮಾಡೋ ನಿರಂತರ!

ರಾಮ ಅಂತೊಬನಿದ್ದ. ಹುಂ. ಅವನ ಹೆಂಡತಿ ಸೀತೆ. ಹುಂ. ಹುಂ.
ಅಪ್ಪನ ಮಾತಿಗೆ ಪಂಚವಟೀ ದಡದಲ್ಲಿರುವಾಗ ರಾವಣ ಅವಳ ಕದ್ದ.
ನಿದ್ದೆ ಬರಲಮ್ಮನ ಕಥೆಯ ಹುಂಗುಟ್ಟುತಿಂತು ಕೇಳುತಿರುವ ಹರಿಯ
"ಲಕ್ಷ್ಮಣಾ ಬಿಲ್ಲೆಲ್ಲಿ ನನಬಿಲ್ಲು" ಎಂಬಾವೇಶದ ಮಾತೆಮ್ಮ ಕಾಯಲಿಂದು

 

ಸಂಸ್ಕೃತ ಮೂಲ:

ತಲೆನೋವು

ಇಂದು ಸಂಜೆ ಕಛೇರಿಯಿಂದ ಮನೆಗೆ ಹೊರಟಾಗ ಮಳೆ ಬರುತ್ತಿತ್ತು... ಕಾರಿನಲ್ಲಿ ಆಫೀಸ್ ಗೆ ಹೋಗಿದ್ದರಿಂದ ಮಳೆಯಲ್ಲಿ ನೆನೆಯದೆಯೇ ಮನೆಗೆ ಬಂದೆ... ಮನೆಗೆ ಬಂದ ಕೂಡಲೇ ಅಮ್ಮ "ಏನೋ, ಈ ದಿನ ಇಷ್ಟು ಬೇಗ ಮನೆಗೆ ಬಂದೆ? ಅದಕ್ಕೇ ಅನ್ಸುತ್ತೆ ಮಳೆ ಬರ್ತಾ ಇದೆ" ಅಂತ ಹೇಳಿ ನಕ್ಕರು. ನಾನು "ಹಾಗೇನಿಲ್ಲ, ಸ್ವಲ್ಪ ತಲೆ ನೋವು. ಅದಕ್ಕೆ ಬೇಗ ಬಂದೆ. ಬಿಸಿ ಬಿಸಿ ಸ್ಟ್ರಾಂಗ್ ಕಾಫಿ ಕೊಡು.

ಮರಗಳು ಧರೆಗೆ ಉರುಳುವುದೋ? ಹಸಿರು ಕಂಗಳಿಸುವುದೋ??

ಕಳೆದ ಕೆಲವು ದಿನಗಳಿಂದ, ಮೇಖ್ರಿ ವೃತ್ತದಿಂದ ಟಿ.ವಿ.ಗೋಪುರಕ್ಕೆ ಮುಟ್ಟುವ ದಾರಿಯನ್ನು ಅಗಲಿಸುವ ಕೆಲಸ ಶುರು ಮಾಡಿದ್ದಾರೆ ಎಂದು ಕಾಣುತ್ತದೆ. ಇಲ್ಲಿಯವರೆಗೂ, ರಸ್ತೆಯ ಪಕ್ಕದ ಜಾಗದಲ್ಲಿ ಪಾದಚಾರಿಗಳಿಗೆಂದು ಸುಮಾರು ಅಗಲವಾದ ಜಾಗವನ್ನೇ ಬಿಟ್ಟಿದ್ದರು.

ಚಂದ್ರಮೌಳೇಶ್ವರ ದೇವಾಲಯ - ಹುಬ್ಬಳ್ಳಿ

ಹುಬ್ಬಳ್ಳಿಯಲ್ಲಿ ಗೆಳೆಯ ಗಿರೀಶ ಭಟ್ಟನೊಂದಿಗೆ ಉಣಕಲ್ ಗ್ರಾಮ ತಲುಪಿ ಚಂದ್ರಮೌಳೇಶ್ವರ ದೇವಾಲಯ ಹುಡುಕಾಡತೊಡಗಿದೆ. ಸಂದಿಗೊಂದಿಯಲ್ಲೆಲ್ಲಾ ನುಗ್ಗಿದರೂ ದೇವಾಲಯದ ಸುಳಿವಿಲ್ಲ. ಸ್ಥಳೀಯರಲ್ಲಿ ಕೇಳಿದರೆ ’ಇಲ್ಲೇ ಐತಲ್ರೀ....’ ಎನ್ನುತ್ತಾ ಕೈ ತೋರಿಸುತ್ತಿದ್ದರೇ ವಿನ: ನಮಗೆ ದೇವಾಲಯ ಕಾಣಿಸುತ್ತಿರಲಿಲ್ಲ. ಆ ಮಟ್ಟಕ್ಕೆ ಈ ದೇವಾಲಯನ್ನು ಒತ್ತುವರಿಯ ಸಮಸ್ಯೆ ಕಾಡುತ್ತಿದೆ. ನಾಲ್ಕು ದ್ವಾರಗಳ ಈ ದೇವಾಲಯಕ್ಕೆ ನಾಲ್ಕು ಕಡೆಯಿಂದಲೂ ರಸ್ತೆಗಳಿದ್ದವಂತೆ. ಆದರೆ ಈಗ ಒಂದು ಮಾತ್ರ ಉಳಿದಿದ್ದು ಉಳಿದ ೩ ರಸ್ತೆಗಳು ಮಾಯ. ಈ ಮಟ್ಟದ ಒತ್ತುವರಿ ಮತ್ತು ಸ್ಥಳೀಯರಿಗೆ ದೇವಾಲಯದ ಬಗ್ಗೆ ಇರುವ ಅಸಡ್ಡೆಯ ನಡುವೆಯೂ ಭಾರತೀಯ ಪುರಾತತ್ವ ಇಲಾಖೆ ದೇವಾಲಯವನ್ನು ಕಾಪಾಡಿಕೊಂಡು ಬಂದಿರುವುದೇ ಸೋಜಿಗದ ವಿಷಯ.

ಶಿರಾಡಿ ಘಾಟ್ ಎಂಬ ನರಕದ ದಾರಿ.

ಮೊನ್ನೆ ಗೆಳೆಯರೊಂದಿಗೆ ಧರ್ಮಸ್ಥಳಕ್ಕೆ ಶಿರಾಡಿ ಮಾರ್ಗದಲ್ಲಿ ಹೋಗಿದ್ದೆ. ಸರಕಾರದ ಹೇತ್ಲಾಂಡಿತನಕ್ಕೆ ಉದಾಹರಣೆಯಂತಿದೆ ಅಲ್ಲಿನ ರಸ್ತೆ. ಟಾರ್ ಹಾಳಾಗೆ ಹೋಗ್ಲಿ ರಸ್ತೇನೆ ಇಲ್ಲದಿದ್ದ್ರೆ ಹೆಂಗ್ರಿ ಪ್ರಯಾಣ ಮಾಡೋದು. ರಾಷ್ಟ್ರದ ಪ್ರಮುಖ ಹೆದ್ದಾರಿಗಳಲ್ಲಿ ಅದು ಒಂದು. ಪ್ರತಿ ನಿತ್ಯ ಸಾವಿರರು ವಾಹನಗಳು ಆ ಮಾರ್ಗವಾಗಿ ಚಲಿಸುತ್ತೆ.

ಗು೦ಡ ಮತ್ತು ಕತ್ತೆ!!!!!

       ಮೊನ್ನೆ ಮೊನ್ನೆ ನಮ್ಮ ಗು೦ಡ ಸಾಕಿದ ಕತ್ತೆ ಅವನ ಮನೆ ಪಕ್ಕದ ಪಾಳು ಬಾವಿಯಲ್ಲಿ ಬಿದ್ದುಬಿಟ್ಟಿತ್ತು. ಎಷ್ಟೋ ಹೊತ್ತು ಕೂಗಿ ಅರಚಿ ಸಾಕಾದ ಮೇಲೇನೇ ಗು೦ಡನ ಕಿವಿಗೆ ಅದರ ಸದ್ದು ಬಿದ್ದದ್ದು.ಅದನ್ನು ಬಾವಿಯಿ೦ದ ಹೇಗೆ ಹೊರಗೆ ತೆಗೆಯೋದು ಅ೦ತ ಗು೦ಡ ತನ್ನಲ್ಲಿದ್ದ ಬುದ್ಧಿ-ಸಾಮರ್ಥ್ಯವನ್ನೆಲ್ಲ ಪ್ರಯೋಗಿಸಿದ್ದ.

donkey1donkey1

ಕೊನೆಗೆ ಯಾಕೋ ಆ ಪಾಳು ಬಾವಿಯಿ೦ದ ಕಷ್ಟಪಟ್ಟು ಕತ್ತೆಯನ್ನು ಉಳಿಸಿಕೊಳ್ಳೋದು ಆತನಿಗೆ ಸರಿ ಅನ್ನಿಸಲಿಲ್ಲ.ಹಾಗೆ ಅದನ್ನ ಕಾಪಾಡಿದರೂ ಆ ಬಡಕಲು ಕತ್ತೆಯಿ೦ದ ಅಷ್ಟೊ೦ದು ಉಪಯೋಗ ಆಗಲಿಕ್ಕಿಲ್ಲ ಅ೦ತಲೂ ಅನ್ನಿಸಿಬಿಟ್ಟಿತು. 

ಆ ಬಾವಿನೂ ಆಷ್ಟೇನೇ!!!! ಅದು ಪಾಳು ಬಿದ್ದು ಎಷ್ಟೋ ವರ್ಷಗಳಾಗಿ ಹೋಗಿ ಆ ಊರಿನವರೂ ಅದನ್ನು ಮುಚ್ಚಿ ಹಾಕಿಬಿಡಬೇಕು ಅ೦ತ ತೀರ್ಮಾನ ಮಾಡಿಬಿಟ್ಟಿದ್ದರು.ಆದರೆ ಅದಕ್ಕೆ ಸರಿಯಾದ ಮುಹೂರ್ತ ಈಗ ಒದಗಿ ಬ೦ದಿತ್ತು.

   ಸರಿ,ಗು೦ಡ ಅಕ್ಕಪಕ್ಕದ ಮನೆಯವರನ್ನೆಲ್ಲ ಸೇರಿಸಿದ್ದೂ ಆಯ್ತು. ಕತ್ತೇನೂ ಬಾವೀನೂ ಒ೦ದೇ ಸಲ ಮುಚ್ಚಿ ಹಾಕಿಬಿಡೋಣ ಅ೦ತ ನಿರ್ಧರಿಸಿದ್ದೂ ಆಯ್ತು.ಎಲ್ಲರೂ ಸೇರಿ ಒಬ್ಬೊಬ್ಬರಾಗಿ ಒ೦ದೊ೦ದು ಬುಟ್ಟಿ ಮಣ್ಣು ತ೦ದು ಆ ಬಾವಿಯ ಒಳಗೆ ಹಾಕಲಿಕ್ಕೆ ಶುರು ಮಾಡಿದರು.ಮದ್ಯಾಹ್ನ ಆಯ್ತು. ಗು೦ಡನಿಗೆ ಬಾವಿ ಸುಮಾರು ಮುಕ್ಕಾಲು ಭಾಗ ಮುಚ್ಚಿ ಹೋಗಿದೆ ಅ೦ತ ಅನ್ನಿಸಿತು. ಒ೦ದು ಬಾರಿ ಒಳಗೆ ಇಣುಕಿ ನೋಡಿದ.

ನನ್ನ ಕತ್ತೆ ಅ೦ತೀರಾ?

 ಏನಾಶ್ಚರ್ಯ....ಆ ಕತ್ತೆ ಮುಕ್ಕಾಲು ಭಾಗ ಮುಚ್ಚಿ ಹೋದ ಬಾವಿಯ ಮೇಲ್ಭಾಗದಲ್ಲೇ ಇದೆ!!!

ಎಲ್ಲರೂ ಕತ್ತೆಯ ತಲೆ ಮೇಲೆ ಒ೦ದೊ೦ದು ಬುಟ್ಟಿ ಮಣ್ಣು ಸುರಿದಾಗಲೂ ಆ ಕತ್ತೆ ತನ್ನ ಮೈಯನ್ನು ಒ೦ದು ಸಾರಿ ಜೋರಾಗಿ ಅಲುಗಾಡಿಸಿ ಆ ಮಣ್ಣನ್ನೆಲ್ಲ ಕೆಳಗೆ ಕೆಡವುತ್ತಾ ಇತ್ತು.ನ೦ತರ ಆ ಮಣ್ಣ ಮೇಲೆ ನಿ೦ತು ಮತ್ತೊಮ್ಮೆ ಮೇಲಕ್ಕೆ ಕತ್ತೆತ್ತಿ ನೋಡುತ್ತಿತ್ತು...ಹೀಗೆ ಮು೦ದುವರಿದ ಮೇಲೆ ಆ ಪಾಳು ಬಾವಿ ಪೂರಾ ಮುಚ್ಚಿ ಹೋಯ್ತು. ಆದರೆ ಗು೦ಡನ ಕತ್ತೆಗೆ ಮಾತ್ರ ಏನೂ ಆಗಲಿಲ್ಲ!!!

ಹೊರಗೆ ಬ೦ದ ಕತ್ತೆಯ ಮೈಯನ್ನು ಗು೦ಡ ಪ್ರೀತಿಯಿ೦ದ ಸವರಿದ.

 

ಅಬ್ದುಲ್ ಕಲಾಮರಿಗೆ ಜನ್ಮ ದಿನದ ಶುಭಾಶಯಗಳು

ವಯಸ್ಸು ಯಾವುದೇ ಇರಲಿ..ಕನಸುಗಳು ಸದಾ ನಿಮ್ಮೊಂದಿಗಿರಲಿ..ಆ ಕನಸುಗಳು ಎಂದೆಂದಿಗೂ ದೊಡ್ಡದಾಗಿರಲಿ... ಅಂತ ಹೇಳಿದ ನಮ್ಮ ಅಬ್ದುಲ್ ಕಲಾಂರ ಜನ್ಮ ದಿನ ಅಕ್ಟೋಬರ್ 15ರಂದು.